Wednesday 9 December 2009

ಸಮಸ್ಯೆ -ಸಮಸ್ಯೆ-ಪರಿಹಾರ!

ಇಬ್ಬರು ಗೆಳೆಯರು ಬಾರ್ ಒಂದರಲ್ಲಿ ಕುಳಿತಿದ್ದರು.ಒಬ್ಬ ಅಮೆರಿಕನ್ ,ಮತ್ತೊಬ್ಬ ಭಾರತೀಯ.ಒಂದರ ಹಿಂದೆ ಒಂದು ಗ್ಲಾಸ್ಗಳನ್ನು ಪೂರ್ತಿ ಮಾಡುತ್ತಾ ಕುಳಿತಿದ್ದರು.ಇದ್ದಕ್ಕಿದ್ದ ಹಾಗೆ  ಭಾರತೀಯನಿಗೆ  ಮಾತನಾಡುವ ಉಮೇದು ಬಂತು...ಬಿಕ್ಕಳಿಸಿದ..! ಅವನ ದುಃಖ ಕಂಡ ಗೆಳೆಯನಿಗೂ ದುಃಖ ಶುರು  ಆಯ್ತು,ಆದರು ಸಾವರಿಸಿ ಕೊಂಡು ಯಾಕೋ ಅಣ್ಣ ಅಳ್ತಾ ಇದ್ದೀಯ ಅಂತ ಕೇಳಿದ! ಅವನು ' ನಿನಗೆ ಗೊತ್ತಿಲ್ಲದೇ ಇರುವ ವಿಷಯವೊಂದು ಹೇಳಬೇಕಾಗಿದೆ,ನಮ್ಮ ತಾಯಿ ತಂದೆ ಹಳ್ಳಿಯ ಹುಡುಗಿಯೊಬ್ಬಳನ್ನು ಸೊಸೆಯಾಗಿ ತರಲು ನಿಶ್ಚಯ ಮಾಡಿದ್ದಾರೆ.ಅಂತಹ ಹೆಣ್ಣುಮಕ್ಕಳು ಚೆನ್ನಾಗಿ ಹೊಂದಿಕೊಂಡು ಸಂಸಾರ ನಡೆಸುತ್ತಾರೆ ಅನ್ನುವ ಭಾವನೆ ಅವರದು.ಯಾವಳೋ ಅವಳು,ನನಗೆ ಗೊತ್ತೇ ಇಲ್ಲ,ಸ್ವಲ್ಪ ದಿನ ಪ್ರೀತಿ ಸಹ ಮಾಡಲಿಲ್ಲ ಅಂತಹವಳನ್ನು ನಾನು ಮದುವೆ ಆಗೋದ? ಛೇ ನನಗೆ ಈ ಕುಟುಂಬದ ಸಮಸ್ಯೆಗಳಿಂದ ಸಾಕಾಗಿದೆ'ಎಂದು ಜೋರಾಗಿ ಅತ್ತ...!
'ನೀನು  ಲವ್ ಮ್ಯಾರೇಜ್ ಬಗ್ಗೆ ಹೇಳ್ತಾ ಇದ್ದೀಯ ? ಹಾಗಾದರೆ ನನ್ನ ಕಥೆ ಕೇಳು! '
ನಾನು ಒಬ್ಬ ವಿಧವೆಯನ್ನು  ಗಾಢವಾಗಿ ಪ್ರೀತಿಸಿದೆ,ಎರಡು ವರ್ಷಗಳ ಕಾಲ ಅವಳ ಜೊತೆ ಡೆಟ್ ಮಾಡಿದೆ,ಆಮೇಲೆ ಮದುವೆ ಆದೆ,ಅದಾದ ಮಾರನೆಯ ವರ್ಷ ನನ್ನನ್ನು ಹೆತ್ತ ಅಪ್ಪನಿಗೆ  ನನ್ನ ಮಲಮಗಳ  ಜೊತೆ ಲವ್ ಶುರು ಆಯಿತು! ಪ್ರೀತಿ ಆದ್ರೆ ಸುಮ್ಮನೆ ಇರೋಕೆ ಆಗಲ್ವಲ್ಲ, ಇಬ್ಬರು ಮದುವೆಯಾದರು.ಆಗ ನನ್ನ  ಅಪ್ಪ ನನಗೆ ಅಳಿಯನಾದ,ನಾನು ಈ ರೀತಿ ನಮ್ಮ ಅಪ್ಪನಿಗೆ ಹೆಣ್ಣು ಕೊಟ್ಟ  ಮಾವನಾದೆ!
ಕಾನೂನು ಪ್ರಕಾರ ನನ್ನ ಮಗಳು ನನ್ನ ತಾಯಿ ಮತ್ತು ನನ್ನ ಹೆಂಡತಿ ನನಗೆ ಅಜ್ಜಿ .ಇನ್ನು  ಹೆಚ್ಚಿನ ಸಮಸ್ಯೆ ಯಾವಾಗ ಉಂಟಾಯಿತು ಗೊತ್ತ? ನನಗೆ ಮಗು ಹುಟ್ಟಿದಾಗ! ನನ್ನ ಮಗ ನನ್ನ ತಂದೆಯ ಸಹೋದರ! ಮತ್ತು ಆತ ನನ್ನ ಚಿಕ್ಕಪ್ಪ!
ಆದರೆ  ಮತ್ತಷ್ಟು  ಕೆಟ್ಟ ಪರಿಸ್ಥಿತಿ  ಉಂಟಾಗಿದ್ದು ನನ್ನ ಅಪ್ಪನಿಗೆ ಮಗು ಹುಟ್ಟಿತಲ್ಲ ಆಗ!  ಈಗ ನಮ್ಮ ಮನೆಯ ಸಂಬಂಧಗಳತ್ತ ಗಮನ ಹರಿಸಿದರೆ ನನ್ನ ತಂದೆಯ ಮಗ ನನ್ನ ತಮ್ಮ ಹಾಗೂ ನನ್ನ ಮೊಮ್ಮಗ! ಅಂದ್ರೆ ನಾನು ಅಜ್ಜ ಹಾಗೂ ಮೊಮ್ಮಗ ! ಎರಡು ಪಾತ್ರಗಳ ಒಡೆಯ...! ಹೇಳು ಗೆಳೆಯ  ಕೌಟುಂಬಿಕ ಸಮಸ್ಯೆ ನಿಜವಾಗಿಯೂ ನಿನಗೆ ಇದೆಯಾ ???????? ಎಂದು ಮತ್ತೊಂದು ಪೆಗ್ ಕುಡಿದು ನಕ್ಕ !

No comments:

Post a Comment

Followers