Thursday, 13 February 2014

ಕೆಂಗುಲಾಬಿ.....!


ಮತ್ತೊಂದು ವ್ಯಾಲಂಟೈನ್ಸ್  ಡೇ..ನಿನ್ನ ಪ್ರೇಮ ಪತ್ರ ಜೊತೆಗೊಂದು ಕೆಂಗುಲಾಬಿ .. ಅದನ್ನು ಮುಟ್ಟಲು ಅದ್ಯಾಕೋ ಹಿಂಜರಿತ ಗೆಳೆಯ ! ಮತ್ತದೇ ನೆನಪುಗಳು ನೋವುಗಳು ಹೃದಯದ  ಮೇಲಾದ ಗೀರುಗಾಯಗಳು.. ಹೆಪ್ಪುಗಟ್ಟಿರುವ ನೆನಪುಗಳು ಎಲ್ಲವು ನನ್ನದು-ನಿನ್ನದು ಸೇಮ್ ಟು ಸೇಮ್  ಆದರೆ ನಮ್ಮ ಜೊತೆಗಿನ ಪತ್ರಗಳು , ಸನ್ನಿವೇಶಗಳು ಬೇರೆ ಬೇರೆ ! ನನ್ನ ಕಣ್ಣ ಕೆಳಗಿನ ಗೀರು.. ತುಸು ಕಪ್ಪು ಚರ್ಮ ನಿನ್ನೆಯ ಕಥೆಗಳಿಗೆ ಉದಾಹರಣೆ.. ನಿದ್ರೆ ಇಲ್ಲದ ರಾತ್ರಿಗಳ ಕಥೆ ಹೇಳುತ್ತಿದೆ..!!  ನಿನ್ನ ನೋಟದಲ್ಲಿ ಇರುವ ಅಸೀಮ ನಿರ್ಲಿಪ್ತತೆ , ನಕ್ಕರು ಬಿಗಿದ ಆ ತುಟಿಗಳ ಕಥೆಯ ಒಳ ಸಿದ್ಧಾಂತ ಅದೇ ನೋವಲ್ಲವೇ? ಅಂದು ನಿನ್ನವಳ ಮಾತಿಗೆ ಮುಗುಳ್  ನಕ್ಕಿದ್ದ ತುಟಿಗಳು  ಇಂದು ನನ್ನ ಕಂಡು ಬಿರಿದಾಗ ಯಾಕೋ ಅದು ನನ್ನದಲ್ಲದ್ದು ಅನ್ನಿಸಿತ್ತು..ಪತ್ರದ ಮೇಲಿದ್ದ ಕೆಂಗುಲಾಬಿಯದ್ದು ಅಪರೂಪದ ಬಣ್ಣ. ಆದರೆ ಹೈಬ್ರಿಡ್ ಹೂವಲ್ಲವೆ  ಗಂಧದ ಘಮಲೆ ಇಲ್ಲ. ಈ ಪ್ರೀತಿಯನ್ನು ಸ್ವೀಕರಿಸಲೋ ಬೇಡವೋ ಎನ್ನುವ ಹುಯ್ದಾಟ ನನ್ನದು ! ಹೈಬ್ರಿಡ್ ಗುಲಾಬಿ ಬಣ್ಣದಲ್ಲಿ ಚಂದ ಹುಡುಗಾ.. ಘಮಲಲ್ಲಿ ಅಲ್ಲ! ಸಾರಿ  ನಿನ್ನ ಮನಸ್ಸು ನೋಯಿಸುತ್ತಿದ್ದೇನೆ.. ಆದರು ಎಲ್ಲಿಯೋ ನಿನ್ನ ಬಗ್ಗೆ ಇರುವ ಆ ಸಾಫ್ಟ್ ಕಾರ್ನರ್ ನಮ್ಮಿಬ್ಬರನ್ನು ಒಂದು ಮಾಡ ಬಹುದೇನೋ ಗೊತ್ತಿಲ್ಲ.. ಆಗ ಈ ಗುಲಾಬಿ ಬದಲು ಮಧುರ ಮಲ್ಲಿಗೆ ತಾ ಮುಡಿಗೇರಿಸಿ ಸಂತೋಷಿಸುತ್ತೇನೆ. ಅಲ್ಲಿವರೆಗೂ ಸಮಯ ನೀಡು!ಸಾಧ್ಯವಾದರೆ!!

No comments:

Post a Comment

Followers