Tuesday, 20 April 2010

ಶೋಷಣೆ


ಬೇಸಿಗೆಯ ಪ್ರಭಾವ ನಮ್ಮ ಮೇಲೆ ಮಾತ್ರವಲ್ಲ ಎಲ್ಲಾ ಕಡೆಯೂ ತನ್ನ ಪ್ರಭಾವ ತೋರುತ್ತಿದೆ.  ನಾವು ಮನುಷ್ಯರು ಬಾಯ್ಬಿಟ್ಟು ಕೇಳಿ ನಮ್ಮ ಬಾಯಾರಿಕೆ ಹಸಿವೆಯನ್ನು ತಣಿಸಿ ಕೊಳ್ಳುತ್ತೇವೆ .ಆದರೆ ಮೂಕ   ಪ್ರಾಣಿ -ಪಕ್ಷಿಗಳು? ಅವುಗಳ ಬಗ್ಗೆ ಬುದ್ಧಿವಂತ ಪ್ರಾಣಿ ಅನ್ನಿಸಿಕೊಂಡ ನಾವೆ ಅವುಗಳ ಬಗ್ಗೆ ಕಾಳಜಿ ವಹಿಸ ಬೇಕು.ಇತ್ತೀಚೆಗಂತೂ ಬಿಸಿಲ ಝಳದ ಪ್ರಭಾವದಿಂದ ಅನೇಕ ಪಕ್ಷಿಗಳು ಸಾಯುತ್ತಿದೆ. ಟೆರೆಸ್ ಮೇಲೆ ,ಮರದ ಬುದಗಳಲ್ಲಿ ಬಾಯಾರಿಕೆ ತಡಿಯಲಾಗದೆ ಮರಣಕ್ಕೆ ಮೊರೆಹೊಗುತ್ತಿದೆ. ಇಂತಹ ಪರಿಸ್ಥಿತಿ ತಡೆಗಟ್ಟಲು ನಾವು ಮಾಡ ಬೇಕಾದುದು ಇಷ್ಟೆ. ಕಿಟಕಿ,ಟೆರ್ರೆಸ್ ಒಟ್ಟಿನಲ್ಲಿ ಹಕ್ಕಿಗಳು ನಿರಮ್ಮಳವಾಗಿ ಬರುವ ಸ್ಥಳಗಳಲ್ಲಿ ಪುಟ್ಟ ಪಾತ್ರೆಯಲ್ಲಿ ನೀರನ್ನು ಇಡ ಬೇಕು..ಹಾಗೆ ಮಾಡುವುದರಿಂದ ಮುಗ್ಧ ಪ್ರಾಣಿ- ಪಕ್ಷಿಗಳಿಗೆ ಜೀವದಾನ ಮಾಡಿದಂತೆ ಆಗುತ್ತದೆ..
@@ ಆಸ್ಟ್ರೇಲಿಯ ದೇಶದಲ್ಲಿ ಕೋಲಾ ಅನ್ನುವ ಪ್ರಾಣಿ ಹೆಚ್ಚು ಪ್ರಸಿದ್ಧಿ. ಅದು ತನ್ನಷ್ಟಕ್ಕೆ ತಾನು ಬದುಕುವ ಸಂಕೋಚ ಪ್ರಾಣಿ.ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮಖೇಡಿ ಪ್ರಾಣಿ. ಇತ್ತೀಚೆಗೆ ಆಸ್ಟ್ರೇಲಿಯ ದಲ್ಲಿ  ಅತಿ ಹೆಚ್ಚು  ಬಿಸಿ ಏರಿತು.ಆಗ ಈ ಸಂಕೋಚದ ಪ್ರಾಣಿ ರಸ್ತೆಗೆ ಬಂದು ನೀರನ್ನು ಬೇಡಿ ಬದುಕಿತು.ಇಂತಹ ಘಟನೆಯನ್ನು ನಾವು   ಕಂಡೆ ಇಲ್ಲ ಅಂತಾರೆ ಸ್ಥಳೀಯರು  ..! ನಮ್ಮ ಹುಂಬತನದಿಂದ ಆಗಿರುವ ಗ್ರೀನ್ ಹೌಸ್ ಎಫೆಕ್ಟ್ ಗೇ ಉಳಿದ ಮುಗ್ಧಪ್ರಾಣಿಗಳು ಬಲಿಯಾಗುತ್ತಿವೆಯಲ್ಲ ಅದೇ ನೋವಿನ ಸಂಗತಿ. ಭೂಮ್ತಾಯಿ ಮೇಲೆ ಇಂತಹ ಶೋಷಣೆ  ನಿಲ್ಲುವುದು ಯಾವಾಗ? ಪ್ರಾಣಿ- ಪಕ್ಷಿ-ಸಸ್ಯಗಳ  ಬದುಕು ನಿರಾಳವಾಗುವುದು ಯಾವಾಗ? ನಾವೆ ಯೋಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯ ಬೇಕು...! 

Followers