ಕಾಗೆ ಮಾನವನ ಜೊತೆ ವಾಸಿಸುವ ಪಕ್ಷಿ.ಅದು ತುಂಬ ಬುದ್ಧಿ ಇರುವ ಪಕ್ಷಿ ಎಂದು ನಮಗೆ ಗೊತ್ತೇ ಇದೆ.ಈ ಕಾಗೆ ಚಿಕ್ಕ ಹಾಗೂ ತೆಳುವಾದ ವೈರನ್ನು ಸಂಗ್ರಹಿಸಿ ಇಡುತ್ತದೆ,ಅದನ್ನು ತನಗೆ ಬೇಕಾದ ಆಕಾರಕ್ಕೆ ಬದಲಾಯಿಸಿ ನಂತರ ಮರದ ದಿಮ್ಮಿ,ಬಿಲಗಳಲ್ಲಿ ಈ ವೈರನ್ನು ತೂರಿಸಿ ಕ್ರಿಮಿ ಕೀಟಗಳನ್ನು ಎಳೆದು ತಿನ್ನುತ್ತದೆ.ಈ ಕಂಬಿಯನ್ನು ಅದು ಸದಾ ತನ್ನ ಜೊತೆ ಎಲ್ಲ ಕಡೆಯೂ ಕೊಂಡೊಯ್ಯುತ್ತದೆಯಂತೆ.!!
ಹೆರಾನ್
ಜಪಾನ್ ದೇಶದಲ್ಲಿ ವಾಸ ಮಾಡುವ ಹೆರಾನ್ ಅನ್ನುವ ಪಕ್ಷಿ ತನ್ನ ಆಹಾರ ಹೊಂಚು ಹಾಕಿ ಪಡೆಯುವುದು ಹೇಗೆ ಗೊತ್ತೇ? ಚಿಕ್ಕ ಚಿಕ್ಕ ಬೀಜಗಳನ್ನು,ಪುಟ್ಟ ಕ್ರಿಮಿ ಕೀಟಗಳನ್ನು ತಂದು ನೀರಿನ ಮೇಲೆ ಹಾಕುತ್ತದೆ.ಆಗ ನೀರಿನ ಒಳಗೆ ಇರುವ ಪುಟ್ಟ ಪುಟ್ಟ ಮೀನುಗಳು ಮೇಲೆ ಬರುತ್ತಲ್ಲ ಅವುಗಳನ್ನು ತಿನ್ನಲು,ತಕ್ಷಣ ಈ ಪಕ್ಷಿ ಲಬಕ್ ಅಂತ ಮೀನುಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.
ಆಟರ್
ಸಮುದ್ರದಲ್ಲಿ ಆಟರ್ ಅನ್ನುವ ಜೀವಿ ವಾಸ ಮಾಡುತ್ತದೆ.ಇದು ತನ್ನ ಹೊಟ್ಟೆಯನ್ನು ಡೈನಿಂಗ್ ಟೇಬಲ್ನಂತೆ ಬಳಸುತ್ತದೆ.ಸಮುದ್ರದಲ್ಲಿ ಹಿಡಿದ ಚಿಪ್ಪಿರುವ ಪ್ರಾಣಿಗಳನ್ನು ತನ್ನ ಹೊಟ್ಟೆ ಮೇಲೆ ಇಟ್ಟು ಕೈಯ್ಯಲ್ಲಿ ಹಿಡಿದು ಬಾಯಲ್ಲಿ ಕಲ್ಲು ಎತ್ತಿಕೊಂಡು ಅದನ್ನು ಒಡೆದು ಅದರೊಳಗೆ ಇರುವ ಜೀವಿಗಳನ್ನು ಭಕ್ಷಿಸಿ ಹೊಟ್ಟೆ ತುಂಬಿಸಿ ಕೊಳ್ಳುತ್ತದೆಯಂತೆ
ಪಕ್ಷಿಗಳಲ್ಲಿ ಇಂತಹ ಬುದ್ಧಿವಂತಿಕೆ ಇಲ್ಲ ಅಂತೇನೂ ಇಲ್ಲ.ಫೆಸಿಫಿಕ್ ಮಹಾ ಸಾಗರದಲ್ಲಿ ಇರುವ ಗಳ ಪಗಾಸ್ ದ್ವೀಪದಲ್ಲಿ ಇರುವ ಮರ ಕುಟುಕ ಎನ್ ಮಾಡುತ್ತೆ ಗೊತ್ತೇ? ಇದು ಗಿಡಗಳ ಒಣ ಕಡ್ಡಿ ಗಳನ್ನೂ ಶೇಖರಿಸಿ ,ಬಳಿಕ ಅದರ ಕೊನೆಯನ್ನು ಚೂಪು ಮಾಡುತ್ತದೆ.ಎಲ್ಲಿ ಅಂತೀರ? ಕಲ್ಲಿನ ಮೇಲೆ,ಬಳಿಕ ಅದನ್ನು ತನ್ನ ಕೊಕ್ಕಿಂದ ಹಿಡಿದು ಬಿಲ,ಇನ್ನು ಹಲವು ಕಡೆ ವಾಸಿಸುವ ಕ್ರಿಮಿಕೀಟಗಳು ಇರುವ ಕಡೆ ಈ ಕಡ್ಡಿಯನ್ನು ತೋರಿಸುತ್ತದೆ,ಬಳಿಕ ನಿಧಾನವಾಗಿ ತೆಗೆದು ಆ ಕ್ರಿಮಿಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತದೆ.
No comments:
Post a Comment