Friday, 14 February 2014

ಪ್ಲೀಸ್ ಮಾತಾಡೆ..
ಲೇಯ್,

ಅಯ್ಯೋ ಛೆ .. ನಾನು ಬೇಕೂಂತಾ   ಮಾಡಿದ ಅನೇಕ ತಪ್ಪುಗಳಲ್ಲಿ ಇದು ಒಂದು ಕಣೆ.. ಸಾರಿ ಸಾರಿ ಸಾರಿ.. ಎಂದಿನ ಕೋಪದ  ಇಂದು  ಮಾತ್ರ ಮುಂದುವರೆಯೋದು ಪ್ಲೀಸ್ ಬ್ಯಾಡ ಬ್ಯಾಡ ಕಣೆ.. ಅದ್ಸರಿ ನಿನಗ್ಯಾಕೆ ಆ ಪರಿ ಕೋಪ ನಿನ್ನ ಗೆಳತಿ ಜೊತೆ ಮಾತಾಡಿದ್ರೆ.. ಥೂ!   ಪ್ರೀತಿಯಲ್ಲಿ ಅನುಮಾನ ಇರ ಬೇಕು ಕಣೆ ಆದ್ರೆ ನಿನ್ನಷ್ಟು   ಅಲ್ಲ! ಸಾರಿ ಸಾರಿ ಕಣೆ  ಬಂಗಾರಿ ನನ್ನ  ಹೃದಯ ಎಲ್ಲರಿಗು ಹಂಚಲು ನಾನೇನು ಫ್ಲರ್ಟಾ!
ಪ್ರೀತಿ ಮಾಡುವಾಗ ಎಷ್ಟೆಲ್ಲಾ ಕಾ ೦ಪ್ರೊ  ಆಗ್ತೀವಿ ಹುಡುಗರು, ಆದ್ರೆ ನೀವ್ ಮಾತ್ರ ದಿನೇದಿನೇ ಛಿ! ಅದೆಷ್ಟು ರಿಜಿಡ್! ಅಯ್ಯೋ ಅದ್ಯಾವ  ಜನ್ಮದಲ್ಲಿ ಅದೇನು ಪಾಪ ಮಾಡಿರ್ತೀವೋ ಹುಡುಗರಾಗಿ ಹುಟ್ಟಲು, ಅದರಲ್ಲೂ ಪ್ರೀತಿಸುವ ಹುಡುಗರಾಗಿ ಹುಟ್ಟಲು !!  ಪ್ಲೀಸ್ ಮಾತಾಡೆ.. ನೋಡು ಈ ಪತ್ರದಲ್ಲಿ ನನ್ನ  ಪ್ರೀತಿಯ ಬಡಬಡಿಕೆ   ಇದೆ ಅಂತ ನಿರ್ಲಕ್ಷ್ಯ ಮಾಡ ಬೇಡ ನನ್ನಾ.. ಬೇಜಾರಾಗುತ್ತೆ ಕಣೆ ನನಗೆ ನಿನ್ನ ಮೌನಾ  ಕಂಡ್ರೆ ! ಮಾತಾಡೆ.. ನಿನ್ನ ಪ್ರೀತಿಯ ಚಾಕೊಲೆಟ್ ಇಟ್ಟಿದ್ದೀನಿ.. ನಿನಗೆ ಪಿಂಕ್ ರೋಸ್ ಇಷ್ಟ ಅಲ್ವ ಅದನ್ನು ಸಹ ಜೊತೆ ಇಟ್ಟಿದ್ದೇನೆ  ಒಂದು ಬಂಚ್.. ಪತ್ರಕ್ಕೆ ಮುನ್ನ ಅವೆಲ್ಲ ನೋಡಿರ್ತೀಯ ಅಂತ ಗೊತ್ತು. ಪ್ಲೀಸ್ ಒಪ್ಪಿಸಿಕೊಳ್ಳೆ.. ನನ್ನ ಪ್ರೀತಿಯನ್ನು ಅಪ್ಪಿಕೊಳ್ಳೆ
 ನಿನ್ನವ..


ಹುಡುಗಾ..
ಇಷ್ಟೇನಾ ನೀ ನನ್ನನ್ನು ಅರ್ಥ ಮಾಡಿ ಕೊಂಡಿದ್ದು  .. ನಿಜ ಕಣೋ ನೀನು ಆ ಮಿಟಕಲಾಡಿ ಜೊತೆ ಕಿಸಿಕಿಸಿ ನಗುತ್ತಾ ಮಾತಾಡಿದಾಗ ಸಿಟ್ಟಿನಿಂದ   ಉರಿದಿದ್ದು ನಿಜ. ಆದರೆ ನನ್ನ ಕೋಪ ಶಾಂತ ಮಾಡುವುದಕ್ಕಿಂತ ಅವಳ ಜೊತೆ ಮಾತನಾಡೋಕೆ ಹೆಚ್ಚು ಗಮನ ನೀಡಿದರೆ ಉರಿಯಲ್ವ ನನಗೆ  ! ಹೆಣ್ಣುಮಕ್ಕಳಿಗೆ ಅನುಮಾನ ಅಂತ   ಅವನೇ ನಿನ್ನ ಫ್ರೆಂಡ್ ಆ ಪೆದ್ದನ ಬಳಿ ಹೇಳ್ತಾ ಇದ್ಯಂತೆ. ಅದನ್ನ ನನ್ನ ತಮ್ಮ ಬಂದು ಹೇಳಿದ ಆಗೆಷ್ಟು ಅಳು ಬಂತು ನನಗೆ ಗೊತ್ತಾ? ನೀ  ಎದುರು ಇದ್ದಿದ್ದಿದ್ದರೆ ನಿನ್ನ ಕೂದಲು ಜಪ್ಪಿ ಬಿಡೋಷ್ಟು ಉಗ್ರ ಕಾಳಿ  ಆಗಿದ್ದೆ. ಬಚಾವ್ ಆದೆ ನೀನು! ಆದರೆ ಒಂದು ತಿಳ್ಕೋ ನನಗೆ ಅಸೂಯೆ  ಅಸಹನೆ ಅಲ್ಲ.. ಅದು ಪ್ರೀತಿಯ ಮತ್ತೊಂದು ರೂಪ..  ಇಂದು ವ್ಯಾಲೆಂಟೈನ್ಸ್ ಡೇ.. ನೀ ಕಳುಹಿಸಿದ ಪಿಂಕ್ ಗುಲಾಬಿಗಳು ನನ್ನ ರೂಂ ನಲ್ಲಿರುವ ವಾಸ್ ನಲ್ಲಿ ಅಮ್ಮನಿಗೆ   ಕೊಂಡು ತಂದೆ ಅಂತ ಸುಳ್ಳು ಹೇಳಿ   ಇಟ್ಟಿದ್ದೇನೆ .. ನಾಳೆ ಮನೆಗೆ ಬಂದಾಗ ನೋಡು.. ಥ್ಯಾಂಕ್ಸ್ ಚಾಕೊಲೆಟ್ ಗಳಿಗೆ.. ಅದ್ಯಾಕೋ ಅಷ್ಟು ದುಡ್ಡು ಖರ್ಚು ಮಾಡಿದೆ ಇವಕ್ಕೆಲ್ಲಾ.. ಪಾಪ ನೀನು ಎಷ್ಟು ನೋಟ್ಸ್ ಫೋಟೋ ಕಾಪಿ   ಮಾಡಿಸಿಕೊ ಬೇಕು.. ಯಾಕೋ ಗಿಲ್ಟಿ ಆಗ್ತಾ ಇದೆ.. ಇಷ್ಟು ಖರ್ಚು ಮಾಡಿಸಿದ್ದಕ್ಕೆ.. ಐ ಲವ್ ಯು  ಕಣೋ.. ನಾಳೆ ಬಾ ಮನೆಗೆ ಅಮ್ಮನಿಗೆ ಹೇಳಿ ನಿನಗಿಷ್ಟವಾದ ತಿಂಡಿ ಮಾಡಿಸ್ ಇತ್ತಿರ್ತೀನಿ,,, ಬೈ ಅಪ್ಪ ಬಾರೋ ಹೊತ್ತಾಯ್ತು.. ಪತ್ರ ಓದಿದ ತಕ್ಷಣ ಒಂದು ಮಿಸ್ ಕಾಲ್ ಕೊಡೊ .. ಅಷ್ಟು ಸಾಕು!
ನಿನ್ನವಳು 

1 comment:

  1. ತೆಲುಗಿನ ಒಂದು ಸಿನಿಮಾದಲ್ಲಿ ಬರುವ ಸಂಭಾಷಣೆ:
    "ನಂಬಿಕೆ ಇದ್ದಾಗ ಬೈಗುಳವೂ ರಾಮರಾಮ ಎಂದು
    ಅಪನಂಬಿಕೆಯ ಕಾಲದಲ್ಲಿ ರಾಮರಾಮವೂ ಬೈಗುಳವಾಗಿ ಕೇಳುತ್ತದೆ!"

    ಎಲ್ಲಿಗೋ ಕಳಿಸಿಬಿಟ್ಟು ನಮ್ಮನ್ನು ಯವ್ವನದ ಹೊಳೆಯಲ್ಲಿ ತೇಲಿಸೋ ಗುಣವಿದೆ ನಿಮ್ಮ ಬರಹಕ್ಕೆ.

    ReplyDelete

Followers