ಪ್ರೀತಿಯ ಗೆಳೆಯ,
ಹೃದಯ ಮಾತು ಕೇಳು ಕೇಳು ನನ್ನ ಚೆಲುವೆ .. ಕೇಳಿದರೆ ನೀನೆ ನಗುವೇ...! ಮಧ್ಯಾನ್ಹದಿಂದ ಒಂದೇ ಸಮನೆ ಈ ಹಾಡು ಜ್ಞಾಪಕಕ್ಕೆ ಬರ್ತಾನೆ ಇದೆ ಕಣೋ. ಶುದ್ಧಾನು ಶುದ್ಧ ಪ್ರೇಮ ಗೀತೆಯನ್ನು ನಾನು ಅಪ್ಪಿತಪ್ಪಿಯೂ ಯಾರ ಮುಂದೆ ಹಾಡು ಹೇಳುವುದಿರಲಿ ಗುನುಗಳು ಉಹುಂ .... ಅಂತಹ ಯಾವ ಕೆಲಸವನ್ನು ಮಾಡಲೇ ಬಾರದು. ವೆರಿ ಡೇಂಜರ್. ಗೊತ್ತಲ್ಲ ಅವಿವಾಹಿತ ಹೆಣ್ಣಿನ ಸಂಕೋಲೆಗಳು ಹೇಗಿರುತ್ತೆ ಅಂತ. ಹೂ ತೋಟದ ಬೇಲಿಯನ್ನು ಹಾಯಲು ಸಾಕಷ್ಟು ದನಗಳು ಕಾದಿರುತ್ತವೆ.. ಆದರೆ ಅದಕ್ಕೆ ಮುಳ್ಳಿನ ಬೇಲಿ ತೊಡಿಸಿದರೆ ಹೂ ಸೇಫ್ ..! ಹಾಗೆ ಅವಿವಾಹಿತ ಹುಡುಗಿ ಕಥೆಯು ಸಹ.. ಎಲ್ಲರ ಗಮನ, ಅನುಕಂಪ, ಅನುಭೂತಿ.. ಯಾವುದನ್ನು ಬೇಕಾದರೂ ಹೇಳ ಬಹುದು. ಆಕೆ ಬದುಕನ್ನು ಉದ್ದಾರ ಮಾಡುವ ಪಣ ತೊಟ್ಟಿರುವ ಸಂಖ್ಯೆ ಹೆಚ್ಚು ಆಕೆಗೆ ಅದು ಬೇಕಾಗಿ ಇರದೇ ಇದ್ದರು ಸಹ... ನೀನು ಸಹ ಒಬ್ಬ ಗಂಡಸು, ಆದರು ನಿನ್ನ ಬಳಿ ಇವೆಲ್ಲ ಯಾಕೆ ಹೇಳಿ ಕೊಳ್ಳುತ್ತಿದ್ದೇನೆ ಎಂಬುದರ ಅರಿವು ನಿನಗಿದೆ... ನಿನ್ನ ಪ್ರೀತಿ ನನಗೆ ಹಿತ ಅನ್ನಿಸಿದ್ದು ಅದಕ್ಕೆ ಕಾರಣವೋ .. ಇಲ್ಲ ಈ ಬೇಲಿ ಹಾಯಲು ಪ್ರಯತ್ನಿಸುವ ಮೊದ್ದು ಗಳಿಗೆ ಬುದ್ಧಿ ಕಲಿಸುವ ಪ್ರಯತ್ನವೋ.. ಅವಿವಾಹಿತೆ ಎಂದು ಹೇಳಿದಾಗ ನನ್ನ ಬಗ್ಗೆ ತೋರುವ ಭಾವನೆ, ಒಸರಿಸುವ ಪ್ರಶ್ನೆಗಳ ಕಾರಂಜಿ.. ಉತ್ತರಿಸಲು ಕಷ್ಟ ಅನ್ನಿಸುತ್ತದೆ..ಬದಲಾಗುವ ಮಾತಿನ ಶೈಲಿ , ತೋರಿಸುವ ಆಸ್ಥೆ ಯಾಕೋ ಅಹಿತ ಮನಕ್ಕೆ ! ಅವರ ಪ್ರಶ್ನೆಗಳಿಂದ ಪ್ರಶ್ನೆಗಳಿಂದ ದೂರ ಹೋಗಲು ನಿನ್ನ ಸಾಂಗತ್ಯ ಬೇಕಾಯ್ತ ನನಗೆ.. ಯಾಕೋ ಯಾವುದಕ್ಕೂ ಮನಸ್ಸಿಗೆ ಉತ್ತರ ಗೊತ್ತಿಲ್ಲ.. ಬುದ್ಧಿ ಮತ್ತು ಮನಸ್ಸು ಎರಡು ಚಂಚಲವಾಗಿದೆಯೋ ಅಥವಾ ಸ್ತಬ್ಧವಾಗಿದೆಯೋ ಗೊತ್ತಿಲ್ಲದಂತಹ ಪರಿಸ್ಥಿತಿ.. ಇವೆಲ್ಲವನ್ನೂ ಹೇಳುವ ನನ್ನ ಪ್ರಯತ್ನದ ಹಿಂದೆ ಯಾವುದೇ ಸ್ವಾರ್ಥ ಇಲ್ಲ.. ಹೇಳುವ ಮಾತುಗಳಲ್ಲಿ ನಿನಗೆ ಅರ್ಥವೇ ಇಲ್ಲ ಅನ್ನಿಸಿದರೆ ಈ ಮೇಲ್ ಓದಿ ನಕ್ಕು ಸುಮ್ಮನಾಗು.. ಬಿಗಿದಿಟ್ಟ ಭಾವನೆಗಳನ್ನು ಹೊರಗೆಡವ ಬೇಕು ಅಂತ ಅನ್ನಿಸುತ್ತಿತ್ತು .. ಮೊದಲು ಬರೆದು ಕೊಂಡು ನಂತರ ನಿನಗೊಂದು ಮೇಲಿಸಿದೆ.... ಇನ್ನೇನು ಹೇಳಲಿ ನಾನು ?
ಗೆಳತಿ ....