Thursday, 29 October 2009
ಸೇಮ್ ಸೇಮ್ ರಿಸೆಂಬಲ್ !
ತಂದೆ-ತಾಯಿಯ ಹೋಲಿಕೆ ಮಕ್ಕಳಲ್ಲಿ ಬರುವುದು ಸಾಮಾನ್ಯ ಸಂಗತಿ.ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಷಯಕ್ಕೆ ಬಂದರೆ ಅವರ ಅಭಿಮಾನಿಗಳ ಸಂತೋಷ ಹೇಳತೀರದ್ದಾಗುತ್ತದೆ . ಸ್ಯಾಂಡಲ್ ವುಡ್ಡಿನಲ್ಲಿ ಅಣ್ಣಾವರನ್ನು ಶಿವರಾಜ್ ರಾಜ್ ಕುಮಾರ್ ಹೋಲ್ತಾರೆ,ಅದೇ ರೀತಿ ಗಿರಿಜಾ ಲೋಕೇಶ್ ಥರ ಸೃಜನ್,ವಿನೋದ್ ಪ್ರಭಾಕರ್ ಥೇಟ್ ಪ್ರಭಾಕರ್ ರೀತಿಯಲ್ಲಿ ಇದ್ದಾರೆ,ದ್ವಾರಕೀಶ್ ಮಕ್ಕಳ ಬಗ್ಗೆ ಹೇಳುವಷ್ಟೇ ಇಲ್ಲ...! ಈ ಸಂಗತಿಯನ್ನು ಮುಂದಿಟ್ಟುಕೊಂಡು ಬಾಲಿವುಡ್ ಕಡೆ ಕಣ್ ಹಾಯಿಸಿದರೆ ಇಂತಹ ಅನೇಕ ನಮೂನೆಗಳು ಕಣ್ಣಿಗೆ ಬೀಳುತ್ತದೆ.
ಶ್ರುತಿ ಹಾಸನ್ :- ಪಂಚ ಭಾಷಾ ತಾರೆ ಕಮಲ ಹಾಸನ್ ಹಾಗೂ ಮಾದಕ ನಟಿ ಸಾರಿಕ ಅವರ ಕರುಳ ಬಳ್ಳಿ ಶ್ರುತಿ ಹಾಸನ್.ಥೇಟ್ ಅಮ್ಮನ ಹಾಗೆ ಇರುವ ಈ ಸುಂದರಿ ಲಕ್ ಸಿನೆಮಾದಲ್ಲಿ ನಟಿಸಿ ಸೋತು ಸೊಟ್ಟ ಮುಖ ಹಾಕಿ ಕೊಂಡು ಬಂದಾಗಿದೆ.ಈಗ ತೆಲುಗು ಹಾಗೂ ತಮಿಳು ಮಂದಿ ಈ ಇಳವರಸಿಯನ್ನು ಬೆಳೆಸಲು ಪರದಾಡ್ತಾ ಇದ್ದಾರೆ.ಈ ಮುದ್ದು ಹುಡುಗಿ ಸಿನಿ ಕ್ಷೇತ್ರದಲ್ಲಿ ತಾಯಿಯಂತೆ ಗ್ಲಾಮರ್ ಬೊಂಬೆಯಾಗಿ ಉಳಿತಾಳೋ ಇಲ್ಲ... ತಂದೆಯಂತೆ ಅಪ್ಪಟ ಪ್ರತಿಭೆಯಾಗಿ ವೀಕ್ಷಕರ ಮನ ಗೆಲ್ತಾಲೋ? ಕಾಲವೇ ಹೇಳುತ್ತೆ!!!
ರಣಬೀರ್ ಕಪೂರ್ :- ರಾಜ್ ಕಪೂರ್ ಖಾಂದಾನ್ ಕುಡಿ ಈ ಚಲುವಾಂತ ಚನ್ನಿಗ ರಿಷಿಕಪೂರ್ ಮತ್ತು ನೀತುಸಿಂಗ್ ಒಡಲ ಬಳ್ಳಿ.ಈ ನಟ ಥೇಟ್ ಅಮ್ಮನ ಥರ ಇದ್ದಾನೆ ಸಧ್ಯ ! ಸಾವರಿಯ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ತಕ್ಷಣ ಗೆಲುವು ಸಿಕ್ಕಲಿಲ್ಲ.ಈಗಿನ ಪರಿಸ್ಥಿತಿಯಲ್ಲಿ ಆತ ಗೆಲ್ಲುವ ಕುದುರೆಯಾಗಿ ನಿರ್ಮಾಪಕರಲ್ಲಿ ಭರವಸೆ ಹುಟ್ಟಿಸ್ತಾ ಇದ್ದಾನೆ.
ಇಷ ಡಿಯೋಲ್ :- ಒನ್ಸ್ ಅಪಾನ್ಎ ಟೈಮ್ ಪಡ್ಡೆ ಹೈಕಳ ಡ್ರೀಂ ಗರ್ಲ್ ಆಗಿದ್ದ ಹೇಮಮಾಲಿನಿ ಮಗಳು ಇಷ,ಅಮ್ಮ ತದ್ರೂಪು.ಆದರೆ ಹೇಮಳಂತೆ ಪ್ರತಿಭೆಯಿಂದ ಹೆಸರು ಮಾಡಲಿಲ್ಲ ,ತನ್ನ ಬಿಚ್ಚು ಸ್ವಭಾವದಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದಳು ಈ ಚಲುವೆ.
ರೈಮ ಸೇನ್ :- ಅಮ್ಮ ಮೂನ್ಮೂನ್ ಸೇನ್ ಅಮ್ಮೋ ಅನ್ನುವಷ್ಟು ಗ್ಲಾಮರಸ್,ಇನ್ನು ಆಕೆಯ ಮಗಳು ಪ್ರೇಕ್ಷಕರ ಕಥೆ ಬ್ಯಾ...ಡಾ.....!ಭಾರತೀಯ ಚಿತ್ರ ರಂಗದಲ್ಲಿರುವ ಅನೇಕ ವುಡ್ ಗಳ ವೀಕ್ಷಕರ ಗಮನ ಸೆಳೆದಿರುವ ರೈಮ ರೂಪದಲ್ಲಿ ಅಮ್ಮನ ಹೋಲಿಕೆ ಪಡೆದಿದ್ದಾಳೆ.
ಸೋಹ ಅಲಿಖಾನ್ :- ಪಟೌಡಿ ಖಾಂದಾನ್ ಕೂಸು.ಅಪ್ಪನ ಹಾಗೆ ಹುಟ್ಟಿಲ್ಲ,ಥೇಟ್ ಅಮ್ಮಿಜಾನ್ ಶರ್ಮಿಳಾ ಠಾಕೂರ್ ಥರ ಹುಟ್ಟಿರೋದು.ನಟನೆ ಸಹ ಓಕೆನೆ!.ಆದರೆ ಹೇಳಿಕೊಳ್ಳುವಂತಹ ಅಚಿವ್ ಮೆಂಟ್ ಆಗಿಲ್ಲ.
ಹೃತಿಕ್ ರೋಶನ್ :- ಗ್ರೀಕ್ ದೇವತೆಯ೦ತಹ ಮುಖ ಈತನ ವಿಶೇಷತೆ.ರೂಪ ನಟನೆ ಎರಡರಲ್ಲೂ ಸೈ! ಈತನಿಗೆ ಅಪ್ಪ ರಾಕೇಶ್ ರೋಶನ್ ಕಣ್ಣು ಬಳುವಳಿಯಾಗಿ ಬಂದಿದೆ .ಜೊತೆಗೆ ಪ್ರತಿಭೆಯನ್ನು ಅಪ್ಪನಿಂದ ಬಳುವಳಿಯಾಗಿ ಪಡೆದಿದ್ದಾನೆ.
ಅಭಿಷೇಕ್ ಬಚ್ಚನ್ :-ಭಾರತೀಯ ಚಿತ್ರ ರಂಗದ ಅದ್ವಿತೀಯ ಕಾಲಾವಿದರಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಾದುರಿ ಪ್ರೀತಿಯ ಮಗ ಅಭಿಷೇಕ್ ಪಕ್ಕ ಅಪ್ಪ ಅಮಿತಾಬ್ ಥರಾನೇ ಇರೋದು.ಅಪ್ಪ ಬಿಗ್ ಬಿ ಯ ರೀತಿ ಗೆಲ್ಲುವುದಕ್ಕೆ ಸಾಧ್ಯ ಆಗಿಲ್ಲ .ಆದರು ಬಾಲಿವುಡ್ ನಲ್ಲಿ ಈತ ಒಂದೊಳ್ಳೆಯ ಸ್ಥಾನ ಪಡದೆ ಪಡೀತಾನೆ ಅನ್ನುವ ಭರವಸೆ ಸಿನಿ ಪಂಡಿತರಿಗಿದೆ !
ಸನ್ನಿ ಡಿಯೋಲ್ :- ಹೋಲಿಕೆ ಅಂದ್ರೆ ಹೀಗಿರಬೇಕು.ಈ ರೀತಿಯ ರಿಸೆಂಬಲ್ ಯಾವ ಮಕ್ಕಳು ತಮ್ಮ ತಾಯ್ತಂದೆಗಳಿಂದ ಪಡೆದೇ ಇಲ್ಲ ಅಂತ ಹೇಳ ಬಹುದು.ರೂಪದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲೂ ಸಹ ಅಪ್ಪನಂತೆ !!
Subscribe to:
Post Comments (Atom)
No comments:
Post a Comment