Saturday, 17 October 2009
ದೀಪಗಳ ಹಬ್ಬ
ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಹಬ್ಬ ದೀಪಾವಳಿ.ಇದರ ಬಗ್ಗೆ ಹೇಳಿದಷ್ಟು ಮುಗಿಯದು ಅಂದು ವಿಷ್ಣು ಮಹಾಲಕ್ಷ್ಮಿಯನ್ನು ಮದುವೆಯಾದ ದಿನವೆಂದು ಪುರಾಣಗಳಲ್ಲಿ ತಿಳಿಸಿದೆ.ದೀಪಾವಳಿಯ ಬಗ್ಗೆ ಇರುವ ಅನೇಕ ವಿಶೇಷತೆಗಳುಹೀಗಿವೆ.
ಮಹಾ ಲಕ್ಷ್ಮಿಯ ಜನ್ಮದಿನ:- ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಕಾರ್ತಿಕ ಮಾಸದ ಆರಂಭದಲ್ಲಿ ಬರುವ ಅಮಾವಾಸ್ಯೆಯ ದಿನ ಜನ್ಮಿಸಿದಲೆಂದು ಪುರಾಣಗಳಲ್ಲಿ ಉಲ್ಲೇಖವಿದೆ.ಈ ಕಾರಣದಿಂದ ಭಕ್ತರು ತಾಯಿಯ ಜನ್ಮ ದಿನ ಆಚರಿಸುತ್ತಾರೆ.
ವಿಷ್ಣು ಬಿಡುಗಡೆ ಮಾಡಿದ್ದು:- ಬಲಿ ಚಕ್ರವರ್ತಿಯ ಸೆರೆಯಲ್ಲಿದ್ದ ಲಕ್ಷ್ಮಿಯನ್ನು ಮಹಾ ವಿಷ್ಣು ವಾಮನ ಅವತಾರ ತಾಳಿ ಬಿಡುಗಡೆ ಮಾಡಿದ ಎಂದು ಪುರಾಣಗಳಲ್ಲಿ ತಿಳಿಸಿದೆ.ಈ ಕಾರಣದಿಂದಲೂ ಹಬ್ಬ ತುಂಬಾ ವಿಶೇಷತೆ ಪಡೆದು ಕೊಂಡಿದೆ.( ಐದನೆಯ ಅವತಾರ).
ರಾಮಾಯಣದಲ್ಲಿ:- ರಾವಣಸುರನನ್ನು ವಧಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಜನರು ಸಂಭ್ರಮದ ದೀಪಾವಳಿಯನ್ನು ಆಚರಿಸಿದರಂತೆ.
ನರಕಾಸುರ ವಧೆ :-ಪ್ರಗ್ಜೋತೀ ಪುರವನ್ನು ಆಳುತ್ತಿದ್ದ ನರಕಾಸುರ ಹದಿನಾರು ಸಾವಿರ ಹೆಣ್ಣು ಮಕ್ಕಳನ್ನು ಸೇರೆಯಲ್ಲಿತೂ ಕೊಂಡಿದ್ದ.ಭೂಮಿಯ ಮಗನಾದ ಈತನ ಉಪಟಳ ಕಡಿಮೆ ಮಾಡಲು ಶ್ರೀ ಕೃಷ್ಣ ತನ್ನ ಮೆಚ್ಚಿನ ಮಡದಿ ಸತ್ಯಭಾಮಳೊಂದಿಗೆ ಯುದ್ಧಕ್ಕೆ ಹೊರಟ.(ಈ ಯುದ್ಧ ದಲ್ಲಿ ಸತ್ಯಭಾಮ ನರಕಾಸುರನ ವಧೆ ಮಾಡಿದಳೆಂದು ಕೆಲವು ಪುರಾಣಗಳು ಹೇಳುತ್ತವೆ.ಅಂದ್ರೆ ಈಕೆ ಭೂಮಿತಾಯಿಯ ಅವತಾರವಾಗಿದ್ದು ತನ್ನ ದುಷ್ಟ ಮಗನನ್ನು ಸಾಯಿಸಿ ಭೂಮಿಯನ್ನು ರಕ್ಷಿಸಿದಳಂತೆ)
ಪಾಂಡವರ ಶುಭದಿನ:- ಹನ್ನೆರಡು ವರ್ಷಗಳಕಾಲ ವನವಾಸ ಹಾಗೂ ಅಜ್ಞಾತವಾಸ ಮಾಡಿಮುಗಿಸಿದ ನಂತರ ವಿಜಯದ ಸಂತೋಷವನ್ನು ದೀಪಗಳನ್ನು ಹಚ್ಚಿ ಅನುಭವಿಸಿದರಂತೆ.ಅಂದು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನವಾಗಿತ್ತಂತೆ!
ಇತಿಹಾಸ :-ಇತಿಹಾಸದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದೊರೆ ವಿಕ್ರಮಾದಿತ್ಯ.ಆತ ನಿರ್ವಾಣ ಹೊಂದಿದ ದಿನ ದೀಪಾವಳಿ.ಈ ಮೂಲಕ ದೀಪಾವಳಿ ಇತಿಹಾಸ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ.
ಆರ್ಯ ಸಮಾಜ :- ಮಹರ್ಷಿ ದಯಾನಂದ ನಿರ್ವಾಣ ಪಡೆದ ದಿನ
ಜೈನರಿಗೂ ವಿಶೇಷ ದಿನ :-ಜೈನಧರ್ಮ ಸ್ಥಾಪಕ ಮಹಾವೀರ ತೀರ್ಥಂಕರ ನಿರ್ವಾಣ ಹೊಂದಿದ ದಿನ ದೀಪಾವಳಿ.
ದೀಪಾವಳಿ ಸಿಖ್ಖರ ವಿಶೇಷ ದಿನ :- ಸಿಖ್ಖರ ಮೂರನೆಯ ಗುರು ಆದ ಗುರು ಅಮರ್ ದಾಸ್ ದೀಪಾವಳಿಯನ್ನು ಕೆಂಪು ಪತ್ರದ ದಿನ ಎಂದು ಕರೆದರು..1577 ರಂದು ಅಮೃತಸರದಲ್ಲಿರುವ ಗೋಲ್ಡನ್ ಗೆ ಟೆಂಪಲ್ ಅಡಿ ಪಾಯ ಹಾಕಿದ ದಿನ.
Subscribe to:
Post Comments (Atom)
No comments:
Post a Comment