Saturday, 2 March 2013

ಯಾಕೆಂದ್ರೆ..



ಮತ್ತೊಂದು ಪತ್ರ ಬರೆಯುವ ಆಸೆ ..ಆದರೆ ಬರೆಯಲು ಮನವೆ ಇಲ್ಲ ಕಣೆ.. ಅಷ್ಟೊಂದು ಕೋಪ ಮಾಡಿಕೊಂಡರೆ ನನ್ನ ಗತಿ ಏನು..
ನಿಜ ಕೋಪ ಬರೋದು ಸಹಜ.ನಿನಗೆ .. ಯಾಕೆಂದ್ರೆ..


 ನಾನು ಕೇವಲ ನಿನ್ನ ಫೇಸ್ ಬುಕ್ ಗೆಳೆಯ ..  ಅರ್ಥ ಆಗಲಿಲ್ವ ಅಂತ ಕೇಳಲ್ಲ  ... ನೀ ಜಾಣೆ  ಅದನ್ನು ನಾ ಬಲ್ಲೆ. ಅಷ್ಟೊಂದು ಸ್ಟೇಟಸ್ ಗಳನ್ನೂ ಹಾಕೋ ನೀನು ನಾನು ಬರೆಯುವ ಕಾಮೆಂಟ್ ಗೆ ಹೆಚ್ಚು ರಿಯಾಕ್ಟ್ ಮಾಡ್ತೀಯ . ನನಗೆ ಗೊತ್ತು ನೀನು ಅಷ್ಟೊಂದು ಆಸಕ್ತಿ  ತೋರುತ್ತಿರುವುದು ನನಗೆ ಮಾತ್ರವಲ್ಲ ಗೆಳೆಯ ಪವನ್ ಗೂ ಸಹ. ಪವನ್ ಹೇಳಿದ ಮಾತಿಗೆ ನೀನು ಫೇಸ್ ಬುಕ್ನಲ್ಲಿ ಕಿಲ ಕಿಲ ಅಂತ ನಗುವ ಚಿತ್ರ ಹಾಕುತ್ತ ಉತ್ತ ರಿಸುವಾಗ  ಅಸೂಯೆ ಕಾಡುವುದು ಸುಳ್ಳಲ್ಲ .  ಆ ಅಸೂಯೆಯೇ ನಿನ್ನೆ ನಿನ್ನ ಸ್ಟೇಟಸ್  ಗೆ ಸ್ವಲ್ಪ ಕಾರದ ಉತ್ತರ ಬರೆಯೋಕೆ ಪ್ರೇರೆಪಿಸಿದ್ದು . 
ನೀನು ನಾನು ಭೇಟಿ ಆಗೇ ಇಲ್ಲ ಆದರೂ ಅದ್ಯಾಕೋ ನನಗೆ ನೀನು ತುಂಬಾ ಹತ್ತಿರ ಅನ್ನಿಸಿದೆ. ನಿನ್ನ ಭಾವನೆಗಳು, ಮನದ ಮಾತುಗಳು ಸೇಮ್ ಸೇಮ್ .. 
ಅದೇನನ್ನನ್ನು ನಿನ್ನ ಬಳಿ ಸೆಳೆದಿದ್ದು . ಹೇಯ್ ಲವ್ ಯು ಕಣೆ .. ನೀನು ಫೇಸ್ಬುಕ್ ಮಾತ್ರವಲ್ಲ ಎದುರು ಸಿಕ್ಕಾಗಲು  ಒಳ್ಳೆಯ ಮನಸ್ಸಿನಿಂದ ಮಾತಾಡುವ ಸರಳ ಹೆಣ್ಣು ಅಂತ ನಿನ್ನನ್ನು ಭೇಟಿ ಮಾಡಿರುವ ನನ್ನ ಫೇಸ್ಬುಕ್ ಫ್ರೆಂಡ್ಸ್  ಹೇಳಿದ್ದಾರೆ . ನನಗೆ ನಿನ್ನನ್ನು ನೋಡುವ ಆಸೆ ಆದರೆ ಅದ್ಯಾಕೋ  ಆಗ್ತಾ ಇಲ್ಲ. ನನ್ನ ಕನಸು ಹೀಗೆ ಉಳಿದು ಬಿಡುತ್ತಾ ಅನ್ನುವ ಆತಂಕ ನನಗೆ.. 
ಬಿಡು ಹೇಗಾದರೂ ಮಾಡಿ ನಿನ್ನನ್ನು ನಾನು ಭೇಟಿ ಮಾಡೇ ಮಾಡ್ತೀನಿ .. 
ಆದರೆ ಅದಕ್ಕೂ ಮುನ್ನ ನಾನು ನನ್ನ ಮನಸ್ಸು ನಿನ್ನ ಮುಂದೆ ಬಿಚ್ಚಿಡಲೇ  ಬೇಕು ಅಂತ ನಿರ್ಧಾರ ಮಾಡಿ ಈ ಪತ್ರ ಬರೆಯುತ್ತಿದ್ದಿನಿ .ಮತ್ತೊಂದು ವಿಷ್ಯ ನೀನು ನೋಡೋಕೆ ತುಂಬಾ ಮುದ್ದಾಗಿದ್ದೀಯ . ಹೇಗಿದ್ರೂ ಪತ್ರ ತಾನೇ ನೇರವಾಗಿ  ಹೇಳೋಕೇನು  ಭಯ.. ಆದರೆ ನಿಜವಾಗಿಯೂ ನನಗೆ ಭಯ ಕಾಡುತ್ತಿದೆ ನೀನು ಈ ಪತ್ರ ಓದಿದ ಬಳಿಕ ನನ್ನನ್ನು ನಿನ್ನ ಫ್ರೆಂಡ್ ಲಿಸ್ಟ್ ನಿಂದ  ತೆಗೆದು ಬಿಟ್ರೆ .. ನನ್ನ ಅಕೌಂಟ್ ಬ್ಲಾಕ್ ಮಾಡಿ ಬಿಟ್ರೆ ..! 
ಆದಷ್ಟು ಒಂದು ವಾರ ಫೇಸ್ಬುಕ್ ಕಡೆ ತಲೆ ಹಾಕಲ್ಲ ಅಂತ ನಿರ್ಧಾರ ಮಾಡಿದ್ದೀನಿ .. ಅಂದ್ರೆ ನಿನ್ನ ವಾಲ್ ಕಡೆ .. ಬ್ಲಾಕ್ ಅಗ್ತಿನೋ,ಡಿಲೀಟ್  ಆಗ್ತಿನೋ ಒಟ್ಟಲ್ಲಿ ಮನಸ್ಸು ಬಿಚ್ಚಿಟ್ಟೆನಲ್ಲ  ಧೈರ್ಯವಾಗಿ ... 
ಸ್ವಲ್ಪ ಸಾಫ್ಟ್ ಕಾರ್ನರ್ ಆದ್ರೆ ನೀನು... 
ಏನು ಯೋಚಿಸುವುದಕ್ಕೂ ಆಗುತ್ತಿಲ್ಲ.. 
ನಿನ್ನವನಾಗಲು ಬಯಸುತ್ತಿರುವ 
ಸುಮಂತ್ 

2 comments:

  1. ಫೇಸ್ ಬುಕ್ ಲವ್ ಸ್ಟೋರೀಸ್ ಫಲ ಕೊಡುತ್ತೋ ಇಲ್ಲವೋ ನಾ ಕಾಣೇ, ಆದರೆ ನಿಜವಾದ ಪ್ರೀತಿ ಅದು ಎಲ್ಲೇ ಸಂಭವಿಸಿದರೂ ಅದು ಸಾಕ್ಷಾತ್ಕಾರವಾಗಲಿ ಎನ್ನುವುದು ನನ್ನ ಆಶಯವಷ್ಟೇ. ನಿಜವಾದ ಒಲುಮೆಗೆ ಜಯ ಸಿಕ್ಕಲೇ ಬೇಕು...

    ReplyDelete
  2. ಅನ್ಯರ ಖಾಸಗಿ ಸಂದೇಶಗಳನ್ನು ಕದ್ದು ಓದುವ ಕಲೆ ತಮಗೆ ಗೊತ್ತಿದೆಯೇನೋ ಅನ್ನುವ ಅನುಮಾನ ನನಗೆ! :)

    ReplyDelete

Followers