ಇದು ನಿನಗೆ ಮಾತ್ರ ಎಂದು ಹೇಳುವ ಹಾಗೆ ಇಲ್ಲ ಅಂತಹ ಪರಿಸ್ಥಿತಿ ತಂದಿರೋದು ನೀನೆ ಎಂದು ಹೇಗೆ ಹೇಳಲಿ ಗೆಳೆ ಯ. ನಿನ್ನೆ ನೀ ಒಪ್ಪಿದ್ದಿ ದ್ದರೆ ಇಂದು ನನಗೆ ಈ ಸಮಸ್ಯೆ ಇರುತ್ತಿರಲಿಲ್ಲವೇ ನೊ.. ನಾ ಬರೆದ ಕವನಗಳು, ಮಾತುಗಳು ಸಂಪೂರ್ಣ ನಿನಗಾಗಿ. ಅಂದು ಭೇಟಿಯಾದ ಕ್ಷಣ ಮುತ್ತಿಟ್ಟ ಗಳಿಗೆ, ಆ ನೋಟದಲ್ಲಿ ಇಬ್ಬರು ಬೆರೆತ ರಸಮಯ ಗಳಿಗೆ ಎಲ್ಲವೂ ಸದಾ ನೆನಪಿಗೆ ಬರುತ್ತಲೇ ಇರುತ್ತವೆ.. ಕಾಡುತ್ತಲೇ ಇರುತ್ತವೆ. ನಿನ್ನ ನೆನಪು ಮರೆಯಲೆಂದು ಬರೆಯುವ ಪ್ರತಿಕವನದಲ್ಲೂ ನೀನೆ ಸಂಪೂರ್ಣ ನೀನೆ..ಆದರೆ ಅದು ತಮಗೆ ಎಂದು ತಿಳಿ ಯುವವರಿಗೆ ಏನೆಂದು ಉತ್ತರಿಸಲಿ ಗೆಳೆಯ ? ನೋವಿಗೆ ಅಂತ್ಯವಿಲ್ಲ ..! ಆದರೆ ನೋಯುವುದು ಅನಿವಾರ್ಯ.. ನಿನ್ನ ನೆನಪಲ್ಲಿ ಬೇಯುವ ಮನಕ್ಕೆ ನಾನು ಹೇಗೆ ತಂಪು ನೀಡಲಿ.. ಕಟ್ಟಿದ ಕನಸುಗಳು ಉರಿದು ಬೂದಿಯಾದಾಗ ನೀನು ಇರಲೇ ಇಲ್ಲ.. ನೀ ಬಂದಾಗ ನಾನು ಸಂಪೂರ್ಣ ಕರಕಲಾಗಿದ್ದೆ. ನನ್ನ ಆ ನೋವಿನ ಹೊಗೆಯು ನಿನ್ನ ಮೂಗಿಗೆ ಅಡ ರುವಷ್ಟರಲ್ಲಿ ನಾನು ಇಲ್ಲವಾಗಿದ್ದೆ.. ನೆನಪುಗಳು ಮಾಸಬಾರದು.. ನೀ ಇರದ ಬಾಳಿನಲ್ಲಿ ನೆನಪುಗಳೇ ಆಧಾರ . ಹೇಳು ಎಂದಾದರೂ ನೆನಪಾದೀತ ನನ್ನದು?
ನೊಂದವಳು
ಪರಸ್ಪರದಲ್ಲಿ ಒಲವ ಸಾಕ್ಷಾತ್ಕರಕ್ಕೆ ನಲ್ಲ ನಲ್ಲೆಯ ಸಮೀಕರಣವೇ ಮುಖ್ಯವಾಗುತ್ತದೆ.ಉತ್ತಮ ಪ್ರೇಮ ನಿವೇದನಾ ಅಹವಾಲಿದು.
ReplyDelete