Thursday, 29 October 2009

ಸಹಾಯ -ಒಳಿತು

1 -) ಸಿಯಾಟಿಲ್ ವಿಕಲಚೇತನರ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡೆಯಲ್ಲಿ ಒಂಬತ್ತು ಮಂದಿ ನಡುವೆ ಓಟದ ಸ್ಫರ್ಧೆ ನಡೀತಾ ಇತ್ತು.ಓಟದ ನಡುವೆ ಒಬ್ಬ ಸ್ಪರ್ಧಿ ಕೆಳಕ್ಕೆ ಬಿದ್ದೆ ಬಿಟ್ಟ.ಉಳಿದವರು ಓಡುವತ್ತ ತಮ್ಮ ಗಮನ ನೆಟ್ಟಿದ್ದರು ಒಬ್ಬನನ್ನು ಹೊರೆತುಪಡಿಸಿ.ಆತ ಬಿದ್ದವನ ಬಳಿ ಬಂದು ಎಲ್ಲಿ ನೋವಾಗ್ತಿದೆ ಪುಟ್ಟ ಅಂತ ಕೇಳಿದ ,ಆಗ ಆ ಹುಡುಗ ಅಳುತ್ತ ತೋರಿಸಿದ.ಆಗ ಆತ ನಿಧಾನವಾಗಿ ಅವನನ್ನು ಮೇಲೆತ್ತಿ ಕೈ ಹಿಡಿದು ನಡೆಸಿಕೊಂಡು ಬಂದ.ಇಡೀ ಸ್ಟೇಡಿಯಂ ನಲ್ಲಿದ್ದ ಅಷ್ಟೂ ಜನ ಎದ್ದು ನಿಂತು ಚಪ್ಪಾಳೆ ತಟ್ಟಿತು ಈ ದೃಶ್ಯ ಕಂಡು ! ಆನಂತರ ಕೆಲವರು ಆಟದಲ್ಲಿ ನೀನು ಮೊದಲಿದ್ದೆ ,ಅದ್ಯಾಕೆ ನೀನು ಗೆಲ್ಲುವುದು ಬಿಟ್ಟು ಅವನನ್ನು ರಕ್ಷಿಸಿದೆ ? ಎಂದು ಕೇಳಿದರು.ಆಗ ಆ ಸ್ಪರ್ಧಿ ಆತ ಏಳಲಾಗದೆ ಅಳುತ್ತ ಇದ್ದ.ಆಗ ನಂಗೆ ಈ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಒಳಿತು ಅಂತ ಅನ್ನಿಸಿತು,ಆದಕಾರಣ ಆರೀತಿ ಮಾಡಿದೆ ಅಂತ ಹೇಳಿದ.ಆಗ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಅತಿಥಿಯಾಗಿ ಬಂದಿದ್ದ ಆ ರಾಜ್ಯದ ಗವರ್ನರ್ 'ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದ ವ್ಯಕ್ತಿಗಿಂತ ನಿಜವಾಗಿಯು ಮಾನವತೆಯಿಂದ ಗೆದ್ದಿರುವ ವ್ಯಕ್ತಿತ್ವದ ಬಗ್ಗೆ ನನಗೆ ಹೆಚ್ಚು ಗೌರವ ಉಂಟಾಗಿದೆ 'ಎಂದು ಹೇಳಿದರಂತೆ.
2 -) ಅಮೆರಿಕದ ಒಗ್ದೆನ್ ಹೈ ಸ್ಕೂಲ್ನ ಕೆಲವು ವಿದ್ಯಾರ್ಥಿಗಳು ಹೋಂ ಬೋಲ್ಟ್ ಶಾಲೆಯಲ್ಲಿ ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಬಂದಿದ್ದರು .ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಶಾಲೆಯಲ್ಲೂ ಈ ಸ್ಪರ್ಧೆ ಇದ್ದೆ ಇರುತ್ತಿತ್ತು.ಹೋಂ ಬೋಲ್ಟ್ ಸ್ಕೂಲ್ ಕೋಚ್ ಒಗ್ದೆನ್ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದ ಬಳಿಕ 'ನಮ್ಮಲ್ಲಿ ಈ ಏಳು ಕುಸ್ತಿಪಟುಗಳಲ್ಲಿ ಭಾಗವಹಿಸುವವರಲ್ಲಿ ಬ್ರೆಂಟ್ ಅನ್ನುವ ವಿದ್ಯಾರ್ಥಿ ಡೌನ್ ಸಿಂಡ್ರೋಮ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾನೆ .ಆತನಿಗೆ ಕುಸ್ತಿಯಲ್ಲಿ ನೈಪುಣ್ಯತೆ ಇಲ್ಲ,ಆದರೆ ಭಾಗವಹಿಸಬೇಕೆನ್ನುವ ಉತ್ಸಾಹಕ್ಕೆ ಕೊರತೆಯಿಲ್ಲ.ನಿಮ್ಮಲ್ಲಿ ಯಾರು ಬೇಕಾದರೂ ಅವನನ್ನು ಕ್ಷಣದಲ್ಲಿ ಸೋಲಿಸ ಬಲ್ಲಿರಿ .ತಾನು ಸೋಲ್ ತೀನಿ ಅಂತ ತಿಳಿದಿದ್ದರೂ ಆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ನಿಮ್ಮಲ್ಲಿ ಯಾರು ಮೊದಲು ಕಣಕ್ಕೆ ಇಳೀತಿರಿ ?' ಎಂದು ಕೇಳಿದ.ಕೆಲಕ್ಷಣ ನಿಶಬ್ಧ.ಬಳಿಕ ಒಗ್ದೆನ್ ಟೀಂ ನಿಂದ ಒಂದು ಧ್ವನಿ ಕೇಳಿ ಬಂತು ' ನಾನು ಸಿದ್ಧ'ಆ ಟೀಂ ಕೆನ್ ಬ್ರುಲೆಂಡ್ ನಗುತ್ತ ಮುಂದೆ ಬಂದ.ಬ್ರೆಂಟ್ ಜೊತೆ ಆತ ಕುಸ್ತಿ ಆರಂಭ ಮಾಡಿದ.ಕ್ಷಣದಲ್ಲಿ ಈ ಕಾಳಗ ಮುಗಿದು ಹೋಗ್ತಾ ಇತ್ತು,ಆದರೆ ಹಾಗಾಗಲಿಲ್ಲ.ಆರು ನಿಮಿಷಗಳ ಕಾಲ ಈ ಸ್ಪರ್ಧೆ ನಡೆಯಿತು.ಅಷ್ಟೇ ಅಲ್ಲದೆ ಬ್ರೆಂಟ್ ಗೆಲ್ಲುವಷ್ಟು ಪಾಯಿಂಟ್ಗಳು ಬರುವಂತೆ ಮಾಡಿ ಕೆನ್ ಸೋತು ಹೋದ.ನಂತರ ಕೆನ್ಗೆ ನಿಯಮದ ಅನ್ವಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಯ್ತು.' ಗೆಲುವು ನನ್ನದಾಯ್ತ?' ಆಶ್ಚರ್ಯ ತಡಿಯಲಾಗದೆ ಕೇಳಿದ ಬ್ರೆಂಟ್.ಹೌದು ಅಂತ ಹೇಳಿದ ಕೆನ್ ನಗುತ್ತ.ಜೊತೆಗೆ ಆತ ಗೆದ್ದ ಸೂಚಕವಾಗಿ ಬ್ರೆಂಟ್ ಬಲಗೈ ಮೇಲೆತ್ತಿದ.ಆ ಸ್ಪರ್ಧೆ ವೀಕ್ಷಣೆಗೆ ಬಂದಿದ್ದದ ಆರುಸಾವಿರ ಮಂದಿ ಎದ್ದು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
3 -) ಹಾರ್ಬರ್ಟ್ ಹೂಪರ್ ಸುಮಾರು ನಲವತ್ತೇಳು ವರ್ಷಗಳ ಕಾಲ ಅಮೆರಿಕದಲ್ಲಿ ಅಧ್ಯಕ್ಷರಾಗಿ-ವಿವಿಧ ಪದವಿಗಳಲ್ಲಿ ಕೆಲಸ ಮಾಡ ಬೇಕಾಗಿ ಬಂದರೂ ಆಡಳಿತ ನಡೆಸಿದರು.ಆದರೆ ಸರ್ಕಾರ ನೀಡಿದ ಸಂಬಳವನ್ನು ಆತ ತನಗಾಗಿ ಬಳಸದೆ ಬಡವರು,ನಿರ್ಗತಿಕರ ಸೇವೆಗಾಗಿ ಮುಡಿಪಾಗಿಟ್ಟ ಸಂಸ್ಥೆಗಳಿಗೆ ನೀಡಿದರು.ಮುಖ್ಯವಾಗಿ ರಾಜಕೀಯಕ್ಕೆ ಬರುವ ಮುಂಚಿನಿದಲು ಆತ ಶ್ರಿಮಂತನಾಗಿದ್ದ.
4 -) ಕೃತಜ್ಞತೆ ಕೇವಲ ಭಾವನೆ ಮಾತ್ರವಲ್ಲ ಅದೊಂದು ಕೃತಿ ಅಂತ ಹೇಳ್ತಾರೆ ತಿಳಿದೋರು.ಹಾಲಿವುಡ್ ಹೀರೋ ರಾಯ್ ರೋಗರ್ಸ್ ಇದನ್ನು ಸೂಕ್ತ ಪಾಲಿಸಿದ್ದಾರೆ .ಆತ ಹೀರೋ ಆಗಿ ನಟಿಸಿದ ಮೊದಲ ಚಿತ್ರ ' ಡಿ ವರ್ಲ್ಡ್ ಹೋಂ ಸೈಡ್'(1935), ಮತ್ತೊ ಮೂರು ಚಿತ್ರಗಳು ಬಿಡುಗಡೆಯಾದ ಬಳಿಕ ಆತನ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳಾದ ಅನೇಕರು ರಾಯ್ ಗೆ ಪತ್ರಗಳನ್ನು ಬರೆಯುತ್ತಿದ್ದರು.ಆದರೆ ರಾಯ್ಸ್ಗೆ ದೊರೆಯುತ್ತಿದ್ದ ಹಣ ಅಷ್ಟು ಅಭಿಮಾನಿಗಳಿಗೆ ಉತ್ತರಿಸಲು ಬೇಕಾದ ಅಂಚೆ ವೆಚ್ಚಭರಿಸಲು ಅಸಮರ್ಥವಾಗಿತ್ತು.ಆಸಂದರ್ಭದಲ್ಲಿ ಆತನಿಗೆ ನಟನೆ ಮಾಡಲು ಅವಕಾಶ ಕೊಟ್ಟ ರಿಪಬ್ಲಿಕ್ ಪಿಕ್ಚರ್ಸ್ ಮುಖ್ಯಸ್ಥರನ್ನು ರಾಯ್ ಭೇಟಿ ಮಾಡಿ ಅಭಿಮಾನಿಗಳಿಗೆ ಪತ್ರಿಸಲು ತನಗೆ ಸ್ವಲ್ಪ ಧನಸಹಾಯ ಮಾಡ ಬೇಕೆಂದು ಕೇಳಿದಋ ,ಆದರೆ ಸಂಸ್ಥೆ ಇದಕ್ಕೆ ಸಮ್ಮತಿಸಲಿಲ್ಲ.ಜೊತೆ ಇಂತಹ ವಿಷಯಗಳನ್ನು ಗಂಭಿರವಾಗಿ ಪರಿಗಣಿಸ ಬೇಕಿಲ್ಲ ಎಂದು ಬಿಟ್ಟಿ ಸಲಹೆ ನೀಡಿತು.ಆದರೆ ರಾಯ್ ಸುಮ್ಮನಾಗದೆ ,ತನ್ನ ಸ್ವಲ್ಪ ಕಾಲವನ್ನು ವಯುಕ್ತಿಕ ಪ್ರದರ್ಶನ ನೀಡಲು ಮೀಸಲಾಗಿಟ್ಟು ಅದರಿಂದ ಬಂದ ಹಣವನ್ನು ಅಭಿಮಾನಿಗಳಿಗೆ ಪತ್ರಿಸಲೆಂದು ಮುಡಿಪಾಗಿಟ್ಟರು..ಆ ಕೆಲಸ ಮಾಡಲು ಮೂರೂ ಜನರಿಗೆ ಉದ್ಯೋಗನೀಡಿದರಂತೆ.

No comments:

Post a Comment

Followers