Saturday 1 June 2013

ಮಳೆ ಮತ್ತು ಕೊಡೆ.....

ಮಳೆ , ನಾನು ಮತ್ತು ಕೊಡೆ..... 


ಮತ್ತೊಂದು ಮುಂಗಾರು ಮಳೆ ... ಭೋರ್ಗೆರೆಯುವ ಮಳೆಯ ಸದ್ದು....ನೆನಪುಗಳು ಅದೇ ಭೋರ್ಗೆರತದಲ್ಲಿ ...! ಅಂದು ಮುಂಗಾರು.. ಇಂದು ಮುಂಗಾರು.. ಆದರೆ ಅಂದು ನೀನಿದ್ದೆ ಗೆಳೆಯ .. ಇಂದು ನಾ ಮಾತ್ರ ಇದ್ದೇನೆ .. ನಮ್ಮಿಬ್ಬರ ಪ್ರೇಮಕ್ಕೆ ಮೂಕ ಸಾಕ್ಷಿಯಾಗಿ ಮಳೆ ... ಈ ಕೊಡೆ.. !
ರಸ್ತೆ ಯಲ್ಲಿ ನಡೆಯುವಾಗ ಮಳೆಯ ಹನಿಗಳದ್ದು ಕೊಡೆಯ ಮೇಲೆ ಜಾರೋ ಬಂಡಿ ಆಟ! ನಿನ್ನದು ಪ್ರೀತಿಯ ತುಂಟಾಟ ..! ಮತ್ತೊಂದು ಮುಂಗಾರು ಬೆಚ್ಚಗಿನ ಭುಜ ಹಿಡಿದು ನಡೆಯುವಾಗ ಅರಿಯದ ಸಾಂತ್ವನ. ಅಂದು ನಾನು ನೀನು ಮಳೆ ಮತ್ತು ಕೊಡೆ .. ಜೊತೆಗೆ ಭರವಸೆ.. ದಿನೇದಿನೇ ನಿನ್ನ ಹಿಡಿತ ಸಡಿಲ ವಾಗ್ತಾ ಬ೦ತು ಪರಿವೆ ಇಲ್ಲದ ನಾನು ಅದೇ ,ಕೊಡೆ, ಭರವಸೆಗಳೊಂದಿಗೆ ಹಾಕಿದ್ದೆ ಹೆಜ್ಜೆ.. ! 
ಮೊಂಡು ಮುಂಗಾರಲ್ಲಿ ನಾನೊಬ್ಬಳೆ ನಡೆದಿದ್ದೆ.. ಅಲ್ಲಿ ಮತ್ತೆ ಮಳೆ ಕೊಡೆ, ಜೊತೆಗೆ ನಾನು.. ಬೇಡದ ಭೋರ್ಗೆರೆಯುವ ನೆನಪುಗಳು ...! 
ಈಗ ಮತ್ತೊಂದು ಮುಂಗಾರು ... !

1 comment:

  1. ನೆನಪುಗಳು ಕೆದಕಿ ಹಾಕಿದವು, ಎಂದೋ ದಶಕಗಳ ಹಿಂದೆ ಇಂತದೇ ಮಳೆಯಲ್ಲಿ ಅವಳ ಕೊಡೆಯಲ್ಲಿ ನಾನು ಜಾಗ ಮಾಡಿಕೊಂಡು ನಡೆದ ಆ ಬಂಗಾರದ ಹೊತ್ತು, ಮತ್ತೆ ನಿಮ್ಮ ಪುಟ್ಟ ಬರಹದಿಂದ ಜ್ಞಾಪಕಕ್ಕೆ ಬಂದು ಮನದೊಳಗೆ ಆರಿ ಹೋಗಿದ್ದ ಹಳೇ ಯಜ್ಞ ಕುಂಡವನ್ನು ಮತ್ತೆ ಪುನರ್ ಉದ್ದೇಪಿಸಿತು. ಧನ್ಯವಾದಗಳು.

    ReplyDelete

Followers