Friday, 18 July 2014

ಕಲ್ಲು-ವಜ್ರ


ಮಾನವಜನ್ಮ ದೊಡ್ಡದು ಅದ ಹಾನಿ ಮಾಡಿಕೊಳ್ಳ ಬೇಡಿ ಹುಚ್ಚಪ್ಪ ಗಳಿರಾ  ಅಂತ ದಾಸರು ಹೇಳಿರುವಹಾಡಿಗೆ ಹೊಂದಿಕೆ ಆಗುವ ಸಣ್ಣ ಕಥೆ ಇಲ್ಲಿದೆ ಸ್ವೀಕರಿಸಿ..
ಕಲ್ಲು ಹೊಡೆದು ಚೂರು ಮಾಡಿ ಬದುಕುವ ಒಬ್ಬಾತನಿಗೆ ಒಮ್ಮೆ ಸುಂದರವಾದ ಕಲ್ಲೊಂದು ದೊರಕಿತು ಅದನ್ನು ಆತ ತನ್ನ ಬಟ್ಟೆಯೊಳಗೆ ಕಟ್ಟಿಕೊಂಡು ಮನೆಯತ್ತ ನಡೆದ. ಅದನ್ನು ತನ್ನ ಪತ್ನಿಗೆ ನೀಡಿದ. ಆಕೆ ಆ  ಬಟ್ಟೆಯ ಚೀಲವನ್ನು ಅಲ್ಲಿಯೇ ಇದ್ದ ಮರದ ಗೂಟಕ್ಕೆ ತಗುಲಿ ಹಾಕಿದಳು. 


ಅದಾದ ಸ್ವಲ್ಪ ದಿನಗಳ ನಂತರ ಆಕೆಗೆ ಅಂಟುವಾಳದ ಕಾಯನ್ನು ಒಡೆದು ಚೂರು ಮಾಡಬೇಕಿತ್ತು, ತನ್ನ ಪತಿ ತಂದ ಚೀಲದಲ್ಲಿ ಕಲ್ಲು ಇರುವುದರ ಬಗ್ಗೆ ಆಕೆ ಗೊತ್ತಿತ್ತು, ಅದನ್ನು ತೆಗೆದುಕೊಂಡು ಅದರಿಂದ ಆ ಕಾಯಿಗಳನ್ನು ಒಡೆದಳು.. ಹಲವಾರು ಬಾರಿ ಇಂತಹ ಕೆಲಸಗಳಿಗೆ ಅದು ಬಳಕೆ ಆಯಿತು. 
ಅದಾದ ಬಳಿಕ   ದಂಪತಿಗಳ  ಮಗನಿಗೆ ಈ  ಕಲ್ಲಿನ ಮೇಲೆ ಗಮನ ಬಿಟ್ಟು, ಆತ ಅದನ್ನು ಆಟವಾಡಲು ಕೊಂಡೊಯ್ದ.  ಸ್ವಲ್ಪ ದಿನಗಳಾದ   ಬಳಿಕ ಆ  ಊರಿಗೆ ಬಂದ ಮಿಠಾಯಿ ಮಾರುವವನ ಕಣ್ಣಿಗೆ ಬಿತ್ತು, ಆತನ ಆ ಮಗುವನ್ನು ಪುಸಲಾಯಿಸಿ  ಜಾಸ್ತಿ ಮಿಠಾಯಿ ನೀಡಿ ಅದನ್ನು ಅವನ ಹತ್ತಿರದಿಂದ ತೆಗೆದುಕೊಂಡ.     
ಸಂಜೆ ಈ ಸಿಹಿ ಮಾರುವವನ ಸ್ನೇಹಿತ ಸಿಕ್ಕ, ಆತ  ಹಳೆ   ಸಾಮಾನುಗಳನ್ನು ಮಾರಾಟ ಮಾಡುವ ವ್ಯಾಪಾರಿ ಆಗಿದ್ದ. ಆತನಿಗೆ ಈ ಕಲ್ಲಿನ  ಮೇಲೆ ಆಸಕ್ತಿ ಉಂಟಾಯಿತು. ಅದನ್ನು ತನಗೆ ಕೊಡುವಂತೆ ಗೆಳೆಯನನ್ನು ಕೇಳಿದ. ಸಿಹಿ ಮಾರುವವನಿಗೆ ಗೆಳೆಯನಿಗೆ ಬೇಸರ ಮಾಡಲು ಇಷ್ಟ ಇಲ್ಲದೆ ಅದನ್ನು ನೀಡಿದ. ಹೀಗೆ ಅಂಟುವಾಳದ ಕಾಯಿ ಒಡೆಯಲು ಬಳಕೆ ಆದ ಕಲ್ಲು, ಮಗುವಿನ ಆಟಕ್ಕೆ ಉಪಯೋಗವಾದ ಕಲ್ಲು, ಸಿಹಿ ಮಾರುವವನ ಕಣ್ಣಿಗೆ ಆಸೆ ಉಂಟು ಮಾಡಿದ ಕಲ್ಲು ಅಂತಿಮವಾಗಿ  ಹಳೆ ಸಾಮಾನು ಮಾರುವ ಚೀಲದಲ್ಲಿ ಹಳೆಯ ಪಾತ್ರೆಗಳ ಜೊತೆ ಸೇರಿತು.
ಆ  ಹಳೆ ಪಾತ್ರೆ ಮಾರಾಟಮಾಡುವವನು ಅವುಗಳನ್ನು ಮಾರಲು ಅಂಗಡಿಗೆ ಹೋದನು. ಅಲ್ಲಿ ಕಲ್ಲನ್ನು ಹೊರೆತು ಪಡಿಸಿ ಉಳಿದೆಲ್ಲ ನೀಡಿದ. ಆ ದರೆ ಆ ವ್ಯಾಪಾರಿಗೆ ಆ ಕಲ್ಲು ಆಕರ್ಷಿಸಿತು. ಆತ ಅದನ್ನು ಸ್ವಲ್ಪ ಹಣ ನೀಡಿ ಕೊಂಡುಕೊಂಡ. ಅದನ್ನು ಆತ ಪೇಪರ್ ವೇಟ್ ನಂತೆ ಬಳಕೆ ಮಾಡಿದ. ಅದಾದ ಬಳಿಕ ಸ್ವಲ್ಪ ದಿನಗಳು ಹಾಗೆ ಉರುಳಿತು. ಆ ಅಂಗಡಿಗೆ ಓರ್ವ ವ್ಯಾಪಾರಿ ಬಂದ. ಆತನಿಗೆ  ಆ ಕಲ್ಲಿನ ಮೇಲೆ ಗಮನ ಹೋಯಿತು. ಅದನ್ನು ದುಡ್ಡುಕೊಟ್ಟು ಕೊಂಡ. ಬಳಿಕ ಅದನ್ನು ವಜ್ರದ ವ್ಯಾಪಾರಿ ಬಳಿ ಹೋಗಿ ಪರೀಕ್ಷೆ ಮಾಡಿಸಿದಾಗ ಅದು ಅತ್ಯುತ್ತಮವಾದ ವಜ್ರ ಎನ್ನುವ ಸಂಗತಿ ತಿಳಿಯಿತು. 
 ನೀತಿ : ಮಾನವ ಜನ್ಮ ದೊಡ್ಡದು ಅದು ನಮ್ಮಗೆ ದೊರತಿರುವುದು ಪೂರ್ವ ಜನ್ಮದ ಪುಣ್ಯದಿಂದ, ಅದನ್ನು ಸರಿಯಾದ ಕ್ರಮದಲ್ಲಿ ನಡೆಸಿದರೆ ಉತ್ತಮ ಫಲ ನಮ್ಮದಾಗುತ್ತದೆ, ಆಗ  ಬದುಕು ಬಂಗಾರ ವಾಗುತ್ತದೆ!

2 comments:

  1. ಅತ್ಯಂತ ನೀತಿಯುಕ್ತ ಬರಹ.
    ಕರೆಯಿಂದ ಕಲಿತ ಬೇಕಾದ ಪಾಠ ದೊಡ್ಡದಿದೆ.

    ReplyDelete
  2. ಅಜ್ಞಾನದ ಅಂದಕಾರ ತುಂಬಿರಲು ಕಲ್ಲು ವಜ್ರವೆಂದು ಹೇಗೆ ತಾನೆ ತಿಳಿದೀತೆ, ಅದರ ಬೆಲೆ, ಅದರ ಗುಣಧರ್ಮ ಅರಿತವನಿಗೆ ಗೊತ್ತು; ಯಕ್ಷಿಃತ್ ಕಲ್ಲು ಹೊಡೆದು ಬದುಕುವವನಿಗೆ ಹೇಗೆ ತಿಳಿದೀತು. ಬಲ್ಲವರೆ ಬಲ್ಲರು ಬಿಸಿ ಬೆಲ್ಲದ ಸವಿಯ. ಸೊಗಸಾದ ನಿರೂಪಣೆ

    ReplyDelete

Followers