
ಸಾಮಾನ್ಯವಾಗಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ವೀಕ್ಷಿಸುವಾಗ ಎರಡು ತಂಡಗಳಿಗೂ ಅವರದೇ ಆದ ಅಭಿಮಾನಿ ವಲಯ ಇರುತ್ತಾರೆ,ಅವರ ಫೆವರೆಟ್ ಕ್ರೀಡಾಪಟುಗಳಿಗೆ ಜಯಕಾರ ಹಾಕಿ ಪ್ರೋತ್ಸಾಹ ನೀಡುವುದು ಸಾಮಾನ್ಯ.ಕೇವಲ ನಿರ್ದಿಷ್ಟ ಪಂದ್ಯಗಳಿಗೆ ಇಂತಹ ಪ್ರೋತ್ಸಾಹ ಸಿಕ್ಕುತ್ತೆ ಅಂತೇನೂ ಇಲ್ಲ,ಕ್ರೀಡಾಭಿಮಾನಿಗಳು ಇರುವ ತನಕ ಸಿಳ್ಳೆ,ಕಿರುಚಾಟ,ಕೂಗಾಟದ ಸದ್ದು ಇದ್ದೆ ಇರುತ್ತದೆ ಆಟದ ಬಯಲಲ್ಲಿ.ಇದು ಕ್ರೀಡಾಪಟುಗಳಲ್ಲಿ ಉತ್ಸಾಹವನ್ನು ಹೆಚ್ಚು ಮಾಡಿ ಅವರು ಮತ್ತಷ್ಟು ಉತ್ಸಾಹದಿಂದ ಆತ ಮುಂದುವರೆಸುತ್ತಾರೆ.ಇಂತಹ ಮನಸ್ತತ್ವ ಪಕ್ಷಿಗಳಲ್ಲೂಇದೆಯೆನ್ನುವ ಸಂಗತಿಯನ್ನು ವಿಜ್ಞಾನಿ ಗಳು ಕಂಡು ಹಿಡಿದಿದ್ದಾರೆ.ಅದು ಯಾವಾಗ ಗೊತ್ತೇ? ಎರಡು ಪಕ್ಷಿಗಳಲ್ಲಿ ದಿಷ್ಯುಂ ದಿಷ್ಯುಂ ....! ಆರಂಭ ಆದಾಗ! ಗುಂಪು ಗುಂಪಾಗಿ ಬದುಕ ಸಾಗಿಸುವ ಪಕ್ಷಿಗಳಲ್ಲಿ ಇಂತಹ ವರ್ತನೆ ಕಾಣ ಸಿಗುತ್ತದೆ ಅಂತ ಲಂಡನ್ಗೆ ಸೇರಿದ ವಿಜ್ಞಾನಿಗಳು ತಿಳಿಸಿದ್ದಾರೆ.ಇವರು ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುವ ಗ್ರೀನ್ ವುಡ್ ಹೌಸ್ ಅನ್ನುವ ಪಕ್ಷಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಸಂಗತಿಯನ್ನು ಕಂಡು ಹಿಡಿದ್ದಾರಂತೆ! ಹನ್ನೆರಡು ಪಕ್ಷಿಗಳ ಒಂದು ವೃಂದ ಹೊಂದಿರುತ್ತದೆ,ಅವುಗಳಲ್ಲಿ ಒಂದು ಪಕ್ಷಿ ಲೀಡರ್ರು! ಮೊತ್ತೊಂದು ಗುಂಪಿನ ಪಕ್ಷಿಗಳು ಆಹಾರಕ್ಕಾಗಿಯೋ,ಮತ್ತೆ ಇನ್ಯಾವುದೋ ವಿಷಯಕ್ಕಾಗಿಯೋ ಕಿರಿಕ್ ಮಾಡಿದರೆ ಲೀಡರ್ ಸುಮ್ನೆ ಇರೋಕೆ ಆಗಲ್ವಲ್ವ,ಸರಿ ಹೊಡೆದಾಟ ಆರಂಭ.ಆಗ ತಮ್ಮ ನಾಯಕನನ್ನು ಬೆಂಬಲಿಸಲು ಇವುಗಳು ಕಿರುಚಾಡಲು ಶುರು ಮಾಡುತ್ತದಂತೆ.ಒಂದು ವೇಳೆ ನಾಯಕ ಓಡಿ ಹೋದ್ರೆ ಆಗ ಇವುಗಳ ಸದ್ದು ಅಡಗುತ್ತದೆಯಂತೆ! ಎಷ್ಟು ವಿಚಿತ್ರ!!