Thursday 29 October 2009

ಸೇಮ್ ಸೇಮ್ ರಿಸೆಂಬಲ್ !


ತಂದೆ-ತಾಯಿಯ ಹೋಲಿಕೆ ಮಕ್ಕಳಲ್ಲಿ ಬರುವುದು ಸಾಮಾನ್ಯ ಸಂಗತಿ.ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಷಯಕ್ಕೆ ಬಂದರೆ ಅವರ ಅಭಿಮಾನಿಗಳ ಸಂತೋಷ ಹೇಳತೀರದ್ದಾಗುತ್ತದೆ . ಸ್ಯಾಂಡಲ್ ವುಡ್ಡಿನಲ್ಲಿ ಅಣ್ಣಾವರನ್ನು ಶಿವರಾಜ್ ರಾಜ್ ಕುಮಾರ್ ಹೋಲ್ತಾರೆ,ಅದೇ ರೀತಿ ಗಿರಿಜಾ ಲೋಕೇಶ್ ಥರ ಸೃಜನ್,ವಿನೋದ್ ಪ್ರಭಾಕರ್ ಥೇಟ್ ಪ್ರಭಾಕರ್ ರೀತಿಯಲ್ಲಿ ಇದ್ದಾರೆ,ದ್ವಾರಕೀಶ್ ಮಕ್ಕಳ ಬಗ್ಗೆ ಹೇಳುವಷ್ಟೇ ಇಲ್ಲ...! ಈ ಸಂಗತಿಯನ್ನು ಮುಂದಿಟ್ಟುಕೊಂಡು ಬಾಲಿವುಡ್ ಕಡೆ ಕಣ್ ಹಾಯಿಸಿದರೆ ಇಂತಹ ಅನೇಕ ನಮೂನೆಗಳು ಕಣ್ಣಿಗೆ ಬೀಳುತ್ತದೆ.
ಶ್ರುತಿ ಹಾಸನ್ :- ಪಂಚ ಭಾಷಾ ತಾರೆ ಕಮಲ ಹಾಸನ್ ಹಾಗೂ ಮಾದಕ ನಟಿ ಸಾರಿಕ ಅವರ ಕರುಳ ಬಳ್ಳಿ ಶ್ರುತಿ ಹಾಸನ್.ಥೇಟ್ ಅಮ್ಮನ ಹಾಗೆ ಇರುವ ಈ ಸುಂದರಿ ಲಕ್ ಸಿನೆಮಾದಲ್ಲಿ ನಟಿಸಿ ಸೋತು ಸೊಟ್ಟ ಮುಖ ಹಾಕಿ ಕೊಂಡು ಬಂದಾಗಿದೆ.ಈಗ ತೆಲುಗು ಹಾಗೂ ತಮಿಳು ಮಂದಿ ಈ ಇಳವರಸಿಯನ್ನು ಬೆಳೆಸಲು ಪರದಾಡ್ತಾ ಇದ್ದಾರೆ.ಈ ಮುದ್ದು ಹುಡುಗಿ ಸಿನಿ ಕ್ಷೇತ್ರದಲ್ಲಿ ತಾಯಿಯಂತೆ ಗ್ಲಾಮರ್ ಬೊಂಬೆಯಾಗಿ ಉಳಿತಾಳೋ ಇಲ್ಲ... ತಂದೆಯಂತೆ ಅಪ್ಪಟ ಪ್ರತಿಭೆಯಾಗಿ ವೀಕ್ಷಕರ ಮನ ಗೆಲ್ತಾಲೋ? ಕಾಲವೇ ಹೇಳುತ್ತೆ!!!
ರಣಬೀರ್ ಕಪೂರ್ :- ರಾಜ್ ಕಪೂರ್ ಖಾಂದಾನ್ ಕುಡಿ ಈ ಚಲುವಾಂತ ಚನ್ನಿಗ ರಿಷಿಕಪೂರ್ ಮತ್ತು ನೀತುಸಿಂಗ್ ಒಡಲ ಬಳ್ಳಿ.ಈ ನಟ ಥೇಟ್ ಅಮ್ಮನ ಥರ ಇದ್ದಾನೆ ಸಧ್ಯ ! ಸಾವರಿಯ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ತಕ್ಷಣ ಗೆಲುವು ಸಿಕ್ಕಲಿಲ್ಲ.ಈಗಿನ ಪರಿಸ್ಥಿತಿಯಲ್ಲಿ ಆತ ಗೆಲ್ಲುವ ಕುದುರೆಯಾಗಿ ನಿರ್ಮಾಪಕರಲ್ಲಿ ಭರವಸೆ ಹುಟ್ಟಿಸ್ತಾ ಇದ್ದಾನೆ.
ಇಷ ಡಿಯೋಲ್ :- ಒನ್ಸ್ ಅಪಾನ್ಎ ಟೈಮ್ ಪಡ್ಡೆ ಹೈಕಳ ಡ್ರೀಂ ಗರ್ಲ್ ಆಗಿದ್ದ ಹೇಮಮಾಲಿನಿ ಮಗಳು ಇಷ,ಅಮ್ಮ ತದ್ರೂಪು.ಆದರೆ ಹೇಮಳಂತೆ ಪ್ರತಿಭೆಯಿಂದ ಹೆಸರು ಮಾಡಲಿಲ್ಲ ,ತನ್ನ ಬಿಚ್ಚು ಸ್ವಭಾವದಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದಳು ಈ ಚಲುವೆ.
ರೈಮ ಸೇನ್ :- ಅಮ್ಮ ಮೂನ್ಮೂನ್ ಸೇನ್ ಅಮ್ಮೋ ಅನ್ನುವಷ್ಟು ಗ್ಲಾಮರಸ್,ಇನ್ನು ಆಕೆಯ ಮಗಳು ಪ್ರೇಕ್ಷಕರ ಕಥೆ ಬ್ಯಾ...ಡಾ.....!ಭಾರತೀಯ ಚಿತ್ರ ರಂಗದಲ್ಲಿರುವ ಅನೇಕ ವುಡ್ ಗಳ ವೀಕ್ಷಕರ ಗಮನ ಸೆಳೆದಿರುವ ರೈಮ ರೂಪದಲ್ಲಿ ಅಮ್ಮನ ಹೋಲಿಕೆ ಪಡೆದಿದ್ದಾಳೆ.
ಸೋಹ ಅಲಿಖಾನ್ :- ಪಟೌಡಿ ಖಾಂದಾನ್ ಕೂಸು.ಅಪ್ಪನ ಹಾಗೆ ಹುಟ್ಟಿಲ್ಲ,ಥೇಟ್ ಅಮ್ಮಿಜಾನ್ ಶರ್ಮಿಳಾ ಠಾಕೂರ್ ಥರ ಹುಟ್ಟಿರೋದು.ನಟನೆ ಸಹ ಓಕೆನೆ!.ಆದರೆ ಹೇಳಿಕೊಳ್ಳುವಂತಹ ಅಚಿವ್ ಮೆಂಟ್ ಆಗಿಲ್ಲ.
ಹೃತಿಕ್ ರೋಶನ್ :- ಗ್ರೀಕ್ ದೇವತೆಯ೦ತಹ ಮುಖ ಈತನ ವಿಶೇಷತೆ.ರೂಪ ನಟನೆ ಎರಡರಲ್ಲೂ ಸೈ! ಈತನಿಗೆ ಅಪ್ಪ ರಾಕೇಶ್ ರೋಶನ್ ಕಣ್ಣು ಬಳುವಳಿಯಾಗಿ ಬಂದಿದೆ .ಜೊತೆಗೆ ಪ್ರತಿಭೆಯನ್ನು ಅಪ್ಪನಿಂದ ಬಳುವಳಿಯಾಗಿ ಪಡೆದಿದ್ದಾನೆ.
ಅಭಿಷೇಕ್ ಬಚ್ಚನ್ :-ಭಾರತೀಯ ಚಿತ್ರ ರಂಗದ ಅದ್ವಿತೀಯ ಕಾಲಾವಿದರಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಾದುರಿ ಪ್ರೀತಿಯ ಮಗ ಅಭಿಷೇಕ್ ಪಕ್ಕ ಅಪ್ಪ ಅಮಿತಾಬ್ ಥರಾನೇ ಇರೋದು.ಅಪ್ಪ ಬಿಗ್ ಬಿ ಯ ರೀತಿ ಗೆಲ್ಲುವುದಕ್ಕೆ ಸಾಧ್ಯ ಆಗಿಲ್ಲ .ಆದರು ಬಾಲಿವುಡ್ ನಲ್ಲಿ ಈತ ಒಂದೊಳ್ಳೆಯ ಸ್ಥಾನ ಪಡದೆ ಪಡೀತಾನೆ ಅನ್ನುವ ಭರವಸೆ ಸಿನಿ ಪಂಡಿತರಿಗಿದೆ !
ಸನ್ನಿ ಡಿಯೋಲ್ :- ಹೋಲಿಕೆ ಅಂದ್ರೆ ಹೀಗಿರಬೇಕು.ಈ ರೀತಿಯ ರಿಸೆಂಬಲ್ ಯಾವ ಮಕ್ಕಳು ತಮ್ಮ ತಾಯ್ತಂದೆಗಳಿಂದ ಪಡೆದೇ ಇಲ್ಲ ಅಂತ ಹೇಳ ಬಹುದು.ರೂಪದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲೂ ಸಹ ಅಪ್ಪನಂತೆ !!

ಸಹಾಯ -ಒಳಿತು

1 -) ಸಿಯಾಟಿಲ್ ವಿಕಲಚೇತನರ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡೆಯಲ್ಲಿ ಒಂಬತ್ತು ಮಂದಿ ನಡುವೆ ಓಟದ ಸ್ಫರ್ಧೆ ನಡೀತಾ ಇತ್ತು.ಓಟದ ನಡುವೆ ಒಬ್ಬ ಸ್ಪರ್ಧಿ ಕೆಳಕ್ಕೆ ಬಿದ್ದೆ ಬಿಟ್ಟ.ಉಳಿದವರು ಓಡುವತ್ತ ತಮ್ಮ ಗಮನ ನೆಟ್ಟಿದ್ದರು ಒಬ್ಬನನ್ನು ಹೊರೆತುಪಡಿಸಿ.ಆತ ಬಿದ್ದವನ ಬಳಿ ಬಂದು ಎಲ್ಲಿ ನೋವಾಗ್ತಿದೆ ಪುಟ್ಟ ಅಂತ ಕೇಳಿದ ,ಆಗ ಆ ಹುಡುಗ ಅಳುತ್ತ ತೋರಿಸಿದ.ಆಗ ಆತ ನಿಧಾನವಾಗಿ ಅವನನ್ನು ಮೇಲೆತ್ತಿ ಕೈ ಹಿಡಿದು ನಡೆಸಿಕೊಂಡು ಬಂದ.ಇಡೀ ಸ್ಟೇಡಿಯಂ ನಲ್ಲಿದ್ದ ಅಷ್ಟೂ ಜನ ಎದ್ದು ನಿಂತು ಚಪ್ಪಾಳೆ ತಟ್ಟಿತು ಈ ದೃಶ್ಯ ಕಂಡು ! ಆನಂತರ ಕೆಲವರು ಆಟದಲ್ಲಿ ನೀನು ಮೊದಲಿದ್ದೆ ,ಅದ್ಯಾಕೆ ನೀನು ಗೆಲ್ಲುವುದು ಬಿಟ್ಟು ಅವನನ್ನು ರಕ್ಷಿಸಿದೆ ? ಎಂದು ಕೇಳಿದರು.ಆಗ ಆ ಸ್ಪರ್ಧಿ ಆತ ಏಳಲಾಗದೆ ಅಳುತ್ತ ಇದ್ದ.ಆಗ ನಂಗೆ ಈ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಒಳಿತು ಅಂತ ಅನ್ನಿಸಿತು,ಆದಕಾರಣ ಆರೀತಿ ಮಾಡಿದೆ ಅಂತ ಹೇಳಿದ.ಆಗ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಅತಿಥಿಯಾಗಿ ಬಂದಿದ್ದ ಆ ರಾಜ್ಯದ ಗವರ್ನರ್ 'ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದ ವ್ಯಕ್ತಿಗಿಂತ ನಿಜವಾಗಿಯು ಮಾನವತೆಯಿಂದ ಗೆದ್ದಿರುವ ವ್ಯಕ್ತಿತ್ವದ ಬಗ್ಗೆ ನನಗೆ ಹೆಚ್ಚು ಗೌರವ ಉಂಟಾಗಿದೆ 'ಎಂದು ಹೇಳಿದರಂತೆ.
2 -) ಅಮೆರಿಕದ ಒಗ್ದೆನ್ ಹೈ ಸ್ಕೂಲ್ನ ಕೆಲವು ವಿದ್ಯಾರ್ಥಿಗಳು ಹೋಂ ಬೋಲ್ಟ್ ಶಾಲೆಯಲ್ಲಿ ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಬಂದಿದ್ದರು .ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಶಾಲೆಯಲ್ಲೂ ಈ ಸ್ಪರ್ಧೆ ಇದ್ದೆ ಇರುತ್ತಿತ್ತು.ಹೋಂ ಬೋಲ್ಟ್ ಸ್ಕೂಲ್ ಕೋಚ್ ಒಗ್ದೆನ್ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದ ಬಳಿಕ 'ನಮ್ಮಲ್ಲಿ ಈ ಏಳು ಕುಸ್ತಿಪಟುಗಳಲ್ಲಿ ಭಾಗವಹಿಸುವವರಲ್ಲಿ ಬ್ರೆಂಟ್ ಅನ್ನುವ ವಿದ್ಯಾರ್ಥಿ ಡೌನ್ ಸಿಂಡ್ರೋಮ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾನೆ .ಆತನಿಗೆ ಕುಸ್ತಿಯಲ್ಲಿ ನೈಪುಣ್ಯತೆ ಇಲ್ಲ,ಆದರೆ ಭಾಗವಹಿಸಬೇಕೆನ್ನುವ ಉತ್ಸಾಹಕ್ಕೆ ಕೊರತೆಯಿಲ್ಲ.ನಿಮ್ಮಲ್ಲಿ ಯಾರು ಬೇಕಾದರೂ ಅವನನ್ನು ಕ್ಷಣದಲ್ಲಿ ಸೋಲಿಸ ಬಲ್ಲಿರಿ .ತಾನು ಸೋಲ್ ತೀನಿ ಅಂತ ತಿಳಿದಿದ್ದರೂ ಆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ನಿಮ್ಮಲ್ಲಿ ಯಾರು ಮೊದಲು ಕಣಕ್ಕೆ ಇಳೀತಿರಿ ?' ಎಂದು ಕೇಳಿದ.ಕೆಲಕ್ಷಣ ನಿಶಬ್ಧ.ಬಳಿಕ ಒಗ್ದೆನ್ ಟೀಂ ನಿಂದ ಒಂದು ಧ್ವನಿ ಕೇಳಿ ಬಂತು ' ನಾನು ಸಿದ್ಧ'ಆ ಟೀಂ ಕೆನ್ ಬ್ರುಲೆಂಡ್ ನಗುತ್ತ ಮುಂದೆ ಬಂದ.ಬ್ರೆಂಟ್ ಜೊತೆ ಆತ ಕುಸ್ತಿ ಆರಂಭ ಮಾಡಿದ.ಕ್ಷಣದಲ್ಲಿ ಈ ಕಾಳಗ ಮುಗಿದು ಹೋಗ್ತಾ ಇತ್ತು,ಆದರೆ ಹಾಗಾಗಲಿಲ್ಲ.ಆರು ನಿಮಿಷಗಳ ಕಾಲ ಈ ಸ್ಪರ್ಧೆ ನಡೆಯಿತು.ಅಷ್ಟೇ ಅಲ್ಲದೆ ಬ್ರೆಂಟ್ ಗೆಲ್ಲುವಷ್ಟು ಪಾಯಿಂಟ್ಗಳು ಬರುವಂತೆ ಮಾಡಿ ಕೆನ್ ಸೋತು ಹೋದ.ನಂತರ ಕೆನ್ಗೆ ನಿಯಮದ ಅನ್ವಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಯ್ತು.' ಗೆಲುವು ನನ್ನದಾಯ್ತ?' ಆಶ್ಚರ್ಯ ತಡಿಯಲಾಗದೆ ಕೇಳಿದ ಬ್ರೆಂಟ್.ಹೌದು ಅಂತ ಹೇಳಿದ ಕೆನ್ ನಗುತ್ತ.ಜೊತೆಗೆ ಆತ ಗೆದ್ದ ಸೂಚಕವಾಗಿ ಬ್ರೆಂಟ್ ಬಲಗೈ ಮೇಲೆತ್ತಿದ.ಆ ಸ್ಪರ್ಧೆ ವೀಕ್ಷಣೆಗೆ ಬಂದಿದ್ದದ ಆರುಸಾವಿರ ಮಂದಿ ಎದ್ದು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
3 -) ಹಾರ್ಬರ್ಟ್ ಹೂಪರ್ ಸುಮಾರು ನಲವತ್ತೇಳು ವರ್ಷಗಳ ಕಾಲ ಅಮೆರಿಕದಲ್ಲಿ ಅಧ್ಯಕ್ಷರಾಗಿ-ವಿವಿಧ ಪದವಿಗಳಲ್ಲಿ ಕೆಲಸ ಮಾಡ ಬೇಕಾಗಿ ಬಂದರೂ ಆಡಳಿತ ನಡೆಸಿದರು.ಆದರೆ ಸರ್ಕಾರ ನೀಡಿದ ಸಂಬಳವನ್ನು ಆತ ತನಗಾಗಿ ಬಳಸದೆ ಬಡವರು,ನಿರ್ಗತಿಕರ ಸೇವೆಗಾಗಿ ಮುಡಿಪಾಗಿಟ್ಟ ಸಂಸ್ಥೆಗಳಿಗೆ ನೀಡಿದರು.ಮುಖ್ಯವಾಗಿ ರಾಜಕೀಯಕ್ಕೆ ಬರುವ ಮುಂಚಿನಿದಲು ಆತ ಶ್ರಿಮಂತನಾಗಿದ್ದ.
4 -) ಕೃತಜ್ಞತೆ ಕೇವಲ ಭಾವನೆ ಮಾತ್ರವಲ್ಲ ಅದೊಂದು ಕೃತಿ ಅಂತ ಹೇಳ್ತಾರೆ ತಿಳಿದೋರು.ಹಾಲಿವುಡ್ ಹೀರೋ ರಾಯ್ ರೋಗರ್ಸ್ ಇದನ್ನು ಸೂಕ್ತ ಪಾಲಿಸಿದ್ದಾರೆ .ಆತ ಹೀರೋ ಆಗಿ ನಟಿಸಿದ ಮೊದಲ ಚಿತ್ರ ' ಡಿ ವರ್ಲ್ಡ್ ಹೋಂ ಸೈಡ್'(1935), ಮತ್ತೊ ಮೂರು ಚಿತ್ರಗಳು ಬಿಡುಗಡೆಯಾದ ಬಳಿಕ ಆತನ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳಾದ ಅನೇಕರು ರಾಯ್ ಗೆ ಪತ್ರಗಳನ್ನು ಬರೆಯುತ್ತಿದ್ದರು.ಆದರೆ ರಾಯ್ಸ್ಗೆ ದೊರೆಯುತ್ತಿದ್ದ ಹಣ ಅಷ್ಟು ಅಭಿಮಾನಿಗಳಿಗೆ ಉತ್ತರಿಸಲು ಬೇಕಾದ ಅಂಚೆ ವೆಚ್ಚಭರಿಸಲು ಅಸಮರ್ಥವಾಗಿತ್ತು.ಆಸಂದರ್ಭದಲ್ಲಿ ಆತನಿಗೆ ನಟನೆ ಮಾಡಲು ಅವಕಾಶ ಕೊಟ್ಟ ರಿಪಬ್ಲಿಕ್ ಪಿಕ್ಚರ್ಸ್ ಮುಖ್ಯಸ್ಥರನ್ನು ರಾಯ್ ಭೇಟಿ ಮಾಡಿ ಅಭಿಮಾನಿಗಳಿಗೆ ಪತ್ರಿಸಲು ತನಗೆ ಸ್ವಲ್ಪ ಧನಸಹಾಯ ಮಾಡ ಬೇಕೆಂದು ಕೇಳಿದಋ ,ಆದರೆ ಸಂಸ್ಥೆ ಇದಕ್ಕೆ ಸಮ್ಮತಿಸಲಿಲ್ಲ.ಜೊತೆ ಇಂತಹ ವಿಷಯಗಳನ್ನು ಗಂಭಿರವಾಗಿ ಪರಿಗಣಿಸ ಬೇಕಿಲ್ಲ ಎಂದು ಬಿಟ್ಟಿ ಸಲಹೆ ನೀಡಿತು.ಆದರೆ ರಾಯ್ ಸುಮ್ಮನಾಗದೆ ,ತನ್ನ ಸ್ವಲ್ಪ ಕಾಲವನ್ನು ವಯುಕ್ತಿಕ ಪ್ರದರ್ಶನ ನೀಡಲು ಮೀಸಲಾಗಿಟ್ಟು ಅದರಿಂದ ಬಂದ ಹಣವನ್ನು ಅಭಿಮಾನಿಗಳಿಗೆ ಪತ್ರಿಸಲೆಂದು ಮುಡಿಪಾಗಿಟ್ಟರು..ಆ ಕೆಲಸ ಮಾಡಲು ಮೂರೂ ಜನರಿಗೆ ಉದ್ಯೋಗನೀಡಿದರಂತೆ.

Saturday 17 October 2009

ದೀಪಗಳ ಹಬ್ಬ


ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಹಬ್ಬ ದೀಪಾವಳಿ.ಇದರ ಬಗ್ಗೆ ಹೇಳಿದಷ್ಟು ಮುಗಿಯದು ಅಂದು ವಿಷ್ಣು ಮಹಾಲಕ್ಷ್ಮಿಯನ್ನು ಮದುವೆಯಾದ ದಿನವೆಂದು ಪುರಾಣಗಳಲ್ಲಿ ತಿಳಿಸಿದೆ.ದೀಪಾವಳಿಯ ಬಗ್ಗೆ ಇರುವ ಅನೇಕ ವಿಶೇಷತೆಗಳುಹೀಗಿವೆ.
ಮಹಾ ಲಕ್ಷ್ಮಿಯ ಜನ್ಮದಿನ:- ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಕಾರ್ತಿಕ ಮಾಸದ ಆರಂಭದಲ್ಲಿ ಬರುವ ಅಮಾವಾಸ್ಯೆಯ ದಿನ ಜನ್ಮಿಸಿದಲೆಂದು ಪುರಾಣಗಳಲ್ಲಿ ಉಲ್ಲೇಖವಿದೆ.ಈ ಕಾರಣದಿಂದ ಭಕ್ತರು ತಾಯಿಯ ಜನ್ಮ ದಿನ ಆಚರಿಸುತ್ತಾರೆ.
ವಿಷ್ಣು ಬಿಡುಗಡೆ ಮಾಡಿದ್ದು:- ಬಲಿ ಚಕ್ರವರ್ತಿಯ ಸೆರೆಯಲ್ಲಿದ್ದ ಲಕ್ಷ್ಮಿಯನ್ನು ಮಹಾ ವಿಷ್ಣು ವಾಮನ ಅವತಾರ ತಾಳಿ ಬಿಡುಗಡೆ ಮಾಡಿದ ಎಂದು ಪುರಾಣಗಳಲ್ಲಿ ತಿಳಿಸಿದೆ.ಈ ಕಾರಣದಿಂದಲೂ ಹಬ್ಬ ತುಂಬಾ ವಿಶೇಷತೆ ಪಡೆದು ಕೊಂಡಿದೆ.( ಐದನೆಯ ಅವತಾರ).
ರಾಮಾಯಣದಲ್ಲಿ:- ರಾವಣಸುರನನ್ನು ವಧಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಜನರು ಸಂಭ್ರಮದ ದೀಪಾವಳಿಯನ್ನು ಆಚರಿಸಿದರಂತೆ.
ನರಕಾಸುರ
ವಧೆ :-ಪ್ರಗ್ಜೋತೀ ಪುರವನ್ನು ಆಳುತ್ತಿದ್ದ ನರಕಾಸುರ ಹದಿನಾರು ಸಾವಿರ ಹೆಣ್ಣು ಮಕ್ಕಳನ್ನು ಸೇರೆಯಲ್ಲಿತೂ ಕೊಂಡಿದ್ದ.ಭೂಮಿಯ ಮಗನಾದ ಈತನ ಉಪಟಳ ಕಡಿಮೆ ಮಾಡಲು ಶ್ರೀ ಕೃಷ್ಣ ತನ್ನ ಮೆಚ್ಚಿನ ಮಡದಿ ಸತ್ಯಭಾಮಳೊಂದಿಗೆ ಯುದ್ಧಕ್ಕೆ ಹೊರಟ.(ಈ ಯುದ್ಧ ದಲ್ಲಿ ಸತ್ಯಭಾಮ ನರಕಾಸುರನ ವಧೆ ಮಾಡಿದಳೆಂದು ಕೆಲವು ಪುರಾಣಗಳು ಹೇಳುತ್ತವೆ.ಅಂದ್ರೆ ಈಕೆ ಭೂಮಿತಾಯಿಯ ಅವತಾರವಾಗಿದ್ದು ತನ್ನ ದುಷ್ಟ ಮಗನನ್ನು ಸಾಯಿಸಿ ಭೂಮಿಯನ್ನು ರಕ್ಷಿಸಿದಳಂತೆ)
ಪಾಂಡವರ ಶುಭದಿನ:- ಹನ್ನೆರಡು ವರ್ಷಗಳಕಾಲ ವನವಾಸ ಹಾಗೂ ಅಜ್ಞಾತವಾಸ ಮಾಡಿಮುಗಿಸಿದ ನಂತರ ವಿಜಯದ ಸಂತೋಷವನ್ನು ದೀಪಗಳನ್ನು ಹಚ್ಚಿ ಅನುಭವಿಸಿದರಂತೆ.ಅಂದು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನವಾಗಿತ್ತಂತೆ!
ಇತಿಹಾಸ :-ಇತಿಹಾಸದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದೊರೆ ವಿಕ್ರಮಾದಿತ್ಯ.ಆತ ನಿರ್ವಾಣ ಹೊಂದಿದ ದಿನ ದೀಪಾವಳಿ.ಈ ಮೂಲಕ ದೀಪಾವಳಿ ಇತಿಹಾಸ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ.
ಆರ್ಯ ಸಮಾಜ :- ಮಹರ್ಷಿ ದಯಾನಂದ ನಿರ್ವಾಣ ಪಡೆದ ದಿನ
ಜೈನರಿಗೂ ವಿಶೇಷ ದಿನ :-ಜೈನಧರ್ಮ ಸ್ಥಾಪಕ ಮಹಾವೀರ ತೀರ್ಥಂಕರ ನಿರ್ವಾಣ ಹೊಂದಿದ ದಿನ ದೀಪಾವಳಿ.
ದೀಪಾವಳಿ ಸಿಖ್ಖರ ವಿಶೇಷ ದಿನ :- ಸಿಖ್ಖರ ಮೂರನೆಯ ಗುರು ಆದ ಗುರು ಅಮರ್ ದಾಸ್ ದೀಪಾವಳಿಯನ್ನು ಕೆಂಪು ಪತ್ರದ ದಿನ ಎಂದು ಕರೆದರು..1577 ರಂದು ಅಮೃತಸರದಲ್ಲಿರುವ ಗೋಲ್ಡನ್ ಗೆ ಟೆಂಪಲ್ ಅಡಿ ಪಾಯ ಹಾಕಿದ ದಿನ.

Wednesday 14 October 2009

ಪ್ರಕೃತಿಯ ಆರಾಧಕರು

ಪ್ರಪಂಚದಲ್ಲಿ ಅನೇಕಾನೇಕ ಧರ್ಮಗಳಿವೆ,ಪಂಗಡಗಳಿವೆ.ಭಗವಂತನ ವಿಗ್ರಹಗಳಿಗೆ ,ಫೋಟೋಗಳಿಗೆ ಓಜೆ ಸಲ್ಲಿಸುವವರು ಇಲ್ಲಡಿಲ,ಅದೇ ರೀತಿ ವಿಗ್ರಹಗಳು ಇಲ್ಲದೆ ಪೂಜೆ ಮಾಡುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಹೀಗೆ ಬಗೆ ಬಗೆಯ ಧರ್ಮಗಳು,ವಿಧವಿಧವಾದ ಆರಾಧನೆಗಳು ಇವೆ.ಆದರೆ ಗುಜರಾತಿನಲ್ಲಿ ನೆಲೆಸಿರುವ ಕೊಕ್ನೋ ಪಂಗಡಕ್ಕೆ ಸೇರಿರುವವರು ದೇವನನ್ನು ಆರಾಧಿಸುವ ವಿಧಾನವೇ ಭಿನ್ನವಾದುದು.ಭಗವಂತನನ್ನು ನಂಬುವ ಇವರು ವಿಗ್ರಹಾಕರಾಧನೆ ಮಾಡುವುದಿಲ್ಲ .ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುವ ಈ ಜನಾಂಗ ಪ್ರಕೃತಿಯ ಆರಾಧಕರು.ಅದೇ ರೀತಿ ಕಲ್ಲನ್ನು ಕೆತ್ತಿ ಅದಕ್ಕೆ ಭಿಲ್ ಎನ್ನುವ ಹೆಸರಲ್ಲಿ ಪೂಜೆ ಸಲ್ಲಿಸುತ್ತಾರೆ.ಆದರೆ ಆ ಕಲ್ಲಿಗೆ ವಿಶಿಷ್ಟವಾದ ರೂಪ ಇರುವುದಿಲ್ಲ.ಇವರ ಪೂಜೆಯ ,ಹಬ್ಬದ ಕೈಂಕರ್ಯ ನೆರವೇರಿಸಲು ಒಬ್ಬ ವ್ಯಕ್ತಿ ನಿಯೋಜಿತವಾಗಿರುತ್ತಾನೆ.ಆತನನ್ನು ಭಗತ್ ಎಂದು ಕರೆಯುತ್ತಾರೆ.ಈತ ಮಂತ್ರಗಳಿಂದ ಪೂಜೆ ಸಲ್ಲಿಸುವುದಷ್ಟೇ ಅಲ್ಲದೆ,ಸತ್ತವರ ಕರ್ಮಗಳನ್ನು ಮಾಡುತ್ತಾನೆ.ಭಗತ್ ಹೇಳಿದ್ದು ಈ ಕೊಕ್ನೋ ಪಂಗಡದವರಿಗೆ ವೇದವಾಕ್ಯ!ಮಗು ಹುಟ್ಟಿದಾಗ ದಿನ,ಗಳಿಗೆ,ಹೊಂದುವಂತೆ ಆ ಮಗುವಿಗೆ ಹೆಸರು ಸಜೆಸ್ಟ್ ಮಾಡುವ ಕೆಲಸವೂ ಭಗತ್ಗೆ ಸೇರಿರುತ್ತದೆ.ಮದುವೆ ದೊಡ್ಡವರ ನಿರ್ಣಯದ ಅನ್ವಯ ನೆರವೇರುತ್ತದೆ.ಇವರಲ್ಲಿ ಪ್ರೀತಿ,ಪ್ರೇಮ ಲವ್ವು-ಪವ್ವು ಇವುಗಳಿಗೆ ಜಾಗವೇ ಇಲ್ಲ.ಮದುವೆ ದೊಡ್ಡವರ ಸಮ್ಮತಿಯ ನಂತರ ನೆರವೇರುತ್ತದೆ.ಇವರು ಮದುವೆಯನ್ನು ಮುಂಜಾನೆ ಅಥವಾ ಸಂಜೆ ಮಾಡುತ್ತಾರೆ.
ಇನ್ನು ಬದುಕಿನತ್ತಾ ಕಣ್ ಹಾಯಿಸಿದರೆ,ಒಂಟಿ ಜೀವನ ಇವರಿಗೆ ಸಹ್ಯವಾಗದು.ತಮ್ಮವರೊಂದಿಗೆ ಸೇರಿ ಒಟ್ಟಾಗಿ ಬದುಕುತ್ತಾರೆ.ಅಂದರೆ ಒಂದು ಕಡೆ 10-15 ಪುಟ್ಟ ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಾರೆ.
ಗ್ರಾಮಕ್ಕೆ ಒಬ್ಬ ಪಟೇಲ್ ಇರುತ್ತಾನೆ.ಅಲ್ಲಿ ಆತನ ನಿರ್ಣಯವೇ ಅಂತಿಮ.ಮನೆಗಳು ವೃತಾ ಹಾಗೂ ಚೌಕ್ಕಾಕರದಲ್ಲಿ ರಚಿತವಾಗಿ ಇರುತ್ತದೆ.ಮನೆಯನ್ನು ಶುಭ್ರವಾಗಿ ತೊಳೆದು ರಂಗೋಲಿ ಇಡುವ ಪದ್ಧತಿ ಇವರದು.
ಪುರುಷರು ಮೊಣಕಾಲಿನ ವರೆಗೂ ವಸ್ತ್ರಗಳನ್ನು ಧರಿಸುತ್ತಾರೆ.ತಲೆ ಮೇಲೆ ಟೋಪಿ ಇದ್ದೆ ಇರುತ್ತದೆ.ಇನ್ನು ಸ್ತ್ರೀಯರು ಸೀರೆ ಉಟ್ಟರು ಅದು ಭಿನ್ನ ರೀತಿಯಲ್ಲಿ ಇರುತ್ತದೆ.ಮಣಿ,ನಾಣ್ಯಗಳಿಂದ ತಯಾರಿಸಿದ ಆಭರಣಗಳ ಬಳಕೆ ಮಾಡುತ್ತಾರೆ.
ವ\ವ್ಯವಸಾಯ ಇವರ ಜೀವನೋದ್ದಾರ ವೃತ್ತಿ..ಅದಕ್ಕಾಗಿ ಅರಣ್ಯವನ್ನು ಕತ್ತರಿಸಿ,ವ್ಯವಸಾಯಕ್ಕೆ ಯೋಗ್ಯ ಆಗುವಂತೆ ಭೂಮಿಯನ್ನು ಸಿದ್ದಪಡಿಸಿಕೊಳ್ಳುತ್ತಾರೆ.ಅರಣ್ಯದಲ್ಲಿ ದೊರೆಯುವ ಹಣ್ಣು ,ಕಾಯಿ ಹಾಗೂ ಕೆಲ ಬಗೆಯ ಎಲೆಗಳನ್ನು ಸಹ ಸೇವಿಸುತ್ತಾರೆ.ಬೇಟೆಯನ್ನು ಸಹ ಆಡುತ್ತಾರೆ.ಜೇನು ಗೂಡಿನಿಂದ ಜೇನು ಶೇಖರಿಸುವ ವಿದ್ಯೆ ಇವರಿಗೆ ಗೊತ್ತು.ಇವರು ಬಳಕೆ ಮಾಡುವ ಪಾತ್ರೆಗಳು ಮಣ್ಣಿನಿಂದ ಮಾಡಿದ್ದು.ಹಸು,ಮೆಕೆಯಂತಹ ಪ್ರಾಣಿಗಳನ್ನು ಸಹ ಅವರು ಸಾಕುತ್ತಾರೆ.ಕಾಡಿನಲ್ಲಿ ದೊರಕುವ ಗಿಡ ಮೂಲಿಕೆಗಳನ್ನು ಬಳಸಿ ತಮ್ಮ ದೇಹಕ್ಕೆ ಚಿಕಿತ್ಸೆ ಮಾಡಿಕೊಳ್ಳುತ್ತಾರೆ.ತಮ್ಮ ಜೊತೆ ಇರುವವರು ಸತ್ತರು ಆತ್ಮದ ರೂಪದಲ್ಲಿ ತಮ್ಮ ಜೊತೆ ಇರುತ್ತಾರೆ ಎಂದು ನಂಬುವ ಇವರು ಪುನರ್ಜನ್ಮದ ಬಗ್ಗೆಯೂ ಅಪಾರ ನಂಬಿಕೆ ಹೊಂದಿದ್ದಾರೆ.ಕೊಕ್ನೋ ಸಮಾಜದ್ದಲ್ಲಿ ಪುರುಷಾಧಿಪತ್ಯ ಹೆಚ್ಚು.ಸ್ತ್ರೀಯರು ಇಲ್ಲಿ ವಿಧೇಯರಾಗಿ ಇರುತ್ತಾರೆ.ಆದರೆ ಆಧಿನಿಕಥೆಯ ಗಾಳಿ ಈಗ ಈ ಸಮಾಜದಲ್ಲೂ ಕಾಣುತ್ತಿದೆ.ಸೊ ಬದಲಾವಣೆಯತ್ತ ಈ ಸಮಾಜಧಾವಿಸುತ್ತಿದೆ.

Followers