ಇದು ನಿನಗಾಗಿ,
ಹೇಗಿದ್ದೀಯ? ಈ ಪ್ರಶ್ನೆ ಕೇಳಿದ್ರೆ ನಿನಗೆ ಸಖತ್ ಕೋಪ? ಹೇಗಿದ್ದೀಯ ಅನ್ನುವ ಮಾತಿನಿದಲೇ ಶುರುವಾಯ್ತು ನಮ್ಮ ಗೆಳೆತನ..ನಿನಗಿಷ್ಟವಿಲ್ಲದ ಆ ಪದವನ್ನು ಬಳಸಿ ಬಳಸಿ ನಾನು ಸತಾಯಿಸ್ತಾ ಇದ್ದೆ.. ಮರೆತು ಬಿಟ್ಯ?
ಆಮೇಲೆ ನಿನಗೆ ನನ್ನ ಸತಾಯಿಸುವ ಗುಣ ಗೊತ್ತಯಿತು ಅಷ್ಟೊಂದು ಮಂಕುದಿಣ್ಣ

ೆ ನೀನು..
ಮನಸುಗಳು ಹತ್ತಿರವಾಯ್ತು.. ನಿನ್ನ ನೆನಪು ಸುಮಧುರ ಸುಂದರ ಎಂದು ಅನ್ನಿಸುತ್ತಿತ್ತು.. ನಿನಗೂ ಹಾಗಾಯಿತಾ ? ಗೊತ್ತಿಲ್ಲ..
ಆದರೂ ನಾನು ನಿನ್ನ ನನ್ನ ಮನಸಿನ ಆಸೆ, ಭಾವ ಒಂದೇ ಅಂತ ತಿಳಿದಿದ್ದೆ.. ಹುಚ್ಚು ಭ್ರಾಂತು ನನ್ನದು..
ಅದೇ ಭ್ರಾಂತು ನಿಜವಾಯಿತು .. ಮರೆಯಲಾಗದ ಆ ದಿನ.. ನೀನು ಹೇಳಿದ್ದು ಒಂದೇ ನುಡಿ ಐ ಲವ್ ಯು ಕಣೆ.. ಮಿಸ್ ಯು ಲಾಟ್...
ಸಣ್ಣ ಅನುಮಾನ ನಂಗೆ ಇದೇನು ಹಿಂಗೆ ಅಂತ? ಆ ತನಕ ನೀನು ಭಾವನೆರಹಿತ ಹೆಬ್ಬಂಡೆ .. ಇದ್ದಕ್ಕಿದ್ದಂತೆ ಅದ್ಹೇಗೆ ಹಿಮಾಲಯ..!
ನಿಜವೇ.. ಕನಸೇ? ಪದೇಪದೇ ಕೈಚಿವುಟಿ ಚಿವುಟಿ.. ಚರ್ಮವೆಲ್ಲ ಕೆಂಪು ಕೆಂಪು..!
ನನ್ನ ಮನೆಯ ಪಾರಿಜಾತದ ಸುವಾಸನೆಯಷ್ಟೇ ಸತ್ಯ ಈ ಮಾತು ಎಂದು ಸ್ಪಷ್ಟ ಆದಾಗ ಮನಸ್ಸು..!
ಪ್ರಶ್ನೆಗಳನ್ನೇ ಕೇಳುತ್ತಾ ನಡೆದಿದ್ದೆ ನಾನು ನನ್ನ ಮನಸಿಗೆ ಗೆಳೆಯ...
ಪ್ರಶ್ನೆಗಳು .. ಬರಿ ಪ್ರಶ್ನೆಗಳು .. ಜಾಸ್ತಿ ಕೇಳ ಬೇಡ ಕಣೆ ಹುಡುಗಿ ಆಮೇಲೆ ಉತ್ರ ಸಿಗದೇ ಇರುವಷ್ಟು ಪ್ರಶ್ನಾತೀತವಾಗಿ ಬಿಡುತ್ತದೆ ಈ ಬದುಕು ...ನನ್ನ ಅಂಗೈ ಮೇಲೆ ನಿನ್ನ ಅಂಗೈ ಇತ್ತು ನಗುತ್ತಾ ಹೇಳಿದಾಗ ಇಡಿ ಪ್ರಪಚದಲ್ಲಿ ನಾನೇ ಸುರಕ್ಷಿತ.. ಪೊಟರೆಯಲ್ಲಿರುವ ಪುಟ್ಟ ಮರಿಯಂತೆ!
ನಾನು ಪ್ರಶ್ನೆಗಳನ್ನು ಕೇಳುತ್ತಾ ಸತಾಯಿಸಿದೆ.. ಆದರೆ ನೀನು ನನ್ನ ಬದುಕನ್ನೇ ಪ್ರಶ್ನಾತೀತ ಮಾಡಿ ಬಿಟ್ಟೆ...?
ಆ ದಿನ ಬರಬಾರದಿತ್ತು...! ಆದರೆ ಬಂದೆ ಬಿಟ್ಟಿತ್ತು.. ಸಾರಿ ಮದುವೆ ಆಯ್ತು.... ಅಮ್ಮನ ಹಠ .. ಅಪ್ಪನ ಅಸಹಾಯಕತೆ,ಏನ್ ಮಾಡ್ಲಿ ?
ಆವರೆಗೂ ಉತ್ತರವಾಗಿದ್ದ ನೀನು ಪ್ರಶ್ನೆಯಾದೆ..!
ನೀನು ಹೀಗೇಕೆ ಮಾಡಿದೆ ಎನ್ನುವ ಮಾತು ನನ್ನಿಂದ ಬರಲಿಲ್ಲ .. ನಾನು ಮನದ ಬಾಗಿಲು ಮುಚ್ಚಿ ಬಿಟ್ಟೆ ...ಯಾವ ಬಿರುಗಾಳಿಗೂ ಅಲುಗಾಡದಷ್ಟು !
ಮುಚ್ಚಿದ ಬಾಗಿಲು ತಟ್ಟುವವ ನೀನಲ್ಲ .. ಅದು ಸಮಾಜದ ಕಣ್ಣಿಗೆ ಕಾಣುವ ಮಾತು..
ಆದರೆ ನೀನು ಬಾಗಿಲು ತಟ್ಟುವ ಧೈರ್ಯ ಮಾಡಲಿಲ್ಲ.. ತಮಾಷೆ..!
ಹೇಳಲು ಇನ್ನು ಅನೇಕ ಸಂಗತಿಗಳಿವೆ ಗೆಳೆಯ.. ಆದರೆ ನಾನು ಭಾವುಕಳಾಗಲು ನನಗೆ ಇಷ್ಟವಿಲ್ಲ..ಅಂದು ನೀನು ಹೆಬ್ಬಂಡೆ.. ಇಂದು ನಾನು..
ನಾ ಹೀಗೆ ಇರುವೆ.. ಇದರಲ್ಲೇ ನನಗಿದೆ ಖುಷಿ.. ಹಾ.. ಇಂದು ಅದ್ಯಾಕೋ ನಿನ್ನ ನೆನಪುಬಿಡದೆ ಸತಾಯಿಸಿತು ..ಮನದ ಕಿಟಕಿ ತೆಗೆದೇ ಸ್ವಲ್ಪ ಹೊತ್ತು.. ಇಕೋ ಮತ್ತೆ ಮುಚ್ಚಿ ಬಿಡುತ್ತಿದ್ದೇನೆ..ಅದೇ ಭಾವದಲ್ಲಿ..! ನೆನಪಿಸಿಕೋ ಗೆಳೆಯ ಎಂದಾದರೂ ಒಮ್ಮೆಯಾದರೂ !!
ನಾನು .....

No comments:
Post a Comment