Saturday, 8 May 2010
ಅಮ್ಮ ....!
ಅಮ್ಮ ....! ದೇವರು ಸಮಸ್ತ ಜೀವ ಕೋಟಿಗೂ ನೀಡಿದ ಅಪರೂಪದ ವರ. ಆ ಅಮ್ಮ ಭಗವಂತ ಸೃಷ್ಟಿ ಸಿದ ಎಲ್ಲ ಜೀವರಾಶಿಗಳಲ್ಲಿ ಜೀವಂತವಾಗಿರುತ್ತಾಳೆ...ಅಮ್ಮ... ! ಜೈಪುರದಲ್ಲಿ ರಸ್ತೆಯಲ್ಲಿ ಕೋತಿಮರಿಯೊಂದು ಸ್ಕೂಟರ್ ಸವಾರನ ನಿರ್ಲಕ್ಷ್ಯದಿಂದ ಗಾಯಗೊಂಡಿತು. ಎಲ್ಲರಿಗೂ ಬದುಕುವ ಆಸೆ ಸದಾ ಇದ್ದೆ ಇರುತ್ತದೆ. ಪ್ರಯತ್ನ ಪಟ್ಟು ಆ ಮುದ್ದು ಮರಿ ಮೇಲೇಳಲು ಪ್ರಯತ್ನಿಸಿತು...! ಸೃಷ್ಟಿಯಲ್ಲಿ ಎಲ್ಲ ಜೀವಿಗಳು ಬದುಕಿಗೆ ಆದ್ಯತೆ ನೀಡುತ್ತದೆ. ಈ ಮರಿ ಬದುಕಲು ಪ್ರಯತ್ನಿಸಿದಂತೆ, ತನ್ನ ಹೊಟ್ಟೆ ತುಂಬಿಸಿ ಕೊಂಡು ಜೀವ ಉಳಿಸಿ ಕೊಳ್ಳಲು ಆಲ್ಲೆಲ್ಲೋ ಇದ್ದ ನಾಯಿ ಆ ಸ್ಥಳಕ್ಕೆ ಧಾವಿಸಿ ಈ ಮರಿಯ ಮೇಲೆ ಅಟಾಕ್ ಮಾಡಿತು. ಆ ನಾಯಿ ಈ ಕೂಸಿಗೊಂದು ಅಮ್ಮ ಇದ್ದಾಳೆ ಎನ್ನುವ ಸಂಗತಿ ಮರೆತಿತ್ತು ಅಂತ ಕಾಣುತ್ತೆ, ಆದೆ ಅಮ್ಮ ಹಾಗಲ್ಲವಲ್ಲ, ತನ್ನ ಪ್ರಾಣ ಹೊಸದರೂ ಸರಿಯೇ ಕಂದನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೇ ತೀರುತ್ತಾಳೆ.. ಅಮ್ಮ ಮಂಗ ಮಾಡಿದ್ದು ಅದನ್ನೇ, ತನ್ನ ಕಂದನನ್ನು ತಿನ್ನಲು ಬಂದ ನಾಯಿಯ ಮೇಲೆ ತೀವ್ರವಾಗಿ ದಾಳಿ ನಡೆಸಿ ಅಮ್ಮನ ಕೆಲಸ ಮಾಡಿತು.. ಇದರ ಸಿಟ್ಟಿಗೆ ಹೆದರಿ ನಾಯಿ ಓಟ ಕೀಳ್ತು.ಆ ಬಳಿಕ ಕಷ್ಟ ಪಟ್ಟು ಮಗುವನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯಿತು ...! ನನಗೆ ಬಂದ ಮೇಲ್ಗಳಲ್ಲಿ ತುಂಬಾ ಇಷ್ಟ ಆಗಿದ್ದು ಇದು...!
Tuesday, 20 April 2010
ಶೋಷಣೆ
ಬೇಸಿಗೆಯ ಪ್ರಭಾವ ನಮ್ಮ ಮೇಲೆ ಮಾತ್ರವಲ್ಲ ಎಲ್ಲಾ ಕಡೆಯೂ ತನ್ನ ಪ್ರಭಾವ ತೋರುತ್ತಿದೆ. ನಾವು ಮನುಷ್ಯರು ಬಾಯ್ಬಿಟ್ಟು ಕೇಳಿ ನಮ್ಮ ಬಾಯಾರಿಕೆ ಹಸಿವೆಯನ್ನು ತಣಿಸಿ ಕೊಳ್ಳುತ್ತೇವೆ .ಆದರೆ ಮೂಕ ಪ್ರಾಣಿ -ಪಕ್ಷಿಗಳು? ಅವುಗಳ ಬಗ್ಗೆ ಬುದ್ಧಿವಂತ ಪ್ರಾಣಿ ಅನ್ನಿಸಿಕೊಂಡ ನಾವೆ ಅವುಗಳ ಬಗ್ಗೆ ಕಾಳಜಿ ವಹಿಸ ಬೇಕು.ಇತ್ತೀಚೆಗಂತೂ ಬಿಸಿಲ ಝಳದ ಪ್ರಭಾವದಿಂದ ಅನೇಕ ಪಕ್ಷಿಗಳು ಸಾಯುತ್ತಿದೆ. ಟೆರೆಸ್ ಮೇಲೆ ,ಮರದ ಬುದಗಳಲ್ಲಿ ಬಾಯಾರಿಕೆ ತಡಿಯಲಾಗದೆ ಮರಣಕ್ಕೆ ಮೊರೆಹೊಗುತ್ತಿದೆ. ಇಂತಹ ಪರಿಸ್ಥಿತಿ ತಡೆಗಟ್ಟಲು ನಾವು ಮಾಡ ಬೇಕಾದುದು ಇಷ್ಟೆ. ಕಿಟಕಿ,ಟೆರ್ರೆಸ್ ಒಟ್ಟಿನಲ್ಲಿ ಹಕ್ಕಿಗಳು ನಿರಮ್ಮಳವಾಗಿ ಬರುವ ಸ್ಥಳಗಳಲ್ಲಿ ಪುಟ್ಟ ಪಾತ್ರೆಯಲ್ಲಿ ನೀರನ್ನು ಇಡ ಬೇಕು..ಹಾಗೆ ಮಾಡುವುದರಿಂದ ಮುಗ್ಧ ಪ್ರಾಣಿ- ಪಕ್ಷಿಗಳಿಗೆ ಜೀವದಾನ ಮಾಡಿದಂತೆ ಆಗುತ್ತದೆ..
@@ ಆಸ್ಟ್ರೇಲಿಯ ದೇಶದಲ್ಲಿ ಕೋಲಾ ಅನ್ನುವ ಪ್ರಾಣಿ ಹೆಚ್ಚು ಪ್ರಸಿದ್ಧಿ. ಅದು ತನ್ನಷ್ಟಕ್ಕೆ ತಾನು ಬದುಕುವ ಸಂಕೋಚ ಪ್ರಾಣಿ.ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮಖೇಡಿ ಪ್ರಾಣಿ. ಇತ್ತೀಚೆಗೆ ಆಸ್ಟ್ರೇಲಿಯ ದಲ್ಲಿ ಅತಿ ಹೆಚ್ಚು ಬಿಸಿ ಏರಿತು.ಆಗ ಈ ಸಂಕೋಚದ ಪ್ರಾಣಿ ರಸ್ತೆಗೆ ಬಂದು ನೀರನ್ನು ಬೇಡಿ ಬದುಕಿತು.ಇಂತಹ ಘಟನೆಯನ್ನು ನಾವು ಕಂಡೆ ಇಲ್ಲ ಅಂತಾರೆ ಸ್ಥಳೀಯರು ..! ನಮ್ಮ ಹುಂಬತನದಿಂದ ಆಗಿರುವ ಗ್ರೀನ್ ಹೌಸ್ ಎಫೆಕ್ಟ್ ಗೇ ಉಳಿದ ಮುಗ್ಧಪ್ರಾಣಿಗಳು ಬಲಿಯಾಗುತ್ತಿವೆಯಲ್ಲ ಅದೇ ನೋವಿನ ಸಂಗತಿ. ಭೂಮ್ತಾಯಿ ಮೇಲೆ ಇಂತಹ ಶೋಷಣೆ ನಿಲ್ಲುವುದು ಯಾವಾಗ? ಪ್ರಾಣಿ- ಪಕ್ಷಿ-ಸಸ್ಯಗಳ ಬದುಕು ನಿರಾಳವಾಗುವುದು ಯಾವಾಗ? ನಾವೆ ಯೋಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯ ಬೇಕು...!
Saturday, 9 January 2010
ಬದುಕುವುದನ್ನು ಕಲಿಯಬೇಕು
|
Wednesday, 9 December 2009
ಸಮಸ್ಯೆ -ಸಮಸ್ಯೆ-ಪರಿಹಾರ!
ಇಬ್ಬರು ಗೆಳೆಯರು ಬಾರ್ ಒಂದರಲ್ಲಿ ಕುಳಿತಿದ್ದರು.ಒಬ್ಬ ಅಮೆರಿಕನ್ ,ಮತ್ತೊಬ್ಬ ಭಾರತೀಯ.ಒಂದರ ಹಿಂದೆ ಒಂದು ಗ್ಲಾಸ್ಗಳನ್ನು ಪೂರ್ತಿ ಮಾಡುತ್ತಾ ಕುಳಿತಿದ್ದರು.ಇದ್ದಕ್ಕಿದ್ದ ಹಾಗೆ ಭಾರತೀಯನಿಗೆ ಮಾತನಾಡುವ ಉಮೇದು ಬಂತು...ಬಿಕ್ಕಳಿಸಿದ..! ಅವನ ದುಃಖ ಕಂಡ ಗೆಳೆಯನಿಗೂ ದುಃಖ ಶುರು ಆಯ್ತು,ಆದರು ಸಾವರಿಸಿ ಕೊಂಡು ಯಾಕೋ ಅಣ್ಣ ಅಳ್ತಾ ಇದ್ದೀಯ ಅಂತ ಕೇಳಿದ! ಅವನು ' ನಿನಗೆ ಗೊತ್ತಿಲ್ಲದೇ ಇರುವ ವಿಷಯವೊಂದು ಹೇಳಬೇಕಾಗಿದೆ,ನಮ್ಮ ತಾಯಿ ತಂದೆ ಹಳ್ಳಿಯ ಹುಡುಗಿಯೊಬ್ಬಳನ್ನು ಸೊಸೆಯಾಗಿ ತರಲು ನಿಶ್ಚಯ ಮಾಡಿದ್ದಾರೆ.ಅಂತಹ ಹೆಣ್ಣುಮಕ್ಕಳು ಚೆನ್ನಾಗಿ ಹೊಂದಿಕೊಂಡು ಸಂಸಾರ ನಡೆಸುತ್ತಾರೆ ಅನ್ನುವ ಭಾವನೆ ಅವರದು.ಯಾವಳೋ ಅವಳು,ನನಗೆ ಗೊತ್ತೇ ಇಲ್ಲ,ಸ್ವಲ್ಪ ದಿನ ಪ್ರೀತಿ ಸಹ ಮಾಡಲಿಲ್ಲ ಅಂತಹವಳನ್ನು ನಾನು ಮದುವೆ ಆಗೋದ? ಛೇ ನನಗೆ ಈ ಕುಟುಂಬದ ಸಮಸ್ಯೆಗಳಿಂದ ಸಾಕಾಗಿದೆ'ಎಂದು ಜೋರಾಗಿ ಅತ್ತ...!
'ನೀನು ಲವ್ ಮ್ಯಾರೇಜ್ ಬಗ್ಗೆ ಹೇಳ್ತಾ ಇದ್ದೀಯ ? ಹಾಗಾದರೆ ನನ್ನ ಕಥೆ ಕೇಳು! '
ನಾನು ಒಬ್ಬ ವಿಧವೆಯನ್ನು ಗಾಢವಾಗಿ ಪ್ರೀತಿಸಿದೆ,ಎರಡು ವರ್ಷಗಳ ಕಾಲ ಅವಳ ಜೊತೆ ಡೆಟ್ ಮಾಡಿದೆ,ಆಮೇಲೆ ಮದುವೆ ಆದೆ,ಅದಾದ ಮಾರನೆಯ ವರ್ಷ ನನ್ನನ್ನು ಹೆತ್ತ ಅಪ್ಪನಿಗೆ ನನ್ನ ಮಲಮಗಳ ಜೊತೆ ಲವ್ ಶುರು ಆಯಿತು! ಪ್ರೀತಿ ಆದ್ರೆ ಸುಮ್ಮನೆ ಇರೋಕೆ ಆಗಲ್ವಲ್ಲ, ಇಬ್ಬರು ಮದುವೆಯಾದರು.ಆಗ ನನ್ನ ಅಪ್ಪ ನನಗೆ ಅಳಿಯನಾದ,ನಾನು ಈ ರೀತಿ ನಮ್ಮ ಅಪ್ಪನಿಗೆ ಹೆಣ್ಣು ಕೊಟ್ಟ ಮಾವನಾದೆ!
ಕಾನೂನು ಪ್ರಕಾರ ನನ್ನ ಮಗಳು ನನ್ನ ತಾಯಿ ಮತ್ತು ನನ್ನ ಹೆಂಡತಿ ನನಗೆ ಅಜ್ಜಿ .ಇನ್ನು ಹೆಚ್ಚಿನ ಸಮಸ್ಯೆ ಯಾವಾಗ ಉಂಟಾಯಿತು ಗೊತ್ತ? ನನಗೆ ಮಗು ಹುಟ್ಟಿದಾಗ! ನನ್ನ ಮಗ ನನ್ನ ತಂದೆಯ ಸಹೋದರ! ಮತ್ತು ಆತ ನನ್ನ ಚಿಕ್ಕಪ್ಪ!
ಆದರೆ ಮತ್ತಷ್ಟು ಕೆಟ್ಟ ಪರಿಸ್ಥಿತಿ ಉಂಟಾಗಿದ್ದು ನನ್ನ ಅಪ್ಪನಿಗೆ ಮಗು ಹುಟ್ಟಿತಲ್ಲ ಆಗ! ಈಗ ನಮ್ಮ ಮನೆಯ ಸಂಬಂಧಗಳತ್ತ ಗಮನ ಹರಿಸಿದರೆ ನನ್ನ ತಂದೆಯ ಮಗ ನನ್ನ ತಮ್ಮ ಹಾಗೂ ನನ್ನ ಮೊಮ್ಮಗ! ಅಂದ್ರೆ ನಾನು ಅಜ್ಜ ಹಾಗೂ ಮೊಮ್ಮಗ ! ಎರಡು ಪಾತ್ರಗಳ ಒಡೆಯ...! ಹೇಳು ಗೆಳೆಯ ಕೌಟುಂಬಿಕ ಸಮಸ್ಯೆ ನಿಜವಾಗಿಯೂ ನಿನಗೆ ಇದೆಯಾ ???????? ಎಂದು ಮತ್ತೊಂದು ಪೆಗ್ ಕುಡಿದು ನಕ್ಕ !

Saturday, 5 December 2009
ಪದೇಪದೆ ನೆನಪಾದೆ!
ನಂಗೊತ್ತು ,
ಒಂದು ಹಿಡಿಯಷ್ಟು ದಿನಗಳು ಬಾಕಿ ಇವೆ... ಅದು ಪೂರೈಸಿದರೆ ನಾವು ಹೃದಯ ಕಿತ್ತು ಬೇರೆಯಾದ ಆ ದಿನಕ್ಕೆ ಅಮೋಘವಾಗಿ ಒಂದು ವರ್ಷದ ಸಂಭ್ರಮ !
ನಂಗೊತ್ತು,ನೀನಿನ್ನು ನನ್ನ ಮರೆತಿಲ್ಲಾಂತ ! ನಿನ್ನ ಹೃದಯ ಏನೂ ಅಂತ ನಿನಗಿಂತ ನನಗೆ ಚನ್ನಾಗಿ ಗೊತ್ತು , ಅದು ನಿನಗೂ ಗೊತ್ತು! ನಾನು ಪ್ರಾಕ್ಟಿಕಲ್...ನೀನು ಎಮೋಷನಲ್ ! ಸ್ನೇಹಕ್ಕೆ -ಪ್ರೀತಿಗೆ ಇದ್ಯಾವುದು ಬೇಕಾಗಿರಲಿಲ್ಲ! ಹೃದಯ ಏನು ಬೇಡುತ್ತಿದೆ ಎಂದು ತಿಳಿಯುವಷ್ಟರಲ್ಲಿ ನಾವಿಬ್ಬರು ಇಷ್ಟ ಪಟ್ಟಿದ್ದೆವು. ಪೌರ್ಣಿಮೆಯ ಬೆಳದಿಂಗಳೇ ಎಂದು ಕನವರಿಸಿದೆ,ನನ್ನ ಜಾಜಿ ಮಲ್ಲಿಗೆ ಎಂದು ಹೊಗಳಿದೆ,ನಮ್ಮ ಪ್ರೀತಿಗೆ ಅಂತಹ ಯಾವ ಅಲಂಕಾರಗಳು ಬೇಕಿರಲಿಲ್ಲ ಅಲ್ವ! ನನ್ನನ್ನು ಒಂದು ಕ್ಷಣವೂ ಪ್ರೀತಿಸದೆ ಬಿಡಲಿಲ್ಲ,ಪದಗಳಿಗೆ ಅಕ್ಷರವಾದೆ,ನೋಟಕ್ಕೆ ಶಕ್ತಿಯಾದೆ! ಆದರೆ ನೀನು ನನ್ನನ್ನು ಅಷ್ಟೆ ನೋಯಿಸಿದೆ! ಪ್ರೀತಿಯ ಜೊತೆಗೆ ನೋವನ್ನು ಮೊಗೆ ಮೊಗೆದು ಕೊಟ್ಟೆ! ಇದಕ್ಕೆ ಉತ್ತರ ? ಐ ಡೋಂಟ್ ನೋ ವೈ !
ಆ ನೋವು ನೀನ್ಯಾಕೆ ನೀಡಿದೆ ಅಂತ ನನಗಿಂತ ನೀನು ಬಲ್ಲೆ....ಇಲ್ಲ ಹಾಗಂತ ನಾನು ಹೇಳಲಾರೆ !ನಾನು ನಿನ್ನ ಮರೆತಿದ್ದೀನಿ ಅನ್ನುವ ಭಾವ ನಿನ್ನದು,ನಂಗೊತ್ತು ! ಆದರೆ ನಿನ್ನ ಈ ಭಾವವನ್ನು ಸ್ವೀಕರಿಸುತ್ತಿಲ್ಲ ನಿನ್ನ ಹೃದಯದ ಮೂಲೆಯ ಒಂದು ಭಾಗ! ಹೌದಲ್ವ?! ನಿಜ ತಾನೆ?!
ಹೇಗೆ ಮರೆಯಲಿ ನಿನ್ನನ್ನು ನಾನು? ಮರೆತರೆ ನಾನು ಕಟ್ಟಿದ ರಾಶಿ ಕನಸುಗಳು, ನಿನ್ನ ನೆನಪಿನಲ್ಲಿ ಕಳೆದ ಪ್ರತಿ ಕ್ಷಣವೂ ಸುಳ್ಳಾಗುತ್ತದೆ! ಪ್ರತಿದಿನ ನಿನಗಾಗಿ ಮೀಸಲಿಟ್ಟ ಆ ಗಳಿಗೆಯಲ್ಲಿ ನನ್ನ ಕೈ ಮೊಬೈಲ್ ಎತ್ತಿಕೊಳ್ಳುತ್ತದೆ !ಹೆಬ್ಬೆರಳಿಗೆ ಸಂಭ್ರಮ,ನಿನ್ನ ನಂಬರ್ ಚಕಚಕ! ಉಹುಂ! ಆದರು ನಿನಗೆ ಫೋನ್ ಮಾಡಲಾಗದ ಸ್ಥಿತಿ,ಇದು ಅಹಂಕಾರ,ದುರಭಿಮಾನ,ದುರಳತನ ಯಾವುದು ಅಲ್ಲ,ಇದು ನನ್ನ ಬದುಕಿನ ನಿಸ್ಸಹಾಯಕತೆ! ನಿನ್ನಲ್ಲಿ ಕೆಳುವುದಿಷ್ಟೇ ನಿನಗೆ ಎಂದಾದರು ನನ್ನ ನೆನಪಾದರೆ ಯಾಕೆ ಹೀಗಾಯಿತು ಎಂದು ಯೋಚಿಸು....ಸಾಧ್ಯವಾದರೆ!
ದಿನಗಳು ಕರಗಿಹೋಯ್ತು ಅನ್ನುವ ದುಃಖ ನಿನಗೂ-ಜೊತೆಗೆ ನನಗು ಸಹ! ಇಬ್ಬರಿಗೂ ಗೊತ್ತು ಒಬ್ಬರನ್ನೊಬ್ಬರು ಮಿಸ್ ಮಾಡ್ತಾ ಇದ್ದೀವಿ ಅಂತ! ಆದರು ಇಬ್ಬರು ಅದ್ಯಾವುದೋ ಅರಿಯದ ಧೂರ್ತ ಮೌನದ ಕೋಟೆಯೊಳಗೆ ಬಂಧಿಗಳು!
ಇಂದ್ಯಾಕೋ ಪದೇಪದೆ ನಿನ್ನ ನೆನಪು ಕಾಡುತ್ತಿದೆ ನನಗೆ,ನಿನಗೆ ನನ್ನ ನೆನಪು ಉಳಿದಿದೆಯೇ ?! ಇದರ ಉತ್ತರ ನನಗೆ ಗೊತ್ತಿಲ್ಲ...ನಿನಗೆ ????
ನಾನು

Thursday, 26 November 2009
Thursday, 29 October 2009
ಸೇಮ್ ಸೇಮ್ ರಿಸೆಂಬಲ್ !

ತಂದೆ-ತಾಯಿಯ ಹೋಲಿಕೆ ಮಕ್ಕಳಲ್ಲಿ ಬರುವುದು ಸಾಮಾನ್ಯ ಸಂಗತಿ.ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಷಯಕ್ಕೆ ಬಂದರೆ ಅವರ ಅಭಿಮಾನಿಗಳ ಸಂತೋಷ ಹೇಳತೀರದ್ದಾಗುತ್ತದೆ . ಸ್ಯಾಂಡಲ್ ವುಡ್ಡಿನಲ್ಲಿ ಅಣ್ಣಾವರನ್ನು ಶಿವರಾಜ್ ರಾಜ್ ಕುಮಾರ್ ಹೋಲ್ತಾರೆ,ಅದೇ ರೀತಿ ಗಿರಿಜಾ ಲೋಕೇಶ್ ಥರ ಸೃಜನ್,ವಿನೋದ್ ಪ್ರಭಾಕರ್ ಥೇಟ್ ಪ್ರಭಾಕರ್ ರೀತಿಯಲ್ಲಿ ಇದ್ದಾರೆ,ದ್ವಾರಕೀಶ್ ಮಕ್ಕಳ ಬಗ್ಗೆ ಹೇಳುವಷ್ಟೇ ಇಲ್ಲ...! ಈ ಸಂಗತಿಯನ್ನು ಮುಂದಿಟ್ಟುಕೊಂಡು ಬಾಲಿವುಡ್ ಕಡೆ ಕಣ್ ಹಾಯಿಸಿದರೆ ಇಂತಹ ಅನೇಕ ನಮೂನೆಗಳು ಕಣ್ಣಿಗೆ ಬೀಳುತ್ತದೆ.
ಶ್ರುತಿ ಹಾಸನ್ :- ಪಂಚ ಭಾಷಾ ತಾರೆ ಕಮಲ ಹಾಸನ್ ಹಾಗೂ ಮಾದಕ ನಟಿ ಸಾರಿಕ ಅವರ ಕರುಳ ಬಳ್ಳಿ ಶ್ರುತಿ ಹಾಸನ್.ಥೇಟ್ ಅಮ್ಮನ ಹಾಗೆ ಇರುವ ಈ ಸುಂದರಿ ಲಕ್ ಸಿನೆಮಾದಲ್ಲಿ ನಟಿಸಿ ಸೋತು ಸೊಟ್ಟ ಮುಖ ಹಾಕಿ ಕೊಂಡು ಬಂದಾಗಿದೆ.ಈಗ ತೆಲುಗು ಹಾಗೂ ತಮಿಳು ಮಂದಿ ಈ ಇಳವರಸಿಯನ್ನು ಬೆಳೆಸಲು ಪರದಾಡ್ತಾ ಇದ್ದಾರೆ.ಈ ಮುದ್ದು ಹುಡುಗಿ ಸಿನಿ ಕ್ಷೇತ್ರದಲ್ಲಿ ತಾಯಿಯಂತೆ ಗ್ಲಾಮರ್ ಬೊಂಬೆಯಾಗಿ ಉಳಿತಾಳೋ ಇಲ್ಲ... ತಂದೆಯಂತೆ ಅಪ್ಪಟ ಪ್ರತಿಭೆಯಾಗಿ ವೀಕ್ಷಕರ ಮನ ಗೆಲ್ತಾಲೋ? ಕಾಲವೇ ಹೇಳುತ್ತೆ!!!
ರಣಬೀರ್ ಕಪೂರ್ :- ರಾಜ್ ಕಪೂರ್ ಖಾಂದಾನ್ ಕುಡಿ ಈ ಚಲುವಾಂತ ಚನ್ನಿಗ ರಿಷಿಕಪೂರ್ ಮತ್ತು ನೀತುಸಿಂಗ್ ಒಡಲ ಬಳ್ಳಿ.ಈ ನಟ ಥೇಟ್ ಅಮ್ಮನ ಥರ ಇದ್ದಾನೆ ಸಧ್ಯ ! ಸಾವರಿಯ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ತಕ್ಷಣ ಗೆಲುವು ಸಿಕ್ಕಲಿಲ್ಲ.ಈಗಿನ ಪರಿಸ್ಥಿತಿಯಲ್ಲಿ ಆತ ಗೆಲ್ಲುವ ಕುದುರೆಯಾಗಿ ನಿರ್ಮಾಪಕರಲ್ಲಿ ಭರವಸೆ ಹುಟ್ಟಿಸ್ತಾ ಇದ್ದಾನೆ.
ಇಷ ಡಿಯೋಲ್ :- ಒನ್ಸ್ ಅಪಾನ್ಎ ಟೈಮ್ ಪಡ್ಡೆ ಹೈಕಳ ಡ್ರೀಂ ಗರ್ಲ್ ಆಗಿದ್ದ ಹೇಮಮಾಲಿನಿ ಮಗಳು ಇಷ,ಅಮ್ಮ ತದ್ರೂಪು.ಆದರೆ ಹೇಮಳಂತೆ ಪ್ರತಿಭೆಯಿಂದ ಹೆಸರು ಮಾಡಲಿಲ್ಲ ,ತನ್ನ ಬಿಚ್ಚು ಸ್ವಭಾವದಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದಳು ಈ ಚಲುವೆ.
ರೈಮ ಸೇನ್ :- ಅಮ್ಮ ಮೂನ್ಮೂನ್ ಸೇನ್ ಅಮ್ಮೋ ಅನ್ನುವಷ್ಟು ಗ್ಲಾಮರಸ್,ಇನ್ನು ಆಕೆಯ ಮಗಳು ಪ್ರೇಕ್ಷಕರ ಕಥೆ ಬ್ಯಾ...ಡಾ.....!ಭಾರತೀಯ ಚಿತ್ರ ರಂಗದಲ್ಲಿರುವ ಅನೇಕ ವುಡ್ ಗಳ ವೀಕ್ಷಕರ ಗಮನ ಸೆಳೆದಿರುವ ರೈಮ ರೂಪದಲ್ಲಿ ಅಮ್ಮನ ಹೋಲಿಕೆ ಪಡೆದಿದ್ದಾಳೆ.
ಸೋಹ ಅಲಿಖಾನ್ :- ಪಟೌಡಿ ಖಾಂದಾನ್ ಕೂಸು.ಅಪ್ಪನ ಹಾಗೆ ಹುಟ್ಟಿಲ್ಲ,ಥೇಟ್ ಅಮ್ಮಿಜಾನ್ ಶರ್ಮಿಳಾ ಠಾಕೂರ್ ಥರ ಹುಟ್ಟಿರೋದು.ನಟನೆ ಸಹ ಓಕೆನೆ!.ಆದರೆ ಹೇಳಿಕೊಳ್ಳುವಂತಹ ಅಚಿವ್ ಮೆಂಟ್ ಆಗಿಲ್ಲ.
ಹೃತಿಕ್ ರೋಶನ್ :- ಗ್ರೀಕ್ ದೇವತೆಯ೦ತಹ ಮುಖ ಈತನ ವಿಶೇಷತೆ.ರೂಪ ನಟನೆ ಎರಡರಲ್ಲೂ ಸೈ! ಈತನಿಗೆ ಅಪ್ಪ ರಾಕೇಶ್ ರೋಶನ್ ಕಣ್ಣು ಬಳುವಳಿಯಾಗಿ ಬಂದಿದೆ .ಜೊತೆಗೆ ಪ್ರತಿಭೆಯನ್ನು ಅಪ್ಪನಿಂದ ಬಳುವಳಿಯಾಗಿ ಪಡೆದಿದ್ದಾನೆ.
ಅಭಿಷೇಕ್ ಬಚ್ಚನ್ :-ಭಾರತೀಯ ಚಿತ್ರ ರಂಗದ ಅದ್ವಿತೀಯ ಕಾಲಾವಿದರಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಾದುರಿ ಪ್ರೀತಿಯ ಮಗ ಅಭಿಷೇಕ್ ಪಕ್ಕ ಅಪ್ಪ ಅಮಿತಾಬ್ ಥರಾನೇ ಇರೋದು.ಅಪ್ಪ ಬಿಗ್ ಬಿ ಯ ರೀತಿ ಗೆಲ್ಲುವುದಕ್ಕೆ ಸಾಧ್ಯ ಆಗಿಲ್ಲ .ಆದರು ಬಾಲಿವುಡ್ ನಲ್ಲಿ ಈತ ಒಂದೊಳ್ಳೆಯ ಸ್ಥಾನ ಪಡದೆ ಪಡೀತಾನೆ ಅನ್ನುವ ಭರವಸೆ ಸಿನಿ ಪಂಡಿತರಿಗಿದೆ !
ಸನ್ನಿ ಡಿಯೋಲ್ :- ಹೋಲಿಕೆ ಅಂದ್ರೆ ಹೀಗಿರಬೇಕು.ಈ ರೀತಿಯ ರಿಸೆಂಬಲ್ ಯಾವ ಮಕ್ಕಳು ತಮ್ಮ ತಾಯ್ತಂದೆಗಳಿಂದ ಪಡೆದೇ ಇಲ್ಲ ಅಂತ ಹೇಳ ಬಹುದು.ರೂಪದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲೂ ಸಹ ಅಪ್ಪನಂತೆ !!
Subscribe to:
Posts (Atom)