Sunday, 20 June 2010

ಹಟಮಾರಿ ಪಾಪಚ್ಚಿ

 Daily Mail  ನಲ್ಲಿ ಬಂದ ಸುದ್ದಿ, ಪ್ರಕೃತಿಯ ವಿಚಿತ್ರಗಳಲ್ಲಿ ಒಂದಾದ, ಸಯಾಮಿ ಅವಳಿಗಳು. ಅಮ್ಮ ಈ ಮಾನವ ಪ್ರಪಂಚದಲ್ಲಿ ಇಂತಹ ಹುಟ್ಟು ಆಗಾಗ ಆಗುತ್ತಲೇ ಇರುತ್ತದೆ.Tatiana and Krista Hogan  ಸಯಾಮಿಗಳ ವಿಷಯವೇ ಭಿನ್ನ, ಈ ಮಕ್ಕಳು ತಮ್ಮ ದೇಹವನ್ನು ಹಂಚಿಕೊಂಡು ಹುಟ್ಟಿಲ್ಲ ಬದಲಿಗೆ ಮೆದುಳನ್ನು ಹಂಚಿಕೊಂಡು ಹುಟ್ಟಿದೆ. ಇಂತಹ ಮಕ್ಕಳು ವಿಷಯದಲ್ಲಿ ಮೊದಲನೆಯದು ಎನ್ನುತ್ತಿದೆ ವೈದ್ಯಕೀಯ ವಿಜ್ಞಾನ . ಆ ಕಂದಮ್ಮಗಳ  ನರಮಂಡಲ ಹೇಗೆ ಒಂದರೊಳಗೊಂದು ಜೋಡಿಸಿ ಕೊಂಡಿದೆ,ಅದನ್ನು ಬಿಡಿಸುವುದು ವೈದ್ಯಲೋಕಕ್ಕೆ ಸವಾಲಾಗಿದೆ, ಮುಖ್ಯವಾಗಿ ಅದೊಂದು ಅಸಾಧ್ಯದ ಕೆಲಸವಾಗಿದೆ.ಮತ್ತೊಂದು ವಿಚಿತ್ರ ಅಂದ್ರೆ ಇವರಿಬ್ಬರೂ ಒಬ್ಬರ ಕಣ್ಣಿಂದ ಮತ್ತೊಬ್ಬರು ನೋಡಬಹುದಾಗಿದೆ.
ಮೂರು   ವರ್ಷದ  ಈ  ಕಂದಮ್ಮಗಳ ಮನೆಯವರಿಗೆ ತಮ್ಮ ಆತಪಾತಗಳಿಂದ ಭರಪೂರ ಖುಷಿಯನ್ನು ತಂದಿದೆ.ಆದ್ರೆ ಹೆಣ್ಣುಮಕ್ಕಳಲ್ಲಿ ಇರುವ ಹಟಮಾರಿ ಪಾಪಚ್ಚಿ ಗುಣ ಈ ಕೂಸುಗಳಲ್ಲಿ ಯು  ಇದೆ .ಒಂದು ಎಟಿ ಅಂದ್ರೆ ಮತ್ತೊಂದು ಪ್ರೇತಿ ಅನ್ನುತ್ತೆ. ವಿಷಾದ ಅಂದ್ರೆ ಈ ಕೂಸುಗಳ ಹೃದಯ ತೊಂದರೆ ಹೊಂದಿದೆ. ಮುಖ್ಯವಾಗಿ ಎಷ್ಟು ದಿನದ ಬದುಕಿರುತ್ತೆ ಅನ್ನುವ ಮಾತು ಹುಟ್ಟಿಸಿದ ದೇವನಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಬದುಕಿದ್ದರೂ ಸುಖಮಯ ಬದುಕು ಅವರದಾಗದು ಎನ್ನುತ್ತಾರೆ ವೈದ್ಯರು..!ಅವುಗಳ ಅಮ್ಮ
Felicia ಹೇಳೋದಿಷ್ಟೇ ನಾನು ಇಂದಿಗೆ ಪ್ರಾಮುಖ್ಯತೆ ಕೊಡ್ತೀನಿ, ನಾಳೆ ಬಗ್ಗೆ  ನನಗೆ  ಆಸಕ್ತಿ  ಇಲ್ಲ  ...

No comments:

Post a Comment

Followers