Friday, 4 June 2010

ಮೌನ ಮುರಿತಿನಿ!!

ಸಿಕ್ತೀಯಾ?...........
ನಾನು ನಿನ್ನ ಬಳಿ ಪದೇಪದೆ ಕೇಳದ ಪ್ರಶ್ನೆಇದು... ಪಾಪದ ಹುಡ್ಗ ನೀನು ನನ್ನಿಂದ ಬಯಸಿದ ಪ್ರಶ್ನೆ ಇದೊಂದೇ....! ನಿನ್ನ ಚಡಪಡಿಕೆ ನನಗೆ ನಗು...! ನನ್ನ ಮೌನ ನಿನಗೆ ಗಾಬರಿ..!ಒಂದು ದಿನ ನಿನ್ನತ್ತ ನನ್ನ ಕಣ್ ನೋಟ ಬೀಳದೆ ಇದ್ದರೆ ನೀನು ಅತಂತ್ರ..! ಬಲ್ಲೆ ಚಲುವ ನಾನೆಲ್ಲ ಬಲ್ಲೆ, ನನ್ನ ಪುಟ್ಟ ನಗೆ ನಿನಗೆ  ಸಂಜೀವಿನಿ.ಸಾರಿ ಕಣೋ ಹುಡ್ಗ ತುಂಬಾ ಸತಾಯಿಸಿ ಬಿಟ್ಟೆ ನಾನು, ನೋಡು ಅದಕ್ಕೋಸ್ಕರ ಎಷ್ಟು ಬೇಗ ಎದ್ದು ಬಿಟ್ಟು ಬರೆಯೋಕೆ ಕೂತಿದ್ದೀನಿ  .. ಬಿಲೀವ್ ಕಣೋ ನಾನು ಶುದ್ಧ ಸೋಮಾರಿ ! ಅಂತಹುದರಲ್ಲಿ ನಿನಗಾಗಿ ಸಿರ್ಫ್ ನಿನಗಾಗಿ ಅದೆಷ್ಟು ಬೇಗ ಎದ್ದು ಪತ್ರ ಬರಿತಾ ಇದ್ದೀನಿ. ಇದು ಪ್ರೇಮ ಪತ್ರವ? ಉಹೂಂ ಐ ಡೋಂಟ್ ನೋ..ಆದರೆ ಇದನ್ನು ನನ್ನ ಮನಸ್ಸು ಅಂತ ತಿಳಿ  ಕನಿಷ್ಠ  ನಿನ್ನ ಚುಂಬಕ  ನಗುವಿಗೊಂದಷ್ಟು ಜೀವ ಬಂದೀತು. ಶುದ್ಧ ಪೆದ್ದು..ಸಿಟ್ ಬರ್ತಾ ಇದೆ, ನನ್ ಬಗ್ಗೆ ನಿನಗೆ ಏನೂ ಹೇಳಿರಲಿಲ್ಲ ಅಲ್ವ, ಕೇಳೋ ಹುಡ್ಗ ನಾನು ಸ್ವಲ್ಪ ಜಾಸ್ತೀನೆ ಪೊಸೆಸಿವ್...! ಅದೇ ನನ್ನ ಕೆಟ್ ಗುಣ...! ಆ ಗುಣದಿಂದಲೇ ನಾನು ಯಾರ ಬಳಿ ಹೆಚ್ಚು ಸ್ನೇಹ ಮಾಡಲ್ಲ, ಅದರಲ್ಲೂ ಹುಡುಗರ ಕಥೆ ಬೇಡವೇ ಬೇಡ ! ಫ್ರಾಂಕ್ಲಿ  ಇಷ್ಟರ ಮಧ್ಯೆ ಅದ್ಯಾಕೋ ನನಗೆ ನೀನು ತುಂಬಾ ಇಷ್ಟ ಆಗಿ ಬಿಟ್ಟೆ,ಹಾಗೆ ನಿನ್ ಕಡೆ ಗಮನಕೊಟ್ಟೆ.. ಹುಡ್ಗ ನೀನು ಸ್ನೇಹಜೀವಿ ರಾಶಿ ಫ್ರೆಂಡ್ಸ್..! ಸದಾ ಉಲ್ಲಾಸದ ಚಿಲುಮೆ, ನಿನ್ ಫ್ರೆಂಡ್ಸ್ ಆ ಹುಡ್ಗಿಯರು ಎಷ್ಟು ಬ್ಯೂಟಿಫುಲ್ ! ಅವರ ಮುಂದೆ ನಾನು ತುಂಬಾ ಸಪ್ಪೆ, ನೀನು ಅವರೊಂದಿಗೆ ಹರಟುವಾಗ ಚೂರು ಹೊಟ್ಟೆ ಉರಿದ್ಕೊಳ್ತಾ  ಇದ್ದೆ,ಆಮೇಲೆ ನಂಗೆ ಅನ್ನಿಸಿದ್ದು ನಾನ್ಯಾಕೆ ನಿನ್ ವಿಷಯದಲ್ಲಿ ಹೀಗೆ? ನಾನು ನಿನ್ನನ್ನು....? ಇಲ್ಲ ನನಗೆ ಒಪ್ಪಿಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ, ಅದೇ ಕಣೋ ನನ್  ಕೆಟ್ ಗುಣ! ಆದರೂ ಈ ಪತ್ರ ಬರೆಯುವ ಕಾರಣ ಎನ್ ಗೊತ್ತಾ?ನಿನ್ನ ರಾಶಿ ರಾಶಿ ಫ್ರೆಂಡ್ಸ್ ನಲ್ಲಿ  ನಿನ್ನ ಮನ ಗೆದ್ದವಳು ನಾನೂಂತ ಗೊತ್ತಾಗಿ ಬಿಡ್ತು, ಆಗೆಷ್ಟು ಖುಷಿ ಆಯ್ತು ಗೊತ್ತ..? ಹೇಗೆ ಅಂತ ಕೇಳ್ತೀಯಾ, ಅಂದು ಅದೇ ನಾನು ಬ್ಲಾಕ್ ಚುಡಿ ಹಾಕಿಕೊಂಡು ನನ್ ಫ್ರೆಂಡ್ ಸವಿ ಹರಟುವಾಗ ಹುಡ್ಗ ನಿನ್ನ ಕಣ್ಣು ನನ್ನನ್ನು ಹಿಂಬಾಲಿಸ್ತಾ  ಇತ್ತು,ಮನದಲ್ಲಿ ಪುಳಕ,ಆಗಲ್ವ..ಹೇಳು  !! ನಿನ್ನ ಸುತ್ತಮುತ್ತ ಸಾವಿರಾರು ಕಣ್ಣುಗಳು ಹರಿದಾಡುವಾಗ... ಹಮ್ಮ! ಹೆಣ್ಣುಮಕ್ಕಳೇ ಹಾಗೆ ಕಣೋ ಮನಸ್ಸು ಕೊ ಟ್ ಮೇಲೆ ತುಂಬಾ ಪ್ರಾಮಾಣಿಕರಾಗಿ ಬಿಡ್ತಾರೆ, ದಡ್ಡ ಹುಡುಗರು ನೀವು ಅದನ್ನು ಅರ್ಥ ಮಾಡಿ ಕೊಳ್ಳಲು ಹೋಗುವುದೇ ಇಲ್ಲ. ನೀನು ನನಗೆ ಪ್ರಪೋಸ್ ಮಾಡಲಿಲ್ಲ, ಪುಟ್ಟ ಪಿಂಕ್ ಗುಲಾಬಿ ಕೊಟ್ಟಿಲ್ಲ, ಕಾರ್ಡ್ ಇಲ್ಲ, ಎಸ್ಸೆಮ್ಮೆಸ್ ಉಹುಂ ಅದೂ ಇಲ್ಲ ಆದರೂ ನಾ ಬಲ್ಲೆ ಗೆಳೆಯ ನೀನು ನನ್ನನ್ನು ಇಷ್ಟ ಪಡ್ತಾ ಇದ್ದೀಯ ಅಂತ. ಪದೇಪದೆ ನೆನಪಾದೆ...! ಗೊತ್ತಿಲ್ಲ ಇಂದು ಮನಸ್ಸೆಲ್ಲ ಖುಷಿಯಿಂದ ಅರಳಿದೆ.ಹೇಳ್ಬಿದ್ಲಾ ನಾನು! ಇಲ್ಲ ಅದು ಸಾಧ್ಯ ಇಲ್ಲ ನನ್ ಕೈಲಿ ಅದು ಸಾಧ್ಯ ಆಗಲ್ಲ, ಮತ್ತದೇ ಕೆಲಸ ರಾಶಿ ರಾಶಿ ! ಬೋರ್ ಅನ್ನಿಸಿದರು ನಿನ್ನ ಮುದ್ದಾದ ನಗು ಜ್ಞಾಪಕಕ್ಕೆ ಬಂದ ತಕ್ಷಣ ಎಲ್ಲ ಫಟಾಫಟ್ !ಎಷ್ಟು  ದಿನ ಆಯ್ತಲ್ವ ನಿನ್ನನ್ನು ನಾನು ನೋಡಿ..ಇಷ್ಟು ದಿನ ಷೋ ಅಂತ ಅಟ್ಲಾ೦ಟಾಗೆ ಹೋಗಿದ್ದೆ ಅಂತ ತಿಳೀತು ..ರಾಕಿ ಹೇಳ್ದ...! ಮೌನ ಮುರಿತಿನಿ ಕಣೋ ಇಂದು ನಾನು ನನ್ ಮನಸ್ಸನ್ನ ಬಿಚ್ಚಿ ಇಡ್ತೀನಿ, ನನ್ನ ಪ್ರೀತಿ, ಪೊಸೆಸಿವ್ ನೆಸ್ಸ್ , ಕನಸು, ಆಸೆ ಎಲ್ಲವನ್ನು ಹೇಳಿ ಬಿಡ್ತೀನಿ...ಅವೆಲ್ಲ ಹೇಳ್ ಬೇಕಾದರೆ ನೀನ್ ನನಗೆ ಸಿಗಬೇಕು...! ಸಿಕ್ತೀಯ ಚಿನ್ನಾ...??????!!!!!!!
ನಾನು ....!!

1 comment:

  1. ಲವ್ ಲವಿಕೆ:) ಚೆನ್ನಾಗಿದೆ:)

    ReplyDelete

Followers