Monday, 22 July 2013

ನೆನಪಿದೆಯಾ...



 
ನೆನಪಿದೆಯಾ ನೆನಪಿದೆಯಾ...
ಗೆಳತಿ  ಅಂದು ಪದೇ ಪದೇ
ನೀನು ಕೇಳುತ್ತಿದ್ದ  ಪ್ರಶ್ನೆ.
ನೆನಪಿದೆ ನೆನಪಿದೆ ಪದೇಪದೇ
 ನಾನು ಹೇಳುವ ಉತ್ತರ..
ಪ್ರಶ್ನೆಗೆ ಎರಡೇ ಅಕ್ಷರ
 ಅದಕ್ಕೆ ನಿನಗೆ  ಪ್ರಶ್ನಿಸುವತ್ತಲೇ
ಹೆಚ್ಚು  ಗಮನ..
ಉತ್ತರಕ್ಕೆ ತಡಕಾಡದೇ
ಹೇಳುವ ಕೆಲಸ ನನ್ನದು  !  
ಇಂದು ಆ ಪ್ರಶ್ನೆಯ ಎರಡಕ್ಷರ
ನನ್ನ  ಬದುಕನ್ನು ಕಾಡುತ್ತಿದೆ...
ನಿನ್ನ ಉತ್ತರ... ....

1 comment:

  1. ಒಲವನ್ನು ಆಗಾಗ ಬಡಿದೆಚ್ಚರಿಸುತ್ತಿರಬೇಕು ಎಂದು ತಪ್ಪು ತಿಳಿದ ಬಾಲಕ... :-D

    ReplyDelete

Followers