|
Saturday, 9 January 2010
ಬದುಕುವುದನ್ನು ಕಲಿಯಬೇಕು
Wednesday, 9 December 2009
ಸಮಸ್ಯೆ -ಸಮಸ್ಯೆ-ಪರಿಹಾರ!
ಇಬ್ಬರು ಗೆಳೆಯರು ಬಾರ್ ಒಂದರಲ್ಲಿ ಕುಳಿತಿದ್ದರು.ಒಬ್ಬ ಅಮೆರಿಕನ್ ,ಮತ್ತೊಬ್ಬ ಭಾರತೀಯ.ಒಂದರ ಹಿಂದೆ ಒಂದು ಗ್ಲಾಸ್ಗಳನ್ನು ಪೂರ್ತಿ ಮಾಡುತ್ತಾ ಕುಳಿತಿದ್ದರು.ಇದ್ದಕ್ಕಿದ್ದ ಹಾಗೆ ಭಾರತೀಯನಿಗೆ ಮಾತನಾಡುವ ಉಮೇದು ಬಂತು...ಬಿಕ್ಕಳಿಸಿದ..! ಅವನ ದುಃಖ ಕಂಡ ಗೆಳೆಯನಿಗೂ ದುಃಖ ಶುರು ಆಯ್ತು,ಆದರು ಸಾವರಿಸಿ ಕೊಂಡು ಯಾಕೋ ಅಣ್ಣ ಅಳ್ತಾ ಇದ್ದೀಯ ಅಂತ ಕೇಳಿದ! ಅವನು ' ನಿನಗೆ ಗೊತ್ತಿಲ್ಲದೇ ಇರುವ ವಿಷಯವೊಂದು ಹೇಳಬೇಕಾಗಿದೆ,ನಮ್ಮ ತಾಯಿ ತಂದೆ ಹಳ್ಳಿಯ ಹುಡುಗಿಯೊಬ್ಬಳನ್ನು ಸೊಸೆಯಾಗಿ ತರಲು ನಿಶ್ಚಯ ಮಾಡಿದ್ದಾರೆ.ಅಂತಹ ಹೆಣ್ಣುಮಕ್ಕಳು ಚೆನ್ನಾಗಿ ಹೊಂದಿಕೊಂಡು ಸಂಸಾರ ನಡೆಸುತ್ತಾರೆ ಅನ್ನುವ ಭಾವನೆ ಅವರದು.ಯಾವಳೋ ಅವಳು,ನನಗೆ ಗೊತ್ತೇ ಇಲ್ಲ,ಸ್ವಲ್ಪ ದಿನ ಪ್ರೀತಿ ಸಹ ಮಾಡಲಿಲ್ಲ ಅಂತಹವಳನ್ನು ನಾನು ಮದುವೆ ಆಗೋದ? ಛೇ ನನಗೆ ಈ ಕುಟುಂಬದ ಸಮಸ್ಯೆಗಳಿಂದ ಸಾಕಾಗಿದೆ'ಎಂದು ಜೋರಾಗಿ ಅತ್ತ...!
'ನೀನು ಲವ್ ಮ್ಯಾರೇಜ್ ಬಗ್ಗೆ ಹೇಳ್ತಾ ಇದ್ದೀಯ ? ಹಾಗಾದರೆ ನನ್ನ ಕಥೆ ಕೇಳು! '
ನಾನು ಒಬ್ಬ ವಿಧವೆಯನ್ನು ಗಾಢವಾಗಿ ಪ್ರೀತಿಸಿದೆ,ಎರಡು ವರ್ಷಗಳ ಕಾಲ ಅವಳ ಜೊತೆ ಡೆಟ್ ಮಾಡಿದೆ,ಆಮೇಲೆ ಮದುವೆ ಆದೆ,ಅದಾದ ಮಾರನೆಯ ವರ್ಷ ನನ್ನನ್ನು ಹೆತ್ತ ಅಪ್ಪನಿಗೆ ನನ್ನ ಮಲಮಗಳ ಜೊತೆ ಲವ್ ಶುರು ಆಯಿತು! ಪ್ರೀತಿ ಆದ್ರೆ ಸುಮ್ಮನೆ ಇರೋಕೆ ಆಗಲ್ವಲ್ಲ, ಇಬ್ಬರು ಮದುವೆಯಾದರು.ಆಗ ನನ್ನ ಅಪ್ಪ ನನಗೆ ಅಳಿಯನಾದ,ನಾನು ಈ ರೀತಿ ನಮ್ಮ ಅಪ್ಪನಿಗೆ ಹೆಣ್ಣು ಕೊಟ್ಟ ಮಾವನಾದೆ!
ಕಾನೂನು ಪ್ರಕಾರ ನನ್ನ ಮಗಳು ನನ್ನ ತಾಯಿ ಮತ್ತು ನನ್ನ ಹೆಂಡತಿ ನನಗೆ ಅಜ್ಜಿ .ಇನ್ನು ಹೆಚ್ಚಿನ ಸಮಸ್ಯೆ ಯಾವಾಗ ಉಂಟಾಯಿತು ಗೊತ್ತ? ನನಗೆ ಮಗು ಹುಟ್ಟಿದಾಗ! ನನ್ನ ಮಗ ನನ್ನ ತಂದೆಯ ಸಹೋದರ! ಮತ್ತು ಆತ ನನ್ನ ಚಿಕ್ಕಪ್ಪ!
ಆದರೆ ಮತ್ತಷ್ಟು ಕೆಟ್ಟ ಪರಿಸ್ಥಿತಿ ಉಂಟಾಗಿದ್ದು ನನ್ನ ಅಪ್ಪನಿಗೆ ಮಗು ಹುಟ್ಟಿತಲ್ಲ ಆಗ! ಈಗ ನಮ್ಮ ಮನೆಯ ಸಂಬಂಧಗಳತ್ತ ಗಮನ ಹರಿಸಿದರೆ ನನ್ನ ತಂದೆಯ ಮಗ ನನ್ನ ತಮ್ಮ ಹಾಗೂ ನನ್ನ ಮೊಮ್ಮಗ! ಅಂದ್ರೆ ನಾನು ಅಜ್ಜ ಹಾಗೂ ಮೊಮ್ಮಗ ! ಎರಡು ಪಾತ್ರಗಳ ಒಡೆಯ...! ಹೇಳು ಗೆಳೆಯ ಕೌಟುಂಬಿಕ ಸಮಸ್ಯೆ ನಿಜವಾಗಿಯೂ ನಿನಗೆ ಇದೆಯಾ ???????? ಎಂದು ಮತ್ತೊಂದು ಪೆಗ್ ಕುಡಿದು ನಕ್ಕ !

Saturday, 5 December 2009
ಪದೇಪದೆ ನೆನಪಾದೆ!
ನಂಗೊತ್ತು ,
ಒಂದು ಹಿಡಿಯಷ್ಟು ದಿನಗಳು ಬಾಕಿ ಇವೆ... ಅದು ಪೂರೈಸಿದರೆ ನಾವು ಹೃದಯ ಕಿತ್ತು ಬೇರೆಯಾದ ಆ ದಿನಕ್ಕೆ ಅಮೋಘವಾಗಿ ಒಂದು ವರ್ಷದ ಸಂಭ್ರಮ !
ನಂಗೊತ್ತು,ನೀನಿನ್ನು ನನ್ನ ಮರೆತಿಲ್ಲಾಂತ ! ನಿನ್ನ ಹೃದಯ ಏನೂ ಅಂತ ನಿನಗಿಂತ ನನಗೆ ಚನ್ನಾಗಿ ಗೊತ್ತು , ಅದು ನಿನಗೂ ಗೊತ್ತು! ನಾನು ಪ್ರಾಕ್ಟಿಕಲ್...ನೀನು ಎಮೋಷನಲ್ ! ಸ್ನೇಹಕ್ಕೆ -ಪ್ರೀತಿಗೆ ಇದ್ಯಾವುದು ಬೇಕಾಗಿರಲಿಲ್ಲ! ಹೃದಯ ಏನು ಬೇಡುತ್ತಿದೆ ಎಂದು ತಿಳಿಯುವಷ್ಟರಲ್ಲಿ ನಾವಿಬ್ಬರು ಇಷ್ಟ ಪಟ್ಟಿದ್ದೆವು. ಪೌರ್ಣಿಮೆಯ ಬೆಳದಿಂಗಳೇ ಎಂದು ಕನವರಿಸಿದೆ,ನನ್ನ ಜಾಜಿ ಮಲ್ಲಿಗೆ ಎಂದು ಹೊಗಳಿದೆ,ನಮ್ಮ ಪ್ರೀತಿಗೆ ಅಂತಹ ಯಾವ ಅಲಂಕಾರಗಳು ಬೇಕಿರಲಿಲ್ಲ ಅಲ್ವ! ನನ್ನನ್ನು ಒಂದು ಕ್ಷಣವೂ ಪ್ರೀತಿಸದೆ ಬಿಡಲಿಲ್ಲ,ಪದಗಳಿಗೆ ಅಕ್ಷರವಾದೆ,ನೋಟಕ್ಕೆ ಶಕ್ತಿಯಾದೆ! ಆದರೆ ನೀನು ನನ್ನನ್ನು ಅಷ್ಟೆ ನೋಯಿಸಿದೆ! ಪ್ರೀತಿಯ ಜೊತೆಗೆ ನೋವನ್ನು ಮೊಗೆ ಮೊಗೆದು ಕೊಟ್ಟೆ! ಇದಕ್ಕೆ ಉತ್ತರ ? ಐ ಡೋಂಟ್ ನೋ ವೈ !
ಆ ನೋವು ನೀನ್ಯಾಕೆ ನೀಡಿದೆ ಅಂತ ನನಗಿಂತ ನೀನು ಬಲ್ಲೆ....ಇಲ್ಲ ಹಾಗಂತ ನಾನು ಹೇಳಲಾರೆ !ನಾನು ನಿನ್ನ ಮರೆತಿದ್ದೀನಿ ಅನ್ನುವ ಭಾವ ನಿನ್ನದು,ನಂಗೊತ್ತು ! ಆದರೆ ನಿನ್ನ ಈ ಭಾವವನ್ನು ಸ್ವೀಕರಿಸುತ್ತಿಲ್ಲ ನಿನ್ನ ಹೃದಯದ ಮೂಲೆಯ ಒಂದು ಭಾಗ! ಹೌದಲ್ವ?! ನಿಜ ತಾನೆ?!
ಹೇಗೆ ಮರೆಯಲಿ ನಿನ್ನನ್ನು ನಾನು? ಮರೆತರೆ ನಾನು ಕಟ್ಟಿದ ರಾಶಿ ಕನಸುಗಳು, ನಿನ್ನ ನೆನಪಿನಲ್ಲಿ ಕಳೆದ ಪ್ರತಿ ಕ್ಷಣವೂ ಸುಳ್ಳಾಗುತ್ತದೆ! ಪ್ರತಿದಿನ ನಿನಗಾಗಿ ಮೀಸಲಿಟ್ಟ ಆ ಗಳಿಗೆಯಲ್ಲಿ ನನ್ನ ಕೈ ಮೊಬೈಲ್ ಎತ್ತಿಕೊಳ್ಳುತ್ತದೆ !ಹೆಬ್ಬೆರಳಿಗೆ ಸಂಭ್ರಮ,ನಿನ್ನ ನಂಬರ್ ಚಕಚಕ! ಉಹುಂ! ಆದರು ನಿನಗೆ ಫೋನ್ ಮಾಡಲಾಗದ ಸ್ಥಿತಿ,ಇದು ಅಹಂಕಾರ,ದುರಭಿಮಾನ,ದುರಳತನ ಯಾವುದು ಅಲ್ಲ,ಇದು ನನ್ನ ಬದುಕಿನ ನಿಸ್ಸಹಾಯಕತೆ! ನಿನ್ನಲ್ಲಿ ಕೆಳುವುದಿಷ್ಟೇ ನಿನಗೆ ಎಂದಾದರು ನನ್ನ ನೆನಪಾದರೆ ಯಾಕೆ ಹೀಗಾಯಿತು ಎಂದು ಯೋಚಿಸು....ಸಾಧ್ಯವಾದರೆ!
ದಿನಗಳು ಕರಗಿಹೋಯ್ತು ಅನ್ನುವ ದುಃಖ ನಿನಗೂ-ಜೊತೆಗೆ ನನಗು ಸಹ! ಇಬ್ಬರಿಗೂ ಗೊತ್ತು ಒಬ್ಬರನ್ನೊಬ್ಬರು ಮಿಸ್ ಮಾಡ್ತಾ ಇದ್ದೀವಿ ಅಂತ! ಆದರು ಇಬ್ಬರು ಅದ್ಯಾವುದೋ ಅರಿಯದ ಧೂರ್ತ ಮೌನದ ಕೋಟೆಯೊಳಗೆ ಬಂಧಿಗಳು!
ಇಂದ್ಯಾಕೋ ಪದೇಪದೆ ನಿನ್ನ ನೆನಪು ಕಾಡುತ್ತಿದೆ ನನಗೆ,ನಿನಗೆ ನನ್ನ ನೆನಪು ಉಳಿದಿದೆಯೇ ?! ಇದರ ಉತ್ತರ ನನಗೆ ಗೊತ್ತಿಲ್ಲ...ನಿನಗೆ ????
ನಾನು

Thursday, 26 November 2009
Thursday, 29 October 2009
ಸೇಮ್ ಸೇಮ್ ರಿಸೆಂಬಲ್ !

ತಂದೆ-ತಾಯಿಯ ಹೋಲಿಕೆ ಮಕ್ಕಳಲ್ಲಿ ಬರುವುದು ಸಾಮಾನ್ಯ ಸಂಗತಿ.ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಷಯಕ್ಕೆ ಬಂದರೆ ಅವರ ಅಭಿಮಾನಿಗಳ ಸಂತೋಷ ಹೇಳತೀರದ್ದಾಗುತ್ತದೆ . ಸ್ಯಾಂಡಲ್ ವುಡ್ಡಿನಲ್ಲಿ ಅಣ್ಣಾವರನ್ನು ಶಿವರಾಜ್ ರಾಜ್ ಕುಮಾರ್ ಹೋಲ್ತಾರೆ,ಅದೇ ರೀತಿ ಗಿರಿಜಾ ಲೋಕೇಶ್ ಥರ ಸೃಜನ್,ವಿನೋದ್ ಪ್ರಭಾಕರ್ ಥೇಟ್ ಪ್ರಭಾಕರ್ ರೀತಿಯಲ್ಲಿ ಇದ್ದಾರೆ,ದ್ವಾರಕೀಶ್ ಮಕ್ಕಳ ಬಗ್ಗೆ ಹೇಳುವಷ್ಟೇ ಇಲ್ಲ...! ಈ ಸಂಗತಿಯನ್ನು ಮುಂದಿಟ್ಟುಕೊಂಡು ಬಾಲಿವುಡ್ ಕಡೆ ಕಣ್ ಹಾಯಿಸಿದರೆ ಇಂತಹ ಅನೇಕ ನಮೂನೆಗಳು ಕಣ್ಣಿಗೆ ಬೀಳುತ್ತದೆ.
ಶ್ರುತಿ ಹಾಸನ್ :- ಪಂಚ ಭಾಷಾ ತಾರೆ ಕಮಲ ಹಾಸನ್ ಹಾಗೂ ಮಾದಕ ನಟಿ ಸಾರಿಕ ಅವರ ಕರುಳ ಬಳ್ಳಿ ಶ್ರುತಿ ಹಾಸನ್.ಥೇಟ್ ಅಮ್ಮನ ಹಾಗೆ ಇರುವ ಈ ಸುಂದರಿ ಲಕ್ ಸಿನೆಮಾದಲ್ಲಿ ನಟಿಸಿ ಸೋತು ಸೊಟ್ಟ ಮುಖ ಹಾಕಿ ಕೊಂಡು ಬಂದಾಗಿದೆ.ಈಗ ತೆಲುಗು ಹಾಗೂ ತಮಿಳು ಮಂದಿ ಈ ಇಳವರಸಿಯನ್ನು ಬೆಳೆಸಲು ಪರದಾಡ್ತಾ ಇದ್ದಾರೆ.ಈ ಮುದ್ದು ಹುಡುಗಿ ಸಿನಿ ಕ್ಷೇತ್ರದಲ್ಲಿ ತಾಯಿಯಂತೆ ಗ್ಲಾಮರ್ ಬೊಂಬೆಯಾಗಿ ಉಳಿತಾಳೋ ಇಲ್ಲ... ತಂದೆಯಂತೆ ಅಪ್ಪಟ ಪ್ರತಿಭೆಯಾಗಿ ವೀಕ್ಷಕರ ಮನ ಗೆಲ್ತಾಲೋ? ಕಾಲವೇ ಹೇಳುತ್ತೆ!!!
ರಣಬೀರ್ ಕಪೂರ್ :- ರಾಜ್ ಕಪೂರ್ ಖಾಂದಾನ್ ಕುಡಿ ಈ ಚಲುವಾಂತ ಚನ್ನಿಗ ರಿಷಿಕಪೂರ್ ಮತ್ತು ನೀತುಸಿಂಗ್ ಒಡಲ ಬಳ್ಳಿ.ಈ ನಟ ಥೇಟ್ ಅಮ್ಮನ ಥರ ಇದ್ದಾನೆ ಸಧ್ಯ ! ಸಾವರಿಯ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ತಕ್ಷಣ ಗೆಲುವು ಸಿಕ್ಕಲಿಲ್ಲ.ಈಗಿನ ಪರಿಸ್ಥಿತಿಯಲ್ಲಿ ಆತ ಗೆಲ್ಲುವ ಕುದುರೆಯಾಗಿ ನಿರ್ಮಾಪಕರಲ್ಲಿ ಭರವಸೆ ಹುಟ್ಟಿಸ್ತಾ ಇದ್ದಾನೆ.
ಇಷ ಡಿಯೋಲ್ :- ಒನ್ಸ್ ಅಪಾನ್ಎ ಟೈಮ್ ಪಡ್ಡೆ ಹೈಕಳ ಡ್ರೀಂ ಗರ್ಲ್ ಆಗಿದ್ದ ಹೇಮಮಾಲಿನಿ ಮಗಳು ಇಷ,ಅಮ್ಮ ತದ್ರೂಪು.ಆದರೆ ಹೇಮಳಂತೆ ಪ್ರತಿಭೆಯಿಂದ ಹೆಸರು ಮಾಡಲಿಲ್ಲ ,ತನ್ನ ಬಿಚ್ಚು ಸ್ವಭಾವದಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದಳು ಈ ಚಲುವೆ.
ರೈಮ ಸೇನ್ :- ಅಮ್ಮ ಮೂನ್ಮೂನ್ ಸೇನ್ ಅಮ್ಮೋ ಅನ್ನುವಷ್ಟು ಗ್ಲಾಮರಸ್,ಇನ್ನು ಆಕೆಯ ಮಗಳು ಪ್ರೇಕ್ಷಕರ ಕಥೆ ಬ್ಯಾ...ಡಾ.....!ಭಾರತೀಯ ಚಿತ್ರ ರಂಗದಲ್ಲಿರುವ ಅನೇಕ ವುಡ್ ಗಳ ವೀಕ್ಷಕರ ಗಮನ ಸೆಳೆದಿರುವ ರೈಮ ರೂಪದಲ್ಲಿ ಅಮ್ಮನ ಹೋಲಿಕೆ ಪಡೆದಿದ್ದಾಳೆ.
ಸೋಹ ಅಲಿಖಾನ್ :- ಪಟೌಡಿ ಖಾಂದಾನ್ ಕೂಸು.ಅಪ್ಪನ ಹಾಗೆ ಹುಟ್ಟಿಲ್ಲ,ಥೇಟ್ ಅಮ್ಮಿಜಾನ್ ಶರ್ಮಿಳಾ ಠಾಕೂರ್ ಥರ ಹುಟ್ಟಿರೋದು.ನಟನೆ ಸಹ ಓಕೆನೆ!.ಆದರೆ ಹೇಳಿಕೊಳ್ಳುವಂತಹ ಅಚಿವ್ ಮೆಂಟ್ ಆಗಿಲ್ಲ.
ಹೃತಿಕ್ ರೋಶನ್ :- ಗ್ರೀಕ್ ದೇವತೆಯ೦ತಹ ಮುಖ ಈತನ ವಿಶೇಷತೆ.ರೂಪ ನಟನೆ ಎರಡರಲ್ಲೂ ಸೈ! ಈತನಿಗೆ ಅಪ್ಪ ರಾಕೇಶ್ ರೋಶನ್ ಕಣ್ಣು ಬಳುವಳಿಯಾಗಿ ಬಂದಿದೆ .ಜೊತೆಗೆ ಪ್ರತಿಭೆಯನ್ನು ಅಪ್ಪನಿಂದ ಬಳುವಳಿಯಾಗಿ ಪಡೆದಿದ್ದಾನೆ.
ಅಭಿಷೇಕ್ ಬಚ್ಚನ್ :-ಭಾರತೀಯ ಚಿತ್ರ ರಂಗದ ಅದ್ವಿತೀಯ ಕಾಲಾವಿದರಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಾದುರಿ ಪ್ರೀತಿಯ ಮಗ ಅಭಿಷೇಕ್ ಪಕ್ಕ ಅಪ್ಪ ಅಮಿತಾಬ್ ಥರಾನೇ ಇರೋದು.ಅಪ್ಪ ಬಿಗ್ ಬಿ ಯ ರೀತಿ ಗೆಲ್ಲುವುದಕ್ಕೆ ಸಾಧ್ಯ ಆಗಿಲ್ಲ .ಆದರು ಬಾಲಿವುಡ್ ನಲ್ಲಿ ಈತ ಒಂದೊಳ್ಳೆಯ ಸ್ಥಾನ ಪಡದೆ ಪಡೀತಾನೆ ಅನ್ನುವ ಭರವಸೆ ಸಿನಿ ಪಂಡಿತರಿಗಿದೆ !
ಸನ್ನಿ ಡಿಯೋಲ್ :- ಹೋಲಿಕೆ ಅಂದ್ರೆ ಹೀಗಿರಬೇಕು.ಈ ರೀತಿಯ ರಿಸೆಂಬಲ್ ಯಾವ ಮಕ್ಕಳು ತಮ್ಮ ತಾಯ್ತಂದೆಗಳಿಂದ ಪಡೆದೇ ಇಲ್ಲ ಅಂತ ಹೇಳ ಬಹುದು.ರೂಪದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲೂ ಸಹ ಅಪ್ಪನಂತೆ !!
ಸಹಾಯ -ಒಳಿತು
1 -) ಸಿಯಾಟಿಲ್ ವಿಕಲಚೇತನರ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡೆಯಲ್ಲಿ ಒಂಬತ್ತು ಮಂದಿ ನಡುವೆ ಓಟದ ಸ್ಫರ್ಧೆ ನಡೀತಾ ಇತ್ತು.ಓಟದ ನಡುವೆ ಒಬ್ಬ ಸ್ಪರ್ಧಿ ಕೆಳಕ್ಕೆ ಬಿದ್ದೆ ಬಿಟ್ಟ.ಉಳಿದವರು ಓಡುವತ್ತ ತಮ್ಮ ಗಮನ ನೆಟ್ಟಿದ್ದರು ಒಬ್ಬನನ್ನು ಹೊರೆತುಪಡಿಸಿ.ಆತ ಬಿದ್ದವನ ಬಳಿ ಬಂದು ಎಲ್ಲಿ ನೋವಾಗ್ತಿದೆ ಪುಟ್ಟ ಅಂತ ಕೇಳಿದ ,ಆಗ ಆ ಹುಡುಗ ಅಳುತ್ತ ತೋರಿಸಿದ.ಆಗ ಆತ ನಿಧಾನವಾಗಿ ಅವನನ್ನು ಮೇಲೆತ್ತಿ ಕೈ ಹಿಡಿದು ನಡೆಸಿಕೊಂಡು ಬಂದ.ಇಡೀ ಸ್ಟೇಡಿಯಂ ನಲ್ಲಿದ್ದ ಅಷ್ಟೂ ಜನ ಎದ್ದು ನಿಂತು ಚಪ್ಪಾಳೆ ತಟ್ಟಿತು ಈ ದೃಶ್ಯ ಕಂಡು ! ಆನಂತರ ಕೆಲವರು ಆಟದಲ್ಲಿ ನೀನು ಮೊದಲಿದ್ದೆ ,ಅದ್ಯಾಕೆ ನೀನು ಗೆಲ್ಲುವುದು ಬಿಟ್ಟು ಅವನನ್ನು ರಕ್ಷಿಸಿದೆ ? ಎಂದು ಕೇಳಿದರು.ಆಗ ಆ ಸ್ಪರ್ಧಿ ಆತ ಏಳಲಾಗದೆ ಅಳುತ್ತ ಇದ್ದ.ಆಗ ನಂಗೆ ಈ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಒಳಿತು ಅಂತ ಅನ್ನಿಸಿತು,ಆದಕಾರಣ ಆರೀತಿ ಮಾಡಿದೆ ಅಂತ ಹೇಳಿದ.ಆಗ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಅತಿಥಿಯಾಗಿ ಬಂದಿದ್ದ ಆ ರಾಜ್ಯದ ಗವರ್ನರ್ 'ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದ ವ್ಯಕ್ತಿಗಿಂತ ನಿಜವಾಗಿಯು ಮಾನವತೆಯಿಂದ ಗೆದ್ದಿರುವ ವ್ಯಕ್ತಿತ್ವದ ಬಗ್ಗೆ ನನಗೆ ಹೆಚ್ಚು ಗೌರವ ಉಂಟಾಗಿದೆ 'ಎಂದು ಹೇಳಿದರಂತೆ.2 -) ಅಮೆರಿಕದ ಒಗ್ದೆನ್ ಹೈ ಸ್ಕೂಲ್ನ ಕೆಲವು ವಿದ್ಯಾರ್ಥಿಗಳು ಹೋಂ ಬೋಲ್ಟ್ ಶಾಲೆಯಲ್ಲಿ ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಬಂದಿದ್ದರು .ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಶಾಲೆಯಲ್ಲೂ ಈ ಸ್ಪರ್ಧೆ ಇದ್ದೆ ಇರುತ್ತಿತ್ತು.ಹೋಂ ಬೋಲ್ಟ್ ಸ್ಕೂಲ್ ಕೋಚ್ ಒಗ್ದೆನ್ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದ ಬಳಿಕ 'ನಮ್ಮಲ್ಲಿ ಈ ಏಳು ಕುಸ್ತಿಪಟುಗಳಲ್ಲಿ ಭಾಗವಹಿಸುವವರಲ್ಲಿ ಬ್ರೆಂಟ್ ಅನ್ನುವ ವಿದ್ಯಾರ್ಥಿ ಡೌನ್ ಸಿಂಡ್ರೋಮ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾನೆ .ಆತನಿಗೆ ಕುಸ್ತಿಯಲ್ಲಿ ನೈಪುಣ್ಯತೆ ಇಲ್ಲ,ಆದರೆ ಭಾಗವಹಿಸಬೇಕೆನ್ನುವ ಉತ್ಸಾಹಕ್ಕೆ ಕೊರತೆಯಿಲ್ಲ.ನಿಮ್ಮಲ್ಲಿ ಯಾರು ಬೇಕಾದರೂ ಅವನನ್ನು ಕ್ಷಣದಲ್ಲಿ ಸೋಲಿಸ ಬಲ್ಲಿರಿ .ತಾನು ಸೋಲ್ ತೀನಿ ಅಂತ ತಿಳಿದಿದ್ದರೂ ಆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ನಿಮ್ಮಲ್ಲಿ ಯಾರು ಮೊದಲು ಕಣಕ್ಕೆ ಇಳೀತಿರಿ ?' ಎಂದು ಕೇಳಿದ.ಕೆಲಕ್ಷಣ ನಿಶಬ್ಧ.ಬಳಿಕ ಒಗ್ದೆನ್ ಟೀಂ ನಿಂದ ಒಂದು ಧ್ವನಿ ಕೇಳಿ ಬಂತು ' ನಾನು ಸಿದ್ಧ'ಆ ಟೀಂ ಕೆನ್ ಬ್ರುಲೆಂಡ್ ನಗುತ್ತ ಮುಂದೆ ಬಂದ.ಬ್ರೆಂಟ್ ಜೊತೆ ಆತ ಕುಸ್ತಿ ಆರಂಭ ಮಾಡಿದ.ಕ್ಷಣದಲ್ಲಿ ಈ ಕಾಳಗ ಮುಗಿದು ಹೋಗ್ತಾ ಇತ್ತು,ಆದರೆ ಹಾಗಾಗಲಿಲ್ಲ.ಆರು ನಿಮಿಷಗಳ ಕಾಲ ಈ ಸ್ಪರ್ಧೆ ನಡೆಯಿತು.ಅಷ್ಟೇ ಅಲ್ಲದೆ ಬ್ರೆಂಟ್ ಗೆಲ್ಲುವಷ್ಟು ಪಾಯಿಂಟ್ಗಳು ಬರುವಂತೆ ಮಾಡಿ ಕೆನ್ ಸೋತು ಹೋದ.ನಂತರ ಕೆನ್ಗೆ ನಿಯಮದ ಅನ್ವಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಯ್ತು.' ಗೆಲುವು ನನ್ನದಾಯ್ತ?' ಆಶ್ಚರ್ಯ ತಡಿಯಲಾಗದೆ ಕೇಳಿದ ಬ್ರೆಂಟ್.ಹೌದು ಅಂತ ಹೇಳಿದ ಕೆನ್ ನಗುತ್ತ.ಜೊತೆಗೆ ಆತ ಗೆದ್ದ ಸೂಚಕವಾಗಿ ಬ್ರೆಂಟ್ ಬಲಗೈ ಮೇಲೆತ್ತಿದ.ಆ ಸ್ಪರ್ಧೆ ವೀಕ್ಷಣೆಗೆ ಬಂದಿದ್ದದ ಆರುಸಾವಿರ ಮಂದಿ ಎದ್ದು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
3 -) ಹಾರ್ಬರ್ಟ್ ಹೂಪರ್ ಸುಮಾರು ನಲವತ್ತೇಳು ವರ್ಷಗಳ ಕಾಲ ಅಮೆರಿಕದಲ್ಲಿ ಅಧ್ಯಕ್ಷರಾಗಿ-ವಿವಿಧ ಪದವಿಗಳಲ್ಲಿ ಕೆಲಸ ಮಾಡ ಬೇಕಾಗಿ ಬಂದರೂ ಆಡಳಿತ ನಡೆಸಿದರು.ಆದರೆ ಸರ್ಕಾರ ನೀಡಿದ ಸಂಬಳವನ್ನು ಆತ ತನಗಾಗಿ ಬಳಸದೆ ಬಡವರು,ನಿರ್ಗತಿಕರ ಸೇವೆಗಾಗಿ ಮುಡಿಪಾಗಿಟ್ಟ ಸಂಸ್ಥೆಗಳಿಗೆ ನೀಡಿದರು.ಮುಖ್ಯವಾಗಿ ರಾಜಕೀಯಕ್ಕೆ ಬರುವ ಮುಂಚಿನಿದಲು ಆತ ಶ್ರಿಮಂತನಾಗಿದ್ದ.
4 -) ಕೃತಜ್ಞತೆ ಕೇವಲ ಭಾವನೆ ಮಾತ್ರವಲ್ಲ ಅದೊಂದು ಕೃತಿ ಅಂತ ಹೇಳ್ತಾರೆ ತಿಳಿದೋರು.ಹಾಲಿವುಡ್ ಹೀರೋ ರಾಯ್ ರೋಗರ್ಸ್ ಇದನ್ನು ಸೂಕ್ತ ಪಾಲಿಸಿದ್ದಾರೆ .ಆತ ಹೀರೋ ಆಗಿ ನಟಿಸಿದ ಮೊದಲ ಚಿತ್ರ ' ಡಿ ವರ್ಲ್ಡ್ ಹೋಂ ಸೈಡ್'(1935), ಮತ್ತೊ ಮೂರು ಚಿತ್ರಗಳು ಬಿಡುಗಡೆಯಾದ ಬಳಿಕ ಆತನ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳಾದ ಅನೇಕರು ರಾಯ್ ಗೆ ಪತ್ರಗಳನ್ನು ಬರೆಯುತ್ತಿದ್ದರು.ಆದರೆ ರಾಯ್ಸ್ಗೆ ದೊರೆಯುತ್ತಿದ್ದ ಹಣ ಅಷ್ಟು ಅಭಿಮಾನಿಗಳಿಗೆ ಉತ್ತರಿಸಲು ಬೇಕಾದ ಅಂಚೆ ವೆಚ್ಚಭರಿಸಲು ಅಸಮರ್ಥವಾಗಿತ್ತು.ಆಸಂದರ್ಭದಲ್ಲಿ ಆತನಿಗೆ ನಟನೆ ಮಾಡಲು ಅವಕಾಶ ಕೊಟ್ಟ ರಿಪಬ್ಲಿಕ್ ಪಿಕ್ಚರ್ಸ್ ಮುಖ್ಯಸ್ಥರನ್ನು ರಾಯ್ ಭೇಟಿ ಮಾಡಿ ಅಭಿಮಾನಿಗಳಿಗೆ ಪತ್ರಿಸಲು ತನಗೆ ಸ್ವಲ್ಪ ಧನಸಹಾಯ ಮಾಡ ಬೇಕೆಂದು ಕೇಳಿದಋ ,ಆದರೆ ಸಂಸ್ಥೆ ಇದಕ್ಕೆ ಸಮ್ಮತಿಸಲಿಲ್ಲ.ಜೊತೆ ಇಂತಹ ವಿಷಯಗಳನ್ನು ಗಂಭಿರವಾಗಿ ಪರಿಗಣಿಸ ಬೇಕಿಲ್ಲ ಎಂದು ಬಿಟ್ಟಿ ಸಲಹೆ ನೀಡಿತು.ಆದರೆ ರಾಯ್ ಸುಮ್ಮನಾಗದೆ ,ತನ್ನ ಸ್ವಲ್ಪ ಕಾಲವನ್ನು ವಯುಕ್ತಿಕ ಪ್ರದರ್ಶನ ನೀಡಲು ಮೀಸಲಾಗಿಟ್ಟು ಅದರಿಂದ ಬಂದ ಹಣವನ್ನು ಅಭಿಮಾನಿಗಳಿಗೆ ಪತ್ರಿಸಲೆಂದು ಮುಡಿಪಾಗಿಟ್ಟರು..ಆ ಕೆಲಸ ಮಾಡಲು ಮೂರೂ ಜನರಿಗೆ ಉದ್ಯೋಗನೀಡಿದರಂತೆ.
Saturday, 17 October 2009
ದೀಪಗಳ ಹಬ್ಬ

ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಹಬ್ಬ ದೀಪಾವಳಿ.ಇದರ ಬಗ್ಗೆ ಹೇಳಿದಷ್ಟು ಮುಗಿಯದು ಅಂದು ವಿಷ್ಣು ಮಹಾಲಕ್ಷ್ಮಿಯನ್ನು ಮದುವೆಯಾದ ದಿನವೆಂದು ಪುರಾಣಗಳಲ್ಲಿ ತಿಳಿಸಿದೆ.ದೀಪಾವಳಿಯ ಬಗ್ಗೆ ಇರುವ ಅನೇಕ ವಿಶೇಷತೆಗಳುಹೀಗಿವೆ.
ಮಹಾ ಲಕ್ಷ್ಮಿಯ ಜನ್ಮದಿನ:- ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಕಾರ್ತಿಕ ಮಾಸದ ಆರಂಭದಲ್ಲಿ ಬರುವ ಅಮಾವಾಸ್ಯೆಯ ದಿನ ಜನ್ಮಿಸಿದಲೆಂದು ಪುರಾಣಗಳಲ್ಲಿ ಉಲ್ಲೇಖವಿದೆ.ಈ ಕಾರಣದಿಂದ ಭಕ್ತರು ತಾಯಿಯ ಜನ್ಮ ದಿನ ಆಚರಿಸುತ್ತಾರೆ.
ವಿಷ್ಣು ಬಿಡುಗಡೆ ಮಾಡಿದ್ದು:- ಬಲಿ ಚಕ್ರವರ್ತಿಯ ಸೆರೆಯಲ್ಲಿದ್ದ ಲಕ್ಷ್ಮಿಯನ್ನು ಮಹಾ ವಿಷ್ಣು ವಾಮನ ಅವತಾರ ತಾಳಿ ಬಿಡುಗಡೆ ಮಾಡಿದ ಎಂದು ಪುರಾಣಗಳಲ್ಲಿ ತಿಳಿಸಿದೆ.ಈ ಕಾರಣದಿಂದಲೂ ಹಬ್ಬ ತುಂಬಾ ವಿಶೇಷತೆ ಪಡೆದು ಕೊಂಡಿದೆ.( ಐದನೆಯ ಅವತಾರ).
ರಾಮಾಯಣದಲ್ಲಿ:- ರಾವಣಸುರನನ್ನು ವಧಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಜನರು ಸಂಭ್ರಮದ ದೀಪಾವಳಿಯನ್ನು ಆಚರಿಸಿದರಂತೆ.
ನರಕಾಸುರ ವಧೆ :-ಪ್ರಗ್ಜೋತೀ ಪುರವನ್ನು ಆಳುತ್ತಿದ್ದ ನರಕಾಸುರ ಹದಿನಾರು ಸಾವಿರ ಹೆಣ್ಣು ಮಕ್ಕಳನ್ನು ಸೇರೆಯಲ್ಲಿತೂ ಕೊಂಡಿದ್ದ.ಭೂಮಿಯ ಮಗನಾದ ಈತನ ಉಪಟಳ ಕಡಿಮೆ ಮಾಡಲು ಶ್ರೀ ಕೃಷ್ಣ ತನ್ನ ಮೆಚ್ಚಿನ ಮಡದಿ ಸತ್ಯಭಾಮಳೊಂದಿಗೆ ಯುದ್ಧಕ್ಕೆ ಹೊರಟ.(ಈ ಯುದ್ಧ ದಲ್ಲಿ ಸತ್ಯಭಾಮ ನರಕಾಸುರನ ವಧೆ ಮಾಡಿದಳೆಂದು ಕೆಲವು ಪುರಾಣಗಳು ಹೇಳುತ್ತವೆ.ಅಂದ್ರೆ ಈಕೆ ಭೂಮಿತಾಯಿಯ ಅವತಾರವಾಗಿದ್ದು ತನ್ನ ದುಷ್ಟ ಮಗನನ್ನು ಸಾಯಿಸಿ ಭೂಮಿಯನ್ನು ರಕ್ಷಿಸಿದಳಂತೆ)
ಪಾಂಡವರ ಶುಭದಿನ:- ಹನ್ನೆರಡು ವರ್ಷಗಳಕಾಲ ವನವಾಸ ಹಾಗೂ ಅಜ್ಞಾತವಾಸ ಮಾಡಿಮುಗಿಸಿದ ನಂತರ ವಿಜಯದ ಸಂತೋಷವನ್ನು ದೀಪಗಳನ್ನು ಹಚ್ಚಿ ಅನುಭವಿಸಿದರಂತೆ.ಅಂದು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನವಾಗಿತ್ತಂತೆ!
ಇತಿಹಾಸ :-ಇತಿಹಾಸದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದೊರೆ ವಿಕ್ರಮಾದಿತ್ಯ.ಆತ ನಿರ್ವಾಣ ಹೊಂದಿದ ದಿನ ದೀಪಾವಳಿ.ಈ ಮೂಲಕ ದೀಪಾವಳಿ ಇತಿಹಾಸ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ.
ಆರ್ಯ ಸಮಾಜ :- ಮಹರ್ಷಿ ದಯಾನಂದ ನಿರ್ವಾಣ ಪಡೆದ ದಿನ
ಜೈನರಿಗೂ ವಿಶೇಷ ದಿನ :-ಜೈನಧರ್ಮ ಸ್ಥಾಪಕ ಮಹಾವೀರ ತೀರ್ಥಂಕರ ನಿರ್ವಾಣ ಹೊಂದಿದ ದಿನ ದೀಪಾವಳಿ.ದೀಪಾವಳಿ ಸಿಖ್ಖರ ವಿಶೇಷ ದಿನ :- ಸಿಖ್ಖರ ಮೂರನೆಯ ಗುರು ಆದ ಗುರು ಅಮರ್ ದಾಸ್ ದೀಪಾವಳಿಯನ್ನು ಕೆಂಪು ಪತ್ರದ ದಿನ ಎಂದು ಕರೆದರು..1577 ರಂದು ಅಮೃತಸರದಲ್ಲಿರುವ ಗೋಲ್ಡನ್ ಗೆ ಟೆಂಪಲ್ ಅಡಿ ಪಾಯ ಹಾಕಿದ ದಿನ.
Subscribe to:
Posts (Atom)