ಹೇಯ್ ಚಿನ್ನಾ,
ಹೇಗಿದ್ದಿಯೇ ಚೆಲುವೆ? ಕೋಪದ ಬಂಗಾರಿ ಸಿಟ್ಟು ಎಲ್ಲಿವರೆಗೂ ಬಂದಿದೆ, ನಿಮ್ಮ ಮನೆ, ನಮ್ಮ ಮನೆ, ಊರ ಆಚೆ? ಸಾಕೆ ಚಿನ್ನ ಈ ಮುನಿಸು. ನಿನ್ನನ್ನು ಸಮಾಧಾನ ಮಾಡಲು ಎಷ್ಟು ಕಷ್ಟ ಪಡ್ತಾ ಇದ್ದೀನಿ? ನಂಬೆ ನನ್ನನ್ನು, ಈ ಮೇಲ್ನಲ್ಲಿ ಕಳಿಸಿರುವ ನವಿಲುಗರಿ ನಾನು ಕಷ್ಟಪಟ್ಟು ಸರ್ಫ್ ಮಾಡಿ ಸೇವ್ ಮಾಡಿದ್ದು ಕಣೆ, ನೋಡು ನಿನಗೋಸ್ಕರ ನಾನೆಷ್ಟು ರಿಸ್ಕ್ ತಗೋತೀನಿ. ಛಿ ಇನ್ನು ನಿನ್ನ ಮುಖದಲ್ಲಿ ನಗು ಬರಲಿಲ್ವ? ಹಲೋ ಇಂಟರ್ ನೆಟ್ ನಲ್ಲಿ ಸರ್ಫ್ ಮಾಡೋದು ತುಂಬಾ ಕಷ್ಟ ಕಣಮ್ಮ ನಾನು ನವಿಲುಗರಿ ಹುಡುಕಿದರೆ ನವಿಲುಗರಿಯಂತಹ ಫೋಟೋ ಸಿಕ್ತು.. ಪ್ಲೀಸ್ ತಗೊಳ್ಳೇ..!
ಛಿ! ರಾಕ್ಷಸಿ ಎಷ್ಟು ಕೋಪ ನಿನಗೆ.. ನೋಡು ಹೀಗೆ ಕೋಪ ಮಾಡಿ ಕೊಂಡಿದ್ರೆ ನಿಮ್ಮ ಮನೆ ಮುಂದೆ ನಿಂತು ಜೋರಾಗಿ ಹಾಡ್ತೀನಿ ಅಷ್ಟೆ !ಗೊತ್ತಲ್ಲ ನಿನಗೆ ನನ್ನ ಕ೦ಠದ ಕಥೆ. ಏಯ್ ನೋಡು ಈಮೇಲ್ ನೋಡಿದ ತಕ್ಷಣ ಪ್ಲೀಸ್ ನಮ್ಮ ಪ್ರೀತಿಯ ಜಾಗಕ್ಕೆ ಬಂದು.. ಹಾಯ್ ಹಾಯ್ ! ನಾಟಕ ಅಲ್ಲ ನನ್ ಬಂಗಾರಿ ಈ ನಿನ್ನ ಹುಡುಗನ ಹೃದಯ ಚಡಪಡಿಸಿ ಒದ್ದಾಡಿದ್ದು ಹೀಗೆ ಅಂತ ನಾನು ತಿಳಿಸ್ತಾ ಇದ್ದೀನಿ. ಎದುರು ಇದ್ದಿದ್ದರೆ ನನ್ನ ನೋವು ನಿನಗೆ ಅರ್ಥ ಆಗ್ತಾ ಇತ್ತು. ಮೂರು ದಿನದಿಂದ ಮೆಸೇಜ್ ಇಲ್ಲ , ಕಾಲ್ ರಿಸೀವ್ ಮಾಡುವ ಗೋಜಿಗೆ ಹೋಗಿಲ್ಲ.. ಅಯ್ಯೋ ಪ್ರೀತಿ ಅಂದ್ರೆ ಇಷ್ಟು ಕಷ್ಟನಾ ಹೇಯ್ ಸೈಲೆಂಟ್ ಕಿಲ್ಲರ್ ! ಪ್ಲೀಸ್ ಸಿಕ್ಕೆ...!
ನಿನ್ನವ ದೇವರಾಣೆ!
ಪೆದ್ದ...
ನೀನು ಕಳುಹಿಸಿದ ನವಿಲುಗರಿ ಸೇಫಾಗಿ ನನ್ನ ಬಳಿ ಬಂದಿದೆ. ಹಾಗಂತ ನಾನು ಹೇಳಲ್ಲ, ಯಾಕಂದ್ರೆ ನನಗೆ ಈಗ ನಿನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ, ಅಯ್ಯೋ ನಿಜಾನ ಹುಡ್ಗಾ? ಇಲ್ಲ ದೊರೆ ನನಗೆ ನಿನ್ನನ್ನು ಬಿಟ್ಟು ಇರೋಕೆ ಆಗೋಲ್ಲ, ನೀನು ನನ್ನನ್ನು ಸೈಲೆಂಟ್ ಕಿಲ್ಲರ್ ಎಂದು ಕರೆದಿದ್ದಿಯಾ ಹೌದು ನಾನು ಕಿಲ್ಲರ್ ಆದ್ರೆ ನನ್ನನ್ನು ನಾನು ಕಿಲ್ ಮಾಡಿ ಕೊಳ್ತಾ ಇದ್ದೀನಿ. ನಾನು ಯಾಕೆ ಮೌನವಾಗಿದ್ದಿನಿ ಅಂತ ಹೇಳೋಕೆ ಆಗದಷ್ಟು ದುಃಖದಲ್ಲಿದ್ದೇನೆ.ಬಿಡು ಬಿಡು ನೀನು ಸಹ ಇತ್ತೀಚೆಗೆ ಕಂಪ್ಯುಗೆ ಅಟಾಕ್ ಮಾಡುವ ವೈರಸ್ ಥರ . ನೀನು ಅವತ್ತು ನನ್ ಫ್ರೆಂಡ್ಸ್ ಮುಂದೆ ನಾನ್ಯಾರೋ ಗೊತ್ತೇ ಇಲ್ಲ ಅನ್ನುವಂತೆ ಆ ಟಿಪ್ಪಿಗೆ ಪಾರ್ಟಿ ಕೊಡಿಸಿದೆಯಲ್ಲ ಅದೇ ಕಣೋ ಲಾಸ್ಟ್ ನಿನ್ನ ಕಡೆ ಕಣ್ಣೆತ್ತಿ ನೋಡ ಬಾರದು ಅಂತ ನಿರ್ಧಾರ ಮಾಡಿದೆ. ಬೇಜಾರಗಲ್ವ ಹೇಳು ?? ಎಷ್ಟು ಅಳು ಬಂತು ಗೊತ್ತ? ಬಂಟಿ ಹೇಳಿದ ಅಯ್ಯೋ ಅವನು ಬಿಡೆ ಸ್ವಲ್ಪ ಹಾಗೆ ನೀನು ಇದ್ದಾಗ ಒಂದು ಥರ ಇಲ್ಲದೆ ಇದ್ದಾಗ ಮತ್ತೊಂದು ರೀತಿ, ಮೊದಲೆಲ್ಲ ನೀನು ಇಲ್ಲದೆ ಇದ್ದಾಗ ಮಾತ್ರ ಹೀಗೆ ಬೇರೆ ಹುಡುಗಿಯರ ಜೊತೆ ಓಡಾಡುತ್ತಾ ಇದ್ದ, ಈಗ ನೋಡಿದ್ರೆ ನೀನು ಇದ್ದಾಗಲೇ... ಹಾಗೆಲ್ಲ ಕೇಳಿದಾಗ ಬೇಜಾರಾಗಲ್ವ? ಹೇಳು! ಹೋಗ್ ಯಾರೂ ಬೇಡ ನನಗೆ, ನಾನೊಬ್ಲು ಒಂಟಿ. ನೀನು ಯಾರ ಜೊತೆ ಬೇಕಾದ್ರೂ ಓಡಾಡು, ನನ್ನನ್ನು ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ಅಂತ ಹೇಳಿದ್ರೂನೂ ಪರವಾಗಿಲ್ಲ ನಾನು ನನ್ನ ಥರಾನೆ ಇರ್ತೀನಿ ಹಾಗಂತ ನಿರ್ಧಾರ ಮಾಡಿದ್ದೆ, ಆದ್ರೆ ನಿನಗೆ ತುಂಬಾ ಜ್ವರ ಅಂತ ಕೇಳಿದಾಗ ನನ್ನ ಹೃದಯ ಹಿಂಡಿ ಹೋಯ್ತು, ಹೇಗಿದ್ದೀಯ ಎಂದು ಕೇಳೋಕೆ ಸಂಕೋಚ ,ಅದಕ್ಕೆ ಸುಮ್ಮನಾದೆ, ಮೇಜ್-ಕಾಲ್ಗೆ ಉತ್ತರ ಕೊಡದೆ ಇದ್ದೆ ಅಲ್ವ ಅದಕ್ಕೆ ನನಗೆ ನನ್ನ ಬಗ್ಗೆ ಎಷ್ಟು ಬೇಜಾರಾಗಿದೆ..!! ನಿನ್ನ ನವಿಲುಗರಿ ಸಿಕ್ಕಿದೆ ಕಣೋ... ನೀನು ನಿಜವಾದದ್ದು ಕೊಡದೆ ಇದ್ರು ಲವ್ ಯು !
ನೀನು ಹಾಡು ಹಾಡುವುದಕ್ಕೆ ಮುಂಚೆ ನಿನ್ನ ಹತ್ರ ಓಡೋಡಿ ಬರ್ತೀನಿ
ನಿನ್ನ ಸೈಲೆಂಟ್ ಕಿಲ್ಲರ್
Saturday, 4 December 2010
Saturday, 7 August 2010
ನಮ್ ಯಜಮಾನರು ಕಾಣೆಯಾಗಿದ್ದಾರೆ !
ಹೆಣ್ಣು ಮಗಳೊಬ್ಬಳು ಪೊಲೀಸ್ ಸ್ಟೇಶನ್ಗೆ ದೂರು ಕೊಡಲು ಹೋಗ್ತಾಳೆ ಅದರ ವಿವರ ಹೀಗಿದೆ.....
ಹೆಂಗಸು :- ಸರ್ ನನ್ನ ಪತಿ ಕಾಣೆಯಾಗಿದ್ದಾರೆಇನ್ಸ್ ಪೆಕ್ಟರ್ :- ಅವರು ಎಷ್ಟು ಎತ್ತರವಾಗಿದ್ದಾರೆಹೆ0:- ಹುಮ್ ! ಗಮನಿಸಿಲ್ಲ !ಇ :- ಸಪೂರ ಅಥವಾ ಆರೋಗ್ಯ?ಹೆ೦:- ಅಪ್! ಅದು ಅಷ್ಟು ಗೊತ್ತಿಲ್ಲ , ಆರೋಗ್ಯವಾಗಿರ ಬಹುದು. ಇ:- ಕಣ್ಣಿನ ಬಣ್ಣ? ಹೆ0 :-ಇಲ್ಲ ಗಮನಿಸಿಲ್ಲ ಇ:- ಹೋಗ್ಲಿ ಅವರ ಕೂದಲ ಬಣ್ಣ ?ಹೆ೦:-ಕಪ್ಪಗಿದ್ದರೂ ಇರಬಹುದು .ಇ:- ಅವರ ಉಡುಪಿನ ಬಣ್ಣ , ಏನು ಧರಿಸಿದ್ದರು ಹೆ೦:- ಅಯ್ಯೋ ! ಜ್ಞಾಪಕ ಇಲ್ಲ ಇ:-.ಹೋಗ್ಲಿ ಅವರ ಜೊತೆ ಬೇರೆ ಯಾರಾದ್ರೂ ಇದ್ರ ???ಹೆ೦:-ಹೌದು ನನ್ನ ಪ್ರೀತಿಯ ನಾಯಿ ಇತ್ತು. ಲ್ಯಾಬ್ರಡಾರ್ ನಾಯಿ ರೋಮಿಯೋ , ಅದಕ್ಕೆ ಚಿನ್ನದ ಚೈನ್ ಹಾಕಿತ್ತು,ಎತ್ತರ 30 ಇನ್ಚ್ಗಳು,ಆರೋಗ್ಯವಾಗಿತ್ತು,ನೀಲಿ ಬಣ್ಣದ ಕಣ್ಣು, ಕಪ್ಪುಕಂದು ಮಿಶ್ರಿತ ಕೂದಲು,ಅದರ ಎಡ ಭಾಗದ ಹೆಬ್ಬರಿಲಿನ ಉಗುರು ಸ್ವಲ್ಪ ಮುರಿದಿಎ. ಅದೂ ಎಂದಿಗೂ ಕಚ್ಚೆ ಇಲ್ಲ.ಚಿನ್ನದ ಬಣ್ಣದ ಬೆಲ್ಟ್ ಅದಕ್ಕೆ ತೊಡಿಸಿದೆ. ಅದರಲ್ಲಿ ನೀಲಿ ಬಣ್ಣದ ಮಣಿಗಳನ್ನು ಅಂಟಿಸಿದೆ. ಅದಕ್ಕೆ ಮಾಂಸಾಹಾರ ಅಂದ್ರೆ ತುಂಬಾ ಇಷ್ಟ .ನವ್ವು ಒಟ್ಟಿಗೆ ಊಟ ಮಾಡ್ತಾ ಇದ್ವಿ ...ಹೀಗೆ ಹೇಳ್ತಾ ಹೇಳ್ತಾ ಆಕೆ ಜೋರಾಗಿ ಆಳುವುದಕ್ಕೆ ಆರಂಭಿಸಿದಳು.
ಇನ್ಸ್ಪೆಕ್ಟರ್ :-ಮೊದಲು ನಾನು ನಿಮ್ಮ ನಾಯಿ ಮರಿಯನ್ನು ಹುಡುಕಲು ಹೊರಡ್ತೀನಿ ....!!!
Tuesday, 27 July 2010
ತಪ್ಪು ತಪ್ಪು :-)
ತಪ್ಪು ಮಾಡುವುದು ಸಹಜ. ಆದರೆ ಕೆಲವರಿಗೆ ತಪ್ಪು ಮಾಡಿದರೂ ಶಿಕ್ಷೆ ಇರಲ್ಲ.ಹೀಗೊಂದು ಊರು ಅಲ್ಲಿ ಒಂದು ಅತ್ತೆ , ಆಕೆಗೊಬ್ಬ ಮಗ, ಆತನಿಗೆ ಮುದ್ದಾದ ಹೆಂಡತಿ. ಅತ್ತೆಗೆ ಸೊಸೆಯನ್ನು ಕಂಡ್ರೆ ಪ್ರೀತಿನೆ, ಆದ್ರೆ ಆಕೆಗೆ ತನ್ನ ಹಿರೀಕತನಕ್ಕೆ ಧಕ್ಕೆ ಬಂದ್ರೆ ಎಂದಿಗೂ ಸಹಿಸ್ತಾ ಇರಲಿಲ್ಲ. ಸೊಸೆ ಅಪ್ಪಿತಪ್ಪಿ ನೀರು ಚಲ್ಲಿದರೂ ಬೈಗುಳ, ಅದೇ ಅತ್ತೆ ಎಣ್ಣೆ ಚಲ್ಲಿದ್ರೂ ತಪ್ಪಿಲ್ಲ, ಅದೂ ಕೈಜಾರಿದ್ದು ಬೇಕೂ ಅಂತ ಮಾಡಿದ್ದಲ್ಲ.ಒಟ್ಟಿನಲ್ಲಿ ಅತ್ತೆಗೊಂದು ನ್ಯಾಯ ಸೊಸೆಗೊಂದು,ಅದಕ್ಕೆ ಅತ್ತೆ ಒಡೆದ ಮಡಿಕೆ ಅನ್ನುವ ಮಾತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಜಾರಿಯಲ್ಲಿದೆ.ಅಂತಹುದೇ ಮಿಸ್ಟೇಕ್ ಕೆಲವರು ಮಾಡಿದ್ರೆ ಎಂದಿಗೂ ಅದು ತಪ್ಪಾಗಿ ಕಾಣಲ್ಲ ,ಅಂತಹ ಕೆಲವು ಮುದ್ದಾದ ತಪ್ಪುಗಳು ಇಲ್ಲಿವೆ ....
# ಬಾರ್ಬರ್ ಕೂದಲು ಕತ್ತರಿಸುವಾಗ ತಪ್ಪಾದರೆ ಅದು ಹೊಸ ಹೈರ್ ಸ್ಟೈಲ್
#ಡ್ರೈವರ್ ಗಾಡಿ ನಡೆಸುವಾಗ ದಾರಿ ತಪ್ಪಿದರೆ ಅದೂ ಹೊಸ ದಾರಿ ಕಂಡು ಹಿಡಿದದ್ದು
#ಎಂಜಿನಿಯರ್ ಮಾಡಿದ ತಪ್ಪು ಹೊಸ ಸಾಹಸ
#ಪೋಷಕರು ಮಾಡಿದ ತಪ್ಪು ಹೊಸ ಜನರೇಶನ್
# ರಾಜಕಾರಣಿ ಮಾಡಿದ ತಪ್ಪು ಹೊಸ ಕಾನೂನು
#ವಿಜ್ಞಾನಿಯ ತಪ್ಪು ಹೊಸ ಅನ್ವೇಷಣೆ
#ಟೈಲರ್ ಮಾಡಿದ ತಪ್ಪು ಹೊಸ ಫ್ಯಾಶನ್
#ಗುರುಗಳು ಮಾಡಿದ ತಪ್ಪು ಹೊಸ ಸಿದ್ಧಾಂತ
#ಬಾಸ್ ಮಾಡಿದ ತಪ್ಪು ಹೊಸ ಐಡಿಯ
# ಸ್ನೇಹಿತ ಮಾಡಿದ ತಪ್ಪು ಅದ್ಭುತ ಸಾಹಸ
#ಆದರೆ ಅದೇ ತಪ್ಪು ಕಾರ್ಮಿಕ-ಕೆಲಸಗಾರ ಮಾಡಿದಾಗ ಮಾತ್ರ ತಪ್ಪು ತಪ್ಪು ತಪ್ಪು :-)
( ಅಕ್ಕನಂತಹ ಗೆಳತಿ ಶಿವೆ ಕಳುಹಿಸಿದ ಮೇಲ್ )
Sunday, 20 June 2010
ಹಟಮಾರಿ ಪಾಪಚ್ಚಿ
Daily Mail ನಲ್ಲಿ ಬಂದ ಸುದ್ದಿ, ಪ್ರಕೃತಿಯ ವಿಚಿತ್ರಗಳಲ್ಲಿ ಒಂದಾದ, ಸಯಾಮಿ ಅವಳಿಗಳು. ಅಮ್ಮ ಈ ಮಾನವ ಪ್ರಪಂಚದಲ್ಲಿ ಇಂತಹ ಹುಟ್ಟು ಆಗಾಗ ಆಗುತ್ತಲೇ ಇರುತ್ತದೆ.Tatiana and Krista Hogan ಸಯಾಮಿಗಳ ವಿಷಯವೇ ಭಿನ್ನ, ಈ ಮಕ್ಕಳು ತಮ್ಮ ದೇಹವನ್ನು ಹಂಚಿಕೊಂಡು ಹುಟ್ಟಿಲ್ಲ ಬದಲಿಗೆ ಮೆದುಳನ್ನು ಹಂಚಿಕೊಂಡು ಹುಟ್ಟಿದೆ. ಇಂತಹ ಮಕ್ಕಳು ವಿಷಯದಲ್ಲಿ ಮೊದಲನೆಯದು ಎನ್ನುತ್ತಿದೆ ವೈದ್ಯಕೀಯ ವಿಜ್ಞಾನ . ಆ ಕಂದಮ್ಮಗಳ ನರಮಂಡಲ ಹೇಗೆ ಒಂದರೊಳಗೊಂದು ಜೋಡಿಸಿ ಕೊಂಡಿದೆ,ಅದನ್ನು ಬಿಡಿಸುವುದು ವೈದ್ಯಲೋಕಕ್ಕೆ ಸವಾಲಾಗಿದೆ, ಮುಖ್ಯವಾಗಿ ಅದೊಂದು ಅಸಾಧ್ಯದ ಕೆಲಸವಾಗಿದೆ.ಮತ್ತೊಂದು ವಿಚಿತ್ರ ಅಂದ್ರೆ ಇವರಿಬ್ಬರೂ ಒಬ್ಬರ ಕಣ್ಣಿಂದ ಮತ್ತೊಬ್ಬರು ನೋಡಬಹುದಾಗಿದೆ.
ಮೂರು ವರ್ಷದ ಈ ಕಂದಮ್ಮಗಳ ಮನೆಯವರಿಗೆ ತಮ್ಮ ಆತಪಾತಗಳಿಂದ ಭರಪೂರ ಖುಷಿಯನ್ನು ತಂದಿದೆ.ಆದ್ರೆ ಹೆಣ್ಣುಮಕ್ಕಳಲ್ಲಿ ಇರುವ ಹಟಮಾರಿ ಪಾಪಚ್ಚಿ ಗುಣ ಈ ಕೂಸುಗಳಲ್ಲಿ ಯು ಇದೆ .ಒಂದು ಎಟಿ ಅಂದ್ರೆ ಮತ್ತೊಂದು ಪ್ರೇತಿ ಅನ್ನುತ್ತೆ. ವಿಷಾದ ಅಂದ್ರೆ ಈ ಕೂಸುಗಳ ಹೃದಯ ತೊಂದರೆ ಹೊಂದಿದೆ. ಮುಖ್ಯವಾಗಿ ಎಷ್ಟು ದಿನದ ಬದುಕಿರುತ್ತೆ ಅನ್ನುವ ಮಾತು ಹುಟ್ಟಿಸಿದ ದೇವನಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಬದುಕಿದ್ದರೂ ಸುಖಮಯ ಬದುಕು ಅವರದಾಗದು ಎನ್ನುತ್ತಾರೆ ವೈದ್ಯರು..!ಅವುಗಳ ಅಮ್ಮ Felicia ಹೇಳೋದಿಷ್ಟೇ ನಾನು ಇಂದಿಗೆ ಪ್ರಾಮುಖ್ಯತೆ ಕೊಡ್ತೀನಿ, ನಾಳೆ ಬಗ್ಗೆ ನನಗೆ ಆಸಕ್ತಿ ಇಲ್ಲ ...
ಮೂರು ವರ್ಷದ ಈ ಕಂದಮ್ಮಗಳ ಮನೆಯವರಿಗೆ ತಮ್ಮ ಆತಪಾತಗಳಿಂದ ಭರಪೂರ ಖುಷಿಯನ್ನು ತಂದಿದೆ.ಆದ್ರೆ ಹೆಣ್ಣುಮಕ್ಕಳಲ್ಲಿ ಇರುವ ಹಟಮಾರಿ ಪಾಪಚ್ಚಿ ಗುಣ ಈ ಕೂಸುಗಳಲ್ಲಿ ಯು ಇದೆ .ಒಂದು ಎಟಿ ಅಂದ್ರೆ ಮತ್ತೊಂದು ಪ್ರೇತಿ ಅನ್ನುತ್ತೆ. ವಿಷಾದ ಅಂದ್ರೆ ಈ ಕೂಸುಗಳ ಹೃದಯ ತೊಂದರೆ ಹೊಂದಿದೆ. ಮುಖ್ಯವಾಗಿ ಎಷ್ಟು ದಿನದ ಬದುಕಿರುತ್ತೆ ಅನ್ನುವ ಮಾತು ಹುಟ್ಟಿಸಿದ ದೇವನಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಬದುಕಿದ್ದರೂ ಸುಖಮಯ ಬದುಕು ಅವರದಾಗದು ಎನ್ನುತ್ತಾರೆ ವೈದ್ಯರು..!ಅವುಗಳ ಅಮ್ಮ Felicia ಹೇಳೋದಿಷ್ಟೇ ನಾನು ಇಂದಿಗೆ ಪ್ರಾಮುಖ್ಯತೆ ಕೊಡ್ತೀನಿ, ನಾಳೆ ಬಗ್ಗೆ ನನಗೆ ಆಸಕ್ತಿ ಇಲ್ಲ ...
Sunday, 13 June 2010
ಸಾಧನೆ !
ಮನುಷ್ಯ ಹೆಸರು ಹಣಕ್ಕಾಗಿಅದೇನೇನೋ ಮಾಡ್ತಾನೆ ಅಂತಾರೆ, ಅನ್ನೋದನ್ನು ನಾವೇ ಕಣ್ಣಾರೆ ಕಂಡಿದ್ದಿವಿ, ಕಾಣ್ತಾನೆ ಇದ್ದೀವಿ. ಆದರೆ ಈ ಫೋಟೋ ಗಳಲ್ಲಿ ಇರುವ ಐನಾತಿ ಜಾಸ್ತಿನೆ ವಿಚಿತ್ರ . ನೆಟ್ಟಗೆ ನಿಂತೇ ಮಾಡಿದ ಕಟ್ಟಿಂಗ್ ಸಾಕಷ್ಟು ಸರ್ತಿ ಕೆಟ್ಟು ಹಾಳಾಗಿರುತ್ತದೆ.ಅಂತಹುದರಲ್ಲಿ ಸೊಟ್ಟಗೆ ಕೂದಲಿಗೆ ಕತ್ರಿ ....! ಹೇಯ್ ಉಲ್ಟಾ ಮ್ಯಾನ್ ಭಾರಿ ಛತ್ರಿ ಕಣಯ್ಯಾ ನೀನು.....
Friday, 4 June 2010
ಮೌನ ಮುರಿತಿನಿ!!
ಸಿಕ್ತೀಯಾ?...........
ನಾನು ನಿನ್ನ ಬಳಿ ಪದೇಪದೆ ಕೇಳದ ಪ್ರಶ್ನೆಇದು... ಪಾಪದ ಹುಡ್ಗ ನೀನು ನನ್ನಿಂದ ಬಯಸಿದ ಪ್ರಶ್ನೆ ಇದೊಂದೇ....! ನಿನ್ನ ಚಡಪಡಿಕೆ ನನಗೆ ನಗು...! ನನ್ನ ಮೌನ ನಿನಗೆ ಗಾಬರಿ..!ಒಂದು ದಿನ ನಿನ್ನತ್ತ ನನ್ನ ಕಣ್ ನೋಟ ಬೀಳದೆ ಇದ್ದರೆ ನೀನು ಅತಂತ್ರ..! ಬಲ್ಲೆ ಚಲುವ ನಾನೆಲ್ಲ ಬಲ್ಲೆ, ನನ್ನ ಪುಟ್ಟ ನಗೆ ನಿನಗೆ ಸಂಜೀವಿನಿ.ಸಾರಿ ಕಣೋ ಹುಡ್ಗ ತುಂಬಾ ಸತಾಯಿಸಿ ಬಿಟ್ಟೆ ನಾನು, ನೋಡು ಅದಕ್ಕೋಸ್ಕರ ಎಷ್ಟು ಬೇಗ ಎದ್ದು ಬಿಟ್ಟು ಬರೆಯೋಕೆ ಕೂತಿದ್ದೀನಿ .. ಬಿಲೀವ್ ಕಣೋ ನಾನು ಶುದ್ಧ ಸೋಮಾರಿ ! ಅಂತಹುದರಲ್ಲಿ ನಿನಗಾಗಿ ಸಿರ್ಫ್ ನಿನಗಾಗಿ ಅದೆಷ್ಟು ಬೇಗ ಎದ್ದು ಪತ್ರ ಬರಿತಾ ಇದ್ದೀನಿ. ಇದು ಪ್ರೇಮ ಪತ್ರವ? ಉಹೂಂ ಐ ಡೋಂಟ್ ನೋ..ಆದರೆ ಇದನ್ನು ನನ್ನ ಮನಸ್ಸು ಅಂತ ತಿಳಿ ಕನಿಷ್ಠ ನಿನ್ನ ಚುಂಬಕ ನಗುವಿಗೊಂದಷ್ಟು ಜೀವ ಬಂದೀತು. ಶುದ್ಧ ಪೆದ್ದು..ಸಿಟ್ ಬರ್ತಾ ಇದೆ, ನನ್ ಬಗ್ಗೆ ನಿನಗೆ ಏನೂ ಹೇಳಿರಲಿಲ್ಲ ಅಲ್ವ, ಕೇಳೋ ಹುಡ್ಗ ನಾನು ಸ್ವಲ್ಪ ಜಾಸ್ತೀನೆ ಪೊಸೆಸಿವ್...! ಅದೇ ನನ್ನ ಕೆಟ್ ಗುಣ...! ಆ ಗುಣದಿಂದಲೇ ನಾನು ಯಾರ ಬಳಿ ಹೆಚ್ಚು ಸ್ನೇಹ ಮಾಡಲ್ಲ, ಅದರಲ್ಲೂ ಹುಡುಗರ ಕಥೆ ಬೇಡವೇ ಬೇಡ ! ಫ್ರಾಂಕ್ಲಿ ಇಷ್ಟರ ಮಧ್ಯೆ ಅದ್ಯಾಕೋ ನನಗೆ ನೀನು ತುಂಬಾ ಇಷ್ಟ ಆಗಿ ಬಿಟ್ಟೆ,ಹಾಗೆ ನಿನ್ ಕಡೆ ಗಮನಕೊಟ್ಟೆ.. ಹುಡ್ಗ ನೀನು ಸ್ನೇಹಜೀವಿ ರಾಶಿ ಫ್ರೆಂಡ್ಸ್..! ಸದಾ ಉಲ್ಲಾಸದ ಚಿಲುಮೆ, ನಿನ್ ಫ್ರೆಂಡ್ಸ್ ಆ ಹುಡ್ಗಿಯರು ಎಷ್ಟು ಬ್ಯೂಟಿಫುಲ್ ! ಅವರ ಮುಂದೆ ನಾನು ತುಂಬಾ ಸಪ್ಪೆ, ನೀನು ಅವರೊಂದಿಗೆ ಹರಟುವಾಗ ಚೂರು ಹೊಟ್ಟೆ ಉರಿದ್ಕೊಳ್ತಾ ಇದ್ದೆ,ಆಮೇಲೆ ನಂಗೆ ಅನ್ನಿಸಿದ್ದು ನಾನ್ಯಾಕೆ ನಿನ್ ವಿಷಯದಲ್ಲಿ ಹೀಗೆ? ನಾನು ನಿನ್ನನ್ನು....? ಇಲ್ಲ ನನಗೆ ಒಪ್ಪಿಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ, ಅದೇ ಕಣೋ ನನ್ ಕೆಟ್ ಗುಣ! ಆದರೂ ಈ ಪತ್ರ ಬರೆಯುವ ಕಾರಣ ಎನ್ ಗೊತ್ತಾ?ನಿನ್ನ ರಾಶಿ ರಾಶಿ ಫ್ರೆಂಡ್ಸ್ ನಲ್ಲಿ ನಿನ್ನ ಮನ ಗೆದ್ದವಳು ನಾನೂಂತ ಗೊತ್ತಾಗಿ ಬಿಡ್ತು, ಆಗೆಷ್ಟು ಖುಷಿ ಆಯ್ತು ಗೊತ್ತ..? ಹೇಗೆ ಅಂತ ಕೇಳ್ತೀಯಾ, ಅಂದು ಅದೇ ನಾನು ಬ್ಲಾಕ್ ಚುಡಿ ಹಾಕಿಕೊಂಡು ನನ್ ಫ್ರೆಂಡ್ ಸವಿ ಹರಟುವಾಗ ಹುಡ್ಗ ನಿನ್ನ ಕಣ್ಣು ನನ್ನನ್ನು ಹಿಂಬಾಲಿಸ್ತಾ ಇತ್ತು,ಮನದಲ್ಲಿ ಪುಳಕ,ಆಗಲ್ವ..ಹೇಳು !! ನಿನ್ನ ಸುತ್ತಮುತ್ತ ಸಾವಿರಾರು ಕಣ್ಣುಗಳು ಹರಿದಾಡುವಾಗ... ಹಮ್ಮ! ಹೆಣ್ಣುಮಕ್ಕಳೇ ಹಾಗೆ ಕಣೋ ಮನಸ್ಸು ಕೊ ಟ್ ಮೇಲೆ ತುಂಬಾ ಪ್ರಾಮಾಣಿಕರಾಗಿ ಬಿಡ್ತಾರೆ, ದಡ್ಡ ಹುಡುಗರು ನೀವು ಅದನ್ನು ಅರ್ಥ ಮಾಡಿ ಕೊಳ್ಳಲು ಹೋಗುವುದೇ ಇಲ್ಲ. ನೀನು ನನಗೆ ಪ್ರಪೋಸ್ ಮಾಡಲಿಲ್ಲ, ಪುಟ್ಟ ಪಿಂಕ್ ಗುಲಾಬಿ ಕೊಟ್ಟಿಲ್ಲ, ಕಾರ್ಡ್ ಇಲ್ಲ, ಎಸ್ಸೆಮ್ಮೆಸ್ ಉಹುಂ ಅದೂ ಇಲ್ಲ ಆದರೂ ನಾ ಬಲ್ಲೆ ಗೆಳೆಯ ನೀನು ನನ್ನನ್ನು ಇಷ್ಟ ಪಡ್ತಾ ಇದ್ದೀಯ ಅಂತ. ಪದೇಪದೆ ನೆನಪಾದೆ...! ಗೊತ್ತಿಲ್ಲ ಇಂದು ಮನಸ್ಸೆಲ್ಲ ಖುಷಿಯಿಂದ ಅರಳಿದೆ.ಹೇಳ್ಬಿದ್ಲಾ ನಾನು! ಇಲ್ಲ ಅದು ಸಾಧ್ಯ ಇಲ್ಲ ನನ್ ಕೈಲಿ ಅದು ಸಾಧ್ಯ ಆಗಲ್ಲ, ಮತ್ತದೇ ಕೆಲಸ ರಾಶಿ ರಾಶಿ ! ಬೋರ್ ಅನ್ನಿಸಿದರು ನಿನ್ನ ಮುದ್ದಾದ ನಗು ಜ್ಞಾಪಕಕ್ಕೆ ಬಂದ ತಕ್ಷಣ ಎಲ್ಲ ಫಟಾಫಟ್ !ಎಷ್ಟು ದಿನ ಆಯ್ತಲ್ವ ನಿನ್ನನ್ನು ನಾನು ನೋಡಿ..ಇಷ್ಟು ದಿನ ಷೋ ಅಂತ ಅಟ್ಲಾ೦ಟಾಗೆ ಹೋಗಿದ್ದೆ ಅಂತ ತಿಳೀತು ..ರಾಕಿ ಹೇಳ್ದ...! ಮೌನ ಮುರಿತಿನಿ ಕಣೋ ಇಂದು ನಾನು ನನ್ ಮನಸ್ಸನ್ನ ಬಿಚ್ಚಿ ಇಡ್ತೀನಿ, ನನ್ನ ಪ್ರೀತಿ, ಪೊಸೆಸಿವ್ ನೆಸ್ಸ್ , ಕನಸು, ಆಸೆ ಎಲ್ಲವನ್ನು ಹೇಳಿ ಬಿಡ್ತೀನಿ...ಅವೆಲ್ಲ ಹೇಳ್ ಬೇಕಾದರೆ ನೀನ್ ನನಗೆ ಸಿಗಬೇಕು...! ಸಿಕ್ತೀಯ ಚಿನ್ನಾ...??????!!!!!!!
ನಾನು ....!!
Saturday, 8 May 2010
ಅಮ್ಮ ....!
ಅಮ್ಮ ....! ದೇವರು ಸಮಸ್ತ ಜೀವ ಕೋಟಿಗೂ ನೀಡಿದ ಅಪರೂಪದ ವರ. ಆ ಅಮ್ಮ ಭಗವಂತ ಸೃಷ್ಟಿ ಸಿದ ಎಲ್ಲ ಜೀವರಾಶಿಗಳಲ್ಲಿ ಜೀವಂತವಾಗಿರುತ್ತಾಳೆ...ಅಮ್ಮ... ! ಜೈಪುರದಲ್ಲಿ ರಸ್ತೆಯಲ್ಲಿ ಕೋತಿಮರಿಯೊಂದು ಸ್ಕೂಟರ್ ಸವಾರನ ನಿರ್ಲಕ್ಷ್ಯದಿಂದ ಗಾಯಗೊಂಡಿತು. ಎಲ್ಲರಿಗೂ ಬದುಕುವ ಆಸೆ ಸದಾ ಇದ್ದೆ ಇರುತ್ತದೆ. ಪ್ರಯತ್ನ ಪಟ್ಟು ಆ ಮುದ್ದು ಮರಿ ಮೇಲೇಳಲು ಪ್ರಯತ್ನಿಸಿತು...! ಸೃಷ್ಟಿಯಲ್ಲಿ ಎಲ್ಲ ಜೀವಿಗಳು ಬದುಕಿಗೆ ಆದ್ಯತೆ ನೀಡುತ್ತದೆ. ಈ ಮರಿ ಬದುಕಲು ಪ್ರಯತ್ನಿಸಿದಂತೆ, ತನ್ನ ಹೊಟ್ಟೆ ತುಂಬಿಸಿ ಕೊಂಡು ಜೀವ ಉಳಿಸಿ ಕೊಳ್ಳಲು ಆಲ್ಲೆಲ್ಲೋ ಇದ್ದ ನಾಯಿ ಆ ಸ್ಥಳಕ್ಕೆ ಧಾವಿಸಿ ಈ ಮರಿಯ ಮೇಲೆ ಅಟಾಕ್ ಮಾಡಿತು. ಆ ನಾಯಿ ಈ ಕೂಸಿಗೊಂದು ಅಮ್ಮ ಇದ್ದಾಳೆ ಎನ್ನುವ ಸಂಗತಿ ಮರೆತಿತ್ತು ಅಂತ ಕಾಣುತ್ತೆ, ಆದೆ ಅಮ್ಮ ಹಾಗಲ್ಲವಲ್ಲ, ತನ್ನ ಪ್ರಾಣ ಹೊಸದರೂ ಸರಿಯೇ ಕಂದನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೇ ತೀರುತ್ತಾಳೆ.. ಅಮ್ಮ ಮಂಗ ಮಾಡಿದ್ದು ಅದನ್ನೇ, ತನ್ನ ಕಂದನನ್ನು ತಿನ್ನಲು ಬಂದ ನಾಯಿಯ ಮೇಲೆ ತೀವ್ರವಾಗಿ ದಾಳಿ ನಡೆಸಿ ಅಮ್ಮನ ಕೆಲಸ ಮಾಡಿತು.. ಇದರ ಸಿಟ್ಟಿಗೆ ಹೆದರಿ ನಾಯಿ ಓಟ ಕೀಳ್ತು.ಆ ಬಳಿಕ ಕಷ್ಟ ಪಟ್ಟು ಮಗುವನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯಿತು ...! ನನಗೆ ಬಂದ ಮೇಲ್ಗಳಲ್ಲಿ ತುಂಬಾ ಇಷ್ಟ ಆಗಿದ್ದು ಇದು...!
Tuesday, 20 April 2010
ಶೋಷಣೆ
ಬೇಸಿಗೆಯ ಪ್ರಭಾವ ನಮ್ಮ ಮೇಲೆ ಮಾತ್ರವಲ್ಲ ಎಲ್ಲಾ ಕಡೆಯೂ ತನ್ನ ಪ್ರಭಾವ ತೋರುತ್ತಿದೆ. ನಾವು ಮನುಷ್ಯರು ಬಾಯ್ಬಿಟ್ಟು ಕೇಳಿ ನಮ್ಮ ಬಾಯಾರಿಕೆ ಹಸಿವೆಯನ್ನು ತಣಿಸಿ ಕೊಳ್ಳುತ್ತೇವೆ .ಆದರೆ ಮೂಕ ಪ್ರಾಣಿ -ಪಕ್ಷಿಗಳು? ಅವುಗಳ ಬಗ್ಗೆ ಬುದ್ಧಿವಂತ ಪ್ರಾಣಿ ಅನ್ನಿಸಿಕೊಂಡ ನಾವೆ ಅವುಗಳ ಬಗ್ಗೆ ಕಾಳಜಿ ವಹಿಸ ಬೇಕು.ಇತ್ತೀಚೆಗಂತೂ ಬಿಸಿಲ ಝಳದ ಪ್ರಭಾವದಿಂದ ಅನೇಕ ಪಕ್ಷಿಗಳು ಸಾಯುತ್ತಿದೆ. ಟೆರೆಸ್ ಮೇಲೆ ,ಮರದ ಬುದಗಳಲ್ಲಿ ಬಾಯಾರಿಕೆ ತಡಿಯಲಾಗದೆ ಮರಣಕ್ಕೆ ಮೊರೆಹೊಗುತ್ತಿದೆ. ಇಂತಹ ಪರಿಸ್ಥಿತಿ ತಡೆಗಟ್ಟಲು ನಾವು ಮಾಡ ಬೇಕಾದುದು ಇಷ್ಟೆ. ಕಿಟಕಿ,ಟೆರ್ರೆಸ್ ಒಟ್ಟಿನಲ್ಲಿ ಹಕ್ಕಿಗಳು ನಿರಮ್ಮಳವಾಗಿ ಬರುವ ಸ್ಥಳಗಳಲ್ಲಿ ಪುಟ್ಟ ಪಾತ್ರೆಯಲ್ಲಿ ನೀರನ್ನು ಇಡ ಬೇಕು..ಹಾಗೆ ಮಾಡುವುದರಿಂದ ಮುಗ್ಧ ಪ್ರಾಣಿ- ಪಕ್ಷಿಗಳಿಗೆ ಜೀವದಾನ ಮಾಡಿದಂತೆ ಆಗುತ್ತದೆ..
@@ ಆಸ್ಟ್ರೇಲಿಯ ದೇಶದಲ್ಲಿ ಕೋಲಾ ಅನ್ನುವ ಪ್ರಾಣಿ ಹೆಚ್ಚು ಪ್ರಸಿದ್ಧಿ. ಅದು ತನ್ನಷ್ಟಕ್ಕೆ ತಾನು ಬದುಕುವ ಸಂಕೋಚ ಪ್ರಾಣಿ.ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮಖೇಡಿ ಪ್ರಾಣಿ. ಇತ್ತೀಚೆಗೆ ಆಸ್ಟ್ರೇಲಿಯ ದಲ್ಲಿ ಅತಿ ಹೆಚ್ಚು ಬಿಸಿ ಏರಿತು.ಆಗ ಈ ಸಂಕೋಚದ ಪ್ರಾಣಿ ರಸ್ತೆಗೆ ಬಂದು ನೀರನ್ನು ಬೇಡಿ ಬದುಕಿತು.ಇಂತಹ ಘಟನೆಯನ್ನು ನಾವು ಕಂಡೆ ಇಲ್ಲ ಅಂತಾರೆ ಸ್ಥಳೀಯರು ..! ನಮ್ಮ ಹುಂಬತನದಿಂದ ಆಗಿರುವ ಗ್ರೀನ್ ಹೌಸ್ ಎಫೆಕ್ಟ್ ಗೇ ಉಳಿದ ಮುಗ್ಧಪ್ರಾಣಿಗಳು ಬಲಿಯಾಗುತ್ತಿವೆಯಲ್ಲ ಅದೇ ನೋವಿನ ಸಂಗತಿ. ಭೂಮ್ತಾಯಿ ಮೇಲೆ ಇಂತಹ ಶೋಷಣೆ ನಿಲ್ಲುವುದು ಯಾವಾಗ? ಪ್ರಾಣಿ- ಪಕ್ಷಿ-ಸಸ್ಯಗಳ ಬದುಕು ನಿರಾಳವಾಗುವುದು ಯಾವಾಗ? ನಾವೆ ಯೋಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯ ಬೇಕು...!
Saturday, 9 January 2010
ಬದುಕುವುದನ್ನು ಕಲಿಯಬೇಕು
|
Subscribe to:
Posts (Atom)