ಚಿಂಪಾಂಜಿ ಗಳು ಇರುವೆ ,ಗೆದ್ದಲು ರೀತಿಯ ಹುಳು ಹುಪ್ಪಟೆಗಳನ್ನು ಹಿಡಿಯುವುದು ಹೇಗೆ ಗೊತ್ತೇ? ಸಣ್ಣ ಬಿಲದ ರೀತಿ ಇರುವ ಸ್ಥಳ ದ ಬಳಿ ಬಂದು ಒಂದು ಚಿಕ್ಕ ಕಟ್ಟಿ ಅದರೊಳಗೆ ತೂರಿಸಿ ಇಡುತ್ತದೆ ಸ್ವಲ್ಪ ಹೊತ್ತಾದ ಬಳಿಕ ಇರುವೆಗಳು ಕಡ್ಡಿಗೆ ಅಂಟಿ ಕೊಳ್ಳುತ್ತದಲ್ಲ,ಆಗ ಅದನ್ನು ಬಾಯಲ್ಲಿ ಇತ್ತು ಕಚ ಕಚನೆ ಚಪ್ಪರಿಸುತ್ತಾ ತಿನ್ನುತ್ತದೆ.ವಾಟ್ ಅನ್ ಐಡಿಯ ಸರ್ ಜಿ!!
ಉರಂಗಟಾನ್
ಉರಂಗಟಾನ್ ಹಾಗೂ ಚಿಂಪಾಂಜಿ ತಮ್ಮ ರಕ್ಷಣೆಗಾಗಿ ಕೆಲವು ಆಯುಧಗಳನ್ನೂ ಸಿದ್ಧ ಮಾಡಿಕೊಂಡು ಇರುತ್ತವೆ,ಕಲ್ಲು,ಕಟ್ಟಿಗೆಯನ್ನು ಚೂಪು ಮಾಡಿರುತ್ತದೆ.ಹೀಗೆ ಸುಮಾರು ಐವತ್ತು ನಾಲ್ಕು ರೀತಿಯ ಆಯುಧಗಳನ್ನು ರೆಡಿ ಇಟ್ಟುಕೊಂಡಿರುತ್ತದೆ.ಹೊಳೆ,ನದಿ ದಾಟ ಬೇಕಾದ ಸಂದರ್ಭ ಒದಗಿದರೆ ಅವುಗಳು ತಮ್ಮ ಕೈಲಿ ಕಟ್ಟಿಗೆ ಹಿಡಿದು ನೀರಲ್ಲಿ ಬಿತ್ತು ನಂತರ ನಡೆಯುತ್ತದೆ,ಹೀಗೆ ಅದು ಆಳ ಕಂಡು ಹಿಡಿಯುತ್ತದೆ!
ಆಸ್ಟ್ರಿಚ್ ಮೊಟ್ಟೆ
ವಿಶ್ವದಲ್ಲಿರುವ ಪಕ್ಷಿ ಸಂಕುಲದಲ್ಲಿ ಆಸ್ಟ್ರಿಚ್ ಪಕ್ಷಿಯ ಮೊಟ್ಟೆ ತುಂಬಾ ದೊಡ್ಡದು.ಬೇರೆ ಪಕ್ಷಿಗಳ ಮೊಟ್ಟೆಯಂತೆ ಇದನ್ನು ಸುಲಭವಾಗಿ ಒಡೆಯಲಾಗದು.ಆದ ಕಾರಣ ಈಗಿಪ್ತ್ ದೇಶದ ಒಂದು ಪಕ್ಷಿ ಏನು ಮಾಡುತ್ತೆ ಗೊತ್ತೇ? ಈ ಮೊಟ್ಟೆ ಒಡೆಯಲು ತನ್ನ ಕೊಕ್ಕಿನ ತುದಿಗೆ ಕಲ್ಲನ್ನು ಸಿಕ್ಕಿಸಿ ಕೊಳ್ಳುತ್ತದೆ.ಅದರಿಂದ ಮೊಟ್ಟೆ ಒಡೆದು ರಸ ಹೀರುತ್ತದೆ.ಅದೇ ರೀತಿ ಈಜಿಪ್ಟಿನಲ್ಲಿರುವ ಮುಂಗುಸಿಗಳು ಮೊಟ್ಟೆಯನ್ನು ವೆರದು ಕಾಲುಗಳ ನಡುವೆ ಇತ್ತು ಬಂಡೆಗೆ ಒಡೆದು ಅದರಲ್ಲಿರುವ ರಸವನ್ನು ಸೇವಿಸುತ್ತದೆ.ಎಷ್ಟು ಆಶ್ಚರ್ಯಅಲ್ವ!
No comments:
Post a Comment