Tuesday, 20 April 2010

ಶೋಷಣೆ


ಬೇಸಿಗೆಯ ಪ್ರಭಾವ ನಮ್ಮ ಮೇಲೆ ಮಾತ್ರವಲ್ಲ ಎಲ್ಲಾ ಕಡೆಯೂ ತನ್ನ ಪ್ರಭಾವ ತೋರುತ್ತಿದೆ.  ನಾವು ಮನುಷ್ಯರು ಬಾಯ್ಬಿಟ್ಟು ಕೇಳಿ ನಮ್ಮ ಬಾಯಾರಿಕೆ ಹಸಿವೆಯನ್ನು ತಣಿಸಿ ಕೊಳ್ಳುತ್ತೇವೆ .ಆದರೆ ಮೂಕ   ಪ್ರಾಣಿ -ಪಕ್ಷಿಗಳು? ಅವುಗಳ ಬಗ್ಗೆ ಬುದ್ಧಿವಂತ ಪ್ರಾಣಿ ಅನ್ನಿಸಿಕೊಂಡ ನಾವೆ ಅವುಗಳ ಬಗ್ಗೆ ಕಾಳಜಿ ವಹಿಸ ಬೇಕು.ಇತ್ತೀಚೆಗಂತೂ ಬಿಸಿಲ ಝಳದ ಪ್ರಭಾವದಿಂದ ಅನೇಕ ಪಕ್ಷಿಗಳು ಸಾಯುತ್ತಿದೆ. ಟೆರೆಸ್ ಮೇಲೆ ,ಮರದ ಬುದಗಳಲ್ಲಿ ಬಾಯಾರಿಕೆ ತಡಿಯಲಾಗದೆ ಮರಣಕ್ಕೆ ಮೊರೆಹೊಗುತ್ತಿದೆ. ಇಂತಹ ಪರಿಸ್ಥಿತಿ ತಡೆಗಟ್ಟಲು ನಾವು ಮಾಡ ಬೇಕಾದುದು ಇಷ್ಟೆ. ಕಿಟಕಿ,ಟೆರ್ರೆಸ್ ಒಟ್ಟಿನಲ್ಲಿ ಹಕ್ಕಿಗಳು ನಿರಮ್ಮಳವಾಗಿ ಬರುವ ಸ್ಥಳಗಳಲ್ಲಿ ಪುಟ್ಟ ಪಾತ್ರೆಯಲ್ಲಿ ನೀರನ್ನು ಇಡ ಬೇಕು..ಹಾಗೆ ಮಾಡುವುದರಿಂದ ಮುಗ್ಧ ಪ್ರಾಣಿ- ಪಕ್ಷಿಗಳಿಗೆ ಜೀವದಾನ ಮಾಡಿದಂತೆ ಆಗುತ್ತದೆ..
@@ ಆಸ್ಟ್ರೇಲಿಯ ದೇಶದಲ್ಲಿ ಕೋಲಾ ಅನ್ನುವ ಪ್ರಾಣಿ ಹೆಚ್ಚು ಪ್ರಸಿದ್ಧಿ. ಅದು ತನ್ನಷ್ಟಕ್ಕೆ ತಾನು ಬದುಕುವ ಸಂಕೋಚ ಪ್ರಾಣಿ.ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮಖೇಡಿ ಪ್ರಾಣಿ. ಇತ್ತೀಚೆಗೆ ಆಸ್ಟ್ರೇಲಿಯ ದಲ್ಲಿ  ಅತಿ ಹೆಚ್ಚು  ಬಿಸಿ ಏರಿತು.ಆಗ ಈ ಸಂಕೋಚದ ಪ್ರಾಣಿ ರಸ್ತೆಗೆ ಬಂದು ನೀರನ್ನು ಬೇಡಿ ಬದುಕಿತು.ಇಂತಹ ಘಟನೆಯನ್ನು ನಾವು   ಕಂಡೆ ಇಲ್ಲ ಅಂತಾರೆ ಸ್ಥಳೀಯರು  ..! ನಮ್ಮ ಹುಂಬತನದಿಂದ ಆಗಿರುವ ಗ್ರೀನ್ ಹೌಸ್ ಎಫೆಕ್ಟ್ ಗೇ ಉಳಿದ ಮುಗ್ಧಪ್ರಾಣಿಗಳು ಬಲಿಯಾಗುತ್ತಿವೆಯಲ್ಲ ಅದೇ ನೋವಿನ ಸಂಗತಿ. ಭೂಮ್ತಾಯಿ ಮೇಲೆ ಇಂತಹ ಶೋಷಣೆ  ನಿಲ್ಲುವುದು ಯಾವಾಗ? ಪ್ರಾಣಿ- ಪಕ್ಷಿ-ಸಸ್ಯಗಳ  ಬದುಕು ನಿರಾಳವಾಗುವುದು ಯಾವಾಗ? ನಾವೆ ಯೋಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯ ಬೇಕು...! 

Saturday, 9 January 2010

ಬದುಕುವುದನ್ನು ಕಲಿಯಬೇಕು

  • ಪೆಂಗ್ ಶುಇಲಿನ್  ಅರ್ಧ ದೇಹವನ್ನು ಪಡೆದಿರುವ ವ್ಯಕ್ತಿ.
  • ಪ್ರಕೃತಿಯ ವಿಚಿತ್ರಗಳಲ್ಲಿ  ಈತನ ದೇಹವು ಒಂದು ಅಂತ ನಾವು ಹೆಮ್ಮೆಯಿಂದ  ಹೇಳಬಹುದು.
  • ,ಆದರೆ ಅವ್ಯಾವುದು ಆತನಿಗೆ ಬೇಕಾಗಿಲ್ಲ ,
  • ಈ ಮುವ್ವತ್ತೇಳರ ಹರೆಯದ ಪೆಂಗ್ ತನ್ನ ಈ ಅರ್ಧ ದೇಹದ ಬಗ್ಗೆ ಎಂದಿಗೂ ಬೇಸರ ಇಲ್ಲ
  • .ಬದುಕನ್ನು ಗಾಢವಾಗಿ ಪ್ರೀತಿಸುವ ಪೆಂಗ್ ಜೀವನ್ಮುಖತೆಗೊಂದು ಉದಾಹರಣೆ.
  • ಇತ್ತೀಚೆಗೆ ನನಗೆ ಬಂದ ಮೇಲ್ ನಲ್ಲಿ  ಈ ಮಾಹಿತಿಯಿತ್ತು .
  • ಈತನ ಬಗ್ಗೆ ತಜ್ಞರು ಇಡೀ ಪ್ರಪಂಚದಲ್ಲಿ ಈ ರೀತಿಯ ದೇಹ ಸಿರಿಯನ್ನು ಹೊಂದಿರುವ  ಏಕೈಕ  ವ್ಯಕ್ತಿ ಪೆಂಗ್.
    ದೇಹ ಹೀಗೆ ಇದ್ದರು ಆತ ನಿಸ್ಸಹಾಯಕತೆಯಿಂದ ಸುಮ್ಮನೆ ಕುಳಿತಿಲ್ಲ,
  • ಈತನದೊಂದು ಸೂಪರ್ ಮಾರ್ಕೆಟ್ ಇದೆ.
  • ಅದನ್ನು ಅರ್ಧ ಮನುಷ್ಯನ ಅರೆ ಬೆಲೆ ಅಂಗಡಿ(Half Man-Half Price) ...
  • . ಬದುಕನ್ನು ಪ್ರಿತಿಸಿದರೆ  ಎಲ್ಲ ರೀತಿಯಲ್ಲೂ  ಸಂಪೂರ್ಣತೆಯನ್ನು ಕಾಣಬಹುದು .






Wednesday, 9 December 2009

ಸಮಸ್ಯೆ -ಸಮಸ್ಯೆ-ಪರಿಹಾರ!

ಇಬ್ಬರು ಗೆಳೆಯರು ಬಾರ್ ಒಂದರಲ್ಲಿ ಕುಳಿತಿದ್ದರು.ಒಬ್ಬ ಅಮೆರಿಕನ್ ,ಮತ್ತೊಬ್ಬ ಭಾರತೀಯ.ಒಂದರ ಹಿಂದೆ ಒಂದು ಗ್ಲಾಸ್ಗಳನ್ನು ಪೂರ್ತಿ ಮಾಡುತ್ತಾ ಕುಳಿತಿದ್ದರು.ಇದ್ದಕ್ಕಿದ್ದ ಹಾಗೆ  ಭಾರತೀಯನಿಗೆ  ಮಾತನಾಡುವ ಉಮೇದು ಬಂತು...ಬಿಕ್ಕಳಿಸಿದ..! ಅವನ ದುಃಖ ಕಂಡ ಗೆಳೆಯನಿಗೂ ದುಃಖ ಶುರು  ಆಯ್ತು,ಆದರು ಸಾವರಿಸಿ ಕೊಂಡು ಯಾಕೋ ಅಣ್ಣ ಅಳ್ತಾ ಇದ್ದೀಯ ಅಂತ ಕೇಳಿದ! ಅವನು ' ನಿನಗೆ ಗೊತ್ತಿಲ್ಲದೇ ಇರುವ ವಿಷಯವೊಂದು ಹೇಳಬೇಕಾಗಿದೆ,ನಮ್ಮ ತಾಯಿ ತಂದೆ ಹಳ್ಳಿಯ ಹುಡುಗಿಯೊಬ್ಬಳನ್ನು ಸೊಸೆಯಾಗಿ ತರಲು ನಿಶ್ಚಯ ಮಾಡಿದ್ದಾರೆ.ಅಂತಹ ಹೆಣ್ಣುಮಕ್ಕಳು ಚೆನ್ನಾಗಿ ಹೊಂದಿಕೊಂಡು ಸಂಸಾರ ನಡೆಸುತ್ತಾರೆ ಅನ್ನುವ ಭಾವನೆ ಅವರದು.ಯಾವಳೋ ಅವಳು,ನನಗೆ ಗೊತ್ತೇ ಇಲ್ಲ,ಸ್ವಲ್ಪ ದಿನ ಪ್ರೀತಿ ಸಹ ಮಾಡಲಿಲ್ಲ ಅಂತಹವಳನ್ನು ನಾನು ಮದುವೆ ಆಗೋದ? ಛೇ ನನಗೆ ಈ ಕುಟುಂಬದ ಸಮಸ್ಯೆಗಳಿಂದ ಸಾಕಾಗಿದೆ'ಎಂದು ಜೋರಾಗಿ ಅತ್ತ...!
'ನೀನು  ಲವ್ ಮ್ಯಾರೇಜ್ ಬಗ್ಗೆ ಹೇಳ್ತಾ ಇದ್ದೀಯ ? ಹಾಗಾದರೆ ನನ್ನ ಕಥೆ ಕೇಳು! '
ನಾನು ಒಬ್ಬ ವಿಧವೆಯನ್ನು  ಗಾಢವಾಗಿ ಪ್ರೀತಿಸಿದೆ,ಎರಡು ವರ್ಷಗಳ ಕಾಲ ಅವಳ ಜೊತೆ ಡೆಟ್ ಮಾಡಿದೆ,ಆಮೇಲೆ ಮದುವೆ ಆದೆ,ಅದಾದ ಮಾರನೆಯ ವರ್ಷ ನನ್ನನ್ನು ಹೆತ್ತ ಅಪ್ಪನಿಗೆ  ನನ್ನ ಮಲಮಗಳ  ಜೊತೆ ಲವ್ ಶುರು ಆಯಿತು! ಪ್ರೀತಿ ಆದ್ರೆ ಸುಮ್ಮನೆ ಇರೋಕೆ ಆಗಲ್ವಲ್ಲ, ಇಬ್ಬರು ಮದುವೆಯಾದರು.ಆಗ ನನ್ನ  ಅಪ್ಪ ನನಗೆ ಅಳಿಯನಾದ,ನಾನು ಈ ರೀತಿ ನಮ್ಮ ಅಪ್ಪನಿಗೆ ಹೆಣ್ಣು ಕೊಟ್ಟ  ಮಾವನಾದೆ!
ಕಾನೂನು ಪ್ರಕಾರ ನನ್ನ ಮಗಳು ನನ್ನ ತಾಯಿ ಮತ್ತು ನನ್ನ ಹೆಂಡತಿ ನನಗೆ ಅಜ್ಜಿ .ಇನ್ನು  ಹೆಚ್ಚಿನ ಸಮಸ್ಯೆ ಯಾವಾಗ ಉಂಟಾಯಿತು ಗೊತ್ತ? ನನಗೆ ಮಗು ಹುಟ್ಟಿದಾಗ! ನನ್ನ ಮಗ ನನ್ನ ತಂದೆಯ ಸಹೋದರ! ಮತ್ತು ಆತ ನನ್ನ ಚಿಕ್ಕಪ್ಪ!
ಆದರೆ  ಮತ್ತಷ್ಟು  ಕೆಟ್ಟ ಪರಿಸ್ಥಿತಿ  ಉಂಟಾಗಿದ್ದು ನನ್ನ ಅಪ್ಪನಿಗೆ ಮಗು ಹುಟ್ಟಿತಲ್ಲ ಆಗ!  ಈಗ ನಮ್ಮ ಮನೆಯ ಸಂಬಂಧಗಳತ್ತ ಗಮನ ಹರಿಸಿದರೆ ನನ್ನ ತಂದೆಯ ಮಗ ನನ್ನ ತಮ್ಮ ಹಾಗೂ ನನ್ನ ಮೊಮ್ಮಗ! ಅಂದ್ರೆ ನಾನು ಅಜ್ಜ ಹಾಗೂ ಮೊಮ್ಮಗ ! ಎರಡು ಪಾತ್ರಗಳ ಒಡೆಯ...! ಹೇಳು ಗೆಳೆಯ  ಕೌಟುಂಬಿಕ ಸಮಸ್ಯೆ ನಿಜವಾಗಿಯೂ ನಿನಗೆ ಇದೆಯಾ ???????? ಎಂದು ಮತ್ತೊಂದು ಪೆಗ್ ಕುಡಿದು ನಕ್ಕ !

Saturday, 5 December 2009

ಪದೇಪದೆ ನೆನಪಾದೆ!

ನಂಗೊತ್ತು ,
ಒಂದು ಹಿಡಿಯಷ್ಟು  ದಿನಗಳು ಬಾಕಿ ಇವೆ... ಅದು ಪೂರೈಸಿದರೆ ನಾವು ಹೃದಯ ಕಿತ್ತು ಬೇರೆಯಾದ ಆ ದಿನಕ್ಕೆ  ಅಮೋಘವಾಗಿ ಒಂದು ವರ್ಷದ ಸಂಭ್ರಮ !
ನಂಗೊತ್ತು,ನೀನಿನ್ನು ನನ್ನ ಮರೆತಿಲ್ಲಾಂತ ! ನಿನ್ನ ಹೃದಯ ಏನೂ ಅಂತ ನಿನಗಿಂತ ನನಗೆ ಚನ್ನಾಗಿ ಗೊತ್ತು , ಅದು ನಿನಗೂ ಗೊತ್ತು! ನಾನು ಪ್ರಾಕ್ಟಿಕಲ್...ನೀನು ಎಮೋಷನಲ್ ! ಸ್ನೇಹಕ್ಕೆ -ಪ್ರೀತಿಗೆ ಇದ್ಯಾವುದು ಬೇಕಾಗಿರಲಿಲ್ಲ! ಹೃದಯ ಏನು ಬೇಡುತ್ತಿದೆ ಎಂದು ತಿಳಿಯುವಷ್ಟರಲ್ಲಿ ನಾವಿಬ್ಬರು  ಇಷ್ಟ ಪಟ್ಟಿದ್ದೆವು. ಪೌರ್ಣಿಮೆಯ ಬೆಳದಿಂಗಳೇ ಎಂದು ಕನವರಿಸಿದೆ,ನನ್ನ ಜಾಜಿ ಮಲ್ಲಿಗೆ  ಎಂದು  ಹೊಗಳಿದೆ,ನಮ್ಮ ಪ್ರೀತಿಗೆ ಅಂತಹ ಯಾವ ಅಲಂಕಾರಗಳು ಬೇಕಿರಲಿಲ್ಲ ಅಲ್ವ! ನನ್ನನ್ನು ಒಂದು ಕ್ಷಣವೂ  ಪ್ರೀತಿಸದೆ ಬಿಡಲಿಲ್ಲ,ಪದಗಳಿಗೆ ಅಕ್ಷರವಾದೆ,ನೋಟಕ್ಕೆ ಶಕ್ತಿಯಾದೆ! ಆದರೆ ನೀನು ನನ್ನನ್ನು ಅಷ್ಟೆ ನೋಯಿಸಿದೆ!  ಪ್ರೀತಿಯ ಜೊತೆಗೆ  ನೋವನ್ನು ಮೊಗೆ ಮೊಗೆದು ಕೊಟ್ಟೆ! ಇದಕ್ಕೆ ಉತ್ತರ ?  ಐ ಡೋಂಟ್ ನೋ ವೈ !
ಆ ನೋವು ನೀನ್ಯಾಕೆ ನೀಡಿದೆ  ಅಂತ ನನಗಿಂತ ನೀನು ಬಲ್ಲೆ....ಇಲ್ಲ ಹಾಗಂತ ನಾನು ಹೇಳಲಾರೆ !ನಾನು ನಿನ್ನ ಮರೆತಿದ್ದೀನಿ ಅನ್ನುವ ಭಾವ ನಿನ್ನದು,ನಂಗೊತ್ತು ! ಆದರೆ ನಿನ್ನ ಈ ಭಾವವನ್ನು ಸ್ವೀಕರಿಸುತ್ತಿಲ್ಲ ನಿನ್ನ ಹೃದಯದ ಮೂಲೆಯ ಒಂದು ಭಾಗ! ಹೌದಲ್ವ?! ನಿಜ ತಾನೆ?!
ಹೇಗೆ ಮರೆಯಲಿ ನಿನ್ನನ್ನು ನಾನು? ಮರೆತರೆ ನಾನು ಕಟ್ಟಿದ ರಾಶಿ ಕನಸುಗಳು, ನಿನ್ನ ನೆನಪಿನಲ್ಲಿ ಕಳೆದ ಪ್ರತಿ ಕ್ಷಣವೂ ಸುಳ್ಳಾಗುತ್ತದೆ!  ಪ್ರತಿದಿನ ನಿನಗಾಗಿ ಮೀಸಲಿಟ್ಟ ಆ ಗಳಿಗೆಯಲ್ಲಿ ನನ್ನ ಕೈ  ಮೊಬೈಲ್ ಎತ್ತಿಕೊಳ್ಳುತ್ತದೆ !ಹೆಬ್ಬೆರಳಿಗೆ  ಸಂಭ್ರಮ,ನಿನ್ನ ನಂಬರ್ ಚಕಚಕ! ಉಹುಂ! ಆದರು ನಿನಗೆ ಫೋನ್ ಮಾಡಲಾಗದ ಸ್ಥಿತಿ,ಇದು  ಅಹಂಕಾರ,ದುರಭಿಮಾನ,ದುರಳತನ ಯಾವುದು ಅಲ್ಲ,ಇದು ನನ್ನ ಬದುಕಿನ ನಿಸ್ಸಹಾಯಕತೆ! ನಿನ್ನಲ್ಲಿ ಕೆಳುವುದಿಷ್ಟೇ  ನಿನಗೆ ಎಂದಾದರು ನನ್ನ ನೆನಪಾದರೆ ಯಾಕೆ ಹೀಗಾಯಿತು ಎಂದು ಯೋಚಿಸು....ಸಾಧ್ಯವಾದರೆ!
ದಿನಗಳು  ಕರಗಿಹೋಯ್ತು ಅನ್ನುವ ದುಃಖ ನಿನಗೂ-ಜೊತೆಗೆ ನನಗು ಸಹ! ಇಬ್ಬರಿಗೂ ಗೊತ್ತು ಒಬ್ಬರನ್ನೊಬ್ಬರು ಮಿಸ್ ಮಾಡ್ತಾ ಇದ್ದೀವಿ ಅಂತ! ಆದರು ಇಬ್ಬರು ಅದ್ಯಾವುದೋ ಅರಿಯದ ಧೂರ್ತ ಮೌನದ ಕೋಟೆಯೊಳಗೆ  ಬಂಧಿಗಳು!
ಇಂದ್ಯಾಕೋ ಪದೇಪದೆ ನಿನ್ನ ನೆನಪು ಕಾಡುತ್ತಿದೆ ನನಗೆ,ನಿನಗೆ  ನನ್ನ ನೆನಪು ಉಳಿದಿದೆಯೇ ?! ಇದರ ಉತ್ತರ ನನಗೆ ಗೊತ್ತಿಲ್ಲ...ನಿನಗೆ ????
ನಾನು 

Thursday, 26 November 2009

ತ್ಯಾಗ ಬಲಿದಾನದ ಸಂಕೇತ


ಹಬ್ಬ ವಿಶ್ವದ ಪ್ರತಿಯೊಬ್ಬರಲ್ಲೂ ಸಂತೋಷ ಸಂಭ್ರಮ ತಂದು ಕೊಡುವ ಆಚರಣೆ.ಸಾಕಷ್ಟು ಸರ್ತಿ ನಮಗೆ ಹಬ್ಬದ ಬಗ್ಗೆ ವಾಖ್ಯಾನಿಸುವಾಗ ಸಣ್ಣ ಗೊಂದಲ ಉಂಟಾಗುತ್ತದೆ,ಯಾವ ರೀತಿ ವಿವರಿಸ ಬೇಕು ಎಂದು ಅರಿಯದ ಮನಸ್ತತ್ವ ಉಂಟಾಗುತ್ತದೆ.ಆದರೆ ನಮ್ಮಂತಹ ಪಾಮರರು ಹೆಚ್ಚಿನ ಪ್ರಮಾಣದಲ್ಲಿ ಈ ವಿಶ್ವದಲ್ಲಿ ಇರೋದು,ಅವರು ತಿಳಿದಿರೋದು ಹಬ್ಬ ಅಂದ್ರೆ ದೇವ್ರು,ಖುಷಿ,ಬಣ್ಣ ಬಣ್ಣ ,ಉತ್ಸಾಹ ಹಾಗೂ ಉಲ್ಲಾಸ ! ಪ್ರಪಂಚದ ಎಲ್ಲ ಧರ್ಮದ ಜನರಲ್ಲೂ ಈ ಅಂಶ ಇದ್ದೆ ಇದೆ.ಕಾರಣ ಅವರು ಮಾನವರು...ನೂರಕ್ಕೆ ನೂರರಷ್ಟು ಸಾಮಾನ್ಯರು...!
*  ಬಲಿದಾನದ ಹಬ್ಬ ಬಕ್ರೀದ್ ! ಮಹದೀಯರ ಅನೇಕ ವಿಶೇಷ ಹಬ್ಬಗಳಲ್ಲಿ ಇದು ಒಂದು.ಮುಸ್ಲೀಮರ ಇದು ಪಂಚಾಂಗದ ಅನ್ವಯ ಇದು ಹನ್ನೆರಡನೆಯ ತಿಂಗಳಲ್ಲಿ ಅಂದರೆ ಜಿಲ್ಹಾಜ್ ಮಾಸದ ಹತ್ತನೆಯ ದಿನ ಬರುತ್ತದೆ. 'ಈದುಲ್ ಅಜ್ ಹ' ಬಕ್ರೀದ್ ಹಬ್ಬದ ಮೂಲ ಹೆಸರು.ಅಜ್ ಹ ಅಂದ್ರೆ ವಿಶ್ವವನ್ನು  ರಕ್ಷಿಸುತ್ತಿರುವ ಭಗವಂತ (ಅಲ್ಲಾ ಹ್)  ನಿಗೆ ಸಮರ್ಪಿಸುವ ಬಲಿದಾನ ಎನ್ನುವ ಅರ್ಥ ಬರುತ್ತದೆ.ಈದ್ ಉಲ್ ಖುರ್ಬಾನಿ ಎಂದು ಸಹ ಇದನ್ನು ಕರೆಯುತ್ತಾರೆ.ಒನ್ಸ್ ಅಗೇನ್ ಖುರ್ಬಾನಿ ಎಂದರೆ ಬಳಿ ಎನ್ನುವ ಅರ್ಥ ಪಡೆದು ಕೊಳ್ಳುತ್ತದೆ..ಒಟ್ಟಾರೆ ಬಕ್ರೀದ್ ಬಲಿದಾನದ ಪ್ರತೀಕ.
ಕಥೆ ಹೀಗಿದೆ..
ಇಸ್ಲಾಂ ಧರ್ಮದಲ್ಲಿ ದೇವದೂತ ( ಪ್ರವಾದಿ) ಎನ್ನುವ ಹೆಸರು ಪಡೆದವರಲ್ಲಿ ಹಜರತ್ ಇಬ್ರಾಹಿಂ ಸಹ ಮುಖ್ಯರಾಗಿದ್ದಾರೆ.ಇವರ ಬಗ್ಗೆ ತಿಳಿಯ ಬೇಕಾದರೆ ನಾವು ನಾಲ್ಕು ಸಾವಿರ ವರ್ಷದ  ಹಿಂದೆ ಹೋಗ ಬೇಕು.ಇಬ್ರಾಹಿಂ ಇರಾಕ್ ದೇಶದಲ್ಲಿ ಜನ್ಮಿಸಿದ್ದರು..ಅವರು ಬದುಕಿದ್ದ ಕಾಲದಲಿ ಇರಾಕ್ ದೇಶ ಸಂಪತ್ಬರಿತವಾಗಿತ್ತು ,ಆದರೆ ನೈತಿಕವಾಗಿ ಮತ್ತು ಧಾರ್ಮಿಕವಾಗಿ ಕೆಳಗಿಳಿದಿತ್ತು..ಬಹುದೇವತಾರಾಧನೆ ,ರಾಜರು,ಧರ್ಮಾಧಿಕಾರಿಗಳು ತಮನ್ನು ತಾವು ದೇವರೆಂದು ಸ್ವಯಂ  ಘೋಷಿಸಿಕೊಂಡು ಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದ್ದ ಕಾಲ.ಹಣವಂತರ ಅಹಂಕಾರ ಎಲ್ಲೇ  ಮೀರಿತ್ತು.ಆ ಸಂದರ್ಭದಲ್ಲಿ ವಿಶ್ವಕ್ಕೆ ಅಲ್ಲಾ ಹ್  ಒಬ್ಬನೇ ದೇವ,ಇವರೆಲ್ಲ ಆತನ ಸೃಷ್ಟಿಗಳೇ ವಿನಃ ದೇವರಲ್ಲ..ಆತನ ಪ್ರೀತಿ ಗಳಿಸಲು ಅಧರ್ಮ,ದುರ್ಗುಣವನ್ನು ಹತ್ತಿರ ಸೆಳೆಯಗೊಡಬಾರದು,ಯಾವುದೇತ್ಯಾಗಕ್ಕಾಗಲಿ  ಸದಾ ಸಿದ್ಧರಾಗಿ ಇರಬೇಕು ಎನ್ನುವ ಸಂದೇಶ ಸಾಮಾನ್ಯರ ಮನದಲ್ಲಿ ಬಿತ್ತಿದ.ಒಳ್ಳೆಯವರಿಗೆ  ಕಾಲ ಎಲ್ಲಿದೆ ಅನ್ನುವ ಮಾತೊಇದೆಯಲ್ಲ,ಆತನ ಈ ವರ್ತನೆಗೆ ಸರ್ಕಾರ-ಶ್ರೀಮಂತರ ಕೆಂಗಣ್ಣು ಬಿದ್ದು ಆತನಿಗೆ ದೇಶದಿಂದ ಬಹಿಷ್ಕಾರ.
* ಧೃತಿಗೆಡಲಿಲ್ಲ ಇಬ್ರಾಹಿಂ .ಆತನ ಜೊತೆಯಾದಳು ಪತ್ನಿ ಹಾಜೀರಾ..ಇವರಿಗೊಬ್ಬ ಮಗ ಇಸ್ಮಾಯಿಲ್. ಒಮ್ಮೆ ದೇವರಿಗೆ ಇಬ್ರಹಂ ಅವರನ್ನು ಪರೀಕ್ಷೆ ಮಾಡ ಬೇಕು ಅಂತ ಅನ್ನಿಸಿತು.ತಕ್ಷಣ ಆತ ಭಕ್ತನ ಬಳಿ ಹೇಳಿದ್ದು ನೋಡು ನೀನು ನಿನ್ನ ಹೆಂಡತಿ-ಮಗುವನ್ನು ಬೆಂಗಾಡಿನಲಿ ಬಿಟ್ಟು  ನನ್ನ ಬಳಿ ಬಾ! ಆಗ ಆತ ಇಬ್ಬರನ್ನು ಮರಳು ಗಾಡಿನಲ್ಲಿ  ಬಿಟ್ಟು ಬಂದ,ಕುಡಿಯಲು  ಒಂದು ಹನಿ ನೀರಿಲ್ಲದ ಪ್ರದೇಶ.ಎಳೆಯ ಕಂದ ಹಸಿವಿನಿಂದ ಬಳಲಿತು,ದಯಾಮಯನಾದ  ದೇವನು ಅಂತಹ ಸ್ಥಳದಲ್ಲಿ ನೀರಿನ ಸೆಲೆಯನ್ನು ಉದ್ಭವ ಮಾಡಿದ.ಅದು ಈಗ ಮೆಕ್ಕಾ ನಗರಲ್ಲಿ ದೊರಕುವ  ಈ ಜಲವು  'ಅಬೆ ಜಮ್ ಜಮ್ ' ಹೆಸರಿನ ಪವಿತ್ರ ತೀರ್ಥವೆಂದು  ಪ್ರಸಿದ್ಧಿ ಪಡೆದಿದೆ.
* ಮತ್ತೊಮ್ಮೆ  ಇಬ್ರಾಹಿಮ್ ಕಾಲದತ್ತ ...!  ಇಸ್ಮಾಯಿಲ್ ದೊಡ್ಡವನಾದ,ದೇವರಿಗೆ ಪುನಃ ತನ್ನ ಭಕ್ತರನ್ನು ಪರೀಕ್ಷಿಸ ಬೇಕೆಂಬ ಆಸೆ.ಸರಿ ಆತ ಇಬ್ರಾಹಿಮ್ ಬಳಿ ನನಗೆ ನಿನ್ನ ಮಗನ ಬಳಿ ಬೇಕು ಕೊಡ್ತೀಯ ಅಂದಾಗ ಆತ ಸಮ್ಮತಿ ಕೊಟ್ಟ,ಆ ಬಾಲಕ ಇಸ್ಮಾಯಿಲ್ ಸಹ ಅಪ್ಪನ  ಆಸೆಯನ್ನು ಸಂತೋಷದಿಂದ ನೆರವೇರಿಸಲು ಸಿದ್ಧನಾದ.ಸರಿ ಇಸ್ಮಾಯಿಲ್ ವಧಾ ಸ್ಥಾನದ ಬಳಿಬಂದ ಇನ್ನೇನು ಇಬ್ರಾಹಿಮ್ ಮಗನ ತಲೆ ಕತ್ತರಿಸ ಬೇಕು ಆಗ ದೇವರ ಆಜ್ಞೆಯಂತೆ ಇತರ ದೇವದೂತರು ಆತನ ಮಗನ ಸ್ಥಾನದಲ್ಲಿ  ಕುರಿ ನಿಲ್ಲಿಸಿದರು.ಇದ್ಯಾವುದರ ಅರಿವೇ ಇಲ್ಲದೆ ಇಬ್ರಾಹಿಮ್ ದೇವರಿಗೆ ಬಲಿ ಕೊಟ್ಟರು.ಭಟ್ನ ಈ ತ್ಯಾಗ ಗುಣ ದೇವನಲ್ಲಿ ಅಪರಿಮಿತ ಪ್ರೀತಿ ಹುಟ್ಟುವಂತೆ ಮಾಡಿತು ಇಬ್ರಾಹಿಮ್ ಬಗ್ಗೆ!  ಆಬಳಿಕ ತಂದೆ ಮಕ್ಕಳು ಭಗವಂತನ ಹೃದಯದಲ್ಲಿ ಚಿರಸ್ಥಾಯಿ ...!
* ಬಕ್ರೀದ್ ಅಂದ್ರೆ ಬಲಿ ಕೊಡುವ ಹಬ್ಬ ಎಂದುತಿಳಿಯುವುದಕ್ಕಿಂತ  ಅದು ತ್ಯಾಗ ಬಲಿದಾನದ ಸಂಕೇತದ ಪ್ರತೀಕ ಎಂದು ಅರಿತರೆ ಹಬ್ಬದ ಆಚರಣೆಯ  ಮತ್ತಷ್ಟು ಉದಾತ್ತತೆ ಪಡೆದುಕೊಳ್ಳುತ್ತದೆ.ಹ್ಯಾಪಿ ಬಕ್ರೀದ್ !

Thursday, 29 October 2009

ಸೇಮ್ ಸೇಮ್ ರಿಸೆಂಬಲ್ !


ತಂದೆ-ತಾಯಿಯ ಹೋಲಿಕೆ ಮಕ್ಕಳಲ್ಲಿ ಬರುವುದು ಸಾಮಾನ್ಯ ಸಂಗತಿ.ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಷಯಕ್ಕೆ ಬಂದರೆ ಅವರ ಅಭಿಮಾನಿಗಳ ಸಂತೋಷ ಹೇಳತೀರದ್ದಾಗುತ್ತದೆ . ಸ್ಯಾಂಡಲ್ ವುಡ್ಡಿನಲ್ಲಿ ಅಣ್ಣಾವರನ್ನು ಶಿವರಾಜ್ ರಾಜ್ ಕುಮಾರ್ ಹೋಲ್ತಾರೆ,ಅದೇ ರೀತಿ ಗಿರಿಜಾ ಲೋಕೇಶ್ ಥರ ಸೃಜನ್,ವಿನೋದ್ ಪ್ರಭಾಕರ್ ಥೇಟ್ ಪ್ರಭಾಕರ್ ರೀತಿಯಲ್ಲಿ ಇದ್ದಾರೆ,ದ್ವಾರಕೀಶ್ ಮಕ್ಕಳ ಬಗ್ಗೆ ಹೇಳುವಷ್ಟೇ ಇಲ್ಲ...! ಈ ಸಂಗತಿಯನ್ನು ಮುಂದಿಟ್ಟುಕೊಂಡು ಬಾಲಿವುಡ್ ಕಡೆ ಕಣ್ ಹಾಯಿಸಿದರೆ ಇಂತಹ ಅನೇಕ ನಮೂನೆಗಳು ಕಣ್ಣಿಗೆ ಬೀಳುತ್ತದೆ.
ಶ್ರುತಿ ಹಾಸನ್ :- ಪಂಚ ಭಾಷಾ ತಾರೆ ಕಮಲ ಹಾಸನ್ ಹಾಗೂ ಮಾದಕ ನಟಿ ಸಾರಿಕ ಅವರ ಕರುಳ ಬಳ್ಳಿ ಶ್ರುತಿ ಹಾಸನ್.ಥೇಟ್ ಅಮ್ಮನ ಹಾಗೆ ಇರುವ ಈ ಸುಂದರಿ ಲಕ್ ಸಿನೆಮಾದಲ್ಲಿ ನಟಿಸಿ ಸೋತು ಸೊಟ್ಟ ಮುಖ ಹಾಕಿ ಕೊಂಡು ಬಂದಾಗಿದೆ.ಈಗ ತೆಲುಗು ಹಾಗೂ ತಮಿಳು ಮಂದಿ ಈ ಇಳವರಸಿಯನ್ನು ಬೆಳೆಸಲು ಪರದಾಡ್ತಾ ಇದ್ದಾರೆ.ಈ ಮುದ್ದು ಹುಡುಗಿ ಸಿನಿ ಕ್ಷೇತ್ರದಲ್ಲಿ ತಾಯಿಯಂತೆ ಗ್ಲಾಮರ್ ಬೊಂಬೆಯಾಗಿ ಉಳಿತಾಳೋ ಇಲ್ಲ... ತಂದೆಯಂತೆ ಅಪ್ಪಟ ಪ್ರತಿಭೆಯಾಗಿ ವೀಕ್ಷಕರ ಮನ ಗೆಲ್ತಾಲೋ? ಕಾಲವೇ ಹೇಳುತ್ತೆ!!!
ರಣಬೀರ್ ಕಪೂರ್ :- ರಾಜ್ ಕಪೂರ್ ಖಾಂದಾನ್ ಕುಡಿ ಈ ಚಲುವಾಂತ ಚನ್ನಿಗ ರಿಷಿಕಪೂರ್ ಮತ್ತು ನೀತುಸಿಂಗ್ ಒಡಲ ಬಳ್ಳಿ.ಈ ನಟ ಥೇಟ್ ಅಮ್ಮನ ಥರ ಇದ್ದಾನೆ ಸಧ್ಯ ! ಸಾವರಿಯ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ತಕ್ಷಣ ಗೆಲುವು ಸಿಕ್ಕಲಿಲ್ಲ.ಈಗಿನ ಪರಿಸ್ಥಿತಿಯಲ್ಲಿ ಆತ ಗೆಲ್ಲುವ ಕುದುರೆಯಾಗಿ ನಿರ್ಮಾಪಕರಲ್ಲಿ ಭರವಸೆ ಹುಟ್ಟಿಸ್ತಾ ಇದ್ದಾನೆ.
ಇಷ ಡಿಯೋಲ್ :- ಒನ್ಸ್ ಅಪಾನ್ಎ ಟೈಮ್ ಪಡ್ಡೆ ಹೈಕಳ ಡ್ರೀಂ ಗರ್ಲ್ ಆಗಿದ್ದ ಹೇಮಮಾಲಿನಿ ಮಗಳು ಇಷ,ಅಮ್ಮ ತದ್ರೂಪು.ಆದರೆ ಹೇಮಳಂತೆ ಪ್ರತಿಭೆಯಿಂದ ಹೆಸರು ಮಾಡಲಿಲ್ಲ ,ತನ್ನ ಬಿಚ್ಚು ಸ್ವಭಾವದಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದಳು ಈ ಚಲುವೆ.
ರೈಮ ಸೇನ್ :- ಅಮ್ಮ ಮೂನ್ಮೂನ್ ಸೇನ್ ಅಮ್ಮೋ ಅನ್ನುವಷ್ಟು ಗ್ಲಾಮರಸ್,ಇನ್ನು ಆಕೆಯ ಮಗಳು ಪ್ರೇಕ್ಷಕರ ಕಥೆ ಬ್ಯಾ...ಡಾ.....!ಭಾರತೀಯ ಚಿತ್ರ ರಂಗದಲ್ಲಿರುವ ಅನೇಕ ವುಡ್ ಗಳ ವೀಕ್ಷಕರ ಗಮನ ಸೆಳೆದಿರುವ ರೈಮ ರೂಪದಲ್ಲಿ ಅಮ್ಮನ ಹೋಲಿಕೆ ಪಡೆದಿದ್ದಾಳೆ.
ಸೋಹ ಅಲಿಖಾನ್ :- ಪಟೌಡಿ ಖಾಂದಾನ್ ಕೂಸು.ಅಪ್ಪನ ಹಾಗೆ ಹುಟ್ಟಿಲ್ಲ,ಥೇಟ್ ಅಮ್ಮಿಜಾನ್ ಶರ್ಮಿಳಾ ಠಾಕೂರ್ ಥರ ಹುಟ್ಟಿರೋದು.ನಟನೆ ಸಹ ಓಕೆನೆ!.ಆದರೆ ಹೇಳಿಕೊಳ್ಳುವಂತಹ ಅಚಿವ್ ಮೆಂಟ್ ಆಗಿಲ್ಲ.
ಹೃತಿಕ್ ರೋಶನ್ :- ಗ್ರೀಕ್ ದೇವತೆಯ೦ತಹ ಮುಖ ಈತನ ವಿಶೇಷತೆ.ರೂಪ ನಟನೆ ಎರಡರಲ್ಲೂ ಸೈ! ಈತನಿಗೆ ಅಪ್ಪ ರಾಕೇಶ್ ರೋಶನ್ ಕಣ್ಣು ಬಳುವಳಿಯಾಗಿ ಬಂದಿದೆ .ಜೊತೆಗೆ ಪ್ರತಿಭೆಯನ್ನು ಅಪ್ಪನಿಂದ ಬಳುವಳಿಯಾಗಿ ಪಡೆದಿದ್ದಾನೆ.
ಅಭಿಷೇಕ್ ಬಚ್ಚನ್ :-ಭಾರತೀಯ ಚಿತ್ರ ರಂಗದ ಅದ್ವಿತೀಯ ಕಾಲಾವಿದರಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಾದುರಿ ಪ್ರೀತಿಯ ಮಗ ಅಭಿಷೇಕ್ ಪಕ್ಕ ಅಪ್ಪ ಅಮಿತಾಬ್ ಥರಾನೇ ಇರೋದು.ಅಪ್ಪ ಬಿಗ್ ಬಿ ಯ ರೀತಿ ಗೆಲ್ಲುವುದಕ್ಕೆ ಸಾಧ್ಯ ಆಗಿಲ್ಲ .ಆದರು ಬಾಲಿವುಡ್ ನಲ್ಲಿ ಈತ ಒಂದೊಳ್ಳೆಯ ಸ್ಥಾನ ಪಡದೆ ಪಡೀತಾನೆ ಅನ್ನುವ ಭರವಸೆ ಸಿನಿ ಪಂಡಿತರಿಗಿದೆ !
ಸನ್ನಿ ಡಿಯೋಲ್ :- ಹೋಲಿಕೆ ಅಂದ್ರೆ ಹೀಗಿರಬೇಕು.ಈ ರೀತಿಯ ರಿಸೆಂಬಲ್ ಯಾವ ಮಕ್ಕಳು ತಮ್ಮ ತಾಯ್ತಂದೆಗಳಿಂದ ಪಡೆದೇ ಇಲ್ಲ ಅಂತ ಹೇಳ ಬಹುದು.ರೂಪದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲೂ ಸಹ ಅಪ್ಪನಂತೆ !!

ಸಹಾಯ -ಒಳಿತು

1 -) ಸಿಯಾಟಿಲ್ ವಿಕಲಚೇತನರ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡೆಯಲ್ಲಿ ಒಂಬತ್ತು ಮಂದಿ ನಡುವೆ ಓಟದ ಸ್ಫರ್ಧೆ ನಡೀತಾ ಇತ್ತು.ಓಟದ ನಡುವೆ ಒಬ್ಬ ಸ್ಪರ್ಧಿ ಕೆಳಕ್ಕೆ ಬಿದ್ದೆ ಬಿಟ್ಟ.ಉಳಿದವರು ಓಡುವತ್ತ ತಮ್ಮ ಗಮನ ನೆಟ್ಟಿದ್ದರು ಒಬ್ಬನನ್ನು ಹೊರೆತುಪಡಿಸಿ.ಆತ ಬಿದ್ದವನ ಬಳಿ ಬಂದು ಎಲ್ಲಿ ನೋವಾಗ್ತಿದೆ ಪುಟ್ಟ ಅಂತ ಕೇಳಿದ ,ಆಗ ಆ ಹುಡುಗ ಅಳುತ್ತ ತೋರಿಸಿದ.ಆಗ ಆತ ನಿಧಾನವಾಗಿ ಅವನನ್ನು ಮೇಲೆತ್ತಿ ಕೈ ಹಿಡಿದು ನಡೆಸಿಕೊಂಡು ಬಂದ.ಇಡೀ ಸ್ಟೇಡಿಯಂ ನಲ್ಲಿದ್ದ ಅಷ್ಟೂ ಜನ ಎದ್ದು ನಿಂತು ಚಪ್ಪಾಳೆ ತಟ್ಟಿತು ಈ ದೃಶ್ಯ ಕಂಡು ! ಆನಂತರ ಕೆಲವರು ಆಟದಲ್ಲಿ ನೀನು ಮೊದಲಿದ್ದೆ ,ಅದ್ಯಾಕೆ ನೀನು ಗೆಲ್ಲುವುದು ಬಿಟ್ಟು ಅವನನ್ನು ರಕ್ಷಿಸಿದೆ ? ಎಂದು ಕೇಳಿದರು.ಆಗ ಆ ಸ್ಪರ್ಧಿ ಆತ ಏಳಲಾಗದೆ ಅಳುತ್ತ ಇದ್ದ.ಆಗ ನಂಗೆ ಈ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಒಳಿತು ಅಂತ ಅನ್ನಿಸಿತು,ಆದಕಾರಣ ಆರೀತಿ ಮಾಡಿದೆ ಅಂತ ಹೇಳಿದ.ಆಗ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಅತಿಥಿಯಾಗಿ ಬಂದಿದ್ದ ಆ ರಾಜ್ಯದ ಗವರ್ನರ್ 'ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದ ವ್ಯಕ್ತಿಗಿಂತ ನಿಜವಾಗಿಯು ಮಾನವತೆಯಿಂದ ಗೆದ್ದಿರುವ ವ್ಯಕ್ತಿತ್ವದ ಬಗ್ಗೆ ನನಗೆ ಹೆಚ್ಚು ಗೌರವ ಉಂಟಾಗಿದೆ 'ಎಂದು ಹೇಳಿದರಂತೆ.
2 -) ಅಮೆರಿಕದ ಒಗ್ದೆನ್ ಹೈ ಸ್ಕೂಲ್ನ ಕೆಲವು ವಿದ್ಯಾರ್ಥಿಗಳು ಹೋಂ ಬೋಲ್ಟ್ ಶಾಲೆಯಲ್ಲಿ ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಬಂದಿದ್ದರು .ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಶಾಲೆಯಲ್ಲೂ ಈ ಸ್ಪರ್ಧೆ ಇದ್ದೆ ಇರುತ್ತಿತ್ತು.ಹೋಂ ಬೋಲ್ಟ್ ಸ್ಕೂಲ್ ಕೋಚ್ ಒಗ್ದೆನ್ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದ ಬಳಿಕ 'ನಮ್ಮಲ್ಲಿ ಈ ಏಳು ಕುಸ್ತಿಪಟುಗಳಲ್ಲಿ ಭಾಗವಹಿಸುವವರಲ್ಲಿ ಬ್ರೆಂಟ್ ಅನ್ನುವ ವಿದ್ಯಾರ್ಥಿ ಡೌನ್ ಸಿಂಡ್ರೋಮ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾನೆ .ಆತನಿಗೆ ಕುಸ್ತಿಯಲ್ಲಿ ನೈಪುಣ್ಯತೆ ಇಲ್ಲ,ಆದರೆ ಭಾಗವಹಿಸಬೇಕೆನ್ನುವ ಉತ್ಸಾಹಕ್ಕೆ ಕೊರತೆಯಿಲ್ಲ.ನಿಮ್ಮಲ್ಲಿ ಯಾರು ಬೇಕಾದರೂ ಅವನನ್ನು ಕ್ಷಣದಲ್ಲಿ ಸೋಲಿಸ ಬಲ್ಲಿರಿ .ತಾನು ಸೋಲ್ ತೀನಿ ಅಂತ ತಿಳಿದಿದ್ದರೂ ಆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ನಿಮ್ಮಲ್ಲಿ ಯಾರು ಮೊದಲು ಕಣಕ್ಕೆ ಇಳೀತಿರಿ ?' ಎಂದು ಕೇಳಿದ.ಕೆಲಕ್ಷಣ ನಿಶಬ್ಧ.ಬಳಿಕ ಒಗ್ದೆನ್ ಟೀಂ ನಿಂದ ಒಂದು ಧ್ವನಿ ಕೇಳಿ ಬಂತು ' ನಾನು ಸಿದ್ಧ'ಆ ಟೀಂ ಕೆನ್ ಬ್ರುಲೆಂಡ್ ನಗುತ್ತ ಮುಂದೆ ಬಂದ.ಬ್ರೆಂಟ್ ಜೊತೆ ಆತ ಕುಸ್ತಿ ಆರಂಭ ಮಾಡಿದ.ಕ್ಷಣದಲ್ಲಿ ಈ ಕಾಳಗ ಮುಗಿದು ಹೋಗ್ತಾ ಇತ್ತು,ಆದರೆ ಹಾಗಾಗಲಿಲ್ಲ.ಆರು ನಿಮಿಷಗಳ ಕಾಲ ಈ ಸ್ಪರ್ಧೆ ನಡೆಯಿತು.ಅಷ್ಟೇ ಅಲ್ಲದೆ ಬ್ರೆಂಟ್ ಗೆಲ್ಲುವಷ್ಟು ಪಾಯಿಂಟ್ಗಳು ಬರುವಂತೆ ಮಾಡಿ ಕೆನ್ ಸೋತು ಹೋದ.ನಂತರ ಕೆನ್ಗೆ ನಿಯಮದ ಅನ್ವಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಯ್ತು.' ಗೆಲುವು ನನ್ನದಾಯ್ತ?' ಆಶ್ಚರ್ಯ ತಡಿಯಲಾಗದೆ ಕೇಳಿದ ಬ್ರೆಂಟ್.ಹೌದು ಅಂತ ಹೇಳಿದ ಕೆನ್ ನಗುತ್ತ.ಜೊತೆಗೆ ಆತ ಗೆದ್ದ ಸೂಚಕವಾಗಿ ಬ್ರೆಂಟ್ ಬಲಗೈ ಮೇಲೆತ್ತಿದ.ಆ ಸ್ಪರ್ಧೆ ವೀಕ್ಷಣೆಗೆ ಬಂದಿದ್ದದ ಆರುಸಾವಿರ ಮಂದಿ ಎದ್ದು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
3 -) ಹಾರ್ಬರ್ಟ್ ಹೂಪರ್ ಸುಮಾರು ನಲವತ್ತೇಳು ವರ್ಷಗಳ ಕಾಲ ಅಮೆರಿಕದಲ್ಲಿ ಅಧ್ಯಕ್ಷರಾಗಿ-ವಿವಿಧ ಪದವಿಗಳಲ್ಲಿ ಕೆಲಸ ಮಾಡ ಬೇಕಾಗಿ ಬಂದರೂ ಆಡಳಿತ ನಡೆಸಿದರು.ಆದರೆ ಸರ್ಕಾರ ನೀಡಿದ ಸಂಬಳವನ್ನು ಆತ ತನಗಾಗಿ ಬಳಸದೆ ಬಡವರು,ನಿರ್ಗತಿಕರ ಸೇವೆಗಾಗಿ ಮುಡಿಪಾಗಿಟ್ಟ ಸಂಸ್ಥೆಗಳಿಗೆ ನೀಡಿದರು.ಮುಖ್ಯವಾಗಿ ರಾಜಕೀಯಕ್ಕೆ ಬರುವ ಮುಂಚಿನಿದಲು ಆತ ಶ್ರಿಮಂತನಾಗಿದ್ದ.
4 -) ಕೃತಜ್ಞತೆ ಕೇವಲ ಭಾವನೆ ಮಾತ್ರವಲ್ಲ ಅದೊಂದು ಕೃತಿ ಅಂತ ಹೇಳ್ತಾರೆ ತಿಳಿದೋರು.ಹಾಲಿವುಡ್ ಹೀರೋ ರಾಯ್ ರೋಗರ್ಸ್ ಇದನ್ನು ಸೂಕ್ತ ಪಾಲಿಸಿದ್ದಾರೆ .ಆತ ಹೀರೋ ಆಗಿ ನಟಿಸಿದ ಮೊದಲ ಚಿತ್ರ ' ಡಿ ವರ್ಲ್ಡ್ ಹೋಂ ಸೈಡ್'(1935), ಮತ್ತೊ ಮೂರು ಚಿತ್ರಗಳು ಬಿಡುಗಡೆಯಾದ ಬಳಿಕ ಆತನ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳಾದ ಅನೇಕರು ರಾಯ್ ಗೆ ಪತ್ರಗಳನ್ನು ಬರೆಯುತ್ತಿದ್ದರು.ಆದರೆ ರಾಯ್ಸ್ಗೆ ದೊರೆಯುತ್ತಿದ್ದ ಹಣ ಅಷ್ಟು ಅಭಿಮಾನಿಗಳಿಗೆ ಉತ್ತರಿಸಲು ಬೇಕಾದ ಅಂಚೆ ವೆಚ್ಚಭರಿಸಲು ಅಸಮರ್ಥವಾಗಿತ್ತು.ಆಸಂದರ್ಭದಲ್ಲಿ ಆತನಿಗೆ ನಟನೆ ಮಾಡಲು ಅವಕಾಶ ಕೊಟ್ಟ ರಿಪಬ್ಲಿಕ್ ಪಿಕ್ಚರ್ಸ್ ಮುಖ್ಯಸ್ಥರನ್ನು ರಾಯ್ ಭೇಟಿ ಮಾಡಿ ಅಭಿಮಾನಿಗಳಿಗೆ ಪತ್ರಿಸಲು ತನಗೆ ಸ್ವಲ್ಪ ಧನಸಹಾಯ ಮಾಡ ಬೇಕೆಂದು ಕೇಳಿದಋ ,ಆದರೆ ಸಂಸ್ಥೆ ಇದಕ್ಕೆ ಸಮ್ಮತಿಸಲಿಲ್ಲ.ಜೊತೆ ಇಂತಹ ವಿಷಯಗಳನ್ನು ಗಂಭಿರವಾಗಿ ಪರಿಗಣಿಸ ಬೇಕಿಲ್ಲ ಎಂದು ಬಿಟ್ಟಿ ಸಲಹೆ ನೀಡಿತು.ಆದರೆ ರಾಯ್ ಸುಮ್ಮನಾಗದೆ ,ತನ್ನ ಸ್ವಲ್ಪ ಕಾಲವನ್ನು ವಯುಕ್ತಿಕ ಪ್ರದರ್ಶನ ನೀಡಲು ಮೀಸಲಾಗಿಟ್ಟು ಅದರಿಂದ ಬಂದ ಹಣವನ್ನು ಅಭಿಮಾನಿಗಳಿಗೆ ಪತ್ರಿಸಲೆಂದು ಮುಡಿಪಾಗಿಟ್ಟರು..ಆ ಕೆಲಸ ಮಾಡಲು ಮೂರೂ ಜನರಿಗೆ ಉದ್ಯೋಗನೀಡಿದರಂತೆ.

Followers