Monday, 25 May 2009

ಪೆಥಲಾಜಿಕಲ್ ಗ್ಯಾಮ್ಬ್ಲಿಂಗ್

ಈಗಷ್ಟೇ ಟ್ವೆಂಟಿ-20 ಮ್ಯಾಚ್ ಮುಗಿಯಿತು.ಅದರಿಂದ ಯಾರಿಗೆಷ್ಟು ಪ್ರಯೋಜನ ಆಗೋತ್ತೋ ಏನೋ ಗೊತ್ತಿಲ್ಲ,ಆದರೆ ಇಂತಹ ಪಂದ್ಯಗಳ ಆಟಗಾರರ ಮೇಲೆ ಕಟ್ಟುವ ಬೆಟ್ಟಿಂಗ್ ಹಾವಳಿ ಮಾತ್ರ ಸಿಕ್ಕಾಪಟ್ಟೆ ಜೋರಾಗಿ ಇರುತ್ತದೆ .ಈ ರೀತಿಯ ಬೆಟ್ಟಿಂಗ್ ಕಟ್ಟುವ ಅಭ್ಯಾಸಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಪೆಥಲಾಜಿಕಲ್ ಗ್ಯಾಮ್ಬ್ಲಿಗ್ ಎಂದು ಕರೆಯುತ್ತಾರೆ.ಇದು ಹೆಚ್ಚಾಗಿ ನಮಗೆ ಕ್ರೀಡಾ ಕ್ಷೇತ್ರದಲ್ಲೋ ಅಥವಾ ,ಕುದುರೆ ರೇಸ್ ನಲ್ಲಿಯೂ ಕಂಡು ಬರುತ್ತದೆ.ಇದೊಂದು ಮಾನಸಿಕ ವ್ಯಾಧಿ.ಈ ಸಮಸ್ಯೆಗೆ ಒಳಗಾದವರು ತಮ್ಮ ಹಿಂದಿನ ಅನುಭವಗಳನ್ನು ಮರೆತು ಹೋಗುತ್ತಾರಲ್ಲದೆ,ಪುನಃ ಹೊಸ ಯೋಜನೆಯ ತಯಾರಿಯತ್ತ ತಮ್ಮ ಗಮನ ಕೇಂದ್ರೀಕರಿಸುತ್ತಾರಂತೆ.ತಮ್ಮ ಮನಸ್ಸು ಖುಷಿಯಾಗಲು ಅವರು ಹೆಚ್ಚಿನ ಮೊತ್ತವನ್ನೇ ಖರ್ಚು ಮಾಡುತ್ತಾರೆ .ಮತ್ತೊಮ್ಮೆ ಇಂತಹ ಬೆಟ್ಟಿಂಗ್ ಕಡೆ ಕಣ್ಣೆತ್ತಿ ನೋಡಬಾರದು ಎಂದು ಸದಾ ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ಪಾಲಿಸಲಾಗದೆ ವಿಫಲಗೊಳ್ಳುವುದುತನ್ನ ಇಂತಹ ಅಭ್ಯಾಸದಿಂದ .ಒಂದು ವೇಳೆ ಬಿಟ್ಟೆ ಬಿಡ ಬೇಕು ಎಂದು ಗಟ್ಟಿ ನಿರ್ಣಯ ತೆಗೆದುಕೊಂಡು ಬಳಿಕ ಅಶಾಂತಿಯಿಂದ ಎಗರಾದುವುದು,ಹಣಕ್ಕಾಗಿ ಮೋಸ,ವಂಚನೆ ಯತ್ತ ಕೈ ಹಾಕುವುದು.ಗ್ಯಾಮ್ಬ್ಲಿಂಗ್ ಕಾರಣದಿಂದ ಕೆಲಸ ಮಾಡುವ ಕಡೆ ಮತ್ತು ಸ್ನೇಹಿತರ ,ಆಪ್ತೇಷ್ಟರ ಬಳಿ ಸುಳ್ಳು ಹೇಳುವುದು.....! ಹೀಗೆ ಅನೇಕಾನೇಕ.ಇಂತಹ ಮನೋ ವ್ಯಾಧಿಗೆ ಗುರಿಯಾದ ವ್ಯಕ್ತಿಗಳಲ್ಲಿ ಈಗ ಲಕ್ಷಣಗಳು ಕಾಣಸಿಗುತ್ತದೆ.
ಗೆಲುವು :- ಗ್ಯಾಮ್ಬ್ಲಿಂಗ್ ನಲ್ಲಿ ಮೊದಲ ಬಾರಿ ದೊರೆತ ವಿಜಯವನ್ನು ದೊಡ್ಡದು ಮಾಡಿಕೊಂಡು ಸಂಭ್ರಮಿಸುವುದು.ನಂತರ ತಾವೆಷ್ಟು ಕ್ರೀಡಾ ನಿಪುಣರೆಂದು ಹೆಮ್ಮೆ ಪಡುವುದಲ್ಲದೆ,ಪ್ರತಿ ಸರ್ತಿ ಗೆಲುವು ತಮಗೆ ಕಟ್ಟಿ ಇಟ್ಟಿದ್ದು ಎಂದು ಕನಸು ಕಾಣುವುದು.
ಸೋತ ಮೊತ್ತ ಮತ್ತೆ ಪಡೆಯುವ ಪ್ರಯತ್ನ :-ತಾವು ಎಷ್ಟು ಹಣ ಕಳೆದುಕೊಂದಿದ್ದೆವೋ ಅದನ್ನು ಪುನಃ ಪಡೆಯುವತ್ತ ತಮ್ಮ ಗಮನ ನೆಟ್ಟಿರುತ್ತಾರೆ.ಪರಿಣಾಮ ಮತ್ತಷ್ಟು ಹಣದ ಹೂಡಿಕೆ.ಅಲ್ಲದೆ ಈಸರ್ತಿ ಅಷ್ಟೇ ಮತ್ತೆಂದಿಗೂ ಅದರತ್ತ ಸುಳಿಯೇ ಅನ್ನುವ ಆಶ್ವಾಸನೆ ......!

ನಿರಾಸೆ:-ಈ ರೀತಿಯ ಅಭ್ಯಾಸದಿಂದ ಹಣದ ಹೊಳೆ ಹರಿದು ಅವರ ಆರ್ಥಿಕ ಸ್ಥಿತಿ ಬತ್ತಿದ ನದಿಯಾಗುತ್ತದೆ.ಪರಿಣಾಮ ಚೆಕ್ ಬೌನ್ಸ್ !ತಮ್ಮ ಆಪ್ತರ ಸಹಾಯ ಪಡೆದು ಇವರು ಸಮಸ್ಯೆಯಿಂದ ಪಾರಾಗ ಬಹುದು,ಆದರೆ ಅದೇ ಚಟವಾಗಿ ಮಾರ್ಪಾಡಾಗುತ್ತದೆ.ಮೇಲೆ ತಿಳಿಸಿದ ಘಟ್ಟಗಳೂ ದಾಟಿದರೆ ಅವರ ಸ್ಥಿತಿ ದಮನೀಯವಾಗುತ್ತದೆ.ಯಾರ ಬಳಿಯೂ ಸಹಾಯ ಸಿಗದೇ ಡಿಪ್ರೆಶನ್ ಜೊತೆಯಾಗುತ್ತದೆ.ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವು ಅಧಿಕವಾಗಿರುತ್ತದೆ.ಅಂತಹ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗುವ ಸಂಭವ ಇರುತ್ತದೆ.
ಚಿಕಿತ್ಸೆ:- ಉತ್ತಮ ಬಾಂಧವ್ಯ ಬೆಳೆಯುವುದರತ್ತ ಆದ್ಯತೆ ನೀದುದ್ವುದು.ಇಲ್ಲಿ ಕುಟುಂಬದ ಸದಸ್ಯರ ಪಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತದೆ..ಅವರನ್ನು ಕೆಲಸಕ್ಕೆ ಹೋಗುವಂತೆ ಪ್ರೋತ್ಸಾಹಿಸುವುದು.ಅವರನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವುದು.ಅವರಿಂದ ಕೌನ್ಸಿಲಿಂಗ್ ಕೊಡಿಸುವುದು.....!
ನನ್ನ ಮಿತ್ರರೊಬ್ಬರು ಬೆಟ್ ಕಟ್ಟೋ ಗುಣ ಹೊಂದಿದ್ದಾರೆ.ಅವರಿಗೆ ಇವೆಲ್ಲ ಹೇಳಿದ್ದೇನೆ,ಆದರೆ ಆಟ ಸಾರಿ ಹೋಗಲ್ಲ ಅಂತ ಇನ್ನೊಬ್ಬ ಮಿತ್ರ ನನ್ನ ಬಳಿ ಬೆಟ್ ಕಟ್ಟಿದ್ದಾನೆ ನೋಡ್ ಬೇಕು ಯಾರು ಗೆಲ್ತೀವೋ ಅಂತ :-)

Saturday, 9 May 2009

ವೇದಗಳಲ್ಲಿ ಇಂದ್ರ

ರಾಮಾಯಣ ಹಾಗು ಮಹಾ ಭಾರತ ಗಳಲ್ಲಿ ಇಂದ್ರನನ್ನು ತುಂಬಾ ಪರಾಕ್ರಮಶಾಲಿ ಎಂದು ಹಾಗೂ ಕಾಮುಕನೆಂದು ವರ್ಣಿಸಲಾಗಿದೆ.ಆದರೆ ವೇದಗಳಲ್ಲಿ ಈತನನ್ನು ಉದಾತ್ತಶಾಲಿ,ಪ್ರತಿಭಾವಂತ,ಶತ್ರು ಸಂಹಾರಕ ಎಂದು ವರ್ಣಿಸಲಾಗಿದೆ. ವೇದಗಳಲ್ಲಿ ಮುವ್ವತ್ಮೂರು ಕೋಟಿ ದೇವಿ ದೇವತೆಗಳ ವರ್ಣನೆ ಮಾಡಲಾಗಿದೆ .ಇದನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ದ್ಯು=ಆಕಾಶದಲ್ಲಿ ನೆಲೆಸಿರುವವರು,ದೇವತಾ=ಅಂತರಿಕ್ಷ(ಮಧ್ಯ),ಸ್ಥಳೀಯ ದೇವತೆ .ಅಂತರಿಕ್ಷ ದೇವತೆಗಳಲ್ಲಿ ಇಂದ್ರ ಅಗ್ರಮಾನ್ಯ.ಆರ್ಯರಿಗೆ ಇಂದ್ರ ಪ್ರಿಯನಾದ ದೇವತೆ.ಇಂದ್ರನನ್ನು ಸ್ತುತಿಸುವ ಇನ್ನೂರ ಐವತ್ತು ಶ್ಲೋಕಗಳು ( ಚಿಕ್ಕ-ದೊಡ್ಡ,ಎಲ್ಲವನ್ನು ಜೊತೆ ಸೇರಿಸಿದರೆ ಮುನ್ನೂರಾಗುತ್ತದೆ).ಶತ್ರು ಸಂಹಾರಕನಾದ ಇಂದ್ರನಿಗೆ ವಿಶೇಷ ಸ್ಥಾನ ಇದೆ.ವ್ರುತ್ತಾಸುರ,,ಶತ್ರುಪುರಿ,ಶಂಭಾರ....!ಇನ್ನು ಅನೇಕ ರಾಕ್ಷಸರನ್ನು ನಾಶ ಮಾಡಿದ ದೇವತೆ ಅನ್ನುವ ಅಗ್ಗಳಿಕೆ ಈತ ಹೊಂದಿದ್ದಾನೆ ಋಗ್ವೇದದಲ್ಲಿ .ಇಂದ್ರ ವಜ್ರಾಯುಧಡಿದ ಶತ್ರು ಸಂಹಾರ ಮಾಡಿದರೂ,ಆಗಾಗ ಆತ ಬಾಣ ಉಪಯೋಗಿಸಿ ಶತ್ರು ಸಂಹಾರ ಮಾಡುತ್ತಾನೆ.ಇಂದ್ರ ಬಾಣದಲ್ಲಿ ಯುದ್ಧ ಮಾಡಿದ ಬಗ್ಗೆ ಅಥರ್ವಣ ವೇದದಲ್ಲಿ ವರ್ಣನೆ ಇದೆ(19/13/4) . ಋಗ್ವೆದದಿಂದ ಹಿಡಿದು ಉಪನಿಷತ್ ತನಕ ಇಂದ್ರ ಶತ್ರುಸಂಹಾರಕ ಎಂದು ತಿಳಿಸಲಾಗಿದೆ.ವೈದಿಕ ಕಾಲದಲ್ಲಿ ಇಂದ್ರ ರಾಷ್ಟ್ರೀಯ ದೇವತೆಯಾಗಿ ಪೂಜಿಸಲ್ಪಡುತ್ತಿದ್ದ.ಈತ ಮಹಾ ಬುದ್ಧಿವಂತ ಎಂದು ಋಗ್ವೇದದಲ್ಲಿ ವರ್ಣಿಸುತ್ತದೆ.ಜನರ ಪ್ರಾಣ ರಕ್ಷಕ.....!ಹಲವಾರು ರೀತಿ ವರ್ಣಿಸಲಾಗಿದೆ.ಅಜೇಯ,ವೀರತೆ,ಸಾರ್ವಭೌಮತ್ವ ,ಜ್ಞಾನ ಇವೆಲ್ಲದರ ಅಧಿಪತಿ ಅನ್ನುವ ವರ್ಣನೆಯು ಇಂದ್ರನಿಗೆ ಗಿಟ್ಟಿದೆ.ಈ ಎಲ್ಲ ಕಾರಣದಿಂದ ಈತ ಸ್ವರ್ಗಕ್ಕೆ ರಾಜ ಹಾಗು ದೇವತೆಗಳ ಅಧಿಪತಿ. ಆದರೆ ಸಾಮಾನ್ಯವಾಗಿ ಪೌರಾಣಿಕ ಚಲನಚಿತ್ರಗಳಲ್ಲಿ ಹಾಗು ಪೌರಾಣಿಕ ಇಂದ್ರ ಋಗ್ವೇದದಲ್ಲಿ ತಿಳಿಸಿರುವಷ್ಟು ಬುದ್ಧಿವಂತನಲ್ಲ ... !ಜೊತೆಗೆ ವಿಲಾಸಿ,ಹೀಗೆ ಹತ್ತು ಹಲವಾರು ರೀತಿಯಲ್ಲಿ ಆತನನ್ನು ತೋರಿಸುತ್ತಾರೆ.ಏನಾದರು ಇಂದ್ರ ವೇದಗಳ ಕಾಲದ ಅಧಿಪತಿ ಅನ್ನುವುದನ್ನು ಮಾತ್ರ ಒಪ್ಪಿಕೊಳ್ಳಲೇ ಬೇಕು.

Tuesday, 7 April 2009

ನೀನು ನೀನಾಗಿರು

ಗೆಳತಿ,
ಕಳೆದೆರಡು ದಿನದಿಂದ ನಾನು ನಿನ್ನ ಪತ್ರವನ್ನು ಜೊತೆಯಲ್ಲಿ ಇಟ್ಟುಕೊಂಡು ಮೌನವಾಗಿ ಕುಳಿತು ಬಿಟ್ಟಿದ್ದೇನೆ.ಏನು ಮಾಡೋದಕ್ಕೂ ಹೊಳಿತಾ ಇಲ್ಲ.ಅಷ್ಟು ಜಡತ್ವ.ನಿನ್ನ ಪರಿಸ್ಥಿತಿಯನ್ನು ನಾನು ಊಹಿಸಿಕೊಳ್ಳಬಲ್ಲೆ.ನಿನ್ನ ದುಃಖ ನನಗೆ ಅರ್ಥ ಆಗಿದೆ.ತಕ್ಷಣ ಬಂದು ನಿನ್ನ ಕಣ್ಣೀರನ್ನು ಒರೆಸುವ ಆಸೆ ಆದರೆ ನಾನು ಹೆಲ್ಪ್ ಲೆಸ್.ನನ್ನ ಕೆಲಸದ ರೀತಿಯೇ ಅಂತಹುದು.ಸಿಯಾಚಿನ್ ಗಡಿಯಲ್ಲಿ ನಾನು ಕರ್ಣಾಟಕದ ಮೂಲೆಯಲ್ಲಿ ನೀನೂ,ಆದರೆ ಮನಸ್ಸುಗಳಿಗೆ ಅಂತರ ಇದೆಯಾ?ನಿನ್ನ ಪ್ರೀತಿ ಒಡೆದು ಹೋಯ್ತು ಅಂತ ಬರೆದಿದ್ದಿಯಲ್ಲ ಆ ಅಂಶವೇ ನನ್ನನ್ನು ಕಂಗಾಲು ಮಾಡಿದೆ.ಅವನನ್ನು ಅದೆಷ್ಟು ಪ್ರೀತಿಸ್ತಾ ಇದ್ದೆ,ನಿನ್ನ ಪತ್ರದ ಒಂದೊಂದು ಅಕ್ಷರ ಈಗಲೂ ಅವನನ್ನು ಮರೆತಿಲ್ಲ ಅಂತ ಹೇಳ್ತಾ ಇದೆ.ನಿಜವಾ? ಮರೆಯೋದು ಸುಲಭ ಅಲ್ಲ ಅಂತ ನಂಗೆ ಗೊತ್ತು,ಗೆಳತಿ ನೀನೂ ಇನ್ನು ಅವನನ್ನು ಪ್ರೀತಿಸ್ತಾನೆ ಇದ್ದೀಯ ಹಾಗಂತ ನಂಗೆ ಈ ಪತ್ರ ಓದಿದಾಗ ಪದೇಪದೆ ಮನಸ್ಸಿಗೆ ಹೊಳೆದಿದೆ. ನಿಜವಾ ? ಯಾಕೋ ಗೊತ್ತಿಲ್ಲ ಏನು ಹೇಳ ಬೇಕು ಅಂತ ತೋಚ್ತಾನೆ ಇಲ್ಲ.ನಿನಗೆ ಮೋಸ ಮಾಡಿದ ಆ ನಿನ್ನ ಹಳೆಯ ಮಧುರ ನೆನಪಾದ ಅವನನ್ನು ಎಲ್ಲರ ಮುಂದೆ ಕ್ರೂರವಾಗಿ ನಿಂದಿಸ ಬೇಡ ಕಣೆ ಪ್ಲೀಸ್,ನೀನೂ ಇಷ್ಟು ದಿನ ಪ್ರಾಂಜಲವಾಗಿ ಪ್ರೀತಿಸಿದ್ದಕ್ಕೆ ಅವಮರ್ಯಾದೆ ಮಾಡಿದಂತೆ ಆಗುತ್ತದೆ.ನಿನ್ನಂತಹ ಅಪರೂಪದ ರತ್ನ ಪಡೆಯಲು ಆತನಿಗೆ ಲಕ್ ಇಲ್ಲ .ನೀನೂ ಅವನನ್ನು ಪ್ರೀತಿಸು ಅಂತ ಹೇಳಲ್ಲ,ದ್ವೇಷಿಸೋದು ಬೇಡ ಅಂತ ಹೇಳೋಕೆ ಇಷ್ಟ ಪಡ್ತೀನಿ .ಕ್ರೂರಿ ಅಂತ ತಿಳಿ ಬೇಡವೆ... ನೀನೂ ಎಲ್ಲರಿಗಿಂತ ಭಿನ್ನ ಅಂತ ಅವನು ಸಾಕಷ್ಟು ಸರ್ತಿ , ನನ್ನ ಮುಂದೆ ಅನೇಕರು ಹೇಳಿದ್ದಾರೆ,ಯಾವುದೋ ಒಬ್ಬ ವ್ಯಕ್ತಿಗಾಗಿ ನಿನ್ನತನ ಬಿಡಬೇಡ....!ತುಂಬಾ ಕ್ರೂರಿ ಅಥವಾ ಗಂಡಸರೆಲ್ಲ ಒಂದೇ ಅಂತ ಹೇಳ ಬೇಡ ... ನನಗೆ ನೀನೂ ನೀನಾಗಿರೋದು ಮುಖ್ಯ,ನೀನೂ ಎಂದಿಗೂ ನಿನ್ನಂತೆ ಇರಬೇಕು ಅದೇ ನನ್ನ ಆಸೆ.ಬರೆಯೋಕೆ ತೋಚ್ತಾ ಇಲ್ಲ ಕಣೆ .ಯೋಚಿಸು.. ದುಡುಕ ಬೇಡ
ನಿನ್ನ ಗೆಳೆಯ

Friday, 3 April 2009

ರಾಮ ಎಂಬುವ ಎರಡು...

ರಾಮಾಯಣದಲ್ಲಿ ರಾಮನಿಗಿಂತ ಹೆಚ್ಚು ಪ್ರಭಾವಶಾಲಿ ಆಗಿರುವುದು ರಾಮ ನಾಮ ಅಂತ ತಿಳಿದೋರು ಹೇಳುತ್ತಾರೆ.ನಮ್ಮಲ್ಲೂ ಅದರ ಬಗ್ಗೆ ಅನೇಕ ಕೀರ್ತನೆಗಳುಜಾರಿಯಲ್ಲಿವೆ .'ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರೈಯ್ಯ'ಹೀಗೆ ಆರಂಭಗೊಂಡ ಹಾಡು ರಾ ಅಕ್ಶರದ ಮಹಿಮೆಯಿಂದ ಹೇಳುತ್ತಾ ಹೋಗುತ್ತದೆ.ಅದೇ ರೀತಿ ನಾವು 'ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠಲ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ 'ಅಂತಲೂ ಹಾಡಿದ್ದೆವು ಹಾಗು ಹಾಡುತ್ತಲು ಇದ್ದೇವೆ.ಅಂದ್ರೆ ರಾಮ ಅನ್ನುವ ವ್ಯಕ್ತಿಗಿಂತ ಆತನ ನಾಮ ಎಷ್ಟು ಪ್ರಾಮುಖ್ಯತೆ ಪಡೆದಿದೆ ಅಂತ ಆಯ್ತಲ್ಲ.'ಶ್ರೀ ರಾಮ ಕೇವಲ ಅಯೋಧ್ಯ ಅಳಿದರೆ ರಾಮನಾಮ ಇಡಿ ಲೋಕವನ್ನು ಅಳುತ್ತದೆ'ಎಂದು ಸ್ವಯಮ್ ಹನುಮಂತ ಹೇಳಿರುವುದಾಗಿ ರಾಮಾಯಣದಲ್ಲಿ ಉಲ್ಲೇಖ ಮಾಡಿದೆ.ಈ ರಾಮ ಅನ್ನುವ ಎರಡು ಅಕ್ಷರ ಯಾವುದರಿಂದ ಪಡೆಯಲಾಗಿದೆ ಅನ್ನುವ ಅಂಶವು ತುಂಬಾ ಆಸಕ್ತಿದಾಯಕ ಆಗಿದೆ."ಓಂ ನಮೋ ನಾರಾಯಣಾಯ" ಎನ್ನುವ ಅಷ್ಟಾಕ್ಷರಿ ಮಂತ್ರದಲ್ಲಿನ 'ರಾ' ಎನ್ನುವ ಐದನೇ ಅಕ್ಷರವನ್ನು ಹಾಗು 'ಓಂ ನಮಶಿವಾಯ' ಎನ್ನುವ ಪಂಚಾಕ್ಷರಿ ಮಂತ್ರದಲ್ಲಿ 'ಮ' ಅಕ್ಷರ ತೆಗೆದು ಕೊಳ್ಳಲಾಗಿದೆ.ಅಂದರೆ ರಾಮ 'ಶಿವಕೇಶವರ 'ಏಕೀಕೃತ ಮೂರ್ತಿ.ಹೀಗೆ ಅನೇಕ ರೀತಿಯಲ್ಲಿ ಭಗವಂತನ ಬಗ್ಗೆ ಹೇಳುತ್ತಾರೆ ಭಕ್ತರು.ಏಕ ಪತಿ ವ್ರತಸ್ಥ ಅಂತ ಹೇಳುತ್ತಾರೆ,ಆದರೆ ಇನ್ನೊಬ್ಬ ಲೇಖಕರ ಅನ್ವಯ ಆತನ ತಂದೆ ದಶರಥನಿಗೆ ಸ್ವಲ್ಪ ಸ್ತ್ರೀ ಮೋಹ ಅದನ್ನು ಕಣ್ಣಾರೆ ಕಂಡು ಆತ ಏಕ ಪತ್ನಿ ವ್ರತಕ್ಕೆ ಬದ್ಧನಾದ ಅಂತಾರೆ.ಅದೆಷ್ಟು ನಿಜವೋ ಗೊತ್ತಿಲ್ಲ! ಏನೇ ಆದರು ನಾರ್ತ್ ಇಂಡಿಯನ್ ರಾಮ ದಕ್ಷಿಣವನ್ನು ಹಾಗು ಸೌತ್ ಇಂಡಿಯನ್ ಹನುಮ ಉತ್ತರವನ್ನು ಆಳ್ತಾ ಇರೋದು ಮಾತ್ರ ಸೋಜಿಗದ ಸಂಗತಿ.ಇನ್ನೊಂದು ವಿಷಯ ರಾಮ ಅಂದರೆ ಕನ್ನಡದಲ್ಲಿ 'ಪ್ರಿಯ'ಅನ್ನುವ ಅರ್ಥ ಬರುತ್ತದೆ.ರಾಮ ಆದ್ದರಿಂದಲೇ ಎಲ್ಲ ಕಾಲಕ್ಕೂ ಎಲ್ಲರಿಗೆ ಹೇಗೋ ಅಂತು ಪ್ರಿಯ ತುಂಬ ಪ್ರಿಯ!

Tuesday, 31 March 2009

ಚಿತ್ತು-ಚಿತ್ತಾರ ಇಲ್ಲ..!

ಗೆಳೆಯ...
ಗೊತ್ತು ನಂಗೆ ನೀನೂ ಈ ನನ್ನ ಮೇಲ್ ನೋಡಿದ ತಕ್ಷಣ ಪೆಚ್ಚಾಗಿ ಬಿಡ್ತಿಯಾಂತ.ಆದರೆ ನಾನು ಎಂದು ಮೇಲ್ ಮಾಡ್ತೀನಿ,ಯಾವಾಗ ಮೌನಾಗಿ ಕೂರ್ತೀನಿ ಅನ್ನುವ ಸಂಗತಿ ನನಗಿಂತ ನಿನಗೆ ಹೆಚ್ಚು ಗೊತ್ತಿದೆ ಅಂತ ಅಂದುಕೊಂಡಿದ್ದೇನೆ.ಪ್ಲೀಸ್ ಆ ನನ್ನ ನಂಬಿಕೆಯನ್ನು ಸುಳ್ಳು ಮಾಡ ಬೇಡ.ನನ್ನದೇನಿದ್ದರು ನೇರ ನುಡಿ,ನೇರ ವರ್ತನೆ.ಮೊಟ್ಟಮೊದಲು ನಿನ್ನನ್ನು ಕಂಡಾಗ ನಾನೇ ತಾನೆ ನಿನಗೆ ಪ್ರಪೋಸ್ ಮಾಡಿದ್ದು?ಏನ್ ಮಾಡ್ಲಿ ನನಗೆ ಮನಸಿನಲ್ಲಿ ಇಟ್ಟುಕೊಳ್ಳಲು ಬರೋದೇ ಇಲ್ಲ.ಎಲ್ಲವು ಬಯಲಾಗಿ ಬಿಡಬೇಕು.ಪ್ರಾಯಶ: ಆ ವರ್ತನೆ ನಿನ್ನನ್ನು ಹೆಚ್ಚು ಆಕರ್ಷಿತಾ ? ಉಹುಂ ನನಗೆ ಅದು ಗೊತ್ತಿಲ್ಲ.ಜಾಸ್ತಿ ಕೊರೀತಾ ಇದ್ದಿನಾ? ಗೊತ್ತು ನನಗೆ ಬೇರೆ ಯಾವ ವಿಷಯ ನನಗೆ ತಿಳಿದೇ ಇದ್ದರು ಈ ವಿಷಯ ಚೆನ್ನಾಗಿ ಗೊತ್ತು,ನೀನೂ ಪತ್ರವಿಲ್ಲದೆ ದಣಿದು ಬಿಟ್ಟಿದ್ದಿಯಾ ಅಂತ.ಪ್ರತಿದಿನ ಸಿಕ್ಕರೂ ನಾನು ನಿನಗೆ ವಾರಕ್ಕೊಮ್ಮೆ ನನ್ನ ಕೈಬರಹದಲ್ಲಿ ಒಂದು ಪತ್ರ ಬರೆದು ಕೊಡಬೇಕು.ಅದೇನು ತುಂಬಾ ನೀಟಾಗಿ ,ತಪ್ಪಿಲ್ಲದೆ ಇರಬೇಕು ಅಂತ ನೀನೂ ಎಂದಿಗೂ ಅಪೇಕ್ಷೆ ಮಾಡಲ್ಲ.ಪ್ರತಿ ಪತ್ರ ಓದಿದ ನಂತರ ನಿನ್ನ ತುಟಿಯಲ್ಲಿ ಒಂದು ಕಿರುನಗೆ .ಆದರೆ ನನಗೆ ಸಿಟ್ಟು ಬಂದಾಗ ಇಮೇಲ್ ಕಳುಹಿಸಿ ನನ್ನನ್ನು ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೆ.ನೀನೂ ನನಗೆ ಸಮಾಧಾನ ಮಾಡುವವರೆಗೂ ಈ ಕೆಲಸ ಮುಂದುವರೆಯುತ್ತಲೇ ಇರುತ್ತಿತ್ತು.ನಾನು ಎಲ್ಲಾ ಬಗೆಯ ಕೋಪದ ಸುನಾಮಿಗಳನ್ನು ದೂರ ಮಾಡಿ ಹಾಯಾದ ಗುಪ್ತಗಾಮಿನಿ ಮನಸ್ತತ್ವ ಪಡೆದ ಮೇಲೆ ನಿನ್ನ ವಿಶಾಲವಾದ ಅಂಗೈನಲ್ಲಿ ನನ್ನ ಪುಟ್ಟ ಹಸ್ತ ಇಮಡಿಸಿ 'ಮುದ್ದು ಪ್ಲೀಸ್ ಕೋಪ ಮಾಡ್ಕೋ ಪರವಾಗಿಲ್ಲ,ಪ್ರೀತಿಯಲ್ಲಿ ಕೋಪ ಇರಲೇ ಬೇಕು,ಆದರೆ ನನ್ನದೊಂದು ರಿಕ್ವೆಸ್ಟ್ ,ನಿನಗೆ ಎಷ್ಟೇ ಕೋಪ ಬಂದ್ರು ನನಗೆ ನಿನ್ನ ಕೈಬರಹದಲ್ಲಿ ಪತ್ರ ಬರಿ,ಆಮೇಲ್-ಈಮೇಲ್ ಅಂತ ಮಾಡಿ ಕರ್ತವ್ಯ ಮುಗೀತು ಅಂತ ಸುಮ್ಮನಾಗ ಬೇಡ.ಶುದ್ಧ ಅರಸಿಕ ಕಂಪ್ಯೂಟರ್ ಮೇಲ್ .ಕೈ ಬರಹದಲ್ಲಿ ಇರುವಂತೆ ಎಲ್ಲು ಚಿತ್ತು ,ಚಿತ್ತಾರ ಇರಲ್ಲ. ಸಣ್ಣ ಅಕ್ಷರ,ದಪ್ಪ ಅಕ್ಷರ,ಅಲ್ಲೆಲ್ಲೋ ದಾರಿ ತಪ್ಪಿದ ವಾಕ್ಯ,ಸ್ವಲ್ಪ ಗ್ರಾಮರ್ ಮಿಸ್ಟೇಕ್,ಮಧ್ಯೆ ನಿನ್ನ ಮೂಡ್ಗೆ ತಕ್ಕಂತೆ ರಂಗೋಲಿ,ಏನಿರುತ್ತೆ ಇಲ್ಲಿ,ಎಲ್ಲವು ಒಪ್ಪ.ಬ್ಯಾಡ ಕಣೆ ಬಂಗಾರಿ ನನಗೆ ಅಂತಹ ಪತ್ರ !ಪ್ಲೀಸ್..ಪ್ಲೀಸ್..! ಈ ವಿಷಯದಲ್ಲಿ ಕರುಣೆ ತೋರು' ಅಂತ ಹೇಳಿರ್ತೀಯಾ,ಆದರೆ ಕೋಪ ಬಂದಾಗ ನನ್ನದು ಮತ್ತದೇ ಇಮೇಲ್ ಗಲಾಟೆ.ಈ ಬಾರಿ ನನಗೆ ಯಾಕೆ ಕೋಪ ಬಂದಿದೆ ಅಂತ ನನ್ನನ್ನೇ ನೀನೂ ಕೇಳ್ತಿಯಾ? ನನಗೆ ಗೊತ್ತಿಲ್ಲ.ಆದರೆ ನಿನ್ನ ಮೇಲೆ ಸಿಟ್ಟು ಬಂದಿದೆ ಅಷ್ಟು ಮಾತ್ರ ಹೇಳಬಲ್ಲೆ.
ನಿನ್ನ ಗೆಳತಿ

Monday, 16 February 2009

ಅವಳಿಗಳ ನಾಡು..!

ಇತ್ತೀಚೆಗೆ ಪತ್ರಿಕೆ ಒಂದರಲ್ಲಿ ಒಬ್ಬ ಹೆಣ್ಣು ಮಗಳು ಒಟ್ಟಿಗೆ ಎಂಟು ಮಕ್ಕಳನ್ನು ಹೆತ್ತ ಸುದ್ದಿ ! ಆಗಾಗಲೇ ಆಕೆಗೆ ಏಳು ಮಕ್ಕಳು ಇದ್ದರು.ಇಂತಹ ಸುದ್ದಿ ನಮಗೆ ಹೊಸದಲ್ಲ.ಆದರೆ ಕಳೆದ ವಾರ ತೆಲಗು ಪತ್ರಿಕೆ ಒಂದರಲ್ಲಿ ಒಂದು ಲೇಖನ ಓದಿದೆ ,ಅಲ್ಲಿ ಅವಳಿಗಳ ನಾಡಿನ ಬಗ್ಗೆ ತಿಳಿಸಲಾಗಿತ್ತು.ಬ್ರೆಜಿಲ್ ನಲ್ಲಿ ರುವ ಕೆನ್ಡಿದೋ ಗೊದಯ್ ಪಟ್ಟಣ ಅವಳಿಜವಳಿ ಮಾಯಾ.ಅಲ್ಲಿ ಹೋದರೆ ಎಲ್ಲಿ ನೋಡಿದರು ಕೆಂಪು ಕೂದಲು,ನೀಲಿ ಕಣ್ಣಿನ ಹೆಣ್ಣು,ಗಂಡು ಮಕ್ಕಳು ಹಿರಿಯರು,ಮಧ್ಯವಯಸ್ಕರು ಸಾಮಾನ್ಯ ಅಂತೆ.ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವಳಿಜವಳಿ ಹುಟ್ಟುವುದು ಕಾಮನ್ .ಅದು ಟ್ವಿನ್ ಟೌನ್ ಆಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ವಿಶ್ವದಲ್ಲಿ ಎಂಬತ್ತು ಮಂದಿ ತಾಯಂದಿರಲ್ಲಿ ಒಬ್ಬರಿಗೆ ಮಾತ್ರ ಅವಳಿಜವಳಿ ಹುಟ್ಟುತ್ತದೆ ,ಆದರೆ ಈ ಊರಲ್ಲಿ ಪ್ರತಿ ಐದು ಜನ ತಾಯಂದಿರಲ್ಲಿ ಒಬ್ಬರಿಗೆ ಟ್ವಿನ್ಸ್ ಹುಟ್ಟೇ ಹುಟ್ಟು ತ್ತದೆಯಂತೆ ! ಕಳೆದ ಐವತ್ತು ವರ್ಷಗಳಿಂದ ಈ ಪ್ರಕ್ರಿಯೆ ನಿರಂತವಾಗಿ ಸಾಗುತ್ತಿದೆಯಂತೆ!ಇದರ ಬಗ್ಗೆ ವಿಜ್ಞಾನಿಗಳು ಸಾಕಷ್ಟು ತಲೆ ಕೆರೆದು ಕೊಂಡು ಒದ್ದಾಡಿದ್ದಂತೂ ಸತ್ಯ.ಜಾರ್ಜ್ ಕೆಮರಾನ್ ಎನ್ನುವ ಇತಿಹಾಸಕಾರ ಮಾಡಿದ ಸುದೀರ್ಘ ಅಧ್ಯಯನದಿಂದ ಅತಿ ಭಯಾನಕ ಸಂಗತಿ ಹೊರ ಬಿದ್ದಿದೆ.ಹಿಟ್ಲರ್ ನ ಶಕ್ತಿ ಬಲಗೊಳಿಸಲು ಆತನ ಬಳಿಯಲ್ಲಿದ್ದ ನಾಜಿ ಮೆಡಿಕಲ್ ಆಫಿಸರ್ ಜೋಸೆಫ್ ಮಂಜಿಲ್ ಎನ್ನುವ ರಕ್ತ ಪಿಪಾಸು ಮಾಡಿದ ಅನಾಹುತಕಾರಿಅನ್ಸ್ಹೊಧೆಗಳ ಫಾಲವೇ ಈಗಿನ ಅವಳಿ ನಾಡಿನ ಹುಟ್ಟಿಗೆ ಕಾರಣ.ಮಂಜಿಲ್ ವಂಶವಾಹಿನಿಗೆ ಸಂಬಂಧ ಪಟ್ಟಂತೆ ಸಂಶೋಧನೆ ಮಾಡುತ್ತಿದ್ದ. ಆತ ಹಿಟ್ಲರನನ್ನು ಅಮಿತವಾಗಿ ಆರಾಧಿಸುತ್ತಿದ್ದ.ನಾಜಿ ಸೈನ್ಯ ,ನಾಜಿಗಳು ಹೆಚ್ಚು ಮಾಡಲು ಒಟ್ಟಾರೆ ಆರ್ಯ ರ ಸಂತತಿ ಅಧಿಕ ಮಾಡಲು ಆತ ಬಳಸಿದ್ದು ಹಿಟ್ಲರ್ ಬಂಧಿಸಿದ್ದ ಕೈದಿಗಳನ್ನು.ಆತನ ಗಮನ ಅವಳಿಗಳ ಕಡೆಗೆ ಇತ್ತು. ಆಚ್ವಿದ್ಜ್ ಶಿಬಿರದಲ್ಲಿದ್ದ ಕೈದಿಗಳಲ್ಲಿ ತನ್ನ ಪ್ರಯೋಗಕ್ಕೆ ಉಪಯುಕ್ತ ಅನ್ನಿಸುವವರನ್ನು ಹೊರೆತು ಪಡಿಸಿ ಉಳಿದವರನ್ನು ಗ್ಯಾಸ್ ಚೆಂಬರ್ಗೆ ಕಲಿಸಲಾಗುತ್ತಿತ್ತು.ಆನಂತ ನಡೆಯುತ್ತಾ ಇದ್ದುದೇ ಮಾರಣ ಹೋಮ.ನೀಲಿ ಕಣ್ಣು ಹೇಗೆ ಆಗುತ್ತದೆ ಎಂದು ತಿಳಿಯಲು ಆತ ಚಿಕ್ಕಚಿಕ್ಕ ಮಕ್ಕಳ ಕಣ್ಣಿಗೆ ರಾಸಾಯನಿಕಗಳನ್ನು ಸುರಿಯುತ್ತಿದ್ದ.ಮಹಿಳೆಯರಿಗೆ ಗರ್ಭಸಂಬಂಧಿತ ಸರ್ಜರಿ ಮಾಡುತ್ತಿದ್ದ.ಕೆಲವರಿಗೆ ಶಾಕ್ ಟ್ರೀಟ್ಮೆಂಟ್,ಒಂದಷ್ಟು ಜನ ಹೆಣ್ಣು ಮಕ್ಕಳನ್ನು ನೇರವಾಗಿ ಎಕ್ಸರೇ ಮೆಷಿನ್ ಒಳಗೆ ಕಳುಹಿಸಿ ಬಿಡುತ್ತಿದ್ದ ಮೆಂಜಿಲ್! ಅನೇಕ ಹೆಣ್ಣುಮಕ್ಕಳು ನೋವು ತಡೆಯಲಾಗದೆ ಸತ್ತರೆ,ಕೆಲವು ಹೆನುಮಕ್ಕಳು ಸೋಂಕಿನಿಂದ ಸತ್ತು ಹೋಗ್ತಾ ಇದ್ದರಂತೆ.ಅಷ್ಟು ಭೀಭತ್ಸ .ಒಂದು ಸರ್ತಿ ತನ್ನ ಶಿರಕ್ಕೆ ಬಂದ ಹದಿನಾಲ್ಕು ಅವಳಿಗಳ ಮೇಲೆ ಪ್ರಯೋಗ ನಡೆಸಿದನಂತೆ ಮೆಂಜಿಲ್.ನಾಜಿ ಶಿಬಿರದಲ್ಲಿ ಇಪ್ಪತ್ತೊಂದು ತಿಂಗಳುಗಳ ಕಾಲ ನಿರಂತವಾಗಿ ಆತ ಮಾಡಿದ ವಿಕೃತ ಪ್ರಯೋಗಗಳ ಕಾರಣದಿಂದ ಮೆಜಿಲ್ನನ್ನು ಎನ್ಜಿಲ್ ಆಫ್ ಡೆತ್ ಎಂದು ಕರೆಯುತ್ತ ಇದ್ದರು..ಆತ ಮಾನವ ಮಾತ್ರರಿಗೆ ಅಲ್ಲದೆ ಪಶುಗಳ ಮೃತ್ಯು ದೇವತೆ ಆಗಿದ್ದ.ಸ್ವಲ್ಪವೂ ಮತ್ತಿನ ಪದಾರ್ಥ ನೀಡದೆ ಆತ ತನ್ನ ಪ್ರಯೋಗಗಳನ್ನು ಮಾಡುತ್ತಾ ಇದ್ದ ನಿರ್ದಯಿ.ಇದರ ಬಗ್ಗೆ ನೆನಪಿಸಿ ಕೊಂಡಿದ್ದಾರೆ ಅಲೆಕ್ಸ್ ದೆಕೆಲ್ (ಯುದ್ದ ಕೈದಿ ಆಗಿದ್ದು ಅದೃಷ್ಟವಶಾತ್ ಬಚಾವಾದ ವ್ಯಕ್ತಿ).1945 ವರೆಗೂ ಪ್ರಯೋಗ ನಡೆಸಿದ ಮೆಂಜಿಲ್ ಬಳಿಕ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಮೆರಿಕಾಕ್ಕೆ ಹೋದನಂತೆ.ಇವೆಲ್ಲವನ್ನೂ ಇತಿಹಾಸಕಾರ ಕೆಮರಾನ್ ತಮ್ಮ ಕೃತಿಯಲ್ಲಿ ಉಲ್ಲೆಕಿಸಿದ್ದಾರೆ.ಇದಕ್ಕೆ ಸಂಬಂಧ ಪಟ್ಟಂತೆ ಸ್ಥಳಿಯರು ರುಡಾಲ್ಫ್ ವೆಯೇಜ್ ಎನ್ನುವ ವೈದ್ಯ ಗರ್ಭಿಣಿಯರಿಗೆ ಅನೇಕ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾ ಇದ್ದನಂತೆ.ಒಂದೇ ರೀತಿ ಇರುವ ಅವಳಿಗಳ ಮೇಲೆ ಅನೇಕ ಪ್ರಯೋಗ ಮಾಡುತ್ತಾ ಇದ್ದನಂತೆ.ತನಗೆ ಬೇಡದ ವ್ಯಕ್ತಿಯನ್ನು ಆತ ನಿರ್ದಾಕ್ಷಣ್ಯವಾಗಿ ಸಾಯಿಸಿ ಬಿಡುತ್ತಾ ಇದ್ದನಂತೆ..ಹೇಗೆ,ಎಂದು ಬಂದ ಎಂದು ಯಾರಿಗೂ ತಿಳಿದಿಲ್ಲ,1963 ರಿಂದ ಈ ಸ್ಥಳದ ಹೆಣ್ಣುಮಕ್ಕಳು ಅವಳಿಗಳಿಗೆ ಜನ್ಮ ನೀಡಲು ಆರಂಭ ಮಾಡಿದರಂತೆ.ಇಷ್ಟು ಕಾಲ ರಹಸ್ಯವಾಗಿ ಇದ್ದ ಅವಳಿಗಳ ನಗರದ ಕಥೆ ಈಗ ಈ ರೀತಿ ಪ್ರಪಂಚದ ಕಣ್ಣಿಗೆ ಬಿದ್ದಿದೆ.

Friday, 13 February 2009

ನಾ ನಿನ್ನ ಕನಸಿಗೆ .....

ಅವಳು
ಪ್ರಾಯಶ: ಇನ್ನು ಮುಂದೆ ನೀನೂ ನನ್ನ ಪ್ರೀತಿ ಮಾಡಲ್ಲ ಅಂತ ಕಾಣುತ್ತೆ.. ಗೊತ್ತಿಲ್ಲ ಇಷ್ಟು ವರ್ಷಗಳ ಪ್ರೀತಿ ಮುರುಕೊಂಡು ಚೂರು ಚೂರು ಆಗಿದೆ ಅಂತ ನನಗೆ ಅನ್ನಿಸ್ತಾಯಿದೆ.ಚಿನ್ನ ನಿನಗೆ ಜ್ಞಾಪಕ ಇದೆಯಾ ಎಂತಹ ಸ್ಥಿತಿ ನೋಡು ನಂದು ಹಳೆದೆಲ್ಲ ಜ್ಞಾಪಿಸುವ ಪರಿಸ್ಥಿತಿ ನಂಗೆ.,ಅಂದು ನೀನೂ ನಾನು ಮೊದಲ ಬಾರಿ ಭೇಟಿ ಆದಾಗ ನಿನ್ನ ಸುತ್ತಲು ಫ್ರೆಂಡ್ಸ್ ಗುಂಪು.ನಾನು ಒಂದು ಕಡೆ ಸುಮ್ಮನೆ ಕುಳಿತಿದ್ದೆ,ಹಾಗಂತ ಮೊದಲ ನೋಟದಲ್ಲೇ ನಿನ್ನನ್ನು ಮೆಚ್ಚಿದೆ ಅಂತ ಅರ್ಥ ಅಲ್ಲ.ಸುಮ್ನೆ ಹಾಗೆ ಕುತೂಹಲದಿಂದ ಅವಡುಗಚ್ಚಿ ನೋಡಿದೆ.ನನಗೆ ಗೊತ್ತೇ ಆಗಿರಲಿಲ್ಲ ತುಂಬಾ ದಿನ ನೀನೂ ನನ್ನನ್ನು ಮೊದಲ ಭೇಟಿಯಲ್ಲೇ ಮೆಚ್ಚಿದ್ದೆ ಅಂತ,ನಾನು ಒರಟಿತುಸು ಹಠಮಾರಿ,ಗೆಳತಿಯರು ಸತ್ಯಭಾಮ ಅಂತ ಹೆಸರು ನಾಮಕರಣ ಮಾಡಿದ್ದರು,ಒಂದು ಸುಂದರ ಸಂಜೆ ನೀನೂ ನನಗೆ ಪ್ರಪೋಸ್ ಮಾಡಿದೆ,ಅದಕ್ಕೂ ಮುನ್ನ ನಂಗೆ ನೀನೂ ನನ್ನನ್ನು ಇಷ್ಟ ಪಡ್ತಾ ಇದ್ದೀಯ ಅನ್ನೋದು ಗೊತ್ತಾಗಿತ್ತು.ನೀನೂ ನನ್ನ ಹತ್ತಿರ ನಿನ್ನ ಮನ ಬಿಚ್ಚಿದರು ಉತ್ತರಿಸೋಕೆ ತುಂಬಾ ಸಮಯ ತೆಗೆದುಕೊಂಡೆ,ಯಾಕೋ ನಿನ್ನನ್ನು ಸತಾಯಿಸ ಬೇಕು ಅಂತ ಅನ್ನಿಸಿತ್ತು,ನನಗೆ ಗೊತ್ತಿಲ್ಲದೆ ನೀನೂ ಇಷ್ಟಾ ಆಗೋಕೆ ಶುರು ಆದೆ,ನಾನು ಸಮ್ಮತಿ ಸೂಚಿಸಿದೆ.ನಾನು ಸತ್ಯಭಾಮಳ ಪ್ರತಿರೂಪ ಅಂತ ನಿನಗೆ ಗೊತ್ತಿತ್ತಲ್ಲ ಆದಷ್ಟು ಹುಡುಗಿಯರ ಜೊತೆ ಮಾತಾಡುವಾಗ ಎಚ್ಚರ ವಹಿಸುತ್ತಿದ್ದೆ,ಎಲ್ಲ ವಿಷಯದಲ್ಲೂ ತುಂಬಾ ಗಮನ ಕೊಡ್ತಾಯಿದ್ದೆ,ಅದಷ್ಟೇ ಆಗಿದ್ದಿದ್ದರೆ ಎಷ್ಟು ಚೆನ್ನಿತ್ತು?ಮೊನ್ನೆ ಸುಮ್ಮಿ ಹೇಳೋತನಕ ನನಗೆ ವಿಷಯ ಆ ವಿಷಯದ ಬಗ್ಗೆ ಗೊತ್ತೇ ಆಗಿರಲಿಲ್ಲ.ನೀನೂ ಆ ರಾಧಿನ್ನ ಪ್ರೀತಿ ಮಾಡ್ತಾ ಇದ್ದಿಯಂತೆ? ನಿಜಾನ ಅಂತ ನಿನ್ನನ್ನು ಈ ಪತ್ರದ ಮೂಲಕ ಕೇಳೋ ಪ್ರಯತ್ನ ಮಾಡ್ತಾ ಇದ್ದೀನಿ.ಇಲ್ಲಿತನಕ ನಾನು ನಿನ್ನವಳು ಅಂತ ತಿಳಿದಿದ್ದೆ ಇನ್ನು ಮುಂದೆ ಏನ್ ಬರೀಬೇಕು ಅಂತ ಗೊತ್ತಿ ಲ್ಲಹೋಗು ಅಳು ಬರ್ತಾಯಿದೆ ಇನ್ನು ಮುಂದೆ ನನ್ನ ಕನಸಿನ ಕೋಟೆಗೆ ಬಾಗಿಲು ಹಾಕೋತಿನಿ ಯಾರು ಬೇಕಾಗಿಲ್ಲ ನಂಗೆ .ಒಂಟಿಯಾಗಿ ಇರ್ತೀನಿ ,ಅಳು ತಡಿಯೋಕೆ ಆಗ್ತಾ ಇಲ್ಲ .........
ಅವನು
ನನಗೆ ಗೆಳೆಯರ ಬಳಗ ತುಂಬಾ.ಗೊತ್ತಿಲ್ಲ ಅದ್ಯಾಕೆ ಈ ಪರಿ ನಂಗೆ ಫ್ರೆಂಡ್ಸ್ ಆಗ್ತಾರೋ.ಪ್ರೀತಿಯಿಂದ ನನ್ನ ಸ್ನೇಹವಲಯ ಕೃಷ್ಣಾ ಅಂತ ಕರೆಯೋದು.ನನ್ನ ಮಾತುಗಾರಿಕೆ,ಸಮಸ್ಯೆ ಬಗೆ ಹರಿಸುವ ವಿಧಾನ ಜನಕ್ಕೆ ಇಷ್ಟ ಆಗಿರ ಬೇಕು,ಗೊತ್ತಿಲ್ಲ,,ಯಾರಿಗೆ ಯಾವುದೇ ಇಷ್ಟ ಆಗಿರಲಿ ನನಗೆ ಸತ್ಯಳ ಮೊನಚು ಕೋಪ ತುಂಬಾ ತುಂಬ ಇಷ್ಟ.ಮೊದಲ ದಿನ ಅವಳು ನನ್ನನ್ನು ಅವಡುಗಚ್ಚಿ ನೋಡಿದ ರೀತಿಗೆ ನಾನು ಕ್ಲೀನ್ ಬೋಲ್ಡ್ ! ನಕ್ಕರೆ ಯಾವ ಪ್ರಪಂಚ ಮುಳುಗಿ ಹೋಗುತ್ತೋ ಅನ್ನುವ ಗಡಸು ಹುಡುಗಿ,ನಾನು ಅವಳನ್ನು ಇಷ್ಟ ಪಡ್ತಾ ಇದ್ದೀನಿ ಅಂತ ಗೊತ್ತಾದರೂ ಸಿಕ್ಕಾಪಟ್ಟೆ ಸತಾಯಿಸಿದ ತುಂಟ ಗೆಳತಿ,ಎಲ್ಲ ವಿಷಯದಲ್ಲೂ ಒಂದು ಕೈ ಮುಂದೆ ಇರುವ ಬುದ್ಧಿವಂತೆ.ಆದರು ಪ್ರೀತಿಯ ವಿಷಯದಲ್ಲಿ ಸಂಪೂರ್ಣ ದಡ್ಡಿ ,ಕೃಷ್ಣನ ಒಲವಿನ ಸಖಿ ಸತ್ಯಳಂತೆ ಪೊಸೆಸಿವ್ ,ಈ ವಿಷಯದಲ್ಲಿ ಸರಿ ಹೋಗಲು ಇಚ್ಚಿಸದೆ ಇರುವ ನನ್ನ ಒಲವು.ರಾಧಿ ನನ್ನ ಬಾಲ್ಯದ ಗೆಳತಿ,ಊರಿಂದ ಯಾವುದೋ ಕೆಲಸಕ್ಕಾಗಿ ನಮ್ಮ ಮನೆಗೆ ಬಂದು ಇದ್ದಾಳೆ ,ತುಂಬಾ ಸಲುಗೆ ನಮ್ಮಿಬ್ಬರಲ್ಲೂ ಇದೆ.ಅಪ್ಪ ಅಮ್ಮನಿಗೆ ಅವಳನ್ನು ಸೊಸೆ ಮಾಡಿಕೊಳ್ಳುವ ಆಸೆ.ಈ ವಿಷಯ ನನ್ನನ್ನು ಕೇಳಿದಾಗ ನಾನು ಯಾಕೋ ಏನು ಮಾತಾಡಲಿಲ್ಲ.ಅದನ್ನು ಸಮ್ಮತಿ ಅಂತ ಮನೆಯವರು ತಿಳಿದರು,ಅದಕ್ಕೆ ತಕ್ಕಂತೆ ನಾನು ನನ್ನ ಮುದ್ದು ಹುಡುಗಿಯನ್ನು ಮೀಟ್ ಮಾಡೋಕೆ ಆಗಲಿಲ್ಲ,ಚಿನ್ನ ನಂಗೊತ್ತು ಈ ರಾಧಿ ವಿಷ್ಯ ನಿನಗೆ ಸುಮ್ಮಿಯಿಂದ ಗೊತ್ತಾಗಿದೆ ಅಂತ.ಐ ಲವ್ ಯು ಕಣೆ ಹುಡುಗಿ,ಗೊತ್ತು ನಂಗೆ ನೀನೂ ನನಗೆ ಯಾರು ಬೇಡ ಅಂತ ಬಿಗಿದು ಕುಳಿತು ಬಿಟ್ಟು ಇರ್ತೀಯಾಂತ ,ಆದರೆ ನೀನೂ ಇಷ್ಟ ಬಂದಂಗೆ ಇರೋಕೆ ನಾನು ಬಿಡ್ತೀನ? ನಾ ನಿನ್ನ ಕನಸಿಗೆ ಚಂದಾದಾರನು ಚಂದ ಬಾಕಿ ನೀಡಲು ಬಂದೆ ಬರುವೆನು.. ನಿನ್ನವನು ಚಿನ್ನ ಅನುಮಾನವೇ ಬೇಡ.

Followers