Monday, 27 July 2009

ಉದರದಲ್ಲಿ ಚೀಲ!

ಕೋತಿಯ ಹೆಸರನ್ನು ಪಡೆದಿದೆ,ಗೂಡು ಹೊಂದಿದೆ,ಹೊಟ್ಟೆಯಲ್ಲಿ ಚೀಲ ಇದೆ ಆದರೆ ಇದು ಕೋತಿಯಾಗಲಿ,ಪಕ್ಷಿ ಆಗಲಿ ಇಲ್ಲವೇ ಕಾಂಗರೂ ಅಗಲಿ ಅಲ್ಲವೇ ಅಲ್ಲ.ಆದರೆ ವಿಶ್ವದಲ್ಲಿ ಇರುವ ಅಪರೂಪದ ಪ್ರಾಣಿಗಳಲ್ಲಿ ಇದೂ ಒಂದಾಗಿದೆ.ಸಾಮಾನ್ಯವಾಗಿ ನಮಗೆ ತಿಳಿದಿರುವ ಮಟ್ಟಿಗೆ ಪಕ್ಷಿ ಗೂಡು ಕಟ್ಟುತ್ತದೆ.ಆದರೆ ಕೋತಿ ಗೂಡು ಕಟ್ಟಿರುವುದನ್ನು ಕಂಡಿದ್ದೀರ? ಇಲ್ಲವೇ ಕೇಳಿದ್ದೀರಾ? ಅಂತಹ ವಿಶೇಷ ಜೀವಿ ಹೆಸರು ಲಿಟಲ್ ಮೌಂಟನ್ ಮಂಕಿ.ಮಂಕಿ ಎಂದು ಹೆಸರು ಇದ್ದ ಮೇಲೆ ಅದು ಕೋತಿ ಆಗಿರ ಬೇಕಿಲ್ಲ,ಏಕೆ ಅಂತ ಅಂದರೆ ಅದರ ನಿಜವಾದ ಹೆಸರು ಮಾನಿಟೋ ಡೆಲ್ಮಾಂಟೆ .ಇದನ್ನು ಇನ್ನು ಮುದ್ದಾದ ಹೆಸರಲ್ಲಿ ಕರೀತಾರೆ,ಅದೇ ಕೊಲೋಕೊಲೋ .ಇದರ ಬಗ್ಗೆ ಇನ್ನು ಆಸಕ್ತಿಕರ ಸಂಗತಿಗಳು ಇವೆ.
ಇದು ಆಸ್ಟ್ರೇಲಿಯ ವಾಸಿ ಕಾಂಗರೂ ಸಮೀಪದ ನೆಂಟ ಗೊತ್ತೇ.ಇದಕ್ಕೊ ಕಾಂಗೂರು ವಿನಂತೆ ಉದರದಲ್ಲಿ ಚೀಲ ಇದೆ.ಇಂತಹ ಜೀವಿಗಳನ್ನು ಮಾರ್ಸುಪಿಯಲ್ಸ್ ಎಂದು ಕರೆಯುತ್ತಾರೆ.ಆಕುಟುಂಬಕ್ಕೆ ಈ ಮಾಂಟೆ ಸೇರಿದೆ.ಆದರೆ ಇದು ಇಲಿಗಿಂತ ಸ್ವಲ್ಪ ದೊಡ್ದಗಾತ್ರ ಪಡೆದಿದೆ ಅಷ್ಟೇ.ಸಾಮಾನ್ಯವಾಗಿ ಗಿಡ-ಮರಗಳಲ್ಲಿ ವಾಸಿಸುವ ಮಾಂಟೆ ಕಟ್ಟುವ ಗೂಡುಗಳು ವಿಶೇಷವಾಗಿ ಇರುತ್ತವೆ.ಒಂದರ್ಥದಲ್ಲಿ ಇದು ಗೋಲಾಕಾರದಲ್ಲಿ ಗೂಡು ಕಟ್ಟುತ್ತದೆ. ಇದು ಮುಂದೆ ತನ್ನ ಮಕ್ಕಳಿಗಾಗಿ ಕಟ್ಟಿಡುವ ಮನೆಯಲ್ಲ,ಬದಲಿಗೆ ಚಳಿಗಾಲದಲ್ಲಿ ತನ್ನ ರಕ್ಷಣೆಗೆ ಸಿದ್ಧ ಮಾಡಿಕೊಳ್ಳುವ ಸುರಕ್ಷಿತ ಜಾಗ.ಇದು ನಾಲ್ಕರಿಂದ ಹದಿನಾಲ್ಕು ಮಕ್ಕಳನ್ನು ಹೆರುತ್ತದೆ.ತನ್ನ ಉದರದಲ್ಲಿ ಇರುವ ಚೀಲದಲ್ಲಿ ಇಟ್ಟುಕೊಂಡು ಸಂರಕ್ಷಿಸುತ್ತದೆ.
ಚಳಿಗಾಲದಲ್ಲಿ ಆಹಾರಕ್ಕಾಗಿ ಕಷ್ಟ ಪಡುವುದನ್ನು ತಪ್ಪಿಸಿಕೊಳ್ಳಲು ಇದು ತನ್ನ ದೇಹದಲ್ಲಿ ಮೊದಲೇ ಶೇಖರಿಸಿ ಇಟ್ಟುಕೊಂಡಿರುವ ಕೊಬ್ಬನ್ನು ಆ ಸಮಯದಲ್ಲಿ ಬಳಸಿ (ಕರಗಿ ಇದನ್ನು ರಕ್ಷಿಸುತ್ತದೆ) ಜೀವ ಉಳಿಸಿಕೊಳ್ಳು ತ್ತದೆ.ಈ ಕೊಬ್ಬು ಎಲ್ಲಿರುತ್ತದೆ ಗೊತ್ತೇ? ಅದರ ಬಾಲದಲ್ಲಿ.ಅನೇಕ ವೃಕ್ಷ ಸಂಪತ್ತನ್ನು ರಕ್ಷಿಸುವಲ್ಲಿ ಈ ಪುಟ್ಟ ಪ್ರಾಣಿ ತುಂಬಾ ಸಹಾಯಕಾರಿ .ಡೀ ಗ್ಲಿರೈಡ್ಸ್ ಎನ್ನುವ ಮರಗಳ ಹಣ್ಣುಗಳನ್ನು ಇದು ಸೇವಿಸುತ್ತದೆ.ಇವು ಬಿಸಾಡಿದ ಬೀಜಗಳಿಂದ ಈ ಗಿಡಗಳ ಹುಟ್ಟಿಗೆ ಕಾರಣ ಆಗ್ತಾ ಇದೆಯಂತೆ.ಈ ರೀತಿ ವೃಕ್ಷ ಸಂಪತ್ತಿನ ಬೆಳವಣಿಗೆಗೆ ಕಾರಣ ಆಗಿರುವ ಈ ಮಾಂಟೆ ಮಾಂಸಹಾರಿಯೂ ಆಗಿದೆ.ಏನೇ ಇರಲಿ ಈ ಪುಟ್ಟ ಪ್ರಾಣಿಗೆ ಮಾತ್ರ ಮುರೈನ್ ರಾಟ್ ಎನ್ನುವ ಪ್ರಾಣಿಯನ್ನು ಕಂಡರೆ ಮಾತ್ರ ಜೀವ ಪುಕಪುಕ!

No comments:

Post a Comment

Followers