Sunday, 19 January 2014

ನೆಪ !



ಹೆಚ್ಚೇನೂ ಮಾತುಗಳಿಲ್ಲ
ನಿನಗೆ ತಿಳಿಸಲು ಗೆಳೆಯಾ 
ಆದರೂ ಅತಿ... 
ಹೆಚ್ಚು ಭಾವನೆಗಳ
ತಿಳಿಸುವ ಬಯಕೆ!
ಆಸೆಗೆ ಮಿತಿಯಿಲ್ಲ
ನಿಜ!
ಹಾಗೆಂದು ಇದ್ದು ಬಿಡಲು 
ಒಲ್ಲದು ಈ ಮನ 
ಬದುಕಿನ ಮಜಲುಗಳ
ಗೋಜಲಲ್ಲಿ ಕಾಡುವ 
ಹನಿಹನಿಯ ನೆನಪು
ನಿನ್ನ ನೆನಪಿಸಿಕೊಳ್ಳಲು 
ಮಾಡುವ ಒಂದು 
ಕುಂಟು ನೆಪ !

1 comment:

  1. unlimited ಆದ ನಲ್ಲೆಯ ಆಶಯಕ್ಕೆ - ನಲ್ಲ full time ಸಾಂಗತ್ಯ ಸಾಕಾ ಅಂದ! ;)

    ReplyDelete

Followers