Sunday, 13 June 2010

ಸಾಧನೆ !

ಮನುಷ್ಯ ಹೆಸರು ಹಣಕ್ಕಾಗಿಅದೇನೇನೋ  ಮಾಡ್ತಾನೆ ಅಂತಾರೆ, ಅನ್ನೋದನ್ನು  ನಾವೇ  ಕಣ್ಣಾರೆ ಕಂಡಿದ್ದಿವಿ, ಕಾಣ್ತಾನೆ ಇದ್ದೀವಿ. ಆದರೆ ಈ ಫೋಟೋ ಗಳಲ್ಲಿ ಇರುವ ಐನಾತಿ ಜಾಸ್ತಿನೆ ವಿಚಿತ್ರ . ನೆಟ್ಟಗೆ ನಿಂತೇ ಮಾಡಿದ ಕಟ್ಟಿಂಗ್  ಸಾಕಷ್ಟು ಸರ್ತಿ ಕೆಟ್ಟು ಹಾಳಾಗಿರುತ್ತದೆ.ಅಂತಹುದರಲ್ಲಿ ಸೊಟ್ಟಗೆ  ಕೂದಲಿಗೆ ಕತ್ರಿ ....! ಹೇಯ್ ಉಲ್ಟಾ ಮ್ಯಾನ್  ಭಾರಿ ಛತ್ರಿ ಕಣಯ್ಯಾ ನೀನು.....

Friday, 4 June 2010

ಮೌನ ಮುರಿತಿನಿ!!

ಸಿಕ್ತೀಯಾ?...........
ನಾನು ನಿನ್ನ ಬಳಿ ಪದೇಪದೆ ಕೇಳದ ಪ್ರಶ್ನೆಇದು... ಪಾಪದ ಹುಡ್ಗ ನೀನು ನನ್ನಿಂದ ಬಯಸಿದ ಪ್ರಶ್ನೆ ಇದೊಂದೇ....! ನಿನ್ನ ಚಡಪಡಿಕೆ ನನಗೆ ನಗು...! ನನ್ನ ಮೌನ ನಿನಗೆ ಗಾಬರಿ..!ಒಂದು ದಿನ ನಿನ್ನತ್ತ ನನ್ನ ಕಣ್ ನೋಟ ಬೀಳದೆ ಇದ್ದರೆ ನೀನು ಅತಂತ್ರ..! ಬಲ್ಲೆ ಚಲುವ ನಾನೆಲ್ಲ ಬಲ್ಲೆ, ನನ್ನ ಪುಟ್ಟ ನಗೆ ನಿನಗೆ  ಸಂಜೀವಿನಿ.ಸಾರಿ ಕಣೋ ಹುಡ್ಗ ತುಂಬಾ ಸತಾಯಿಸಿ ಬಿಟ್ಟೆ ನಾನು, ನೋಡು ಅದಕ್ಕೋಸ್ಕರ ಎಷ್ಟು ಬೇಗ ಎದ್ದು ಬಿಟ್ಟು ಬರೆಯೋಕೆ ಕೂತಿದ್ದೀನಿ  .. ಬಿಲೀವ್ ಕಣೋ ನಾನು ಶುದ್ಧ ಸೋಮಾರಿ ! ಅಂತಹುದರಲ್ಲಿ ನಿನಗಾಗಿ ಸಿರ್ಫ್ ನಿನಗಾಗಿ ಅದೆಷ್ಟು ಬೇಗ ಎದ್ದು ಪತ್ರ ಬರಿತಾ ಇದ್ದೀನಿ. ಇದು ಪ್ರೇಮ ಪತ್ರವ? ಉಹೂಂ ಐ ಡೋಂಟ್ ನೋ..ಆದರೆ ಇದನ್ನು ನನ್ನ ಮನಸ್ಸು ಅಂತ ತಿಳಿ  ಕನಿಷ್ಠ  ನಿನ್ನ ಚುಂಬಕ  ನಗುವಿಗೊಂದಷ್ಟು ಜೀವ ಬಂದೀತು. ಶುದ್ಧ ಪೆದ್ದು..ಸಿಟ್ ಬರ್ತಾ ಇದೆ, ನನ್ ಬಗ್ಗೆ ನಿನಗೆ ಏನೂ ಹೇಳಿರಲಿಲ್ಲ ಅಲ್ವ, ಕೇಳೋ ಹುಡ್ಗ ನಾನು ಸ್ವಲ್ಪ ಜಾಸ್ತೀನೆ ಪೊಸೆಸಿವ್...! ಅದೇ ನನ್ನ ಕೆಟ್ ಗುಣ...! ಆ ಗುಣದಿಂದಲೇ ನಾನು ಯಾರ ಬಳಿ ಹೆಚ್ಚು ಸ್ನೇಹ ಮಾಡಲ್ಲ, ಅದರಲ್ಲೂ ಹುಡುಗರ ಕಥೆ ಬೇಡವೇ ಬೇಡ ! ಫ್ರಾಂಕ್ಲಿ  ಇಷ್ಟರ ಮಧ್ಯೆ ಅದ್ಯಾಕೋ ನನಗೆ ನೀನು ತುಂಬಾ ಇಷ್ಟ ಆಗಿ ಬಿಟ್ಟೆ,ಹಾಗೆ ನಿನ್ ಕಡೆ ಗಮನಕೊಟ್ಟೆ.. ಹುಡ್ಗ ನೀನು ಸ್ನೇಹಜೀವಿ ರಾಶಿ ಫ್ರೆಂಡ್ಸ್..! ಸದಾ ಉಲ್ಲಾಸದ ಚಿಲುಮೆ, ನಿನ್ ಫ್ರೆಂಡ್ಸ್ ಆ ಹುಡ್ಗಿಯರು ಎಷ್ಟು ಬ್ಯೂಟಿಫುಲ್ ! ಅವರ ಮುಂದೆ ನಾನು ತುಂಬಾ ಸಪ್ಪೆ, ನೀನು ಅವರೊಂದಿಗೆ ಹರಟುವಾಗ ಚೂರು ಹೊಟ್ಟೆ ಉರಿದ್ಕೊಳ್ತಾ  ಇದ್ದೆ,ಆಮೇಲೆ ನಂಗೆ ಅನ್ನಿಸಿದ್ದು ನಾನ್ಯಾಕೆ ನಿನ್ ವಿಷಯದಲ್ಲಿ ಹೀಗೆ? ನಾನು ನಿನ್ನನ್ನು....? ಇಲ್ಲ ನನಗೆ ಒಪ್ಪಿಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ, ಅದೇ ಕಣೋ ನನ್  ಕೆಟ್ ಗುಣ! ಆದರೂ ಈ ಪತ್ರ ಬರೆಯುವ ಕಾರಣ ಎನ್ ಗೊತ್ತಾ?ನಿನ್ನ ರಾಶಿ ರಾಶಿ ಫ್ರೆಂಡ್ಸ್ ನಲ್ಲಿ  ನಿನ್ನ ಮನ ಗೆದ್ದವಳು ನಾನೂಂತ ಗೊತ್ತಾಗಿ ಬಿಡ್ತು, ಆಗೆಷ್ಟು ಖುಷಿ ಆಯ್ತು ಗೊತ್ತ..? ಹೇಗೆ ಅಂತ ಕೇಳ್ತೀಯಾ, ಅಂದು ಅದೇ ನಾನು ಬ್ಲಾಕ್ ಚುಡಿ ಹಾಕಿಕೊಂಡು ನನ್ ಫ್ರೆಂಡ್ ಸವಿ ಹರಟುವಾಗ ಹುಡ್ಗ ನಿನ್ನ ಕಣ್ಣು ನನ್ನನ್ನು ಹಿಂಬಾಲಿಸ್ತಾ  ಇತ್ತು,ಮನದಲ್ಲಿ ಪುಳಕ,ಆಗಲ್ವ..ಹೇಳು  !! ನಿನ್ನ ಸುತ್ತಮುತ್ತ ಸಾವಿರಾರು ಕಣ್ಣುಗಳು ಹರಿದಾಡುವಾಗ... ಹಮ್ಮ! ಹೆಣ್ಣುಮಕ್ಕಳೇ ಹಾಗೆ ಕಣೋ ಮನಸ್ಸು ಕೊ ಟ್ ಮೇಲೆ ತುಂಬಾ ಪ್ರಾಮಾಣಿಕರಾಗಿ ಬಿಡ್ತಾರೆ, ದಡ್ಡ ಹುಡುಗರು ನೀವು ಅದನ್ನು ಅರ್ಥ ಮಾಡಿ ಕೊಳ್ಳಲು ಹೋಗುವುದೇ ಇಲ್ಲ. ನೀನು ನನಗೆ ಪ್ರಪೋಸ್ ಮಾಡಲಿಲ್ಲ, ಪುಟ್ಟ ಪಿಂಕ್ ಗುಲಾಬಿ ಕೊಟ್ಟಿಲ್ಲ, ಕಾರ್ಡ್ ಇಲ್ಲ, ಎಸ್ಸೆಮ್ಮೆಸ್ ಉಹುಂ ಅದೂ ಇಲ್ಲ ಆದರೂ ನಾ ಬಲ್ಲೆ ಗೆಳೆಯ ನೀನು ನನ್ನನ್ನು ಇಷ್ಟ ಪಡ್ತಾ ಇದ್ದೀಯ ಅಂತ. ಪದೇಪದೆ ನೆನಪಾದೆ...! ಗೊತ್ತಿಲ್ಲ ಇಂದು ಮನಸ್ಸೆಲ್ಲ ಖುಷಿಯಿಂದ ಅರಳಿದೆ.ಹೇಳ್ಬಿದ್ಲಾ ನಾನು! ಇಲ್ಲ ಅದು ಸಾಧ್ಯ ಇಲ್ಲ ನನ್ ಕೈಲಿ ಅದು ಸಾಧ್ಯ ಆಗಲ್ಲ, ಮತ್ತದೇ ಕೆಲಸ ರಾಶಿ ರಾಶಿ ! ಬೋರ್ ಅನ್ನಿಸಿದರು ನಿನ್ನ ಮುದ್ದಾದ ನಗು ಜ್ಞಾಪಕಕ್ಕೆ ಬಂದ ತಕ್ಷಣ ಎಲ್ಲ ಫಟಾಫಟ್ !ಎಷ್ಟು  ದಿನ ಆಯ್ತಲ್ವ ನಿನ್ನನ್ನು ನಾನು ನೋಡಿ..ಇಷ್ಟು ದಿನ ಷೋ ಅಂತ ಅಟ್ಲಾ೦ಟಾಗೆ ಹೋಗಿದ್ದೆ ಅಂತ ತಿಳೀತು ..ರಾಕಿ ಹೇಳ್ದ...! ಮೌನ ಮುರಿತಿನಿ ಕಣೋ ಇಂದು ನಾನು ನನ್ ಮನಸ್ಸನ್ನ ಬಿಚ್ಚಿ ಇಡ್ತೀನಿ, ನನ್ನ ಪ್ರೀತಿ, ಪೊಸೆಸಿವ್ ನೆಸ್ಸ್ , ಕನಸು, ಆಸೆ ಎಲ್ಲವನ್ನು ಹೇಳಿ ಬಿಡ್ತೀನಿ...ಅವೆಲ್ಲ ಹೇಳ್ ಬೇಕಾದರೆ ನೀನ್ ನನಗೆ ಸಿಗಬೇಕು...! ಸಿಕ್ತೀಯ ಚಿನ್ನಾ...??????!!!!!!!
ನಾನು ....!!

Saturday, 8 May 2010

ಅಮ್ಮ ....!

ಅಮ್ಮ ....! ದೇವರು ಸಮಸ್ತ ಜೀವ ಕೋಟಿಗೂ ನೀಡಿದ ಅಪರೂಪದ ವರ. ಆ ಅಮ್ಮ ಭಗವಂತ ಸೃಷ್ಟಿ ಸಿದ  ಎಲ್ಲ ಜೀವರಾಶಿಗಳಲ್ಲಿ ಜೀವಂತವಾಗಿರುತ್ತಾಳೆ...ಅಮ್ಮ... ! ಜೈಪುರದಲ್ಲಿ ರಸ್ತೆಯಲ್ಲಿ ಕೋತಿಮರಿಯೊಂದು ಸ್ಕೂಟರ್ ಸವಾರನ ನಿರ್ಲಕ್ಷ್ಯದಿಂದ ಗಾಯಗೊಂಡಿತು. ಎಲ್ಲರಿಗೂ ಬದುಕುವ ಆಸೆ ಸದಾ ಇದ್ದೆ ಇರುತ್ತದೆ. ಪ್ರಯತ್ನ ಪಟ್ಟು ಆ ಮುದ್ದು ಮರಿ ಮೇಲೇಳಲು ಪ್ರಯತ್ನಿಸಿತು...! ಸೃಷ್ಟಿಯಲ್ಲಿ ಎಲ್ಲ ಜೀವಿಗಳು ಬದುಕಿಗೆ ಆದ್ಯತೆ ನೀಡುತ್ತದೆ. ಈ ಮರಿ ಬದುಕಲು ಪ್ರಯತ್ನಿಸಿದಂತೆ, ತನ್ನ ಹೊಟ್ಟೆ ತುಂಬಿಸಿ ಕೊಂಡು ಜೀವ ಉಳಿಸಿ ಕೊಳ್ಳಲು ಆಲ್ಲೆಲ್ಲೋ ಇದ್ದ ನಾಯಿ  ಆ ಸ್ಥಳಕ್ಕೆ ಧಾವಿಸಿ ಈ ಮರಿಯ ಮೇಲೆ ಅಟಾಕ್ ಮಾಡಿತು. ಆ ನಾಯಿ ಈ ಕೂಸಿಗೊಂದು ಅಮ್ಮ ಇದ್ದಾಳೆ  ಎನ್ನುವ ಸಂಗತಿ ಮರೆತಿತ್ತು ಅಂತ ಕಾಣುತ್ತೆ, ಆದೆ ಅಮ್ಮ ಹಾಗಲ್ಲವಲ್ಲ, ತನ್ನ ಪ್ರಾಣ ಹೊಸದರೂ ಸರಿಯೇ ಕಂದನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೇ ತೀರುತ್ತಾಳೆ.. ಅಮ್ಮ ಮಂಗ ಮಾಡಿದ್ದು ಅದನ್ನೇ, ತನ್ನ ಕಂದನನ್ನು ತಿನ್ನಲು ಬಂದ ನಾಯಿಯ ಮೇಲೆ ತೀವ್ರವಾಗಿ ದಾಳಿ ನಡೆಸಿ ಅಮ್ಮನ ಕೆಲಸ ಮಾಡಿತು.. ಇದರ ಸಿಟ್ಟಿಗೆ ಹೆದರಿ ನಾಯಿ  ಓಟ ಕೀಳ್ತು.ಆ ಬಳಿಕ ಕಷ್ಟ ಪಟ್ಟು ಮಗುವನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯಿತು ...! ನನಗೆ ಬಂದ ಮೇಲ್ಗಳಲ್ಲಿ ತುಂಬಾ ಇಷ್ಟ ಆಗಿದ್ದು ಇದು...!

Tuesday, 20 April 2010

ಶೋಷಣೆ


ಬೇಸಿಗೆಯ ಪ್ರಭಾವ ನಮ್ಮ ಮೇಲೆ ಮಾತ್ರವಲ್ಲ ಎಲ್ಲಾ ಕಡೆಯೂ ತನ್ನ ಪ್ರಭಾವ ತೋರುತ್ತಿದೆ.  ನಾವು ಮನುಷ್ಯರು ಬಾಯ್ಬಿಟ್ಟು ಕೇಳಿ ನಮ್ಮ ಬಾಯಾರಿಕೆ ಹಸಿವೆಯನ್ನು ತಣಿಸಿ ಕೊಳ್ಳುತ್ತೇವೆ .ಆದರೆ ಮೂಕ   ಪ್ರಾಣಿ -ಪಕ್ಷಿಗಳು? ಅವುಗಳ ಬಗ್ಗೆ ಬುದ್ಧಿವಂತ ಪ್ರಾಣಿ ಅನ್ನಿಸಿಕೊಂಡ ನಾವೆ ಅವುಗಳ ಬಗ್ಗೆ ಕಾಳಜಿ ವಹಿಸ ಬೇಕು.ಇತ್ತೀಚೆಗಂತೂ ಬಿಸಿಲ ಝಳದ ಪ್ರಭಾವದಿಂದ ಅನೇಕ ಪಕ್ಷಿಗಳು ಸಾಯುತ್ತಿದೆ. ಟೆರೆಸ್ ಮೇಲೆ ,ಮರದ ಬುದಗಳಲ್ಲಿ ಬಾಯಾರಿಕೆ ತಡಿಯಲಾಗದೆ ಮರಣಕ್ಕೆ ಮೊರೆಹೊಗುತ್ತಿದೆ. ಇಂತಹ ಪರಿಸ್ಥಿತಿ ತಡೆಗಟ್ಟಲು ನಾವು ಮಾಡ ಬೇಕಾದುದು ಇಷ್ಟೆ. ಕಿಟಕಿ,ಟೆರ್ರೆಸ್ ಒಟ್ಟಿನಲ್ಲಿ ಹಕ್ಕಿಗಳು ನಿರಮ್ಮಳವಾಗಿ ಬರುವ ಸ್ಥಳಗಳಲ್ಲಿ ಪುಟ್ಟ ಪಾತ್ರೆಯಲ್ಲಿ ನೀರನ್ನು ಇಡ ಬೇಕು..ಹಾಗೆ ಮಾಡುವುದರಿಂದ ಮುಗ್ಧ ಪ್ರಾಣಿ- ಪಕ್ಷಿಗಳಿಗೆ ಜೀವದಾನ ಮಾಡಿದಂತೆ ಆಗುತ್ತದೆ..
@@ ಆಸ್ಟ್ರೇಲಿಯ ದೇಶದಲ್ಲಿ ಕೋಲಾ ಅನ್ನುವ ಪ್ರಾಣಿ ಹೆಚ್ಚು ಪ್ರಸಿದ್ಧಿ. ಅದು ತನ್ನಷ್ಟಕ್ಕೆ ತಾನು ಬದುಕುವ ಸಂಕೋಚ ಪ್ರಾಣಿ.ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮಖೇಡಿ ಪ್ರಾಣಿ. ಇತ್ತೀಚೆಗೆ ಆಸ್ಟ್ರೇಲಿಯ ದಲ್ಲಿ  ಅತಿ ಹೆಚ್ಚು  ಬಿಸಿ ಏರಿತು.ಆಗ ಈ ಸಂಕೋಚದ ಪ್ರಾಣಿ ರಸ್ತೆಗೆ ಬಂದು ನೀರನ್ನು ಬೇಡಿ ಬದುಕಿತು.ಇಂತಹ ಘಟನೆಯನ್ನು ನಾವು   ಕಂಡೆ ಇಲ್ಲ ಅಂತಾರೆ ಸ್ಥಳೀಯರು  ..! ನಮ್ಮ ಹುಂಬತನದಿಂದ ಆಗಿರುವ ಗ್ರೀನ್ ಹೌಸ್ ಎಫೆಕ್ಟ್ ಗೇ ಉಳಿದ ಮುಗ್ಧಪ್ರಾಣಿಗಳು ಬಲಿಯಾಗುತ್ತಿವೆಯಲ್ಲ ಅದೇ ನೋವಿನ ಸಂಗತಿ. ಭೂಮ್ತಾಯಿ ಮೇಲೆ ಇಂತಹ ಶೋಷಣೆ  ನಿಲ್ಲುವುದು ಯಾವಾಗ? ಪ್ರಾಣಿ- ಪಕ್ಷಿ-ಸಸ್ಯಗಳ  ಬದುಕು ನಿರಾಳವಾಗುವುದು ಯಾವಾಗ? ನಾವೆ ಯೋಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯ ಬೇಕು...! 

Saturday, 9 January 2010

ಬದುಕುವುದನ್ನು ಕಲಿಯಬೇಕು

  • ಪೆಂಗ್ ಶುಇಲಿನ್  ಅರ್ಧ ದೇಹವನ್ನು ಪಡೆದಿರುವ ವ್ಯಕ್ತಿ.
  • ಪ್ರಕೃತಿಯ ವಿಚಿತ್ರಗಳಲ್ಲಿ  ಈತನ ದೇಹವು ಒಂದು ಅಂತ ನಾವು ಹೆಮ್ಮೆಯಿಂದ  ಹೇಳಬಹುದು.
  • ,ಆದರೆ ಅವ್ಯಾವುದು ಆತನಿಗೆ ಬೇಕಾಗಿಲ್ಲ ,
  • ಈ ಮುವ್ವತ್ತೇಳರ ಹರೆಯದ ಪೆಂಗ್ ತನ್ನ ಈ ಅರ್ಧ ದೇಹದ ಬಗ್ಗೆ ಎಂದಿಗೂ ಬೇಸರ ಇಲ್ಲ
  • .ಬದುಕನ್ನು ಗಾಢವಾಗಿ ಪ್ರೀತಿಸುವ ಪೆಂಗ್ ಜೀವನ್ಮುಖತೆಗೊಂದು ಉದಾಹರಣೆ.
  • ಇತ್ತೀಚೆಗೆ ನನಗೆ ಬಂದ ಮೇಲ್ ನಲ್ಲಿ  ಈ ಮಾಹಿತಿಯಿತ್ತು .
  • ಈತನ ಬಗ್ಗೆ ತಜ್ಞರು ಇಡೀ ಪ್ರಪಂಚದಲ್ಲಿ ಈ ರೀತಿಯ ದೇಹ ಸಿರಿಯನ್ನು ಹೊಂದಿರುವ  ಏಕೈಕ  ವ್ಯಕ್ತಿ ಪೆಂಗ್.
    ದೇಹ ಹೀಗೆ ಇದ್ದರು ಆತ ನಿಸ್ಸಹಾಯಕತೆಯಿಂದ ಸುಮ್ಮನೆ ಕುಳಿತಿಲ್ಲ,
  • ಈತನದೊಂದು ಸೂಪರ್ ಮಾರ್ಕೆಟ್ ಇದೆ.
  • ಅದನ್ನು ಅರ್ಧ ಮನುಷ್ಯನ ಅರೆ ಬೆಲೆ ಅಂಗಡಿ(Half Man-Half Price) ...
  • . ಬದುಕನ್ನು ಪ್ರಿತಿಸಿದರೆ  ಎಲ್ಲ ರೀತಿಯಲ್ಲೂ  ಸಂಪೂರ್ಣತೆಯನ್ನು ಕಾಣಬಹುದು .






Wednesday, 9 December 2009

ಸಮಸ್ಯೆ -ಸಮಸ್ಯೆ-ಪರಿಹಾರ!

ಇಬ್ಬರು ಗೆಳೆಯರು ಬಾರ್ ಒಂದರಲ್ಲಿ ಕುಳಿತಿದ್ದರು.ಒಬ್ಬ ಅಮೆರಿಕನ್ ,ಮತ್ತೊಬ್ಬ ಭಾರತೀಯ.ಒಂದರ ಹಿಂದೆ ಒಂದು ಗ್ಲಾಸ್ಗಳನ್ನು ಪೂರ್ತಿ ಮಾಡುತ್ತಾ ಕುಳಿತಿದ್ದರು.ಇದ್ದಕ್ಕಿದ್ದ ಹಾಗೆ  ಭಾರತೀಯನಿಗೆ  ಮಾತನಾಡುವ ಉಮೇದು ಬಂತು...ಬಿಕ್ಕಳಿಸಿದ..! ಅವನ ದುಃಖ ಕಂಡ ಗೆಳೆಯನಿಗೂ ದುಃಖ ಶುರು  ಆಯ್ತು,ಆದರು ಸಾವರಿಸಿ ಕೊಂಡು ಯಾಕೋ ಅಣ್ಣ ಅಳ್ತಾ ಇದ್ದೀಯ ಅಂತ ಕೇಳಿದ! ಅವನು ' ನಿನಗೆ ಗೊತ್ತಿಲ್ಲದೇ ಇರುವ ವಿಷಯವೊಂದು ಹೇಳಬೇಕಾಗಿದೆ,ನಮ್ಮ ತಾಯಿ ತಂದೆ ಹಳ್ಳಿಯ ಹುಡುಗಿಯೊಬ್ಬಳನ್ನು ಸೊಸೆಯಾಗಿ ತರಲು ನಿಶ್ಚಯ ಮಾಡಿದ್ದಾರೆ.ಅಂತಹ ಹೆಣ್ಣುಮಕ್ಕಳು ಚೆನ್ನಾಗಿ ಹೊಂದಿಕೊಂಡು ಸಂಸಾರ ನಡೆಸುತ್ತಾರೆ ಅನ್ನುವ ಭಾವನೆ ಅವರದು.ಯಾವಳೋ ಅವಳು,ನನಗೆ ಗೊತ್ತೇ ಇಲ್ಲ,ಸ್ವಲ್ಪ ದಿನ ಪ್ರೀತಿ ಸಹ ಮಾಡಲಿಲ್ಲ ಅಂತಹವಳನ್ನು ನಾನು ಮದುವೆ ಆಗೋದ? ಛೇ ನನಗೆ ಈ ಕುಟುಂಬದ ಸಮಸ್ಯೆಗಳಿಂದ ಸಾಕಾಗಿದೆ'ಎಂದು ಜೋರಾಗಿ ಅತ್ತ...!
'ನೀನು  ಲವ್ ಮ್ಯಾರೇಜ್ ಬಗ್ಗೆ ಹೇಳ್ತಾ ಇದ್ದೀಯ ? ಹಾಗಾದರೆ ನನ್ನ ಕಥೆ ಕೇಳು! '
ನಾನು ಒಬ್ಬ ವಿಧವೆಯನ್ನು  ಗಾಢವಾಗಿ ಪ್ರೀತಿಸಿದೆ,ಎರಡು ವರ್ಷಗಳ ಕಾಲ ಅವಳ ಜೊತೆ ಡೆಟ್ ಮಾಡಿದೆ,ಆಮೇಲೆ ಮದುವೆ ಆದೆ,ಅದಾದ ಮಾರನೆಯ ವರ್ಷ ನನ್ನನ್ನು ಹೆತ್ತ ಅಪ್ಪನಿಗೆ  ನನ್ನ ಮಲಮಗಳ  ಜೊತೆ ಲವ್ ಶುರು ಆಯಿತು! ಪ್ರೀತಿ ಆದ್ರೆ ಸುಮ್ಮನೆ ಇರೋಕೆ ಆಗಲ್ವಲ್ಲ, ಇಬ್ಬರು ಮದುವೆಯಾದರು.ಆಗ ನನ್ನ  ಅಪ್ಪ ನನಗೆ ಅಳಿಯನಾದ,ನಾನು ಈ ರೀತಿ ನಮ್ಮ ಅಪ್ಪನಿಗೆ ಹೆಣ್ಣು ಕೊಟ್ಟ  ಮಾವನಾದೆ!
ಕಾನೂನು ಪ್ರಕಾರ ನನ್ನ ಮಗಳು ನನ್ನ ತಾಯಿ ಮತ್ತು ನನ್ನ ಹೆಂಡತಿ ನನಗೆ ಅಜ್ಜಿ .ಇನ್ನು  ಹೆಚ್ಚಿನ ಸಮಸ್ಯೆ ಯಾವಾಗ ಉಂಟಾಯಿತು ಗೊತ್ತ? ನನಗೆ ಮಗು ಹುಟ್ಟಿದಾಗ! ನನ್ನ ಮಗ ನನ್ನ ತಂದೆಯ ಸಹೋದರ! ಮತ್ತು ಆತ ನನ್ನ ಚಿಕ್ಕಪ್ಪ!
ಆದರೆ  ಮತ್ತಷ್ಟು  ಕೆಟ್ಟ ಪರಿಸ್ಥಿತಿ  ಉಂಟಾಗಿದ್ದು ನನ್ನ ಅಪ್ಪನಿಗೆ ಮಗು ಹುಟ್ಟಿತಲ್ಲ ಆಗ!  ಈಗ ನಮ್ಮ ಮನೆಯ ಸಂಬಂಧಗಳತ್ತ ಗಮನ ಹರಿಸಿದರೆ ನನ್ನ ತಂದೆಯ ಮಗ ನನ್ನ ತಮ್ಮ ಹಾಗೂ ನನ್ನ ಮೊಮ್ಮಗ! ಅಂದ್ರೆ ನಾನು ಅಜ್ಜ ಹಾಗೂ ಮೊಮ್ಮಗ ! ಎರಡು ಪಾತ್ರಗಳ ಒಡೆಯ...! ಹೇಳು ಗೆಳೆಯ  ಕೌಟುಂಬಿಕ ಸಮಸ್ಯೆ ನಿಜವಾಗಿಯೂ ನಿನಗೆ ಇದೆಯಾ ???????? ಎಂದು ಮತ್ತೊಂದು ಪೆಗ್ ಕುಡಿದು ನಕ್ಕ !

Saturday, 5 December 2009

ಪದೇಪದೆ ನೆನಪಾದೆ!

ನಂಗೊತ್ತು ,
ಒಂದು ಹಿಡಿಯಷ್ಟು  ದಿನಗಳು ಬಾಕಿ ಇವೆ... ಅದು ಪೂರೈಸಿದರೆ ನಾವು ಹೃದಯ ಕಿತ್ತು ಬೇರೆಯಾದ ಆ ದಿನಕ್ಕೆ  ಅಮೋಘವಾಗಿ ಒಂದು ವರ್ಷದ ಸಂಭ್ರಮ !
ನಂಗೊತ್ತು,ನೀನಿನ್ನು ನನ್ನ ಮರೆತಿಲ್ಲಾಂತ ! ನಿನ್ನ ಹೃದಯ ಏನೂ ಅಂತ ನಿನಗಿಂತ ನನಗೆ ಚನ್ನಾಗಿ ಗೊತ್ತು , ಅದು ನಿನಗೂ ಗೊತ್ತು! ನಾನು ಪ್ರಾಕ್ಟಿಕಲ್...ನೀನು ಎಮೋಷನಲ್ ! ಸ್ನೇಹಕ್ಕೆ -ಪ್ರೀತಿಗೆ ಇದ್ಯಾವುದು ಬೇಕಾಗಿರಲಿಲ್ಲ! ಹೃದಯ ಏನು ಬೇಡುತ್ತಿದೆ ಎಂದು ತಿಳಿಯುವಷ್ಟರಲ್ಲಿ ನಾವಿಬ್ಬರು  ಇಷ್ಟ ಪಟ್ಟಿದ್ದೆವು. ಪೌರ್ಣಿಮೆಯ ಬೆಳದಿಂಗಳೇ ಎಂದು ಕನವರಿಸಿದೆ,ನನ್ನ ಜಾಜಿ ಮಲ್ಲಿಗೆ  ಎಂದು  ಹೊಗಳಿದೆ,ನಮ್ಮ ಪ್ರೀತಿಗೆ ಅಂತಹ ಯಾವ ಅಲಂಕಾರಗಳು ಬೇಕಿರಲಿಲ್ಲ ಅಲ್ವ! ನನ್ನನ್ನು ಒಂದು ಕ್ಷಣವೂ  ಪ್ರೀತಿಸದೆ ಬಿಡಲಿಲ್ಲ,ಪದಗಳಿಗೆ ಅಕ್ಷರವಾದೆ,ನೋಟಕ್ಕೆ ಶಕ್ತಿಯಾದೆ! ಆದರೆ ನೀನು ನನ್ನನ್ನು ಅಷ್ಟೆ ನೋಯಿಸಿದೆ!  ಪ್ರೀತಿಯ ಜೊತೆಗೆ  ನೋವನ್ನು ಮೊಗೆ ಮೊಗೆದು ಕೊಟ್ಟೆ! ಇದಕ್ಕೆ ಉತ್ತರ ?  ಐ ಡೋಂಟ್ ನೋ ವೈ !
ಆ ನೋವು ನೀನ್ಯಾಕೆ ನೀಡಿದೆ  ಅಂತ ನನಗಿಂತ ನೀನು ಬಲ್ಲೆ....ಇಲ್ಲ ಹಾಗಂತ ನಾನು ಹೇಳಲಾರೆ !ನಾನು ನಿನ್ನ ಮರೆತಿದ್ದೀನಿ ಅನ್ನುವ ಭಾವ ನಿನ್ನದು,ನಂಗೊತ್ತು ! ಆದರೆ ನಿನ್ನ ಈ ಭಾವವನ್ನು ಸ್ವೀಕರಿಸುತ್ತಿಲ್ಲ ನಿನ್ನ ಹೃದಯದ ಮೂಲೆಯ ಒಂದು ಭಾಗ! ಹೌದಲ್ವ?! ನಿಜ ತಾನೆ?!
ಹೇಗೆ ಮರೆಯಲಿ ನಿನ್ನನ್ನು ನಾನು? ಮರೆತರೆ ನಾನು ಕಟ್ಟಿದ ರಾಶಿ ಕನಸುಗಳು, ನಿನ್ನ ನೆನಪಿನಲ್ಲಿ ಕಳೆದ ಪ್ರತಿ ಕ್ಷಣವೂ ಸುಳ್ಳಾಗುತ್ತದೆ!  ಪ್ರತಿದಿನ ನಿನಗಾಗಿ ಮೀಸಲಿಟ್ಟ ಆ ಗಳಿಗೆಯಲ್ಲಿ ನನ್ನ ಕೈ  ಮೊಬೈಲ್ ಎತ್ತಿಕೊಳ್ಳುತ್ತದೆ !ಹೆಬ್ಬೆರಳಿಗೆ  ಸಂಭ್ರಮ,ನಿನ್ನ ನಂಬರ್ ಚಕಚಕ! ಉಹುಂ! ಆದರು ನಿನಗೆ ಫೋನ್ ಮಾಡಲಾಗದ ಸ್ಥಿತಿ,ಇದು  ಅಹಂಕಾರ,ದುರಭಿಮಾನ,ದುರಳತನ ಯಾವುದು ಅಲ್ಲ,ಇದು ನನ್ನ ಬದುಕಿನ ನಿಸ್ಸಹಾಯಕತೆ! ನಿನ್ನಲ್ಲಿ ಕೆಳುವುದಿಷ್ಟೇ  ನಿನಗೆ ಎಂದಾದರು ನನ್ನ ನೆನಪಾದರೆ ಯಾಕೆ ಹೀಗಾಯಿತು ಎಂದು ಯೋಚಿಸು....ಸಾಧ್ಯವಾದರೆ!
ದಿನಗಳು  ಕರಗಿಹೋಯ್ತು ಅನ್ನುವ ದುಃಖ ನಿನಗೂ-ಜೊತೆಗೆ ನನಗು ಸಹ! ಇಬ್ಬರಿಗೂ ಗೊತ್ತು ಒಬ್ಬರನ್ನೊಬ್ಬರು ಮಿಸ್ ಮಾಡ್ತಾ ಇದ್ದೀವಿ ಅಂತ! ಆದರು ಇಬ್ಬರು ಅದ್ಯಾವುದೋ ಅರಿಯದ ಧೂರ್ತ ಮೌನದ ಕೋಟೆಯೊಳಗೆ  ಬಂಧಿಗಳು!
ಇಂದ್ಯಾಕೋ ಪದೇಪದೆ ನಿನ್ನ ನೆನಪು ಕಾಡುತ್ತಿದೆ ನನಗೆ,ನಿನಗೆ  ನನ್ನ ನೆನಪು ಉಳಿದಿದೆಯೇ ?! ಇದರ ಉತ್ತರ ನನಗೆ ಗೊತ್ತಿಲ್ಲ...ನಿನಗೆ ????
ನಾನು 

Followers