ಪ್ರಥಮ ಸಮೀರ ಶ್ರೀ ಗಣೇಶಂ ಗೌರಿಸುತ ಪ್ರಿಯ ಮಹೇಶಂ....! ನಮ್ಮ ಧರ್ಮದಲ್ಲಿ ಅದೆಷ್ಟೇ ದೇವರಿದ್ದರು ನಾವು ಮೊದಲು ಪೂಜಿಸುವುದು ಈ ಗಣಪನನ್ನು.ಶುಭಕಾರ್ಯ ಆಗಿರಲಿ ಎಲ್ಲದಕ್ಕೂ ನಮ್ಮ ವಿನಾಯಕ ಇರಲೇ ಬೇಕು.ಪುರಾಣಗಳಲ್ಲೂ ಈತನಿಗೆ ವಿಶೇಷ ಸ್ಥಾನ.ಏಕದಂತ,ಮೂಷಿಕ ವಾಹನ,ಕೈಲ್ಲಿ ಪಾಶಂಕುಶ, ಕಡಬು,ಸ್ಥೂಲ ಹೊಟ್ಟೆ ,ಅದಕ್ಕೆ ಸುತ್ತಿರುವ ಹಾವು,ಆನೆ ಮುಖ....! ಮನುಷ್ಯ ಸಮಾಜ ಹೆಚ್ಚು ಹೆಚ್ಚು ಆದ್ಯತೆ ಕೊಡುವ ಯಾವ ಅಂಶವು ಗಣಪನಲ್ಲಿ ಇಲ್ಲ ಆದರು ಈತ ಹೆಚ್ಚು ಪ್ರಖ್ಯಾತ.ವಿಶ್ವಮಾನ್ಯ.ವಿಶ್ವದೆಲ್ ಗಣೇಶನ ಮೂರ್ತಿ,ಚಿತ್ರಪಟಗಳಿಗಿರುವ ಡಿಮ್ಯಾಂಡ್ ಬೇರ್ಯಾವ ಪ್ರಸಿದ್ಧ ದೇವರಿಗೂ ಇಲ್ಲ.ಪುರಾಣದತ್ತ ಸ್ವಲ್ಪ ಗಮನ ಹರಿಸಿದಾಗ -ಈತ ಪ್ರುಥ್ವಿತತ್ವ ಹೊಂದಿರುವ ದೇವ,ಅಂದ್ರೆ ನಮ್ಮ ಗಣಪ ಹುಟ್ಟಿದ್ದು ಪಾರ್ವತಿ ಲೆಪಿಸಿಕೊಂಡಿದ್ದ ಹಿಟ್ಟಿನ ಲೇಪನದಿಂದ.ಆದ್ದರಿಂದಲೇ ಮಣ್ಣಿನ ಗಣಪ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ನಮ್ಮಲ್ಲಿ ಬೇರೂರಿದೆ.ಈತನಿಗೆ ಕೆಂಪು ಬಣ್ಣ ಅಂದ್ರೆ ಪ್ರಾಣ.ಧರಿಸುವ ಬಟ್ಟೆ,ಆಭರಣ,ಪೂಜಿಸುವ ಪುಷ್ಪ ಎಲ್ಲವು ಕೆಂಪು ಕೆಂಪು! ಈತನ ವ್ರತ ಮಾಡ ಬಯಸುವವರು ಕೆಂಪು ವಸ್ತ್ರ ಧರಿಸಿ ಮಾಡಿದರೆ ಹೆಚ್ಚು ಪ್ರಯೋಜನ ಅಂತಾರೆ ತಿಳಿದವರು.ಈತ ಪತ್ರೆ ಪ್ರಿಯ,ಇದರ ಬಗ್ಗೆ ವಿವರವಾಗಿ ನೋಡಲು ಹೋದರೆ ತಿಳಿದುಬರುವ ಸಂಗತಿ ಈ ಎಲೆಗಳು ಆರೋಗ್ಯದ ದೃಷ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ.ದತ್ತೂರ,ಮಾಚಿ,ಬಿಲ್ವ...! ಚರ್ಮರೋಗಗಳನ್ನು,ಶ್ವಾಸ ಕೋಶದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಪಡೆದಿರುವ ಪತ್ರೆಗಳಾಗಿದೆ.ಆನೆ ಕಾಡಲ್ಲಿ ವಾಸ ಮಾಡುವ ಪ್ರಾಣಿ ಅದಕ್ಕೆ ಮೇಲೆ ತಿಳಿಸಿರುವ ಎಲೆಗಳು ಸುಲಭವಾಗಿ ದೊರೆಯುತ್ತದೆ,ಆದರೆ ಈ ತುಳಸಿ ಪಾಪ ಆನೆಗೆಲ್ಲಿ ಸಿಗುತ್ತೆ ,ಆದ್ದರಿಂದಲೇ ಇರಬೇಕು ಗಣಪನಿಗೆ ತುಳಸಿಪತ್ರೆ ಅಂದ್ರೆ ಅಷ್ಟಕಷ್ಟೇ! ಗರಿಕೆ,ತರ್ಪಣ,ಮೋದಕ.....!ಈತನಿಗೆ ಪ್ರಿಯ.
ಗಣೇಶ ಸಾರ್ವಜನಿಕ ದೇವರು.ಎಲ್ಲ ಜಾತಿ ವರ್ಗಗಳಿಗೆ ಮಾತ್ರವಲ್ಲ ಮಾತ್ರವಲ್ಲ ಭಿನ್ನಧರ್ಮಗಳಿಗೂ ಈತ ಪ್ರಿಯ.
ಒಂದು ಸಿದ್ಧಾಂತದ ಪ್ರಕಾರ ಆನೆ ತಲೆ ಅಧಿಕಾರದ ಸಂಕೇತ.ಆಗಿನ್ನೂ ಭಾರತವನ್ನು ಬುಡಕಟ್ಟು ಜನಾಂಗದವರು ಆಳ್ತಾ ಇದ್ದ ಕಾಲ.ಆ ಸಂದರ್ಭದಲ್ಲಿ ಒಂದಷ್ಟು ದಾಳಿಕೋರರು ಭಾರತದ ಕಡೆ ಬಂದು ಇಲ್ಲಿದ್ದ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡಿ ಆ ಪ್ರಾಂತ್ಯ ಗೆದ್ದರು,ಅವರು ಹೋಗುವ ಮುನ್ನ ಆನೆ ತಲೆ ಇರುವ ಮುಖವಾಡ ಊರ ಮಧ್ಯದಲ್ಲಿ ಇಟ್ಟು ತಮ್ಮ ಪರವಾಗಿ ಇದಕ್ಕೆ ಮರ್ಯಾದೆ ಸಲ್ಲಿಸಬೇಕು ಎಂದು ತಿಲಿಸೋದರಂತೆ.ಹೀಗೆ ಅನೇಕ ಸ್ಥಳಗಳಲ್ಲಿ ಆನೆಯ ಮುಖವಾಡ ಪ್ರತಿಷ್ಟಾಪಿಸಿ ನಂತರ ಹೊರತು ಹೋದರಂತೆ.ಅಂದಿನಿಂದ ಅಲ್ಲಿ ವಾಸ ಮಾಡುತ್ತಾ ಇದ್ದ ಜನರು ಆ ಮುಖವಾಡಕ್ಕೆ ಗೌರವ ಸಲ್ಲಿಸುತ್ತ ಬಂದರಂತೆ.ಹೀಗೆ ಗಣೇಶನ ಹುಟ್ಟು ಆಯ್ತು ಅಂತಾರೆ.ವಿಷಯ ಏನೇ ಇರಲಿ ಈತ ಎಲ್ಲರಿಗೂ ಪ್ರಿಯನಾದ ದೇವರು.ನನಗಂತೂ ಅತ್ಯಂತ ಆಪ್ತನಾದ ದೇವ.ನನ್ನ ಅತಿ ಮೆಚ್ಚಿನ ದೇವ ಈತ.ಜೈ ಜೈ ಗಣೇಶ!