Saturday, 28 December 2013

ಅದೆಷ್ಟು ದಿನಗಳಾಯಿತು? ನಾನು ಲೆಕ್ಕದಲ್ಲಿ ಪೂರ್!





ಎಷ್ಟು  ದಿನಗಳಾಯಿತು ನಿನ್ನ ಕಂಡು ?
ಮತ್ತದೇ ಪ್ರಶ್ನೆ ನನ್ನ ಮನದಲ್ಲಿ.. ಮರೆತೆಯಾ ಗೆಳೆಯಾ? ಪ್ರತಿದಿನ ಪ್ರತಿ ಕ್ಷಣ ನಾನು ಇಂತಹ ಹುಚ್ಚು ಪ್ರಶ್ನೆಗಳನ್ನು ಕೇಳುತ್ತಾ ತಲೆ ಬಿಸಿ ಮಾಡ್ತಾ ಇದ್ದೆ.. ಯಾಕೋ ಒಂದೊಂದು ಗಳಿಗೆಯೂ ನೀನಿಲ್ಲದೆ ವ್ಯರ್ಥ ಎನ್ನುವ ಹುಚ್ಚು ಸ್ವಾರ್ಥ ನನ್ನದು. ಆದರೆ ಸದಾ ನಾನು ನಿನ್ನ ಬಳಿ ಇರಬೇಕು ಎನ್ನುವ ಆಸೆ ಪ್ರಪಂಚದ ಕೆಟ್ಟ ಆಸೆಗಳ ಸಾಲಿಗೆ ಸೇರಿಲ್ಲ ಬಿಡು ಅತ್ತ!..
ಹೌದು ನಮ್ಮ ಮೊದಲ ಭೇಟಿಯ ಕಾಲವು ಈಗಾಗಲೇ ಹಲವಾರು ವಸಂತಗಳನ್ನು ಕಂಡಿವೆ. ಆದರೂ ಆ ಹಳೆಯ ಮಧುರ ನೆನಪು ಮಾತ್ರ ಜೀವಂತ.. ನನ್ನ ಹಸಿರು ಚೂಡಿ ನಿನ್ನ ಆಕಾಶ ನೀಲಿ ಜುಬ್ಬ ಎರಡರ ಸಮಾಗಮ ಬೆಚ್ಚನೆಯ ಅಪ್ಪುಗೆಯಲ್ಲಿ..! ಹೌದು ನಾವು ಭೇಟಿ ಆದ ಮೊದಲ ದಿನ ಇವತ್ತಿಗೆ ಅದೆಷ್ಟು ಕಾಲವಾಯ್ತು ಲೆಕ್ಕದ ಪ್ರಕಾರ?..ಸಾರಿ ಕಣೊ ಹುಡುಗ ನನಗೆ ಲೆಕ್ಕಾಚಾರ ಹೆಚ್ಚು ಗೊತ್ತಿಲ್ಲ.. ಏನೇ ಆದರೂ ಅದು ಲೆಕ್ಕಕ್ಕೆ ಸಿಲುಕದಷ್ಟು .. ಹಾಗೆ ನಿನ್ನ ತಲೆ ತಿಂದದ್ದು  ಲೆಕ್ಕವಿಲ್ಲದಷ್ಟು, ಬೇಸರಿಸಿದ್ದು, ಮುದ್ದಿಸಿದ್ದು.. ಕಡೆಗೆ ಜಗಳವಾಡಿದ್ದು ಸಹ ಲೆಕ್ಕವಿಲ್ಲದಷ್ಟು.. ಎಲ್ಲವನ್ನು ಸಹಿಸಿದೆ ನೀನು ನನ್ನ ಲೆಕ್ಕವಿಲ್ಲದಷ್ಟು ಪ್ರೀತಿಗಾಗಿ..!!
ಲೆಕ್ಕದಲ್ಲಿ ತುಂಬಾ ಪೂರ್ ಕಣೊ ನಾನು .. ಹಾಗೆ ಬದುಕಿನಲ್ಲಿಯೂ ವೆರಿ ಪೂರ್ .. ನಾವು ಭೇಟಿ ಆಗಿ ಅದಾಗಲೇ ವರ್ಷಗಳೇ ಉರುಳಿವೆ.. ಅಂದು ಭೇಟಿ ಆದ ಬಳಿಕ ನಿನ್ನ ನೋಡಲೇ ಇಲ್ಲ ನಾನು .. ನಿನಗೆ ನನ್ನ ನೆನಪು ಉಳಿದಿದೆಯಾ ಎಂದು ಪ್ರಶ್ನಿಸಲು ನೀ ಬಿಟ್ಟು ಹೋಗಿಯಾಗಿದೆ ಅವಳ ಕೈ ಹಿಡಿದು..!
ಲೆಕ್ಕದಲ್ಲಿ ತುಂಬಾ ಪೂರ್ ನಾನು ಅದೆಷ್ಟು ಕಾಲವಾಗಿದೆ ನಿನ್ನ ನೋಡಿ ನಿನಗೇನಾದರೂ ನೆನಪಿದೆಯಾ ದೊರೆ..? ಅದೆಷ್ಟು ಕಾಲವಾಗಿದೆ ನಾ ಬದುಕ ಕಳೆದುಕೊಂಡು?  ನಿನ್ನ ಭಿತ್ತಿಯಲ್ಲಿ ಅದು ಹುದುಗಿದೆಯಾ ಗೆಳೆಯಾ? ಹೇಳು ಪ್ಲೀಸ್ ನಾನು ಲೆಕ್ಕದಲ್ಲಿ ತುಂಬಾ ಪೂರ್ ಹಾಗೆ ಬದುಕಿನಲ್ಲೂ !

Thursday, 19 December 2013

ನೆನಪಾದೀತ ?




ಇದು ನಿನಗೆ ಮಾತ್ರ ಎಂದು ಹೇಳುವ ಹಾಗೆ ಇಲ್ಲ ಅಂತಹ ಪರಿಸ್ಥಿತಿ ತಂದಿರೋದು ನೀನೆ ಎಂದು ಹೇಗೆ ಹೇಳಲಿ ಗೆಳೆ ಯ. ನಿನ್ನೆ ನೀ ಒಪ್ಪಿದ್ದಿ ದ್ದರೆ ಇಂದು ನನಗೆ ಈ ಸಮಸ್ಯೆ ಇರುತ್ತಿರಲಿಲ್ಲವೇ ನೊ.. ನಾ ಬರೆದ ಕವನಗಳು, ಮಾತುಗಳು ಸಂಪೂರ್ಣ ನಿನಗಾಗಿ. ಅಂದು ಭೇಟಿಯಾದ ಕ್ಷಣ ಮುತ್ತಿಟ್ಟ ಗಳಿಗೆ, ಆ ನೋಟದಲ್ಲಿ ಇಬ್ಬರು ಬೆರೆತ ರಸಮಯ ಗಳಿಗೆ ಎಲ್ಲವೂ ಸದಾ ನೆನಪಿಗೆ ಬರುತ್ತಲೇ ಇರುತ್ತವೆ.. ಕಾಡುತ್ತಲೇ ಇರುತ್ತವೆ. ನಿನ್ನ ನೆನಪು ಮರೆಯಲೆಂದು ಬರೆಯುವ ಪ್ರತಿಕವನದಲ್ಲೂ ನೀನೆ ಸಂಪೂರ್ಣ ನೀನೆ..ಆದರೆ ಅದು ತಮಗೆ ಎಂದು ತಿಳಿ ಯುವವರಿಗೆ ಏನೆಂದು ಉತ್ತರಿಸಲಿ ಗೆಳೆಯ ? ನೋವಿಗೆ ಅಂತ್ಯವಿಲ್ಲ ..! ಆದರೆ ನೋಯುವುದು ಅನಿವಾರ್ಯ.. ನಿನ್ನ ನೆನಪಲ್ಲಿ ಬೇಯುವ ಮನಕ್ಕೆ ನಾನು ಹೇಗೆ ತಂಪು ನೀಡಲಿ.. ಕಟ್ಟಿದ ಕನಸುಗಳು ಉರಿದು ಬೂದಿಯಾದಾಗ ನೀನು ಇರಲೇ ಇಲ್ಲ.. ನೀ ಬಂದಾಗ ನಾನು ಸಂಪೂರ್ಣ ಕರಕಲಾಗಿದ್ದೆ. ನನ್ನ ಆ ನೋವಿನ ಹೊಗೆಯು ನಿನ್ನ ಮೂಗಿಗೆ ಅಡ ರುವಷ್ಟರಲ್ಲಿ ನಾನು ಇಲ್ಲವಾಗಿದ್ದೆ.. ನೆನಪುಗಳು ಮಾಸಬಾರದು.. ನೀ ಇರದ ಬಾಳಿನಲ್ಲಿ ನೆನಪುಗಳೇ ಆಧಾರ . ಹೇಳು ಎಂದಾದರೂ ನೆನಪಾದೀತ ನನ್ನದು? 

ನೊಂದವಳು 

Monday, 22 July 2013

ನೆನಪಿದೆಯಾ...



 
ನೆನಪಿದೆಯಾ ನೆನಪಿದೆಯಾ...
ಗೆಳತಿ  ಅಂದು ಪದೇ ಪದೇ
ನೀನು ಕೇಳುತ್ತಿದ್ದ  ಪ್ರಶ್ನೆ.
ನೆನಪಿದೆ ನೆನಪಿದೆ ಪದೇಪದೇ
 ನಾನು ಹೇಳುವ ಉತ್ತರ..
ಪ್ರಶ್ನೆಗೆ ಎರಡೇ ಅಕ್ಷರ
 ಅದಕ್ಕೆ ನಿನಗೆ  ಪ್ರಶ್ನಿಸುವತ್ತಲೇ
ಹೆಚ್ಚು  ಗಮನ..
ಉತ್ತರಕ್ಕೆ ತಡಕಾಡದೇ
ಹೇಳುವ ಕೆಲಸ ನನ್ನದು  !  
ಇಂದು ಆ ಪ್ರಶ್ನೆಯ ಎರಡಕ್ಷರ
ನನ್ನ  ಬದುಕನ್ನು ಕಾಡುತ್ತಿದೆ...
ನಿನ್ನ ಉತ್ತರ... ....

Saturday, 6 July 2013

ಕೈಲಾಗದವರು !

ದಿನ ಒಂದೊಂದು ಸಂಗತಿಗಳು  , ಬೇಸರಗಳು ಸಂತೋಷಗಳು  .. ಹೀಗೆ ಬದುಕು ಸಾಗ್ತಾ ಇದೆ.. ನಿನ್ನೆ ಗೆಳತಿ ಒಬ್ಬಳು ನನಗೆ ಯಾಕೋ ತುಂಬಾ ಅಳು ಬರ್ತಾ ಇದೆ ಜೈ ಅಂತ ಹೇಳಿದಳು.. ಆಕೆಯ ದುಃಖದ ಕಾರಣ ನನಗೆ ತಿಳಿದಿದ್ದರೂ ಕೇಳಿದೆ ಯಾಕೆ ಏನಾಯ್ತು ಅಂತ..ಜನಗಳು ನಮ್ಮ ಹತ್ರ ಕೆಲಸ ಮಾಡಿಸಿಕೊಳ್ಳುವಾಗ ಅದೆಷ್ಟು  ಹೊಗಳುತ್ತಾರೆ, ಅದೇ ಅವರನ್ನು ನಾವು ವಿರೋಧಿಸಿದಾಗ ಕೆಟ್ಟದಾಗಿ ಮಾತಾಡ್ತಾರೆ.. !
ಆಕೆಯ ದುಖದ ಮೂಲ ಅವಳಾಗಿರಲಿಲ್ಲ ನಾನು ಆಗಿದ್ದೆ . ನನ್ನ ಬಗ್ಗೆ ಆ ವ್ಯಕ್ತಿ  ಮಾತನಾಡಿದ ರೀತಿಗೆ ಅವಳಿಗೆ ನೋವಾಗಿತ್ತು.. ನೋಡು ನಿನ್ನೆ ಒಬ್ಬರಿದ್ದರೆ, ಇಂದು ನಾನು ನಾಳೆ ನೀನು.. ಒಟ್ಟಿನಲ್ಲಿ ತಮ್ಮ ಮೂಗಿನ ನೇರಕ್ಕೆ ನಡೆಯದಿದ್ದರೆ, ಇಲ್ಲವೇ ತಮಗೆ ಯಾರೇ ಆಗಿರಲಿ ಸಹಾಯಹಸ್ತ ನೀಡದೆ ಇದ್ದರೆ ಹೀಗೆ ರಿಯಾಕ್ಟ್ ಮಾಡೋದು ಸಹಜ.. ಅದು ಅವರ ವೀಕ್ ನೆಸ್ . ಅದರ ಬಗ್ಗೆ ಹೆಚ್ಚು ತಲೆಗೆ ಹಾಕಿಕೋ ಬ್ಯಾಡ ಅಂದೇ.. ಅದಕ್ಕೆ ಪೂರಕವಾಗಿ ನನ್ನ ಆಫೀಸಿನಲ್ಲಿ ಒಬ್ಬಾತ ಮುಗ್ಧ ಒರಟ ಇದ್ದಾನೆ. ಹಾಸನದ ಆತನ ಮಾತು ಒರಟು ಆದರೆ ಪಾಪದವ ಒಳ್ಳೆಯವ. ಆತ ಸಂಸ್ಥೆಯನ್ನು ಹಾಳು ಮಾಡಲು ಹೊರಟ 'ಸಂಭಾವಿತ ಕಳ್ಳ' ನನ್ನು ಹಿಡಿದು ಕೊಟ್ಟಿದ್ದಕ್ಕೆ ಆ ಕಳ್ಳ ಈ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡೋಕೆ ಆರಂಭಿಸಿದ್ದಾನೆ.. ಅದನ್ನು ಹೇಳುತ್ತಾ ಆತ ಬೇಸರ ಮಾಡಿಕೊಂಡ.. ಹೀಗೆ ಮಾಡೋವರನ್ನು ಕೈಲಾಗದವರು....  ! :-)

Saturday, 1 June 2013

ಮಳೆ ಮತ್ತು ಕೊಡೆ.....

ಮಳೆ , ನಾನು ಮತ್ತು ಕೊಡೆ..... 


ಮತ್ತೊಂದು ಮುಂಗಾರು ಮಳೆ ... ಭೋರ್ಗೆರೆಯುವ ಮಳೆಯ ಸದ್ದು....ನೆನಪುಗಳು ಅದೇ ಭೋರ್ಗೆರತದಲ್ಲಿ ...! ಅಂದು ಮುಂಗಾರು.. ಇಂದು ಮುಂಗಾರು.. ಆದರೆ ಅಂದು ನೀನಿದ್ದೆ ಗೆಳೆಯ .. ಇಂದು ನಾ ಮಾತ್ರ ಇದ್ದೇನೆ .. ನಮ್ಮಿಬ್ಬರ ಪ್ರೇಮಕ್ಕೆ ಮೂಕ ಸಾಕ್ಷಿಯಾಗಿ ಮಳೆ ... ಈ ಕೊಡೆ.. !
ರಸ್ತೆ ಯಲ್ಲಿ ನಡೆಯುವಾಗ ಮಳೆಯ ಹನಿಗಳದ್ದು ಕೊಡೆಯ ಮೇಲೆ ಜಾರೋ ಬಂಡಿ ಆಟ! ನಿನ್ನದು ಪ್ರೀತಿಯ ತುಂಟಾಟ ..! ಮತ್ತೊಂದು ಮುಂಗಾರು ಬೆಚ್ಚಗಿನ ಭುಜ ಹಿಡಿದು ನಡೆಯುವಾಗ ಅರಿಯದ ಸಾಂತ್ವನ. ಅಂದು ನಾನು ನೀನು ಮಳೆ ಮತ್ತು ಕೊಡೆ .. ಜೊತೆಗೆ ಭರವಸೆ.. ದಿನೇದಿನೇ ನಿನ್ನ ಹಿಡಿತ ಸಡಿಲ ವಾಗ್ತಾ ಬ೦ತು ಪರಿವೆ ಇಲ್ಲದ ನಾನು ಅದೇ ,ಕೊಡೆ, ಭರವಸೆಗಳೊಂದಿಗೆ ಹಾಕಿದ್ದೆ ಹೆಜ್ಜೆ.. ! 
ಮೊಂಡು ಮುಂಗಾರಲ್ಲಿ ನಾನೊಬ್ಬಳೆ ನಡೆದಿದ್ದೆ.. ಅಲ್ಲಿ ಮತ್ತೆ ಮಳೆ ಕೊಡೆ, ಜೊತೆಗೆ ನಾನು.. ಬೇಡದ ಭೋರ್ಗೆರೆಯುವ ನೆನಪುಗಳು ...! 
ಈಗ ಮತ್ತೊಂದು ಮುಂಗಾರು ... !

Saturday, 2 March 2013

ಯಾಕೆಂದ್ರೆ..



ಮತ್ತೊಂದು ಪತ್ರ ಬರೆಯುವ ಆಸೆ ..ಆದರೆ ಬರೆಯಲು ಮನವೆ ಇಲ್ಲ ಕಣೆ.. ಅಷ್ಟೊಂದು ಕೋಪ ಮಾಡಿಕೊಂಡರೆ ನನ್ನ ಗತಿ ಏನು..
ನಿಜ ಕೋಪ ಬರೋದು ಸಹಜ.ನಿನಗೆ .. ಯಾಕೆಂದ್ರೆ..


 ನಾನು ಕೇವಲ ನಿನ್ನ ಫೇಸ್ ಬುಕ್ ಗೆಳೆಯ ..  ಅರ್ಥ ಆಗಲಿಲ್ವ ಅಂತ ಕೇಳಲ್ಲ  ... ನೀ ಜಾಣೆ  ಅದನ್ನು ನಾ ಬಲ್ಲೆ. ಅಷ್ಟೊಂದು ಸ್ಟೇಟಸ್ ಗಳನ್ನೂ ಹಾಕೋ ನೀನು ನಾನು ಬರೆಯುವ ಕಾಮೆಂಟ್ ಗೆ ಹೆಚ್ಚು ರಿಯಾಕ್ಟ್ ಮಾಡ್ತೀಯ . ನನಗೆ ಗೊತ್ತು ನೀನು ಅಷ್ಟೊಂದು ಆಸಕ್ತಿ  ತೋರುತ್ತಿರುವುದು ನನಗೆ ಮಾತ್ರವಲ್ಲ ಗೆಳೆಯ ಪವನ್ ಗೂ ಸಹ. ಪವನ್ ಹೇಳಿದ ಮಾತಿಗೆ ನೀನು ಫೇಸ್ ಬುಕ್ನಲ್ಲಿ ಕಿಲ ಕಿಲ ಅಂತ ನಗುವ ಚಿತ್ರ ಹಾಕುತ್ತ ಉತ್ತ ರಿಸುವಾಗ  ಅಸೂಯೆ ಕಾಡುವುದು ಸುಳ್ಳಲ್ಲ .  ಆ ಅಸೂಯೆಯೇ ನಿನ್ನೆ ನಿನ್ನ ಸ್ಟೇಟಸ್  ಗೆ ಸ್ವಲ್ಪ ಕಾರದ ಉತ್ತರ ಬರೆಯೋಕೆ ಪ್ರೇರೆಪಿಸಿದ್ದು . 
ನೀನು ನಾನು ಭೇಟಿ ಆಗೇ ಇಲ್ಲ ಆದರೂ ಅದ್ಯಾಕೋ ನನಗೆ ನೀನು ತುಂಬಾ ಹತ್ತಿರ ಅನ್ನಿಸಿದೆ. ನಿನ್ನ ಭಾವನೆಗಳು, ಮನದ ಮಾತುಗಳು ಸೇಮ್ ಸೇಮ್ .. 
ಅದೇನನ್ನನ್ನು ನಿನ್ನ ಬಳಿ ಸೆಳೆದಿದ್ದು . ಹೇಯ್ ಲವ್ ಯು ಕಣೆ .. ನೀನು ಫೇಸ್ಬುಕ್ ಮಾತ್ರವಲ್ಲ ಎದುರು ಸಿಕ್ಕಾಗಲು  ಒಳ್ಳೆಯ ಮನಸ್ಸಿನಿಂದ ಮಾತಾಡುವ ಸರಳ ಹೆಣ್ಣು ಅಂತ ನಿನ್ನನ್ನು ಭೇಟಿ ಮಾಡಿರುವ ನನ್ನ ಫೇಸ್ಬುಕ್ ಫ್ರೆಂಡ್ಸ್  ಹೇಳಿದ್ದಾರೆ . ನನಗೆ ನಿನ್ನನ್ನು ನೋಡುವ ಆಸೆ ಆದರೆ ಅದ್ಯಾಕೋ  ಆಗ್ತಾ ಇಲ್ಲ. ನನ್ನ ಕನಸು ಹೀಗೆ ಉಳಿದು ಬಿಡುತ್ತಾ ಅನ್ನುವ ಆತಂಕ ನನಗೆ.. 
ಬಿಡು ಹೇಗಾದರೂ ಮಾಡಿ ನಿನ್ನನ್ನು ನಾನು ಭೇಟಿ ಮಾಡೇ ಮಾಡ್ತೀನಿ .. 
ಆದರೆ ಅದಕ್ಕೂ ಮುನ್ನ ನಾನು ನನ್ನ ಮನಸ್ಸು ನಿನ್ನ ಮುಂದೆ ಬಿಚ್ಚಿಡಲೇ  ಬೇಕು ಅಂತ ನಿರ್ಧಾರ ಮಾಡಿ ಈ ಪತ್ರ ಬರೆಯುತ್ತಿದ್ದಿನಿ .ಮತ್ತೊಂದು ವಿಷ್ಯ ನೀನು ನೋಡೋಕೆ ತುಂಬಾ ಮುದ್ದಾಗಿದ್ದೀಯ . ಹೇಗಿದ್ರೂ ಪತ್ರ ತಾನೇ ನೇರವಾಗಿ  ಹೇಳೋಕೇನು  ಭಯ.. ಆದರೆ ನಿಜವಾಗಿಯೂ ನನಗೆ ಭಯ ಕಾಡುತ್ತಿದೆ ನೀನು ಈ ಪತ್ರ ಓದಿದ ಬಳಿಕ ನನ್ನನ್ನು ನಿನ್ನ ಫ್ರೆಂಡ್ ಲಿಸ್ಟ್ ನಿಂದ  ತೆಗೆದು ಬಿಟ್ರೆ .. ನನ್ನ ಅಕೌಂಟ್ ಬ್ಲಾಕ್ ಮಾಡಿ ಬಿಟ್ರೆ ..! 
ಆದಷ್ಟು ಒಂದು ವಾರ ಫೇಸ್ಬುಕ್ ಕಡೆ ತಲೆ ಹಾಕಲ್ಲ ಅಂತ ನಿರ್ಧಾರ ಮಾಡಿದ್ದೀನಿ .. ಅಂದ್ರೆ ನಿನ್ನ ವಾಲ್ ಕಡೆ .. ಬ್ಲಾಕ್ ಅಗ್ತಿನೋ,ಡಿಲೀಟ್  ಆಗ್ತಿನೋ ಒಟ್ಟಲ್ಲಿ ಮನಸ್ಸು ಬಿಚ್ಚಿಟ್ಟೆನಲ್ಲ  ಧೈರ್ಯವಾಗಿ ... 
ಸ್ವಲ್ಪ ಸಾಫ್ಟ್ ಕಾರ್ನರ್ ಆದ್ರೆ ನೀನು... 
ಏನು ಯೋಚಿಸುವುದಕ್ಕೂ ಆಗುತ್ತಿಲ್ಲ.. 
ನಿನ್ನವನಾಗಲು ಬಯಸುತ್ತಿರುವ 
ಸುಮಂತ್ 

Tuesday, 26 February 2013

ನೀನಾ ನಾನಾ



ಇದು  ನೀನಾ ನಾನಾ
ನನಗೆ ನೀನು ನಿನಗೆ ನಾನು
ಹಾಗಂದ್ರೆ ಏನ್  ಗೆಳತಿ !
ಸಾಕು ಪದಗಳ ಗೋಜಲು
ಯಾರಿಗೆ ಯಾರು ಆದರೆನು..
ಪ್ರೇಮದಲಿ ,ಮೋಹದಲಿ ಅದರಲ್ಲಿ ಇದರಲ್ಲಿ
ನೀನು ನಾನು ಒಂದೇ ಅಲ್ವೆನು..
ನಾವು ಒಂದಾಗುವುದು ..
ಬೆರೆಯುವುದನ್ನು ಏನು ಬೇಕಾದರೂ
 ಕರೆಯಲಿ ಈ ಜಗತ್ತು
ಒಂದಾದ ಗಳಿಗೆಯಂತೂ  ಸತ್ಯ..
ಅದರ ಮುಂದೆ ಈ ನಾನು-ನೀನು ಎಂಬ ಹುಂಬ ವಾದವೇಕೆ !
ಹೇಳು ...
*********
ಏನಿದೆ ಮನದಲೆನಿದೆ ಎಂದು ಹುಡುಕುವ ಭರದಲ್ಲಿ 
ಮನವ ನಾ ಬಿಚ್ಚಿಟ್ಟೆ ಹುಡುಗ....
ಹುಡುಕುವ ಆಟದಲಿ ನೀ ಗೆದ್ದೇ ನಾ ಸೋತೆ..
ಆ ಸೋಲು ನಿನ್ನ ಗೆಲುವಿಗಿಂತ ಹೆಚ್ಚು ಬಲ್ಲೆಯಾ ನೀನು

Thursday, 14 February 2013

ನಿಜ ಕಣೆ.. !

 ಅವಳು :
ಮತ್ತೊಂದು ವ್ಯಾಲೆಂಟೈನ್  ದಿನ...
ನನ್ನ  ನೆನಪುಗಳ ಭಿತ್ತಿಯಲ್ಲಿ ನಿನ್ನ ರೂಪ ಗೋಚರ-ಅಗೋಚರ...!
ನೆನಪಿದೆಯ ಗೆಳೆಯ... ಈ ದಿನಕ್ಕಾಗಿ ನೀ  ವರ್ಷವಿಡಿ ಕಾಯುತ್ತಿದೆ.. ಕೈಲೊಂದು ಪುಟ್ಟ ಗುಲಾಬಿ ಬೊಕ್ಕೆ, ಅದರ ಜೊತೆಯಲ್ಲಿ ಒಂದು ಕಾರ್ಡು.. ಕೆಂಪನೆಯ ದೊಡ್ಡ ಹೃದಯ ...ಜೊತೆಯಲ್ಲಿ ಪುಟ್ಟ ಪುಟ್ಟ ಪಿಂಕ್ ಹಾರ್ಟ್ ...!
ನಿನ್ನ ಕಾರ್ಡ್ ತೆಗೆದುಕೊಳ್ಳುವಾಗ ಸೋಕಿದ ನಿನ್ನ ಒರಟು ಚರ್ಮದ  ಬಿರುಸಿಗೆ ಮರುಳಾಗುತ್ತಿತ್ತು ನನ್ನ  ಬೆರಳ ತುದಿ... ಮೂಗಿನಂಚಿನಲಿ ಬೆವರಿನ ಮುತ್ತು ಮುತ್ತು...!
ಲವ್ ಯು ಕಣೆ... ಲವ್ ಯು ಅಂದಾಗ ಪ್ರಪಂಚದಲ್ಲಿ ನಾವಿಬ್ಬರೇ ಅನ್ನುವ ಪುಳಕ...
ನನ್ನಿ೦ದ ಬರದ ಉತ್ತರ ನಿನ್ನ ಕಣ್ಣಲ್ಲಿ ಪ್ರಶ್ನಾರ್ಥಕ.. ನಿನ್ನ ಒರಟುತನ ನನಗೆಲ್ಲಿದೆ ... ಮೃದು ನಾನು...! ಉತ್ತರ ಸಿಕ್ಕ ನಿನಗ ಬದುಕು ಸಿಕ್ಕಾಗಲಿಲ್ಲ ಅನ್ನುವ ಖುಷಿ...
ಖುಷಿಯ ಕ್ಷಣ  ... ಅಂದೇ ಮುಗಿಯಿತೇನೋ...ನಿನ್ನನ್ನು ಅವಳ ಜೊತೆ ಕಂಡಾಗ... ನನ್ನ ಪತ್ರ-ನಿನ್ನ ಖುಷಿ ಎಲ್ಲವೂ ಖಾಲಿ ಖಾಲಿ...
ಮತ್ತೆ ವ್ಯಾಲೆಂಟೈನ್ಸ್ ಡೆ  ನಾನು ಇನ್ನು ನಿನ್ನ ನೆನಪಲ್ಲಿ ಉಳಿದಿದ್ದಿನಾ  ? ಹೇಳು...?


ಅವನು...
ಮತ್ತೊಂದು ವ್ಯಾಲೆಂಟೈನ್ಸ್  ಡೇ .. ಈ ದಿನ ಕಹಿ ಕಹಿ ,,,
ನಿನಗೆ ನಾನು ನನಗೆ ನೀನು ಇದು ನಮ್ಮ ಬದುಕಿನ ಟ್ಯಾಗ್ ಲೈನ್ .. ಎಷ್ಟೊಂದು ಕನಸುಗಳು ನಮ್ಮಿಬ್ಬರದ್ದು... ಮನೆ ಮಕ್ಕಳು... ಒಹ್... ಹೇಳು ಗೆಳತಿ... ನಾನು ನಿನಗೆ ಕೊಟ್ಟಾ ಆಶ್ವಾಸನೆ ಬರಿ ಪೊಳ್ಳು...
ಮರೆತ ನಿನ್ನ ನಾನು ಆ ಕ್ಷಣ ಅವಳ ಜೊತೆ ಸೇರಿದಾಗ.. ಮುದ್ದಾದ ಕೂಸಿನ  ಸಂಭ್ರಮ... ನನ್ನ ಬದುಕಲ್ಲಿ ನೀ ಸ್ವಲ್ಪ ಕಾಲ ಮಂಗ ಮಾಯಾ... ತಪ್ಪು ನನ್ನದು.. ತಪ್ಪಾಗಿದೆ ಎಂದು ಹೇಳಲಾಗದ ಸಿಡಿಮಿಡಿ .. ಮುಗಿದ ಕಥೆ ಮುನ್ನುಡಿ ಬರೆಯಲು ಹೊರಟರೆ ಆದೀತೆ.. ಆ ಕ್ಷಣ ಮರೆತ ನಾನು ಈಗ ಪ್ರತಿಕ್ಷಣ ನಿನ್ನ ನೆನಪಲ್ಲಿ ಲೀನ.. ಹೇಳು ಚಿನ್ನ ನನ್ನನ್ನು ಕ್ಷಮಿಸುವೆಯ,,,ನೀ ಎಲ್ಲೇ ಇದ್ದರೂ .. ಹ್ಯಾಪಿ ವ್ಯಾಲೆಂಟೈನ್ಸ್ ಡೇ .... ಮರುವಿಗೂ ಹೇಳಿದ್ದೇನೆ.. ನಿನ್ನ ನೆನಪು ಮಾತ್ರ  ಜೀವಂತವಾಗಿಡು ಎಂದು... ನಿಜ ಕಣೆ.. ! 

Sunday, 3 February 2013

ಪ್ರೇಮ ?



ಹೇಳುವ ಮಾತುಗಳು ಸಾವಿರ ಇದ್ದರೂ
ನಿನ್ನ ಒಂದು ನೋಟ 
ಲಕ್ಷ ಮಾತುಗಳನ್ನು ಹೇಳಿತು,
ನನ್ನ ಮೌನ ಕೋಟಿ
ಭಾವನೆಗಳನ್ನು ತಿಳಿಸಿತು..
ಏನನ್ನಲಿ ಇದನ ಪ್ರೀತಿ, ಪ್ರೇಮ ?

******
ಎಷ್ಟು ನಿಜ ನಿನ್ನ ನೆನಪು ,
ಅದೆಷ್ಟು ನಿಜ ನೀ ಕೊಟ್ಟ ನೋವು ನಿಜ 
ಅನ್ನುವ ವಾದದಲ್ಲಿ ಸುಳ್ಳಿನ ಸಂಬಂಧವು
ಮತ್ತೆ ಜೀವ ತಳೆಯಿತು
ನಿಜ ನಿಜ ನೀನೆಷ್ಟು ಸುಳ್ಳು..




Followers