ನನ್ನ ಅಸಹನೆ ತುಮುಲಗಳ ಬಿಸಿಲ ನಾಡಲ್ಲಿ
ನಿನ್ನ ನಗೆಯ ನೆನಪು ಹಾಯಿ ತಂಗಾಳಿ..
ನೆನಪು ಸುಂದರ,ಗತದಷ್ಟೇ ಚಲುವ..
ನಿನ್ನೆಯು ಇಂದಾಗ ಬಾರದಾಗಿತ್ತೆ ಅನ್ನುವ ಆಶಯ
ನೀನು ತೊರೆದ ಕ್ಷಣವೇ ಅದು ಮರೀಚಿಕೆ
ಆ ಮಾತು ಮರೆತಿತ್ತು ಆಗ ..!
ಈಗ ಪದೇಪದೇ ನೆನಪಿಗೆ ಬರುತಿದೆ
ಯಾಕೆಂದ್ರೆ ನೀನಿಲ್ಲ ನಲ್ಲ !
ಮರೆಯಾದ ಕ್ಷಣದಲೇ ಹೊಳೆಯುವುದು ನೂರು ಭಾವ.
ReplyDeleteಕವಿತೆಯ ಸಾಲು ಸಾಲಲೂ ಒಲುಮೆಯ ರಸದೌತಣ.