ದೇವರೇ ನೀನ್ಯಾರು ?
ವ್ಯಕ್ತಿ ಪೂಜೆ ಸಲ್ಲದು..ನೀವು ನಂಬಿರುವ ಆ ವ್ಯಕ್ತಿ ದೇವರಲ್ಲ.. ಆತನಿಗೆ ಪೂಜೆ ಸಲ್ಲಿಸದಿರಿ ಎಂದು ಕೆಲವರ ಅಭಿಮತ...
ನಮ್ಮ ಸಿದ್ಧಾಂತವೇ ಸರಿಯಾಗಿದೆ...ನಮ್ಮ ಧರ್ಮವೇ ಸತ್ಯ ಎಂದು ಒಂದಷ್ಟು ಜನರ ಅಭಿಪ್ರಾಯ...ಹಾಗಾದರೆ ದೇವರೆಂದರೆ ಯಾರು ....? ಆತನಿಗಿರುವ ಲಕ್ಷಣಗಳೇನು ?
ಈ ಧರ್ಮಸಂದೇಹದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ ...ಅವರಿವರ ಮಾತುಗಳನ್ನು ಕೇಳಿ ಗೊಂದಲಕ್ಕೆ ಒಳಗಾಗುವ ಅಗತ್ಯವೂ ಇಲ್ಲ..
ಈ ಪ್ರಶ್ನೆಗೆ ಧರ್ಮಗ್ರಂಥಗಳಲ್ಲೇ ಸ್ಪಷ್ಟವಾದ ಉತ್ತರವಿದೆ. ಇದು ಎಲ್ಲರ ಮುಂದೆ ಚರ್ಚಿಸಬಾರದಂತಹ sensitive subject ಅಲ್ಲವೇ ಅಲ್ಲ !
ಅರ್ಥ ಮಾಡಿಕೊಳ್ಳಲು ವಿಶಾಲವಾದ ಹೃದಯವಿರಬೇಕಷ್ಟೆ...
ವೇದಗಳು, ಉಪನಿಷತ್ ಗಳಲ್ಲಿ ತಿಳಿಸಲಾಗಿರುವ ದೇವರ ಲಕ್ಷಣಗಳು
1.ಏಕಂಏವದ್ವಿತೀಯಂ-ದೇವನೊಬ್ಬನೇ , ಎರಡನೆಯವ ಇಲ್ಲ (ಚಂದೋಗ್ಯ ಉಪನಿಷತ್ತು: 6:2:1)
2.ನಾ ಕಸ್ಯಕಸಿಜ್ ಜನಿತಾ ನ ಚದಿಪ- ಆತನಿಗೆ ತಾಯಿತಂದೆ, ಯಜಮಾನ ಯಾರೂ ಇಲ್ಲ (ಶ್ವೇತಾಶ್ವತರಾ ಉಪನಿಷತ್ 6:9)
3.ನಾ ತಸ್ಯ ಪ್ರತಿಮಾಸ್ತಿ - ಆತನಿಗೆ ಸಾಟಿ ಆಟ ಮಾತ್ರ... ಹೋಲಿಸಲು ಬೇರೆ ಯಾರು ಇಲ್ಲ (ಯಜುರ್ವೇದ 32:3)ಯಾರ ಜ್ಞಾನವು ಪ್ರಾಪಂಚಿಕ ಸುಖವನ್ನು ಆಶಿಸುತ್ತಲಿರುತ್ತದೆಯೋ ಅಂತಹವರು ದೇವರೆಂದು ಅನೇಕ ಶಕ್ತಿಗಳಿಗೆ ಮೊರೆ ಹೋಗುತ್ತಾರೆ. ಅವರ ಮನಸ್ಸಿಗೆ ತಿಳಿದಂತೆ . ಅವರಿಗಿಷ್ಟವಾದ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು, ನಿಯಮಗಳನ್ನು ಸಿದ್ಧಪಡಿಸುತ್ತಾರೆ (ಗೀತೆ7:20 ) .
ದೇವರೆಂದರೆ ಯಾರು , ಆತನ ಲಕ್ಷಣಗಳೇನು ? ಎನ್ನುವ ಸಂದೇಹಕ್ಕೆ ಕುರಾನ್ ಗ್ರಂಥ ನಿಖರವಾಗಿ ತಿಳಿಸಿದೆ.
1.ದೇವನೊಬ್ಬನೇ ...! (ಇಬ್ಬರು, ಮೂವ್ವರು, ನೂರೋ, ಸಾವಿರ ಅಲ್ಲ. ಕೇವಲ ಒಬ್ಬ )
2 .ಆತನಿಗೆ (ಊಟ, ನಿದ್ರೆ, ಮಲಮೂತ್ರದಂತಹ ದೇಹಬಾಧೆ , ಮದುವೆಯಂತಹ ಯಾವ ಸಂಭ್ರಮಗಳು ಇಲ್ಲ )ಯಾವುದರ ಬಗ್ಗೆಯೂ ಅಗತ್ಯ , ಆಸಕ್ತಿ ಇಲ್ಲ. .
3.ಆತನು ಯಾರ ಮಗನು ಅಲ್ಲ, ಆತನಿಗೆ ಯಾರೋ ಒಬ್ಬ ಮಗನಲ್ಲ
4.ಆತನಿಗೆ ಸರಿಸಾಟಿ, ಸಮಾನರು ಯಾರೂ ಇರಬಾರದು (ಖುರಾನ್: 112)
ಇವು ಕೇವಲ ಒಂದಷ್ಟು ಆಧಾರಗಳಷ್ಟೇ. ಇನ್ನು ಅನೇಕಾನೇಕ ಆಧಾರಗಳಿವೆ ... ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ
There is no confusion about God.
ಓದಿದ ಕೆಲವು ಸಂಗತಿಗಳು .. ಓದುವಂತೆ ಮಾಡಿದ ಪುಟ್ಟ ಗೆಳೆಯ
ಇತ್ತೀಚೆಗೆ ದೇವರು ಎನ್ನುವುದು ಪಕ್ಕಾ ವಾಣಿಜ್ಯ ಸರಕಾಗಿ ಚಾಲ್ತಿಯಾಗುತ್ತಿರುವ ದುರಂತ ಗಳಿಗೆಯಲ್ಲಿ, ಇಂತಹ ಕಣ್ಣು ತೆರೆಸುವ ಲೇಖನಗಳಿಂದ ನಮ್ಮ ಮನಸುಗಳು ವಿಕಸನವಾಗಲಿ.
ReplyDeleteಹೊರಗಿನ ದೇವರ ಆರಾಧನೆಗಿಂತಲೂ ಮನೆಯೊಳಗಿನ ದೇವರುಗಳಾದ - ಹೆತ್ತವರು, ಕಟ್ಟಿಕೊಂಡವರ ಉಪಾಸನೆ ಶ್ರೇಷ್ಟವಾದುದು.