ಪ್ರೀತಿಯ ಪುಟ್ಟ ಗೆಳೆಯ,
ಮತ್ತೆ ನಾನು ಹೇಳುವ ಮಾತುಗಳು ನನ್ನಲ್ಲೇ ಉಳಿದು ಬಿಡ್ತಾ ಇದೆ ಅಂತ ಅನ್ನಿಸುತ್ತಿದೆ ಗೆಳೆಯಾ.. ಗೊತ್ತಿಲ್ಲ ಯಾಕೆ ಹೀಗಾಗಿದೆ ಅಂತ. ವಯಸ್ಸಿನಲ್ಲಿ ನೀನು ತುಂಬಾ ಚಿಕ್ಕವನು. ಆದರೆ ನೀನು ಅದ್ಯಾಕೆ ನನ್ನ ಬಗ್ಗೆ ಈ ಪರಿಯ ಆಸಕ್ತಿ ತೋರಿಸ್ತಾ ಇದ್ದೀಯ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನಿನ್ನ ಸಾಂಗತ್ಯದ ಮಧುರವಾದ ನೆನಪಲ್ಲಿ ನನಗೆ ಒಮ್ಮೊಮ್ಮೆ ಆಗುವ ಬೇಸರಕ್ಕೆ ಖಂಡಿತಾ ನೀನಲ್ಲ. ಮನದಲ್ಲಿ ಹುದುಗಿರುವ ಕಹಿ ನೆನಪುಗಳು ಆಗಾಗ ಕದಡುವಂತೆ ಮಾಡುವ ನನ್ನ ಬದುಕಿನ ಭಾವಭಿತ್ತಿಯಲ್ಲಿ ಅಡಗಿರುವ ನೋವಿನ ಮೂಟೆಯನ್ನು ಬಿಚ್ಚಿ ಹೇಳುವ ತವಕ ನನಗಿಲ್ಲ.
ಮದುವೆ ಕನಸ ಬಿಟ್ಟು ದೂರ ಉಳಿದವಳಿಗೆ ಈಗ ಮತ್ತೆ ವಸಂತವಾಗುವ, ಹಸಿರಾಗುವ , ಚಿಗುರಾಗುವ ಹಂಬಲವಿಲ್ಲ . ನಿನ್ನ ಹಟವ ನಾ ಬಲ್ಲೆ. ಇದು ತಪ್ಪಲ್ಲ! ಆದರೆ ಯಾವುದು ಸ್ವೀಕರಿಸಲು ಮನವಿಲ್ಲದ ನನಗೆ ಮತ್ತೆ ಹೊಸ ಬದುಕಿನ ಬಗ್ಗೆ ಆಸೆಯಿಲ್ಲ. ಬೇಡ ಅನ್ನಿಸುವ ಬೇಕುಗಳು, ಬೇಕೇ ಬೇಕು ಎನ್ನುವ ಆಶಯಗಳು ಎಲ್ಲವನ್ನು ನಾನು ಹೇಳುವ ಹಾಗಿಲ್ಲ.. ಅರ್ಥ ಮಾಡುವ ತಾಖತ್ತು ನನ್ನಲ್ಲಿ ಉಳಿದಿಲ್ಲ. ಅದಕ್ಕೆ ವಯಸ್ಸಾದ ನೆಪವಿಟ್ಟು ಬದುಕ ನಡೆಸುತ್ತಿದ್ದೇನೆ. ಮರೆತು ಬಿಡು ಪುಟ್ಟ ಗೆಳೆಯ.. ಬದುಕು ದೊಡ್ಡದು.. ನಿನ್ನ ದಾರಿ ದೊಡ್ಡದು. ಅಲ್ಲಿ ನಿನ್ನ ಭರವಸೆ ಇದೆ.. ನಾನು ಎಂದಿಗೂ ಕೆತ್ತಲಾಗದ ಕಲ್ಲು.. ಬರೆಯಲಾಗದ ಹಾಳೆ..
.........
ಗೆಳತಿ !
ಒಳ್ಳೆಯ ಮನಸ್ಸುಗಳನ್ನು ಹತ್ತಿರಬಿಟ್ಟುಕೊಳ್ಳಬೇಕು, ನಿಮಗೆ ಹೇಳುವಷ್ಟು ದೊಡ್ಡವನಲ್ಲದರೂ ನನಗನಿಸಿದ್ದು, ಅಂತಹ ಒಳ್ಳೆಯ ಮನಸ್ಸಿಗೆ ಮನಸ್ಸುಕೊಟ್ಟರೆ, ವರಿಸಿದರೆ ತಪ್ಪಿಲ್ಲ ಅಲ್ಲವೇ.
ReplyDeleteಹೊಸ ಬಾಳು - ಶುರುವಾಗಲಿ ಅತಿ ಶೀಘ್ರದಲ್ಲೇ!