ಚಂದಮಾಮ ಓದುವ ಖುಷಿಯಲ್ಲಿ ಓದಿನ ಸವಿ ಈವರೆಗೂ ಕಡಿಮೆ ಆಗಿಲ್ಲ.. ಅನೇಕ ಫ್ಯಾಂಟಸಿ ಒಳಗೊಂಡ ಕಥೆಗಳು, ಅದರಲ್ಲೂ ಸುಂದರ ಏಳು ಮಲ್ಲಿಗೆ ತೂಕದ ರಾಜಕುಮಾರಿ ಕಥೆ ತುಂಬಾ ದಿನ ಮನದಲ್ಲಿ ಸಣ್ಣ ಖುಷಿಯ ಪುಳಕ ನೀಡಿತ್ತು. ಓದುವ ಹವ್ಯಾಸ ಅಮ್ಮನದ್ದು,ಅವರು ಬಾಲ್ಯದಲ್ಲೇ ದೊಡ್ಡ ದೊಡ್ಡ ಕಾದಂಬರಿ ಓದಿ ಜೀರ್ಣಿಸಿಕೊಂಡವರು .ಅದರ ಬಗ್ಗೆ ನನ್ನಜ್ಜಿ ಬಳಿ ಹೇಳ್ತಾ ಇರೋರು. ಅವರನ್ನು ಹೆಚ್ಚು ಕಾದಿದ್ದು ಭೈರಪ್ಪನವರ ಪರ್ವ.ಹೀಗೂ ಉಂಟೆ ಅನ್ನುವ ಅವರ ಆ ಭಾವ ಚಂದಮಾಮನ ಕಥೆಯ ನನಗೆ ಅರ್ಥ ಆಗಿರಲಿಲ್ಲ..
ಬಳಿಕ ಕಾರಂತರು, ಕುವೆಂಪು, ಮಾಸ್ತಿ,ಭೈರಪ್ಪನವರು ಮಾತ್ರವಲ್ಲದೆ ಬರಗೂರು,ಕುಂ.ವೀ.,ದೇವನೂರು ಮಹಾದೇವ , ಅರವಿನದ ಮಾಲಗತ್ತಿ.. ಇಷ್ಟ ಆಗೋಕೆ ಆರಂಭಿಸಿತು.
ಇವುಗಳ ಜೊತೆಗೆ ಉಷಾ ನವರತ್ನ ರಾಮ್ , ಭುವನೇಶ್ವರಿ ಹೆಗಡೆ, ಎಂ.ಕೆ.ಇಂದಿರಾ ಅವರ ಬರಹಗಳು ಖುಷಿ ಕೊಟ್ಟಿತ್ತು.
ಎಂ.ಕೆ.ಇಂದಿರಾ ಮಾಡಿದಷ್ಟು ಮೋಡಿ ... ಬೇರೆ ಸ್ತ್ರೀ ಬರಹಗಾರ್ತಿಯರು ಮಾಡಲಿಲ್ಲ.ಅವರ ಸರಳ ಕನ್ನಡ, ಆರಾಮವಾಗಿ ಅರ್ಥ ಆಗುವ ವಿಷಯ ಎಲ್ಲವೂ ಸುಂದರ..ಅದೇ ರೀತಿ ಹೆಚ್ಚು ಖುಷಿ ಕೊಟ್ಟವರು ದೇವನೂರು ಮಹಾದೇವ..ವಾಸ್ತವತೆಯ ಸ್ಪಷ್ಟ ಚಿತ್ರಣ
ಕೇವಲ ಕನ್ನಡವಲ್ಲ ತೆಲುಗು, ಹಿಂದಿ, ಆಂಗ್ಲ. ಸಾಹಿತ್ಯದ ಮಜಾ ಸಿಕ್ತಾ ಹೋಯ್ತು.. ನನಗೆ ಆಪ್ತ ಅನ್ನಿಸಿದ ಬರಹಗಾರರಲ್ಲಿ ಪತ್ತೇದಾರಿ ಬರಹಗಾರ ಟಿ .ಕೆ. ರಾಮರಾವ್ ಒಬ್ಬರು .ಪತ್ತೆ ಮಾಡ ಬೇಕಾದ ಸಂಗತಿಗಳು ಸಖತ್ ಕುತೂಹಲ ಮೂಡಿಸ್ತಾನೆ ಇರೋದು. ಒಟ್ಟಾರೆ ನಾವೇ ಪತ್ತೆದಾರರು ಆಗುವಂತೆ ಮಾಡುವ ಬರಹ ಶೈಲಿ..ಶರ್ಲಾಕ್ ಹೋಮ್ಸ್, ಅಗಾಥ ಕ್ರಿಸ್ಟಿ ..ವಾವ್
ಹೆಚ್ಚು ಸಣ್ಣ ಕಥೆಗಳನ್ನು ಓದುವುದು ನಾನು..ಲೇಖನಗಳು ಅಷ್ಟೇ ಸರಳವಾಗಿ ಇರ ಬೇಕು..! ಆ ನಿಟ್ಟಿನಲ್ಲಿ ಜಿ.ಎನ್ .ಮೋಹನ್, ವಿಶ್ವೇಶ್ವರ ಭಟ್ಟರು ಪ್ರೇಂ ಶೇಖರ್ ...........ಲಿಸ್ಟ್ ದೊಡ್ಡದು :-) ರವಿ ಬೆಳಗೆರೆ ಬರೆಯುವ ಶೈಲಿ ,ವಿವರಿಸುವ ರೀತಿ, ಹೇಳುವ ಭಾವ ಇಷ್ಟ ಆಗುತ್ತದೆ.ಅದೇ ರೀತಿ ಅನಂತ್ ಚಿನಿವಾರ್..ಜೋಗಿ ಬರಹಗಳು ಹಲಸಿನ ಹಣ್ಣಂತೆ ಓಡುತ್ತಾ ಹೋದಂತೆ ಸಿಹಿಸಿಹಿ ತಿರುಳು..!
This comment has been removed by the author.
ReplyDelete