Wednesday 1 July 2009

ರಕ್ಕಸಗಾತ್ರದ ಇಲಿ!

ಮೂಷಿಕವಾಹನ ವಿನಾಯಕ ದೇವನದು .ಆತನಿಂದ ಆ ಪುಟ್ಟ ಪ್ರಾಣಿಗೆ ಮಾನ್ಯತೆ ಸಿಕ್ಕಿದೆ ನಮ್ಮ ಬದುಕಲ್ಲಿ. ಸಾಮಾನ್ಯವಾಗಿ ಜನರಿಗೆ ಇಲಿ ಅಂದ್ರೆ ಕಿರಿಕಿರಿ ಬೇಸರ.ಬಿಳಿ ಇಲಿ ತನ್ನ ಬಣ್ಣದ ಕಾರಣದಿಂದ ಕೆಲವು ಜನರ ಮೆಚ್ಚುಗೆ ಗಳಿದೆ ಅಷ್ಟೇ.ಸಾಕಷ್ಟು ಜನರು ತಿಳಿದಿರುವಂತೆ ಇಲಿಗೆ ರಾಜಸ್ತಾನದ ಒಂದು ಸ್ಥಳದಲ್ಲಿ ಹೆಚ್ಚು ಮಾನ್ಯತೆ ಇದೆ.ಅದು ಮನೆ ಮಗನಿಗಿಂತ ಸರ್ವತಂತ್ರ ಸ್ವತಂತ್ರ.ಅದಕ್ಕೆ ಇಷ್ಟ ಬಂದಂತೆ ಇರಬಹುದು.ಸಾಮಾನ್ಯವಾಗಿ ನಮಗೆ ಇಲಿ ಹೆಚ್ಚು ಖುಷಿ ಕೊಡೋದು ಟಾಮ್ ಏನ್ ಜೆರ್ರಿ ಅನ್ನುವ ಕಾರ್ಟೂನ್ ಜೋಡಿಯಲ್ಲಿ. ಅದರಲ್ಲಿ ಇಲಿ ಹಾಗೂ ಬೇಕ್ಕಿನಾತ ಸದಾ ಸಂತಸ ನೀಡುತ್ತದೆ.ಅದರ ಆಟ,ತರಲೆತನ ಖುಷಿ ಕೊಡುತ್ತದೆ.ಇವೆಲ್ಲ ಈಗಿನ ವಿಷಯ,ಆದರೆ ನಾವು ಬೃಹತ್ ಗಾತ್ರದ ಇಲಿಗಳ ಬಗ್ಗೆ ತಿಳಿಯ ಬೇಕು ಅಂತ ಆಸೆ ಪಟ್ರೆ! ಇರಬೇಕಲ್ಲ ಅನ್ನುವ ಉತ್ರ ಎದುರಾಗುತ್ತದೆ.ಆದರೆ ಆಂಗ್ಲ ಹಾರರ್ ಕಥೆಗಳನ್ನು ಓದುವ ಅಭ್ಯಾಸ ಇರುವವರಿಗೆ ರಕ್ಕಸ ಇಲಿಗಳ ದರ್ಶನವನ್ನು ಲೇಖಕ ಕೊಡ್ತಾನೆ ಇರ್ತಾನೆ.
ಹತ್ತು ಅಡಿ ದೊಡ್ಡದಾದ ಶರೀರದಿಂದ ನೂರು ಕೆಜಿ ತೂಕ ಹೊಂದಿದ ಇಲಿಯ ಬಗ್ಗೆ ಹೇಳಲು ಹೊರಟರೆ ಅಬ್ಬ ಅಂತ ಅನ್ನಿಸುತ್ತದೆ ಅಲ್ವ! ಇಂತಹ ಇಲಿ ದಕ್ಷಿಣ ಅಮೆರಿಕದಲ್ಲಿ ಅಂತಹ ಇಲಿ ಇತ್ತು ಅದೂ ಸಾವಿರಾರು ವರ್ಷಗಳ ಹಿಂದೆ.ಒಬ್ಬ ವಿಜ್ಞಾನಿಗೆ ಇಲಿ ಆಕಾರದ ಒಂದು ಪಳಯುಳಿಕೆ ಸಿಕ್ಕಿತು.ಅದನ್ನು ಕಂಡು ಆತನಿಗೆ ವಿಸ್ಮಯ.ಇದು ವಿಶ್ವದ ಅತ್ಯಂತ ದೊಡ್ಡ ಇಲಿ ಎನ್ನುವ ಅಗ್ಗಳಿಕೆ ಪಡೆದುಕೊಂಡಿತು.ಏಕೆಂದರೆ ಈ ಇಲಿ ಆ ವಿಜ್ಞಾನಿ ಕೈಗೆ ಸಿಗುವ ಮೊದಲು ವೆನುಜುವಲ ದೇಶದಲ್ಲಿ ಸಿಕ್ಕ ಇಲಿ ಪ್ರಭೇದದ ಗುಂಪಿಗೆ ಸೇರಿದ ಪ್ರಾಣಿಯು ವಿಶ್ವದಲ್ಲಿ ಅತಿ ದೊಡ್ಡ ರೋಡೆ೦ಟ್ ಆಗಿತ್ತು.ಆದರೆ ಅದು ಈ ಇಲಿಯಿಂದ ಅದು ತನ್ನ ಮೊದಲ ಸ್ಥಾನ ಕಳೆದುಕೊಳ್ಳ ಬೇಕಾಗಿ ಬಂದಿದೆ.( ಈಗ ನಾನು ತಿಳಿಸುತ್ತಿರುವ ಈ ಇಲಿ ಸಹ ಸಿಕ್ಕು ವರ್ಷ ಆಗಿದೆ).ಇಷ್ಟು ಜೋರಾಗಿದ್ದರು ಪಾಪ ಪ್ರಾಣಿಗಳನ್ನು ಬೇಟೆ ಆಡ್ತಾ ಇರಲಿಲ್ಲ.ಅದರ ಊಟ? ಅನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಆದರೆ ಅದು ನೀರಲ್ಲಿ ಬೆಳೆಯುವ ಗಿಡಗಳು,ಹಣ್ಣುಗಳನ್ನು ಸೇವಿಸಿ ಬದುಕ್ತಾ ಇತ್ತಂತೆ! ಅಂದಂಗೆ ಅದರ ತೂಕ ಸರಿಸುಮಾರು ಮುನ್ನೂರು ಕಿಲೋಗಿಂತ ಹೆಚ್ಚಿದೆ ಅಂತಾರೆ ವಿಜ್ಞಾನಿಗಳು.
ಈ ಭಾರಿ ಇಲಿಯ ಹೆಸರು ಜೋಸೆಫೋಯಾರ್ಟಿಗೇಸಿಯಾ ಮೊನೆಸಿ .ಇದು ನಲವತ್ತು ವರ್ಷಗಳ ಹಿಂದೆ ಉರುಗ್ವೆ ನದಿ ತೀರದಲ್ಲಿ ವಾಸಿಸುತ್ತ ಇತ್ತಂತೆ.ಇಂತಹ ಬೃಹತ್ ಪ್ರಾಣಿಗಳು ಯಾವರೀತಿ ನಾಶ ಆಗಿರಬಹುದು ಎಂದು ಸಂಶೋಧಕರು ನಡೆಸಿದ ಸಂಶೋಧನೆಯಿಂದ ರಹಸ್ಯ ಹೊರ ಬಿದ್ದ ಸಂಗತಿ-ಆರು ಕೋಟಿ ವರ್ಷಗಳ ಹಿಂದೆ ದಕ್ಷಿಣ ಅಮೇರಿಕ ಒಂದು ದ್ವೀಪದಂತೆ ಇತ್ತಂತೆ.ಕ್ರಮೇಣ ಪನಾಮ ಭೂಭಾಗ ಮೇಲೆ ತೇಲಿದ ಕಾರಣ ಉತ್ತರ ಹಾಗೂ ದಕ್ಷಿಣ ಅಮೆರಿಕ ನಡುವೆ ದಾರಿ ಆಯಿತು.ಪರಿಣಾಮ ಕೆಲವು ಜೀವಿಗಳು ಉತ್ತರ ಅಮೆರಿಕಾದಿಂದ ದಕ್ಷಿಣ ಅಮೆರಿಕಕ್ಕೆ ವಲಸೆಬಂದವಂತೆ,ಇದು ಆ ಬೃಹತ್ ಇಲಿಗಳ ನಾಶಕ್ಕೆ ಕಾರಣ ಆಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

1 comment:

  1. ನಿಮ್ಮ ಈ ಬ್ಲಾಗಿನ ಲೇಖನಗಳು ನನಗೆ ತೇಜಸ್ವಿಯವರ ಬರಹಗಳನ್ನು ನೆನಪಿಗೆ ತರುತ್ತಿವೆ. ಓದಿ ಖುಷಿಯಾಯಿತು.

    ReplyDelete

Followers