Tuesday, 26 February 2013
ನೀನಾ ನಾನಾ
ಇದು ನೀನಾ ನಾನಾ
ನನಗೆ ನೀನು ನಿನಗೆ ನಾನು
ಹಾಗಂದ್ರೆ ಏನ್ ಗೆಳತಿ !
ಸಾಕು ಪದಗಳ ಗೋಜಲು
ಯಾರಿಗೆ ಯಾರು ಆದರೆನು..
ಪ್ರೇಮದಲಿ ,ಮೋಹದಲಿ ಅದರಲ್ಲಿ ಇದರಲ್ಲಿ
ನೀನು ನಾನು ಒಂದೇ ಅಲ್ವೆನು..
ನಾವು ಒಂದಾಗುವುದು ..
ಬೆರೆಯುವುದನ್ನು ಏನು ಬೇಕಾದರೂ
ಕರೆಯಲಿ ಈ ಜಗತ್ತು
ಒಂದಾದ ಗಳಿಗೆಯಂತೂ ಸತ್ಯ..
ಅದರ ಮುಂದೆ ಈ ನಾನು-ನೀನು ಎಂಬ ಹುಂಬ ವಾದವೇಕೆ !
ಹೇಳು ...
*********
ಏನಿದೆ ಮನದಲೆನಿದೆ ಎಂದು ಹುಡುಕುವ ಭರದಲ್ಲಿ
ಮನವ ನಾ ಬಿಚ್ಚಿಟ್ಟೆ ಹುಡುಗ....
ಹುಡುಕುವ ಆಟದಲಿ ನೀ ಗೆದ್ದೇ ನಾ ಸೋತೆ..
ಆ ಸೋಲು ನಿನ್ನ ಗೆಲುವಿಗಿಂತ ಹೆಚ್ಚು ಬಲ್ಲೆಯಾ ನೀನು
Thursday, 14 February 2013
ನಿಜ ಕಣೆ.. !
ಅವಳು :
ಮತ್ತೊಂದು ವ್ಯಾಲೆಂಟೈನ್ ದಿನ...
ನನ್ನ ನೆನಪುಗಳ ಭಿತ್ತಿಯಲ್ಲಿ ನಿನ್ನ ರೂಪ ಗೋಚರ-ಅಗೋಚರ...!
ನೆನಪಿದೆಯ ಗೆಳೆಯ... ಈ ದಿನಕ್ಕಾಗಿ ನೀ ವರ್ಷವಿಡಿ ಕಾಯುತ್ತಿದೆ.. ಕೈಲೊಂದು ಪುಟ್ಟ ಗುಲಾಬಿ ಬೊಕ್ಕೆ, ಅದರ ಜೊತೆಯಲ್ಲಿ ಒಂದು ಕಾರ್ಡು.. ಕೆಂಪನೆಯ ದೊಡ್ಡ ಹೃದಯ ...ಜೊತೆಯಲ್ಲಿ ಪುಟ್ಟ ಪುಟ್ಟ ಪಿಂಕ್ ಹಾರ್ಟ್ ...!
ನಿನ್ನ ಕಾರ್ಡ್ ತೆಗೆದುಕೊಳ್ಳುವಾಗ ಸೋಕಿದ ನಿನ್ನ ಒರಟು ಚರ್ಮದ ಬಿರುಸಿಗೆ ಮರುಳಾಗುತ್ತಿತ್ತು ನನ್ನ ಬೆರಳ ತುದಿ... ಮೂಗಿನಂಚಿನಲಿ ಬೆವರಿನ ಮುತ್ತು ಮುತ್ತು...!
ಲವ್ ಯು ಕಣೆ... ಲವ್ ಯು ಅಂದಾಗ ಪ್ರಪಂಚದಲ್ಲಿ ನಾವಿಬ್ಬರೇ ಅನ್ನುವ ಪುಳಕ...
ನನ್ನಿ೦ದ ಬರದ ಉತ್ತರ ನಿನ್ನ ಕಣ್ಣಲ್ಲಿ ಪ್ರಶ್ನಾರ್ಥಕ.. ನಿನ್ನ ಒರಟುತನ ನನಗೆಲ್ಲಿದೆ ... ಮೃದು ನಾನು...! ಉತ್ತರ ಸಿಕ್ಕ ನಿನಗ ಬದುಕು ಸಿಕ್ಕಾಗಲಿಲ್ಲ ಅನ್ನುವ ಖುಷಿ...
ಖುಷಿಯ ಕ್ಷಣ ... ಅಂದೇ ಮುಗಿಯಿತೇನೋ...ನಿನ್ನನ್ನು ಅವಳ ಜೊತೆ ಕಂಡಾಗ... ನನ್ನ ಪತ್ರ-ನಿನ್ನ ಖುಷಿ ಎಲ್ಲವೂ ಖಾಲಿ ಖಾಲಿ...
ಮತ್ತೆ ವ್ಯಾಲೆಂಟೈನ್ಸ್ ಡೆ ನಾನು ಇನ್ನು ನಿನ್ನ ನೆನಪಲ್ಲಿ ಉಳಿದಿದ್ದಿನಾ ? ಹೇಳು...?
ಅವನು...
ಮತ್ತೊಂದು ವ್ಯಾಲೆಂಟೈನ್ಸ್ ಡೇ .. ಈ ದಿನ ಕಹಿ ಕಹಿ ,,,
ನಿನಗೆ ನಾನು ನನಗೆ ನೀನು ಇದು ನಮ್ಮ ಬದುಕಿನ ಟ್ಯಾಗ್ ಲೈನ್ .. ಎಷ್ಟೊಂದು ಕನಸುಗಳು ನಮ್ಮಿಬ್ಬರದ್ದು... ಮನೆ ಮಕ್ಕಳು... ಒಹ್... ಹೇಳು ಗೆಳತಿ... ನಾನು ನಿನಗೆ ಕೊಟ್ಟಾ ಆಶ್ವಾಸನೆ ಬರಿ ಪೊಳ್ಳು...
ಮರೆತ ನಿನ್ನ ನಾನು ಆ ಕ್ಷಣ ಅವಳ ಜೊತೆ ಸೇರಿದಾಗ.. ಮುದ್ದಾದ ಕೂಸಿನ ಸಂಭ್ರಮ... ನನ್ನ ಬದುಕಲ್ಲಿ ನೀ ಸ್ವಲ್ಪ ಕಾಲ ಮಂಗ ಮಾಯಾ... ತಪ್ಪು ನನ್ನದು.. ತಪ್ಪಾಗಿದೆ ಎಂದು ಹೇಳಲಾಗದ ಸಿಡಿಮಿಡಿ .. ಮುಗಿದ ಕಥೆ ಮುನ್ನುಡಿ ಬರೆಯಲು ಹೊರಟರೆ ಆದೀತೆ.. ಆ ಕ್ಷಣ ಮರೆತ ನಾನು ಈಗ ಪ್ರತಿಕ್ಷಣ ನಿನ್ನ ನೆನಪಲ್ಲಿ ಲೀನ.. ಹೇಳು ಚಿನ್ನ ನನ್ನನ್ನು ಕ್ಷಮಿಸುವೆಯ,,,ನೀ ಎಲ್ಲೇ ಇದ್ದರೂ .. ಹ್ಯಾಪಿ ವ್ಯಾಲೆಂಟೈನ್ಸ್ ಡೇ .... ಮರುವಿಗೂ ಹೇಳಿದ್ದೇನೆ.. ನಿನ್ನ ನೆನಪು ಮಾತ್ರ ಜೀವಂತವಾಗಿಡು ಎಂದು... ನಿಜ ಕಣೆ.. !
Sunday, 3 February 2013
ಪ್ರೇಮ ?
ಹೇಳುವ ಮಾತುಗಳು ಸಾವಿರ ಇದ್ದರೂ
ನಿನ್ನ ಒಂದು ನೋಟ
ಲಕ್ಷ ಮಾತುಗಳನ್ನು ಹೇಳಿತು,
ನನ್ನ ಮೌನ ಕೋಟಿ
ಭಾವನೆಗಳನ್ನು ತಿಳಿಸಿತು..
ಏನನ್ನಲಿ ಇದನ ಪ್ರೀತಿ, ಪ್ರೇಮ ?
******
ಎಷ್ಟು ನಿಜ ನಿನ್ನ ನೆನಪು ,
ಅದೆಷ್ಟು ನಿಜ ನೀ ಕೊಟ್ಟ ನೋವು ನಿಜ
ಅನ್ನುವ ವಾದದಲ್ಲಿ ಸುಳ್ಳಿನ ಸಂಬಂಧವು
ಮತ್ತೆ ಜೀವ ತಳೆಯಿತು
ನಿಜ ನಿಜ ನೀನೆಷ್ಟು ಸುಳ್ಳು..
Subscribe to:
Posts (Atom)